ಕನ್ನಡ ಸುದ್ದಿ  /  ಜೀವನಶೈಲಿ  /  Kitchen Tips: ಅನ್ನ ಸೀದು ಹೋಯ್ತಾ, ಹಾಗಂತ ಎಸೆಯಬೇಡಿ; ಸುಟ್ಟ ವಾಸನೆ ಹೋಗಲಾಡಿಸಲು ಇಲ್ಲಿದೆ ಟಿಪ್ಸ್‌

Kitchen Tips: ಅನ್ನ ಸೀದು ಹೋಯ್ತಾ, ಹಾಗಂತ ಎಸೆಯಬೇಡಿ; ಸುಟ್ಟ ವಾಸನೆ ಹೋಗಲಾಡಿಸಲು ಇಲ್ಲಿದೆ ಟಿಪ್ಸ್‌

Kitchen Tips: ನೀರು ಕಡಿಮೆ ಆದ್ದರಿಂದಲೋ, ಮರೆತಿದ್ದರಿಂದಲೋ ಕೆಲವೊಮ್ಮೆ ಅನ್ನ ಸೀದು ಹೋಗುತ್ತದೆ. ಆಗ ಅದನ್ನು ತಿನ್ನಲು ಮನಸ್ಸಾಗುವುದಿಲ್ಲ. ಆದರೆ ಇಲ್ಲಿ ಹೇಳುವ ಟಿಪ್ಸ್‌ನಿಂದ ನೀವು ಅನ್ನದಿಂದ ಸೀದುಹೋದ ವಾಸನೆ ತೆಗೆಯಬಹುದು.

ಅನ್ನದಿಂದ ಸುಟ್ಟ ವಾಸನೆ ಹೋಗಲಾಡಿಸಲು ಟಿಪ್ಸ್
ಅನ್ನದಿಂದ ಸುಟ್ಟ ವಾಸನೆ ಹೋಗಲಾಡಿಸಲು ಟಿಪ್ಸ್ (PC: Unsplash)

Kitchen Tips: ಏಷ್ಯನ್ ಕ್ಯುಸಿನ್‌ನಲ್ಲಿ ಅನ್ನ ಪ್ರಮುಖ ಆಹಾರ ಪದಾರ್ಥವಾಗಿದೆ. ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ದಿನಕ್ಕೆ ಒಂದು ಸಮಯ ಅನ್ನ ತಿನ್ನದಿದ್ದರೆ ಸಮಾಧಾನ ಎನಿಸುವುದಿಲ್ಲ. ಕೆಲವರಂತೂ 3 ಸಮಯ ಅನ್ನ ಕೊಟ್ರೂ ಖುಷಿಯಿಂದ ಸೇವಿಸುತ್ತಾರೆ. ಅನ್ನ ಮಾಡುವುದು ಬಹಳ ಸುಲಭದ ಕೆಲಸದ. ಆದರೆ ನೀವು ಸ್ವಲ್ಪ ಎಚ್ಚರ ತಪ್ಪಿದರೂ ಸಮಸ್ಯೆ.

ಟ್ರೆಂಡಿಂಗ್​ ಸುದ್ದಿ

ಅನ್ನ ಸೀದು ಹೋದರೆ ಎಸೆಯಬೇಡಿ

ಅನ್ನವನ್ನು ಹೆಚ್ಚಿನ ತಾಪಮಾನದಲ್ಲಿ ಅಥವಾ ದೀರ್ಘಕಾಲದವರೆಗೆ ಅದು ಸೀದು ಹೋಗುತ್ತದೆ. ಇದರಿಂದ ಸುಟ್ಟ ವಾಸನೆ ಉಂಟಾಗಿ ಅನ್ನ ತಿನ್ನದಂತೆ ಆಗುತ್ತದೆ. ಈ ಸಮಯದಲ್ಲಿ ಅನೇಕ ಜನರು ಅನ್ನವನ್ನು ಎಸೆಯುತ್ತಾರೆ. ಆದರೆ ಇದಕ್ಕೊಂದು ಪರಿಹಾರವಿದೆ. ಮಾಸ್ಟರ್‌ ಚೆಫ್‌ ಪಂಕಜ್ ಭದೌರಿಯಾ ಅವರು ನಿಮಗೆ ಸಮಯ ಮತ್ತು ಅನ್ನ ಉಳಿಸುವ ಎರಡು ಅಮೂಲ್ಯವಾದ ಟಿಪ್ಸ್‌ ನೀಡಿದ್ದಾರೆ. ಅನ್ನ, ಬಿರಿಯಾನಿ ಅಥವಾ ಪುಲಾವ್ ಸೀದು ಹೋಗಿದ್ದರೆ ಅದನ್ನು ನೀವು ಎಸೆಯಬೇಕಿಲ್ಲ. ಸುಟ್ಟ ವಾಸನೆಯೊಂದಿಗೆ ಅದನ್ನು ಸೇವಿಸಲು ಯಾರಿಗೂ ಇಷ್ಟವಾಗುವುದಿಲ್ಲ. ಆದ್ದರಿಂದ ಇದಕ್ಕಾಗಿ ನಾನು ಒಂದು ಟಿಪ್ಸ್‌ ನೀಡುತ್ತಿದ್ದೇನೆ. ಇದನ್ನು ಅನುಸರಿಸಿದರೆ ಖಂಡಿತ ಅನ್ನ ಸೀದು ಹೋದ ವಾಸನೆ ಉಳಿಯುವುದಿಲ್ಲ. ಮನೆಯಲ್ಲಿ ಒಮ್ಮೆ ಇದನ್ನು ಟ್ರೈ ಮಾಡಿ ಎಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಈರುಳ್ಳಿಯಿಂದ ಸಮಸ್ಯೆಗೆ ಪರಿಹಾರ

