DEMU vs MEMU: ನಿತ್ಯ ಪ್ಯಾಸೆಂಜರ್ ಗಾಡಿಗಳಲ್ಲಿ ಓಡಾಡೋ ನಿಮಗೆ ಡೆಮು, ಮೆಮು ವ್ಯತ್ಯಾಸ ಗೊತ್ತಿಲ್ಲ ಅಂದ್ರೆ ಹೇಗೆ? ಈ ವಿಷಯ ಗೊತ್ತಿರ್ಲಿ-indian railways what is the difference between demu memu and emu trains prs ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Demu Vs Memu: ನಿತ್ಯ ಪ್ಯಾಸೆಂಜರ್ ಗಾಡಿಗಳಲ್ಲಿ ಓಡಾಡೋ ನಿಮಗೆ ಡೆಮು, ಮೆಮು ವ್ಯತ್ಯಾಸ ಗೊತ್ತಿಲ್ಲ ಅಂದ್ರೆ ಹೇಗೆ? ಈ ವಿಷಯ ಗೊತ್ತಿರ್ಲಿ

DEMU vs MEMU: ನಿತ್ಯ ಪ್ಯಾಸೆಂಜರ್ ಗಾಡಿಗಳಲ್ಲಿ ಓಡಾಡೋ ನಿಮಗೆ ಡೆಮು, ಮೆಮು ವ್ಯತ್ಯಾಸ ಗೊತ್ತಿಲ್ಲ ಅಂದ್ರೆ ಹೇಗೆ? ಈ ವಿಷಯ ಗೊತ್ತಿರ್ಲಿ

DEMU vs MEMU: ಡೆಮು ಮತ್ತು ಮೆಮು ರೈಲುಗಳ ವ್ಯತ್ಯಾಸ ಏನೆಂದು ಯಾವಾತ್ತಾದರೂ ಗಮನಿಸಿದ್ದೀರಾ? ಈ ರೈಲುಗಳ ಬಳಕೆ ಹೇಗೆ? ಇವುಗಳ ವ್ಯತ್ಯಾಸವೇನು? ಈ ರೈಲುಗಳ ಉಪಯೋಗಗಳೇನು ಎಂದು ಮುಂದೆ ತಿಳಿಯೋಣ.

ಡೆಮು vs ಮೆಮು ರೈಲು
ಡೆಮು vs ಮೆಮು ರೈಲು

Indian Railway: ಅತಿ ದೊಡ್ಡ ರೈಲ್ವೆ ಜಾಲಕ್ಕೆ ಸಂಬಂಧಿಸಿ ಏಷ್ಯಾದಲ್ಲೇ ಅಗ್ರಸ್ಥಾನ ಹಾಗೂ ವಿಶ್ವದಲ್ಲಿ 4ನೇ ಸ್ಥಾನ ಪಡೆದಿರುವ ಭಾರತೀಯ ರೈಲ್ವೆಯಲ್ಲಿ ನೀವು ಸಾಕಷ್ಟು ಬಾರಿ ಪ್ರಯಾಣ ಬೆಳೆಸಿದ್ದೀರಿ. ಕಡಿಮೆ ದೂರ ಹಾಗೂ ದೂರದ ಪ್ರಯಾಣಕ್ಕೆ ಎಕ್ಸ್‌ಪ್ರೆಸ್, ಸೂಪರ್‌ ಫಾಸ್ಟ್, ಮೇಲ್ ಎಕ್ಸ್‌ಪ್ರೆಸ್.. ಹೀಗೆ ವಿವಿಧ ರೈಲುಗಳಲ್ಲಿ ಪ್ರಯಾಣಿಸಿದ್ದೀರಿ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿವಿಧ ರೀತಿಯ ರೈಲುಗಳು ನಿರ್ವಹಿಸುತ್ತವೆ. ನಿತ್ಯವೂ ಪ್ಯಾಸೆಂಜರ್​ ಗಾಡಿಗಳಲ್ಲಿ ಓಡಾಡುವ ನಿಮಗೆ ಡೆಮು (DEMU), ಮೆಮು (MEMU) ರೈಲುಗಳ ವ್ಯತ್ಯಾಸ ಏನೆಂದು ಗೊತ್ತಿಲ್ಲ ಅಂದರೆ ಹೇಗೆ ಹೇಳಿ? ಇಲ್ಲಿದೆ ನೋಡಿ ವಿವರ.

