ಫ್ರಿಜ್ ಕೆಟ್ಟೋಗಿದ್ಯಾ, ಹಾಲು ಹಾಳಾಗದಂತೆ ಕಾಪಾಡುವುದು ಹೇಗೆ: ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ-kitchen tips milk storing tips how to store milk without fridge simple tricks to prevent milk from going sour arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಫ್ರಿಜ್ ಕೆಟ್ಟೋಗಿದ್ಯಾ, ಹಾಲು ಹಾಳಾಗದಂತೆ ಕಾಪಾಡುವುದು ಹೇಗೆ: ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ

ಫ್ರಿಜ್ ಕೆಟ್ಟೋಗಿದ್ಯಾ, ಹಾಲು ಹಾಳಾಗದಂತೆ ಕಾಪಾಡುವುದು ಹೇಗೆ: ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ

ಮನೆಯಲ್ಲಿ ಫ್ರಿಜ್‌ ಹಾಳಾಗಿದ್ದರೆ ಅಥವಾ ಕರೆಂಟ್‌ ಕೈಕೊಟ್ಟರೆ ಅದರಲ್ಲಿರುವ ಹಾಲು ಬಹಳ ಬೇಗನೆ ಕೆಡುತ್ತದೆ. ಫ್ರಿಜ್‌ನಿಂದ ಹೊರತೆಗೆದು ಹೇಗೇಗೋ ಇಟ್ಟರೂ ಕೂಡಾ ಹಾಲು ಹಾಳಾಗುತ್ತದೆ. ಅಂತಹ ಸಮಯದಲ್ಲಿ ಏನು ಮಾಡಿದರೆ ಹಾಲು ಹಾಳಾಗದಂತೆ ಕಾಪಾಡಿಕೊಳ್ಳಬಹುದು. ಇಲ್ಲಿದೆ ಸರಳ ಟ್ರಿಕ್ಸ್‌. ಇವುಗಳನ್ನು ಪಾಲಿಸಿ ಹಾಲು ಕೆಡದಂತೆ ಶೇಖರಿಸಿ.

ಫ್ರಿಜ್ ಕೆಲಸ ಮಾಡದ ದಿನಗಳಲ್ಲಿ ಹಾಲು ಹಾಳಾಗದಂತೆ ಕಾಪಾಡೋಕೆ ಇಲ್ಲಿದೆ ಟಿಪ್ಸ್
ಫ್ರಿಜ್ ಕೆಲಸ ಮಾಡದ ದಿನಗಳಲ್ಲಿ ಹಾಲು ಹಾಳಾಗದಂತೆ ಕಾಪಾಡೋಕೆ ಇಲ್ಲಿದೆ ಟಿಪ್ಸ್ (PC: Pixabay)

