Oats Recipe: ಓಟ್ಸ್‌ನಿಂದ ಮಾಡಬಹುದು ರುಚಿಕರ ಉತ್ತಪ್ಪ, ಬೆಳಗಿನ ತಿಂಡಿಗೆ ಇದೊಂದು ಸೂಪರ್ ಫುಡ್‌, ನೀವೂ ಟ್ರೈ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Oats Recipe: ಓಟ್ಸ್‌ನಿಂದ ಮಾಡಬಹುದು ರುಚಿಕರ ಉತ್ತಪ್ಪ, ಬೆಳಗಿನ ತಿಂಡಿಗೆ ಇದೊಂದು ಸೂಪರ್ ಫುಡ್‌, ನೀವೂ ಟ್ರೈ ಮಾಡಿ

Oats Recipe: ಓಟ್ಸ್‌ನಿಂದ ಮಾಡಬಹುದು ರುಚಿಕರ ಉತ್ತಪ್ಪ, ಬೆಳಗಿನ ತಿಂಡಿಗೆ ಇದೊಂದು ಸೂಪರ್ ಫುಡ್‌, ನೀವೂ ಟ್ರೈ ಮಾಡಿ

ಓಟ್ಸ್‌ ಉತ್ತಪ್ಪ: ನೀವು ಓಟ್ಸ್‌ನ ಹಲವಾರು ರೀತಿಯಲ್ಲಿ ತಿಂದಿರಬಹುದು. ಆದರೆ ಇದೊಂದು ಹೊಸ ರುಚಿ. ನೀವು ಓಟ್ಸ್‌ ಬಳಸಿಕೊಂಡು ಉತ್ತಪ್ಪ ಮಾಡಿ ತಿನ್ನಬಹುದು. ಇದರ ರುಚಿ ಕೂಡ ತುಂಬಾ ಚೆನ್ನಾಗಿರುತ್ತದೆ. ನೀವೂ ಇದನ್ನು ಹೇಗೆ ಮಾಡಬೇಕು ಎಂದು ತಿಳಿದಿಲ್ಲವೆಂದರೆ ಇದನ್ನು ಓದಿ.

ಓಟ್ಸ್‌ ಉತ್ತಪ್ಪ
ಓಟ್ಸ್‌ ಉತ್ತಪ್ಪ

ಕೆಲವರು ಹಾಲಿನಲ್ಲಿ ನೆನೆಸಿದ ಓಟ್ಸ್ ತಿನ್ನುತ್ತಾರೆ. ಇನ್ನು ಕೆಲವರು ಮಸಾಲೆ ಬೆರೆಸಿದ ಓಟ್ಸ್ ತಿನ್ನುತ್ತಾರೆ. ಕೆಲವರು ಹಣ್ಣುಗಳು ಮತ್ತು ಮೊಸರು ಸೇರಿಸಿ ಓಟ್ಸ್ ಸವಿಯುತ್ತಾರೆ. ಆದರೆ ನೀವು ಎಂದಾದರೂ ಓಟ್ಸ್ ಉತ್ತಪ್ಪ ತಿಂದಿದ್ದೀರಾ? ಈ ಉತ್ತಪ್ಪ ನಿಜಕ್ಕೂ ತುಂಬಾ ರುಚಿಯಾಗಿರುತ್ತದೆ. ಒಂದೇ ರೀತಿಯ ಆಹಾರಗಳನ್ನು ತಿಂದು ತಿಂದು ನಿಮಗೂ ಬೇಸರವಾಗಿದ್ದರೆ ಖಂಡಿತ ನೀವು ಇದನ್ನು ಮನೆಯಲ್ಲಿ ಟ್ರೈ ಮಾಡಬಹುದು. ಇದನ್ನು ಮಾಡಲು ಬೇಕಾಗುವ ಪದಾರ್ಥ ಹಾಗೂ ಮಾಡುವ ವಿಧಾನ ಎಲ್ಲವನ್ನೂ ನಾವು ನಿಮಗೆ ತಿಳಿಸಿದ್ದೇವೆ ಗಮನಿಸಿ.