ಡೆಮು ರೈಲು (Diesel Electric Multiple Unit)

ಮೊದಲಿಗೆ ಡೆಮು ರೈಲುಗಳ ಬಗ್ಗೆ ತಿಳಿಯೋಣ. ಡೆಮು ಪೂರ್ಣ ರೂಪ ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್. ಕಡಿಮೆ ದೂರ ಸಂಚರಿಸುವ ಡೀಸೆಲ್​ನಿಂದ ಓಡುವ ರೈಲುಗಳನ್ನು ಡೆಮು ಎಂದು ಕರೆಯುತ್ತೇವೆ. ಈ ರೈಲುಗಳಲ್ಲಿ 3 ವಿಭಾಗಗಳಿದ್ದು, ಡೀಸೆಲ್ ಎಲೆಕ್ಟ್ರಿಕ್ ಡೆಮು, ಡೀಸೆಲ್ ಹೈಡ್ರಾಲಿಕ್ ಡೆಮು ಮತ್ತು ಡೀಸೆಲ್ ಮೆಕ್ಯಾನಿಕಲ್ ಡೆಮು ರೈಲುಗಳಿವೆ. ಈ ರೈಲುಗಳ ವಿಶೇಷತೆ ಏನೆಂದರೆ, ಪ್ರತಿ ಮೂರು ಬೋಗಿಗಳ ನಂತರ ಒಂದು ಪವರ್ ಕೋಚ್ ಅನ್ನು ಸೇರ್ಪಡೆ ಮಾಡಲಾಗುತ್ತದೆ. ಇದರಿಂದ ಈ ರೈಲುಗಳನ್ನು ಇಂಧನ ದಕ್ಷ ರೈಲುಗಳು ಎನ್ನುತ್ತಾರೆ.

ಡೆಮು ರೈಲುಗಳು ಗಂಟೆಗೆ ಗರಿಷ್ಠ 120 ಕಿಮೀ ವೇಗ ಹೊಂದಿರುತ್ತವೆ.  ಹೆಚ್ಚು ಶಬ್ದ ಮಾಡುತ್ತವೆ.

ಕೆಲವು ಡೆಮು ರೈಲುಗಳು ಸ್ಲೀಪರ್ ಕೋಚ್‌ಗಳನ್ನು ಹೊಂದಿವೆ. ಈ ರೈಲು ಸ್ಲೀಪರ್, ಫಸ್ಟ್ ಎಸಿ, ಎಕ್ಸಿಕ್ಯೂಟಿವ್ ಕ್ಲಾಸ್ ಸೇರಿದಂತೆ ಬಹು ವರ್ಗದ ಕೋಚ್‌ಗಳನ್ನು ಒದಗಿಸುತ್ತದೆ.

ಡೀಸೆಲ್ ಎಂಜಿನಿಂದ ಸಂಚಾರ. ಎಲೆಕ್ಟ್ರಿಕ್ ಜನರೇಟರ್​​ಗಳು ಡೀಸೆಲ್ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುತ್ತವೆ. 

ನಾನ್​-ಎಲೆಕ್ಟ್ರಿಫೈಡ್​ ಮಾರ್ಗದಲ್ಲೂ ಸಂಚರಿಸಲು ಸೂಕ್ತ. ಆದರೆ ನಿಧಾನವಾದ ವೇಗವರ್ಧನೆ, ಕಡಿಮೆ ವೇಗ.

ವಿದ್ಯುದ್ದೀಕರಿಸದ ಗ್ರಾಮೀಣ ಅಥವಾ ಉಪನಗರ ಮಾರ್ಗಗಳಿಗೆ ಸೂಕ್ತವಾಗಿದೆ.

ಭಾರತದಲ್ಲಿ ಮೊದಲ ಡೆಮು ರೈಲು ಅಕ್ಟೋಬರ್ 23, 1994 ರಂದು ಜಲಂಧರ್ ಮತ್ತು ಹೋಶಿಯಾರ್‌ಪುರ ನಡುವೆ ಸಂಚರಿಸಿತ್ತು.