ಇಂದಿನ ಆಧುನಿಕ ಜಗತ್ತಿನಲ್ಲಿ ಫ್ರಿಜ್‌ನ ಕಾರಣದಿಂದ ಜೀವನ ಬಹಳ ಸುಲಭವಾಗಿದೆ. ಬೇಗನೆ ಕೆಡುವಂತಹ ಆಹಾರಗಳನ್ನು ಬಹಳ ದಿನಗಳ ಕಾಲ ಇರಿಸಿಕೊಳ್ಳಬಹುದಾಗಿದೆ. ತಿನ್ನುವ ಆಹಾರ ಪದಾರ್ಥಗಳನ್ನು ಫ್ರಿಜ್‌ನಲ್ಲಿಟ್ಟು ನಾವು ನಿಶ್ಚಿಂತೆಯಿಂದ ಇರುವಂತೆ ಮಾಡಿದೆ ಇದು. ಬೇಗನೆ ಕೆಡುವಂತಹ ಆಹಾರಗಳನ್ನು ಕೊಳ್ಳುವ ಮೊದಲು ಯೋಚಿಸುವುದನ್ನು ಕೂಡ ಅದು ದೂರಮಾಡಿದೆ. ಅಷ್ಟರ ಮಟ್ಟಿಗೆ ನಾವು ಫ್ರಿಜ್‌ ಅನ್ನು ಅವಲಂಬಿಸಿದ್ದೇವೆ. ಈ ಫ್ರಿಜ್‌ ಕರೆಂಟ್‌ನಿಂದ ಚಲಿಸುತ್ತದೆ. ಕರೆಂಟ್‌ ಇಲ್ಲವೆಂದರೆ ಅದರಲ್ಲಿಟ್ಟ ಪದಾರ್ಥಗಳು ಅಷ್ಟೇ ಬೇಗನೆ ಕೆಡುತ್ತವೆ. ಅಂತಹ ಸಂದರ್ಭಗಳಲ್ಲಿ ಫ್ರಿಜ್‌ನಲ್ಲಿನ ಕೆಲವು ವಸ್ತುಗಳನ್ನು ಹೊರಗೆ ಇಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಅಂತಹವುಗಳಲ್ಲಿ ಹಾಲು ಕೂಡಾ ಒಂದು. ಫ್ರಿಜ್‌ ಇಲ್ಲದೇ ದಿನವಿಡೀ ಹಾಲು ಹಾಳಾಗದಂತೆ ಸಂಗ್ರಹಿಸಿಡುವುದು ಸುಲಭದ ಕೆಲಸವಲ್ಲ. ಅದರಲ್ಲೂ ಕೆಲಸಕ್ಕೆ ಹೋಗುವವರಿಗೆ ಇದು ದೊಡ್ಡ ತಲೆನೋವಿನ ವಿಚಾರವೂ ಹೌದು. ಅಂತಹ ಸಮಯದಲ್ಲಿ ಹಾಲನ್ನು ಕೆಡದಂತೆ ಕಾಪಾಡಿಕೊಳ್ಳುವುದು ಹೇಗೆ ಎಂಬ ಯೋಚನೆ ಎಲ್ಲರನ್ನೂ ಕಾಡುತ್ತದೆ. ಅದಕ್ಕೆ ಕೆಲವು ಸುಲಭದ ವಿಧಾನಗಳನ್ನು ತಿಳಿದುಕೊಂಡರೆ ನಿಮ್ಮ ಚಿಂತೆ ದೂರವಾಗುತ್ತದೆ.

ಇದನ್ನೂ ಓದಿ: ಎಣ್ಣೆಯೇ ಇಲ್ಲದೆ ಗರಿಗರಿ ಪಾಲಕ್ ಚಿಪ್ಸ್ ಮಾಡುವುದು ಹೇಗೆ? ಸುಲಭ ಕಣ್ರೀ ಇದು

ಫ್ರಿಜ್ ಕೆಲಸ ಮಾಡದ ದಿನಗಳಲ್ಲಿ ಹಾಲನ್ನು ಈ ರೀತಿಯಾಗಿ ಸಂಗ್ರಹಿಸಿ

1) ಕಡಿಮೆ ಉರಿಯಲ್ಲಿ ಹಾಲು ಕಾಯಿಸಿ: ಮೊದಲ ಸಲ ಹಾಲು ಕಾಯಿಸುವಾಗ ಕಡಿಮೆ ಉರಿಯಲ್ಲಿ ಚೆನ್ನಾಗಿ ಕಾಯಿಸಿ. ಹಾಲು ಕುದಿಯುತ್ತಿರುವಾಗ ಕನಿಷ್ಠ ಮೂರರಿಂದ ನಾಲ್ಕು ನಿಮಿಷಗಳ ಕಾಲ ಹಾಗೆಯೇ ಇಡಿ. ಹಾಗೆ ಮಾಡುವುದರಿಂದ ಹಾಲಿನಲ್ಲಿರುವ ಎಲ್ಲಾ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಹಾಲು ಬಹಳ ಸಮಯದವರೆಗೆ ಕೆಡದಂತೆ ಇರುತ್ತದೆ.

2) ತಂಪಾದ ಸ್ಥಳದಲ್ಲಿ ಇಡಿ: ಹಾಲನ್ನು ಅಡುಗೆ ಮನೆಯಿಂದ ತೆಗೆದು ಮನೆಯ ತಂಪಾದ ಜಾಗದಲ್ಲಿ ಇಡಿ. ಅಲ್ಲಿ ಸೂರ್ಯನ ನೇರ ಬೆಳಕು ಅಥವಾ ಶಾಖ ತಲುಪದಂತಿರಬೇಕು. ಸ್ಥಳ ತಂಪಾಗಿರುವ ಕಾರಣ ಹಾಲು ಕೆಡುವ ಭಯವೂ ಕೆಡಿಮೆಯಾಗುತ್ತದೆ.