ಅನ್ನದಿಂದ ಸುಟ್ಟ ವಾಸನೆಯನ್ನು ತೆಗೆದು ಹಾಕಲು, ನಿಮಗೆ ಬೇಕಾಗಿರುವುದು ಈರುಳ್ಳಿ. ಮೊದಲು, ಈರುಳ್ಳಿಯ ಮೇಲ್ಭಾಗವನ್ನು ಸ್ವಲ್ಪ ಕತ್ತರಿಸಿ, ನೀರಿನಲ್ಲಿ ತೊಳೆದು ಸಿಪ್ಪೆ ಸಹಿತ ನಾಲ್ಕು ತುಂಡುಗಳಾಗಿ ಕತ್ತರಿಸಿ. ಈ ತುಂಡುಗಳನ್ನು ಅನ್ನದ ಪಾತ್ರೆಯ ಸುತ್ತಲೂ 4 ಕಡೆ ಹುದುಗಿಸಿ. ಮುಚ್ಚಳ ಮಚ್ಚಿ 10 ನಿಮಿಷ ಬಿಡಿ. ( ಸ್ಟೌವ್‌ ಹಚ್ಚಬೇಡಿ). ನಂತರ ಅನ್ನದಿಂದ ಈರುಳ್ಳಿಯನ್ನು ಹೊರಗೆ ತೆಗೆಯಿರಿ. ಮೇಲ್ಭಾಗದ ಅನ್ನವನ್ನಷ್ಟೇ ಬೇರೆ ಪಾತ್ರೆಗೆ ವರ್ಗಾಯಿಸಿ. ಈಗ ನೋಡಿ, ಅನ್ನದಲ್ಲಿ ಸುಟ್ಟ ವಾಸನೆ ತೊಲಗಿರುತ್ತದೆ. ಮುಂದಿನ ಬಾರಿ ನಿಮ್ಮ ಮನೆಯಲ್ಲೂ ಈ ಸಮಸ್ಯೆ ಆದರೆ ಈ ಟಿಪ್ಸ್‌ ಫಾಲೋ ಮಾಡುವುದನ್ನು ಮರೆಯಬೇಡಿ.

ಫಾಲೋವರ್‌ಗಳಿಂದ ಮೆಚ್ಚುಗೆ

ಪಂಕಜ್‌ ಪಂಕಜ್ ಭದೌರಿಯಾ ನೀಡಿರುವ ಸಲಹೆಗೆ ಅವರ ಫಾಲೋವರ್‌ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೌದು ಇಂದು ಈ ಟಿಪ್ಸ್‌ ಟ್ರೈ ಮಾಡಿದೆ, ನಿಜಕ್ಕೂ ಇದು ಉಪಯುಕ್ತ ಸಲಹೆ ಎಂದು ಕಾಮೆಂಟ್‌ ಮಾಡಿದ್ದಾರೆ. ಅನ್ನ ಸೀದು ಹೋದರೆ ಈ ಟಿಪ್ಸ್‌ ಓಕೆ, ಆದರೆ ಸಾಂಬಾರ್‌ ಸುಟ್ಟರೆ ಅದಕ್ಕೆ ಏನು ಮಾಡುವುದು? ಏನಾದರೂ ಟಿಪ್ಸ್‌ ನೀಡಿ ಎಂದು ಕೇಳಿದ್ದಾರೆ.

ಪಂಕಜ್‌ ಬದೌರಿಯಾ ಮಾಸ್ಟರ್‌ ಚೆಫ್‌ ಇಂಡಿಯಾ ಸೀಸನ್‌ 1ರ ವಿನ್ನರ್.‌ ಚೆಫ್‌ ಪಂಕಜ್‌ ಕಾ ಜೈಕಾ, 3 ಕೋರ್ಸ್‌ ವಿತ್‌ ಪಂಕತ್‌ ಸೇರಿದಂತೆ ಅನೇಕ ಕಾರ್ಯಕ್ರಮದ ಮೂಲಕ ಇವರು ಜನರಿಗೆ ಉಚಿತ ಅಡುಗೆ ಕಲಿಸಿದ್ದಾರೆ. ಬೆಂಗಳೂರಿನಲ್ಲಿ ಕೂಡಾ ಅನೇಕ ಕುಕಿಂಗ್‌ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

ವಿಭಾಗ