ಬೇಯಿಸಿದ ಮೊಟ್ಟೆ ತಿನ್ನೋಕೆ ಇಷ್ಟ, ಆದರೆ ಸಿಪ್ಪೆ ಸುಲಿಯೋದು ಕಷ್ಟ ಅಂತಿದ್ದೀರಾ: ಈ ಸರಳ ವಿಧಾನಗಳನ್ನು ಬಳಸಿ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬೇಯಿಸಿದ ಮೊಟ್ಟೆ ತಿನ್ನೋಕೆ ಇಷ್ಟ, ಆದರೆ ಸಿಪ್ಪೆ ಸುಲಿಯೋದು ಕಷ್ಟ ಅಂತಿದ್ದೀರಾ: ಈ ಸರಳ ವಿಧಾನಗಳನ್ನು ಬಳಸಿ ನೋಡಿ

ಬೇಯಿಸಿದ ಮೊಟ್ಟೆ ತಿನ್ನೋಕೆ ಇಷ್ಟ, ಆದರೆ ಸಿಪ್ಪೆ ಸುಲಿಯೋದು ಕಷ್ಟ ಅಂತಿದ್ದೀರಾ: ಈ ಸರಳ ವಿಧಾನಗಳನ್ನು ಬಳಸಿ ನೋಡಿ

ಕೋಳಿ ಮೊಟ್ಟೆಗಳನ್ನು ನಿಯಮಿತವಾಗಿ ತಿನ್ನುವುದು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಆದರೆ, ಬೇಯಿಸಿದ ಮೊಟ್ಟೆಯ ಸಿಪ್ಪೆ ಸುಲಿಯುವುದೇ ಅನೇಕರಿಗೆ ಸಮಸ್ಯೆಯಾಗಿದೆ. ಕೆಲವೊಮ್ಮೆ ಬೇಯಿಸಿದ ಮೊಟ್ಟೆಯ ಸಿಪ್ಪೆ ಸುಲಿಯುವಾಗ ಬಿಳಿ ಭಾಗ ಸಿಪ್ಪೆ ಸಹಿತ ಬರುತ್ತದೆ. ಕೆಲವರು ಮೊಟ್ಟೆಯ ಸಿಪ್ಪೆ ತೆಗೆಯಲು ಕಷ್ಟಪಡುತ್ತಾರೆ. ಅಂತಹವರಿಗಾಗಿ ಇಲ್ಲಿದೆ ಟಿಪ್ಸ್.

ಬೇಯಿಸಿದ ಮೊಟ್ಟೆ ತಿನ್ನೋಕೆ ಇಷ್ಟ, ಆದರೆ ಸಿಪ್ಪೆ ಸುಲಿಯೋದು ಕಷ್ಟ ಅಂತಿದ್ದೀರಾ: ಈ ಸರಳ ವಿಧಾನಗಳನ್ನು ಬಳಸಿ ನೋಡಿ
ಬೇಯಿಸಿದ ಮೊಟ್ಟೆ ತಿನ್ನೋಕೆ ಇಷ್ಟ, ಆದರೆ ಸಿಪ್ಪೆ ಸುಲಿಯೋದು ಕಷ್ಟ ಅಂತಿದ್ದೀರಾ: ಈ ಸರಳ ವಿಧಾನಗಳನ್ನು ಬಳಸಿ ನೋಡಿ (unsplash)

ಅನೇಕ ಪೋಷಕಾಂಶಗಳನ್ನು ಒಳಗೊಂಡಿರುವ ಕೋಳಿ ಮೊಟ್ಟೆಗಳನ್ನು ನಿಯಮಿತವಾಗಿ ತಿನ್ನುವುದು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಪ್ರತಿದಿನ ಮೊಟ್ಟೆ ತಿನ್ನುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ಮೊಟ್ಟೆಯಲ್ಲಿ ಪ್ರೋಟೀನ್, ವಿಟಮಿನ್ ಎ, ಬಿ 12, ಬಿ 2, ಡಿ, ಕಬ್ಬಿಣ ಮತ್ತು ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಂತೆ ಪೋಷಕಾಂಶಗಳನ್ನು ಹೊಂದಿರುತ್ತವೆ. ದಿನದ ಯಾವುದೇ ಸಮಯದಲ್ಲಿ ಮೊಟ್ಟೆಗಳನ್ನು ತಿನ್ನಬಹುದು. ಮೊಟ್ಟೆ ಬೇಯಿಸುವುದು ಸುಲಭವಾದರೂ ಕೆಲವರಿಗೆ ಸಿಪ್ಪೆ ಸುಲಿಯಲು ಕಷ್ಟವಾಗುತ್ತದೆ. ಕೆಲವೊಮ್ಮೆ ಬೇಯಿಸಿದ ಮೊಟ್ಟೆಯ ಸಿಪ್ಪೆ ಸುಲಿಯುವಾಗ ಬಿಳಿ ಭಾಗ ಸಿಪ್ಪೆ ಸಹಿತ ಬರುತ್ತದೆ. ಕೆಲವರು ಮೊಟ್ಟೆಯ ಸಿಪ್ಪೆ ತೆಗೆಯಲು ಕಷ್ಟಪಡುತ್ತಾರೆ. ಅಂತಹವರಿಗಾಗಿ ಇಲ್ಲಿದೆ ಟಿಪ್ಸ್.

