ಅಂಗಡಿಯಲ್ಲಿ ಸಿಗುವಂತೆ ಅದೇ ರುಚಿಯ ಬೇಸನ್ ಲಾಡು ಮನೆಯಲ್ಲೇ ಹೇಗೆ ಮಾಡೋದು ಅಂತ ನೋಡ್ತಿದ್ದೀರಾ, ನಿಮಗಾಗಿ ಇಲ್ಲಿದೆ ಲಡ್ಡು ಮಾಡುವ ಸಿಂಪಲ್ ವಿಧಾನ
ಕನ್ನಡ ಸುದ್ದಿ  /  ಜೀವನಶೈಲಿ  /  ಅಂಗಡಿಯಲ್ಲಿ ಸಿಗುವಂತೆ ಅದೇ ರುಚಿಯ ಬೇಸನ್ ಲಾಡು ಮನೆಯಲ್ಲೇ ಹೇಗೆ ಮಾಡೋದು ಅಂತ ನೋಡ್ತಿದ್ದೀರಾ, ನಿಮಗಾಗಿ ಇಲ್ಲಿದೆ ಲಡ್ಡು ಮಾಡುವ ಸಿಂಪಲ್ ವಿಧಾನ

ಅಂಗಡಿಯಲ್ಲಿ ಸಿಗುವಂತೆ ಅದೇ ರುಚಿಯ ಬೇಸನ್ ಲಾಡು ಮನೆಯಲ್ಲೇ ಹೇಗೆ ಮಾಡೋದು ಅಂತ ನೋಡ್ತಿದ್ದೀರಾ, ನಿಮಗಾಗಿ ಇಲ್ಲಿದೆ ಲಡ್ಡು ಮಾಡುವ ಸಿಂಪಲ್ ವಿಧಾನ

Besan Ladoo: ಈ ಹಬ್ಬಗಳ ಸಾಲಿನಲ್ಲಿ ಯಾವ ಸಿಹಿ ತಿಂಡಿ ರೆಸಿಪಿ ಕಂಡರೂ ಅದನ್ನೊಮ್ಮೆ ಟ್ರೈ ಮಾಡೇಬಿಡಬೇಕು. ನಮ್ಮ ಮನೆಯಲ್ಲಿ ಹೊಸತೇನಾದರು ಮಾಡಬೇಕು ಎಂದು ನೀವು ಅಂದುಕೊಳ್ಳುತ್ತೀರಾ. ಆದರೆ ಸಾಂಪ್ರದಾಯಿಕ ವಿಧಾನದಲ್ಲಿ ಮಾಡುವ ಈ ಬೇಸನ್‌ ಲಾಡು ರುಚಿಯೇಬೇರೆ.

ಸಿಹಿಯಾದ ಬೇಸನ್ ಲಡ್ಡು
ಸಿಹಿಯಾದ ಬೇಸನ್ ಲಡ್ಡು

ಬೆಸನ್ ಲಾಡೂ ರೆಸಿಪಿ: ಬೇಸನ್ ಲಾಡೂ ಸಾಂಪ್ರದಾಯಿಕವಾಗಿ ಹಿಂದಿನಿಂದಲೂ ಭಾರತೀಯ ಮನೆಗಳಲ್ಲಿ ತಯಾರಿಸುವ ಸಿಹಿಯಾಗಿದೆ. ಅಮ್ಮ ಮಾಡುವ ಬೇಸನ್ ಲಡ್ಡುವಿನ ರುಚಿ ಬೇರೆ ಯಾವ ಸಿಹಿ ಖಾದ್ಯಕ್ಕೂ ಸಿಗುವುದಿಲ್ಲ. ದೇಸಿ ತುಪ್ಪದಲ್ಲಿ ಹುರಿದ ಬೇಸನ್ ಮಸಾಲೆಯುಕ್ತ ಪರಿಮಳವನ್ನು ಎಲ್ಲರೂ ಇಷ್ಟಪಡುತ್ತಾರೆ. ಹಬ್ಬ ಯಾವುದೇ ಆಗಿರಲಿ ಆದರೆ ಈ ಸಿಹಿ ಮಾತ್ರ ಯಾವಾಗಲೂ ಇರುತ್ತದೆ. ತುಂಬಾ ಜನ ಇಷ್ಟಪಟ್ಟು ಬೇಸರವಿಲ್ಲದೆ ಎಷ್ಟು ಬಾರಿ ಬೇಕಾದರೂ ತಿನ್ನಬಹುದಾದ ಸಿಹಿತಿಂಡಿ ಎಂದರೆ ಅದು ಬೇಸನ್ ಲಾಡು. ಅದರಲ್ಲೂ ದೀಪಾವಳಿ ಸಂದರ್ಭದಲ್ಲಿ ಈ ಲಾಡೂವನ್ನು ತಪ್ಪದೆ ತಯಾರಿಸಲಾಗುತ್ತದೆ. ಆದರೆ ಅನೇಕ ಜನರು ದೀಪಾವಳಿಗೆ ಹೊರಗಿನಿಂದ ಈ ಲಾಡು ತರಿಸುತ್ತಾರೆ. 