ಮೆಮು (Mainline Electric Multiple Unit)

ಮೆಮು ಪೂರ್ಣ ರೂಪ ಮೇನ್​ಲೈನ್​ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ಆಗಿದೆ. ಈ ರೈಲುಗಳು ಸುಧಾರಿತ ವೈಶಿಷ್ಟ್ಯಗಳು ಮತ್ತು ಉನ್ನತ ತಂತ್ರಜ್ಞಾನವನ್ನು ಹೊಂದಿರುತ್ತವೆ. ಈ ರೈಲುಗಳನ್ನು 200 ಕಿಮೀಗಿಂತ ಹೆಚ್ಚು ದೂರ ಪ್ರಯಾಣಿಸಲು ಬಳಸಲಾಗುತ್ತದೆ. ಪ್ರತಿ 4 ಕೋಚ್‌ಗಳ ನಂತರ ಪವರ್ ಕಾರ್ ಇರುತ್ತದೆ. ಅದರ ಸಹಾಯದಿಂದ ರೈಲಿನ ಎಳೆತದ ಮೋಟಾರು ಚಲಿಸುತ್ತದೆ. ಅದು ವೇಗ ಪಡೆದುಕೊಳ್ಳುತ್ತದೆ.

ಮೆಮು ರೈಲುಗಳು ಗಂಟೆಗೆ ಗರಿಷ್ಠ 160 ಕಿ.ಮೀ ವೇಗ ಹೊಂದಿರುತ್ತವೆ. ನಿಶ್ಯಬ್ದ ಮತ್ತು ಹೆಚ್ಚು ಪರಿಸರ ಸ್ನೇಹಿ.

ಮೆಮು ರೈಲುಗಳು 5 ಅಡಿ 6 ಇಂಚು (1,676 ಮಿಲಿಮೀಟರ್) ಬ್ರಾಡ್ ಗೇಜ್ ಟ್ರ್ಯಾಕ್ ಅನ್ನು ಹೊಂದಿವೆ. 25 ಕೆವಿ ಎಸಿ ಓವರ್‌ಹೆಡ್ ಲೈನ್​ನಿಂದ ವಿದ್ಯುದೀಕರಣಗೊಂಡಿದೆ. ಕಡಿಮೆ ನಿರ್ವಹಣಾ ವೆಚ್ಚ.

ಮೆಮು ರೈಲುಗಳನ್ನು 8 ಅಥವಾ 12 ಕೋಚ್​ಗಳಿಂದ ಮಾಡಲಾಗುತ್ತದೆ. 2 ಅಥವಾ 3 ಮೋಟಾರು ಕೋಚ್‌ಗಳು ಮತ್ತು ಉಳಿದ್ದದ್ದು ಟ್ರೈಲರ್ ಕೋಚ್‌ಗಳು.

ಮೆಮು ರೈಲುಗಳು ಸ್ಲೀಪರ್, ಫಸ್ಟ್ ಎಸಿ, ಎಕ್ಸಿಕ್ಯೂಟಿವ್ ಕ್ಲಾಸ್, ಸೆಕೆಂಡ್ ಎಸಿ, ಥರ್ಡ್ ಎಸಿ, ಎಸಿ ಚೇರ್ ಕಾರ್, ಫಸ್ಟ್ ಕ್ಲಾಸ್ ಮತ್ತು ಸೆಕೆಂಡ್ ಸೀಟಿಂಗ್ ಸೇರಿ ಬಹು ವರ್ಗದ ಕೋಚ್‌ಗಳನ್ನು ನೀಡುತ್ತವೆ.

ಮೆಮು ರೈಲುಗಳು 1995ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.

ವಿದ್ಯುದೀಕೃತ ನಗರ, ಉಪನಗರ ಅಥವಾ ಮುಖ್ಯ ಮಾರ್ಗಗಳಿಗೆ ಸೂಕ್ತವಾಗಿದೆ.

ಎಮು (Electric multiple unit)

ಎಮು ಎಂದರೆ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್. ಇದು ಬಹುತೇಕ ಮೆಮು ರೈಲಿನಂತೆ. ಈ ರೈಲುಗಳನ್ನು ಮಹಾನಗರಗಳಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ, ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಅವುಗಳನ್ನು ಹೆಚ್ಚು ಬಳಸಲಾಗುತ್ತದೆ. ಮುಂಬೈನಲ್ಲೂ ಲೋಕಲ್ ರೈಲುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅಲ್ಲಿನ ನಿವಾಸಿಗಳು ಹೆಚ್ಚಾಗಿ ಸ್ಥಳೀಯ ಪ್ರಯಾಣಕ್ಕಾಗಿ ಮುಂಬೈ ಸ್ಥಳೀಯವನ್ನು ಬಳಸುತ್ತಾರೆ. 

mysore-dasara_Entry_Point