ಸುಲಭವಾಗಿ ಸಿಪ್ಪೆ ತೆಗೆಯಲು ಈ ರೀತಿ ಮಾಡಿ

ಮೊಟ್ಟೆಯನ್ನು ಕುದಿಸಿದ ನಂತರ ಸಿಪ್ಪೆ ಸುಲಿಯಲು ಅನೇಕರಿಗೆ ಕಷ್ಟವಾಗುತ್ತದೆ. ಸಿಪ್ಪೆ ತೆಗೆಯಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಆದರೆ, ಮೊಟ್ಟೆಯನ್ನು ಕುದಿಸಿದ ನಂತರ, ಅದನ್ನು ಸ್ವಲ್ಪ ಬಿರುಕು ಬಿಡುವವರೆಗೆ ಕಾಯಬೇಕು. ನಂತರ ಸ್ವಲ್ಪ ಸಮಯದವರೆಗೆ ತಣ್ಣನೆಯ ನೀರಿನಲ್ಲಿ ಮುಳುಗಿಸಬೇಕು. ಈ ರೀತಿ ಮಾಡುವುದರಿಂದ ಮೊಟ್ಟೆಯು ಸುಲಭವಾಗಿ ಸಿಪ್ಪೆ ಸುಲಿಯುತ್ತದೆ. ಮೊಟ್ಟೆಗಳು ಕುದಿಯುತ್ತಿರುವಾಗ ನೀರಿಗೆ ಒಂದು ಟೀ ಚಮಚ ಅಡುಗೆ ಸೋಡಾವನ್ನು ಸೇರಿಸಿದರೆ, ಸಿಪ್ಪೆ ಸುಲಭವಾಗಿ ಹೊರಬರಲು ಸಹಾಯ ಮಾಡುತ್ತದೆ.

ವಿನೆಗರ್ ಸೇರಿಸಿ

ಮೊಟ್ಟೆಗಳನ್ನು ನೀರಿನಲ್ಲಿ ಕುದಿಸಿದಾಗ ಕೆಲವೊಮ್ಮೆ ಬಿರುಕು ಬಿಡುತ್ತವೆ. ಕೆಲವೊಮ್ಮೆ ಅವು ನೀರಿನಲ್ಲಿ ಒಡೆಯುತ್ತವೆ. ಈ ರೀತಿ ಆದಾಗ, ನೀರಿಗೆ ಸ್ವಲ್ಪ ವಿನೆಗರ್ ಸೇರಿಸಿ. ಇದು ನೀರಿನಲ್ಲಿ ಬೇಯುತ್ತಿರುವಾಗ ಮೊಟ್ಟೆ ಒಡೆಯುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಮೊಟ್ಟೆಯಿಂದ ದ್ರವ ಹೊರಬರುವುದನ್ನು ಸಹ ತಡೆಯಬಹುದು.