ಅರ್ಧ ಕಪ್ ರವೆ

½ ಟೀ ಚಮಚ ನಿಂಬೆ ರಸ

ಒಂದು ಪಿಂಚ್ ಅಡಿಗೆ ಸೋಡಾ

1 ಈರುಳ್ಳಿ

1 ಟೊಮೆಟೊ

1 ಕ್ಯಾಪ್ಸಿಕಂ

4 ಸ್ಪೂನ್ ಧನಿಯಾ ಪೌಡರ್

2 ಹಸಿರು ಮೆಣಸಿನಕಾಯಿ

ಜೀರಿಗೆ

2 ಚಮಚ ತುಪ್ಪ ಅಥವಾ ಎಣ್ಣೆ

ಉಪ್ಪು ಅರ್ಧ ಟೀಚಮಚ

ಓಟ್ಸ್ ಉತ್ತಪ್ಪ ಮಾಡುವ ವಿಧಾನ:

2 ಚಮಚ ತುಪ್ಪ ಅಥವಾ ಎಣ್ಣೆ

ಉಪ್ಪು ಅರ್ಧ ಟೀ ಚಮಚ

ಓಟ್ಸ್ ಉತ್ತಪ್ಪ ಮಾಡುವ ವಿಧಾನ:

ಮೊದಲು ಓಟ್ಸ್ ಪುಡಿಯನ್ನು ತಯಾರಿಸಿ. ಇದಕ್ಕಾಗಿ ಓಟ್ಸ್ ಅನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಬಟ್ಟಲಿನಲ್ಲಿ ತೆಗೆದುಕೊಳ್ಳಿ. ಬೀಸುವಾಗ ನೀರು ಹಾಕಿ ಬೀಸಿಕೊಳ್ಳಿ.

ಆ ಹಿಟ್ಟಿಗೆ ರವೆ ಮತ್ತು ಇನ್ನೊಂದಷ್ಟು ಹಿಡಿ ಹಿಟ್ಟು (ಜೋಳ, ಕಡಲೆ) ಸೇರಿಸಿ ಮಿಶ್ರಣ ಮಾಡಿ.

ಅದರ ನಂತರ ಸಾಕಷ್ಟು ಉಪ್ಪು ಮತ್ತು ನೀರನ್ನು ಸೇರಿಸಿ. ಸ್ವಲ್ಪ ದಪ್ಪವಾಗುವವರೆಗೆ ಮಿಶ್ರಣ ಮಾಡಿ. ಯಾವುದೇ ಉಂಡೆಗಳಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿ.

ನಂತರ ಹಿಟ್ಟನ್ನು 20 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.

ಹಿಟ್ಟು ನೀರನ್ನು ಹೀರಿಕೊಳ್ಳುತ್ತದೆ ಮತ್ತು ಸ್ವಲ್ಪ ದಪ್ಪವಾಗುತ್ತದೆ. ಇದಕ್ಕೆ ಈರುಳ್ಳಿ, ಕ್ಯಾಪ್ಸಿಕಂ, ಹಸಿರು ಮೆಣಸಿನಕಾಯಿ ಮತ್ತು ಟೊಮೆಟೊ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿ.

ಹಿಟ್ಟು ತುಂಬಾ ದಪ್ಪವಾಗಿದ್ದರೆ, ಸ್ವಲ್ಪ ನೀರು ಮತ್ತು ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯದಾಗಿ ನಿಂಬೆ ರಸವನ್ನು ಸೇರಿಸಿ.

ಬೇಡ ಎಂದೆನಿಸಿದರೆ ತರಕಾರಿ ತುಂಡುಗಳನ್ನು ಹಿಟ್ಟಿನಲ್ಲಿ ಮಿಶ್ರಣ ಮಾಡದೆಯೇ ಇರಿಸಬಹುದು.

ತವಾ ತೆಗೆದುಕೊಂಡು ಎಣ್ಣೆ ಅಥವಾ ತುಪ್ಪವನ್ನು ಹಚ್ಚಿ. ಕೇವಲ ಒಂದು ಹುಟ್ಟು ಹಿಟ್ಟನ್ನು ತೆಗೆದುಕೊಂಡು ದಪ್ಪ ಪೇಸ್ಟ್ ಮಾಡಿ. ತವಾದ ಅಂಚುಗಳ ಉದ್ದಕ್ಕೂ ತುಪ್ಪವನ್ನು ಹಚ್ಚಿ ಮತ್ತು ಬೇಯಿಸಿ.

ತರಕಾರಿ ತುಂಡುಗಳನ್ನು ಓಟ್ಸ್ ಉತ್ತಪ್ಪದ ಉದುರಿಸಿ. ತವಾದಲ್ಲಿ ಮುಚ್ಚಿ ಒಂದು ನಿಮಿಷ ಬೇಯಿಸಿದರೆ ಇದರ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.

ಉತ್ತಪ್ಪದ ಎರಡೂ ಕಡೆ ಬೇಯಿಸಿ ನಂತರ ಸರ್ವ್‌ ಮಾಡಿ. ಓಟ್ಸ್ ಉತ್ತಪ್ಪದ ರುಚಿ ನಿಮ್ಮ ನಾಲಿಗೆ ಮೇಲೆ ಕುಣಿದಾಡಲಿ!

Whats_app_banner