ಸುಲಭ ವಿಧಾನ

ಇದನ್ನು ಮಾಡುವ ವಿಧಾನ ಎಷ್ಟು ಸುಲಭವಾಗಿದೆ ಎಂದು ತಿಳಿದರೆ. ನೀವು ಈ ಬಾರಿ ಖಂಡಿತ ಲಾಡುವನ್ನು ಹೊರಗಿನಿಂದ ತರಿಸುವುದಿಲ್ಲ. ನಿಮ್ಮ ಮನೆಯಲ್ಲೇ ಮಾಡುತ್ತೀರಿ. ಈ ಬಗ್ಗೆ ಯಾವುದೇ ಅನುಮಾನ ಇಲ್ಲ. ಇನ್ನು ಕೆಲವರು ಇಲ್ಲ ನಾನು ಮನೆಯಲ್ಲಿ ಮಾಡಲು ಪ್ರಯತ್ನ ಮಾಡಿದ್ದೇನೆ ಆದರೂ ಹೊರಗಿನಿಂದ ತಂದ ಲಾಡುಗೆ ಇರುವ ರುಚಿ ಮಾತ್ರ ಇದಕ್ಕೆ ಇರುವುದಿಲ್ಲ ಎಂದು ಹೇಳುತ್ತಾರೆ.  ಇದಕ್ಕೆ ಕಾರಣ ಹಿಟ್ಟನ್ನು ಸರಿಯಾಗಿ ಹುರಿಯದೇ ಇರುವುದು. 

ಆದರೆ ಈಗ ಚಿಂತಿಸಬೇಕಾಗಿಲ್ಲ, ನಾವು ನಿಮಗೆ ಬೇಸನ್ ಲಾಡು ಮಾಡುವ ಸುಲಭ ಮತ್ತು ರುಚಿಕರವಾದ ಪಾಕವಿಧಾನವನ್ನು ನೀಡಿದ್ದೇವೆ.

ಬೇಸನ್ ಲಾಡೂ ತಯಾರಿಸಲು ಬೇಕಾಗುವ ಸಾಮಾಗ್ರಿಗಳು-

- ಕಡಲೆ ಹಿಟ್ಟು - 2 ಬಟ್ಟಲುಗಳು

- ತುಪ್ಪ - 1 ಕಪ್

- ಹರಳಾಗಿಸಿದ ಸಕ್ಕರೆ - 1 ಕಪ್

- ಗೋಡಂಬಿ - 10 ತುಂಡುಗಳು

- ಬಾದಾಮಿ - 10

- ಪಿಸ್ತಾ 

-ಏಲಕ್ಕಿ ಪುಡಿ-1 ಟೀಸ್ಪೂನ್

ಬೇಸನ್‌ ಲಾಡೂ ಮಾಡುವ ವಿಧಾನ-

ಬೇಸನ್ ಲಾಡೂ ಮಾಡಲು ಮೊದಲು ದಪ್ಪ ತಳವಿರುವ ಕಡಾಯಿಯನ್ನು ತೆಗೆದುಕೊಳ್ಳಿ. ಮತ್ತು ಅದಕ್ಕೆ ತುಪ್ಪ ಸೇರಿಸಿ  ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ತುಪ್ಪ ಬಿಸಿಯಾದಾಗ ಅಂದರೆ ಅದು ಕರಗಿದಾಗ ಅದಕ್ಕೆ ಕಡಲೆ ಹಿಟ್ಟನ್ನು ಸೇರಿಸಿ ಸುಮಾರು 12-13 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಹುರಿಯಿರಿ. 

ಇದು ತಿಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಮತ್ತು ಅದರ ಹಸಿವಾಸನೆ ಹೋಗುವವರೆಗೆ ನೀವು ಅದನ್ನು ಹುರಿಯಬೇಕು. ಹೀಗೆ ನೀಟಾಗಿ ಮಾಡಿದರೆ ಖಂಡಿತ ಹಸಿವಾಸನೆ ಇರುವುದಿಲ್ಲ. ಇದೇ ರೀತಿ ಮಾಡಿದರೆ ಮಾತ್ರ ನಿಮ್ಮ ಲಾಡು ರುಚಿಯಾಗಲು ಸಾಧ್ಯವಾಗುತ್ತದೆ. ಈಗ ಗೋಡಂಬಿ ಮತ್ತು ಬಾದಾಮಿ ತೆಗೆದುಕೊಂಡು ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಕತ್ತರಿಸಿದ ಗೋಡಂಬಿ ಮತ್ತು ಬಾದಾಮಿ ಹಿಟ್ಟಿಗೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಇದರ ನಂತರ, ಬೇಸನ್ ಮೇಲೆ ಸ್ವಲ್ಪ ನೀರು ಸಿಂಪಡಿಸಿ ಮತ್ತೆ ಹುರಿಯಿರಿ. ಈ ರೀತಿ ಮಾಡಿಕೊಂಡಾಗ ಅದು ಲಾಡು ಕಟ್ಟುವ ಹದಕ್ಕೆ ಬರುತ್ತದೆ. 

ಹಿಟ್ಟು ತಣಿಯಬೇಕು

ತಕ್ಷಣ ಲಾಡು ಮಾಡಬಾರದು ಆ ರೀತಿ ಮಾಡಿದರೆ ಲಾಡು ಬೇಗ ಕೆಡುತ್ತದೆ. ಇದನ್ನು ತುಂಬಾ ಹೊತ್ತು ಬಿಸಿ ಆಗಲು ಬಿಡಬೇಕು.  ನಂತರ ಗ್ಯಾಸ್ ಆಫ್ ಮಾಡಿ. ಈಗ ಒಂದು ದೊಡ್ಡ ತಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಹಿಟ್ಟಿನ ಮಿಶ್ರಣವನ್ನು ತೆಗೆದುಕೊಳ್ಳಿ. ಹಿಟ್ಟನ್ನು ಸ್ವಲ್ಪ ಹೊತ್ತು ತಣ್ಣಗಾಗಲು ಪಕ್ಕಕ್ಕೆ ಇಡಿ. ಬೇಸನ್ ಮಿಶ್ರಣವು ಸ್ವಲ್ಪ ಬೆಚ್ಚಗಿರುವಾಗ, ಪುಡಿ ಮಾಡಿದ ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ನಂತರ ಅದನ್ನು ಎರಡು ಕೈಗಳಲ್ಲೂ ಅಮುಕಿ ಉಂಡೆ ಆಕಾರಕ್ಕೆ ತನ್ನಿ. ತುಂಬಾ ರುಚಿಯಾದ ಬೇಸನ್ ಲಾಡು ಈಗ ರೆಡಿಯಾಗುತ್ತದೆ. ನಂತರ ಅಲಂಕಾರಕ್ಕೆ ಮೇಲಿನಿಂದ ಇನ್ನಷ್ಟು ಡ್ರೈಫ್ರೂಟ್‌ಗಳನ್ನು ಅಂಟಿಸಿ. 

Whats_app_banner