ಮೊಟ್ಟೆಯ ಪರೀಕ್ಷೆ ಹೀಗಿದೆ

ಮಾರುಕಟ್ಟೆಯಿಂದ ತಂದ ಮೊಟ್ಟೆಗಳು ತಾಜಾವಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಮನೆಯಲ್ಲಿಯೇ ಪರೀಕ್ಷಿಸಬಹುದು. ದೋಷಯುಕ್ತ ಮೊಟ್ಟೆಗಳನ್ನು ಗುರುತಿಸಬಹುದು. ಇದಕ್ಕಾಗಿ ಮೊದಲು ಒಂದು ಲೋಟದಲ್ಲಿ ನೀರನ್ನು ಸುರಿಯಿರಿ. ಅದರಲ್ಲಿ ಒಂದು ಮೊಟ್ಟೆಯನ್ನು ಹಾಕಿ. ಮೊಟ್ಟೆ ಮುಳುಗಿದರೆ, ಅದು ತಾಜಾ ಮತ್ತು ಬೇಯಿಸಲು ಸಿದ್ಧವಾಗಿದೆ ಎಂದರ್ಥ. ಮೊಟ್ಟೆ ನೀರಿನಲ್ಲಿ ತೇಲಿದರೆ ಅದು ಹಾಳಾಗಿದೆ ಎಂದು ತಿಳಿಯಬಹುದು.

ಹಳದಿ ಲೋಳೆಯನ್ನು ಸುಲಭವಾಗಿ ಬೇರ್ಪಡಿಸಿ

ಮೊಟ್ಟೆಯನ್ನು ಒಡೆಯುವಾಗ ಹಳದಿ ಲೋಳೆಯನ್ನು ಬೇರ್ಪಡಿಸಲು ಸುಲಭವಾದ ಮಾರ್ಗವಿದೆ. ಮೊದಲು ನೀವು ಮೊಟ್ಟೆಯನ್ನು ಒಡೆಯಲು ಬಯಸುವ ಬೌಲ್ ಮೇಲೆ ಪ್ಲಾಸ್ಟಿಕ್ ತುರಿಯುವ ಮಣೆ ಹಾಕಿ. ಅದರ ಮೇಲೆ ಮೊಟ್ಟೆಯನ್ನು ಒಡೆಯಿರಿ. ನಂತರ ಮೊಟ್ಟೆಯ ಬಿಳಿಭಾಗವು ಕೆಳಗೆ ಜಾರುತ್ತದೆ, ಮೊಟ್ಟೆಯ ಹಳದಿ ಲೋಳೆಯು ಬಟ್ಟಲಿನಲ್ಲಿ ಉಳಿಯುತ್ತದೆ. ಹೀಗೆ ಹಳದಿ ಲೋಳೆಯನ್ನು ಬೇರ್ಪಡಿಸಬಹುದು.

ಮೈಕ್ರೋವೇವ್‌ನಲ್ಲಿ ಹೀಗೆ ಆಮ್ಲೆಟ್ ಮಾಡಬಹುದು

ಅಡುಗೆ ಮಾಡಲು ಅಷ್ಟಾಗಿ ತಿಳಿಯದಿದ್ದವರಿಗೆ ಬಾಣಲೆಯಲ್ಲಿ ಆಮ್ಲೆಟ್ ಮಾಡಲು ಕಷ್ಟಪಡುತ್ತಾರೆ. ಆಮ್ಲೆಟ್ ಅಷ್ಟೂ ಸರಿಯಾಗಿ ಬರುವುದಿಲ್ಲ. ಮೈಕ್ರೊವೇವ್ ಓವನ್ ಇದ್ದರೆ ಸುಲಭವಾಗಿ ಮಾಡಬಹುದು. ಮೈಕ್ರೋವೇವ್‌ನಲ್ಲಿ ಇಡುವ ಬೌಲ್‍ನಲ್ಲಿ ಮೊಟ್ಟೆಯನ್ನು ಒಡೆಯಿರಿ. ಇದಕ್ಕೆ ಉಪ್ಪು, ಕಾಳುಮೆಣಸಿನ ಪುಡಿ, ಕತ್ತರಿಸಿದ ಈರುಳ್ಳಿ ಮತ್ತು ಮೆಣಸಿನಕಾಯಿಯನ್ನು ಸೇರಿಸಿ. ಎರಡು ನಿಮಿಷದಲ್ಲಿ ಆಮ್ಲೆಟ್ ರೆಡಿಯಾಗುತ್ತದೆ.

ಮೊಟ್ಟೆಯ ನಿಯಮಿತ ಸೇವನೆಯು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಹೃದಯ, ಕಣ್ಣು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಸಹಾಯಕವಾಗಿದೆ. ಮೊಟ್ಟೆಯಲ್ಲಿ ಪ್ರೋಟೀನ್ ಹೆಚ್ಚಿರುವುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರಿಗೂ ಒಳ್ಳೆಯದು. ಇದರ ಪ್ರಮುಖ ಪೋಷಕಾಂಶಗಳು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

Whats_app_banner