3) ಮಣ್ಣಿನ ಅಥವಾ ಗಾಜಿನ ಪಾತ್ರೆ ಆಯ್ದುಕೊಳ್ಳಿ: ಹಾಲು ಸಂಗ್ರಹಿಸಲು ಮಣ್ಣಿನ ಅಥವಾ ಗಾಜಿನ ಪಾತ್ರೆ ಆಯ್ದುಕೊಳ್ಳುವುದು ಉತ್ತಮ. ಈ ಪಾತ್ರೆಗಳಲ್ಲಿ ಹಾಲು ತಂಪಾಗಿರುವುದರಿಂದ ಬಹಳ ಸಮಯದವರೆಗೆ ಕೆಡದಂತೆ ಇಡಬಹುದು. ಆದರೆ ಹಾಗೆ ಸಂಗ್ರಹಿಸುವ ಮೊದಲು ಹಾಲನ್ನು ಚೆನ್ನಾಗಿ ಕಾಯಿಸಿ ನಂತರ ಇಡಿ.

ಇದನ್ನೂ ಓದಿ: Raisins: ರುಚಿಯಾದ ದ್ರಾಕ್ಷಿ ಸಿಕ್ರೆ ಮನೆಯಲ್ಲೇ ಒಣದ್ರಾಕ್ಷಿ ಮಾಡಿಕೊಳ್ಳಬಹುದು, ಹೇಗೆ ಅಂದ್ರಾ? ಇಲ್ಲಿದೆ ವಿವರ

4) ಎಸಿ ಅಥವಾ ಕೂಲರ್‌ ಇರುವ ಜಾಗ ಆಯ್ದುಕೊಳ್ಳಿ: ಮನೆಯಲ್ಲಿ ಎಸಿ ಅಥವಾ ಕೂಲರ್ ಇರುವ ಕೋಣೆಗಳಲ್ಲೂ ಹಾಲನ್ನು ಇಡಬಹುದು. ಅವುಗಳಿಂದ ಕೋಣೆ ತಂಪಾಗಿರುವುದರಿಂದ ಹಾಲು ಬೇಗನೆ ಕೆಡುವುದಿಲ್ಲ. ಹಾಲಿನ ಪಾತ್ರೆಯ ಮೇಲೆ ಮುಚ್ಚಳವನ್ನು ಮುಚ್ಚಿ ಅದರ ಮೇಲೆ ಐಸ್‌ ಕ್ಯೂಬ್‌ಗಳನ್ನು ಇಡಬಹುದು. ಅದು ಬಹಳ ಸಮಯದವರೆಗೆ ಹಾಲನ್ನು ತಂಪಾಗಿರಿಸುವಂತೆ ಮಾಡುತ್ತದೆ.

5) ನೀರಿನಲ್ಲಿಡಿ: ಹಾಲಿನ ಪಾತ್ರೆಯನ್ನು ನೀರಿನಲ್ಲಿಡಿ. ಇದು ಬಹಳ ಹಿಂದಿನ ಕಾಲದ ಟೆಕ್ನಿಕ್‌ ಆದರೂ ಇಂದಿಗೂ ಪ್ರಯೋಜನಕ್ಕೆ ಬರುತ್ತದೆ. ಇದರಿಂದ ಹಾಲು ತಂಪಾಗಿರುತ್ತದೆ. ಹಾಲಿನ ಪಾತ್ರೆಯ ಸುತ್ತ ಒದ್ದೆ ಬಟ್ಟೆಯನ್ನು ಕೂಡಾ ಸುತ್ತಬಹುದು. ಇದರಿಂದ ಹಾಲು ಬೇಗನೆ ಕೆಡದಂತೆ ಕಾಪಾಡಿಕೊಳ್ಳಬಹುದು.

mysore-dasara_Entry_Point