ರೀಚಾರ್ಜ್ ದರ ಹೆಚ್ಚಳವಾದರೂ ಅನ್‌ಲಿಮಿಟೆಡ್ 5Gಗೆ ಚಿಂತೆಯಿಲ್ಲ; ಜಿಯೋ ಮತ್ತು ಏರ್‌ಟೆಲ್ ಕೊಡುವ ಬೆಸ್ಟ್ ಯೋಜನೆಗಳು ಹೀಗಿವೆ
ಮೊಬೈಲ್ ರೀಚಾರ್ಜ್ ದರ ಮತ್ತೆ ಹೆಚ್ಚಳವಾಗಿದೆ. ಈ ನಡುವೆ 5ಜಿ ಫೋನ್ ಬಳಕೆದಾರರು 5ಜಿ ನೆಟ್ವರ್ಕ್ ಇರುವಲ್ಲಿ ಅನಿಯಮಿತ ಇಂಟರ್ನೆಟ್ ಬಳಸಬಹುದು. ಆದರೆ, ಟಾಕ್‌ಟೈಮ್ ರೀಚಾರ್ಜ್‌ಗಾಗಿ ಗೆಚ್ಚು ಬೆಲೆ ಪಾವತಿಸಬೇಕಿದೆ. ಏರ್‌ಟೆಲ್ ಹಾಗೂ ಜಿಯೋ ಮಾಸಿಕ ಹಾಗೂ ವಾರ್ಷಿಕ ರೀಚಾರ್ಜ್ ಪ್ಲಾನ್ ಹೀಗಿದೆ ನೋಡಿ.
ಭಾರತದ ಪ್ರಮುಖ ಟೆಲಿಕಾಮ್ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ, ಇತ್ತೀಚೆಗೆ ಸದ್ದಿಲ್ಲದೆ ಮೊಬೈಲ್ ದರವನ್ನು ಹೆಚ್ಚಿಸಿವೆ. ರೀಚಾರ್ಜ್ ಮಾಡುವವರು ಹೆಚ್ಚಿನ ದರ ಕಂಡು ಅಚ್ಚರಿಪಟ್ಟಿದ್ದಾರೆ. ವೊಡಾಫೋನ್ ಐಡಿಯಾ ಸ್ಪರ್ಧಾತ್ಮಕ 4G ಆಯ್ಕೆಗಳನ್ನು ನೀಡಿದರೆ, ಜಿಯೋ ಮತ್ತು ಏರ್‌ಟೆಲ್ 5G ಸೇವೆಗಳನ್ನು ಹೊರತಂದಿವೆ. ಬೆಲೆ ಹೆಚ್ಚಳದಿಂದ ಗ್ರಾಹಕರು 5G ಇಂಟರ್ನೆಟ್‌ನತ್ತ ವೇಗವಾಗಿ ಒಗ್ಗಿಕೊಳ್ಳಲು ಮುಂದಾಗಿದ್ದಾರೆ. ಸದ್ಯ ಬದಲಾದ ದರಗಳ ನಡುವೆ, ಜಿಯೋ ಮತ್ತು ಏರ್‌ಟೆಲ್ ಕಂಪನಿಗಳು ಕೊಡಮಾಡುವ ಮಾಸಿಕ ಮತ್ತು ವಾರ್ಷಿಕ ಅನಿಯಮಿತ 5G ಯೋಜನೆಗಳು ಯಾವುವು ಎಂಬುದನ್ನು ತಿಳಿಯೋಣ. ಇದರಲ್ಲಿರುವ ಬೆಲೆ ಮತ್ತು ಅವಧಿ ನೋಡಿಕೊಂಡು ಬಳಕೆದಾರರು ತಮಗೆ ಸರಿಹೊಂದುವ ರೀಚಾರ್ಜ್ ಆಯ್ಕೆಗಳನ್ನು ಬಳಸಿಕೊಳ್ಳಬಹುದು.
ಜಿಯೋದ ಕೈಗೆಟುಕುವ 5G ಯೋಜನೆಗಳು (ಮಾಸಿಕ ಮತ್ತು ವಾರ್ಷಿಕ)
ಜಿಯೋದ ಆರಂಭಿಕ ಹಾಗೂ ಅತ್ಯಂತ ಕೈಗೆಟುಕುವ ಮಾಸಿಕ ಪ್ಲಾನ್ ಬೆಲೆ 349 ರೂಪಾಯಿ. ಈ ಯೋಜನೆಗೆ 28 ದಿನಗಳ ಮಾನ್ಯತೆ ಇದೆ. ದಿನಕ್ಕೆ 2GBಯಂತೆ ಒಟ್ಟು ತಿಂಗಳಿಗೆ 56GB ಇಂಟರ್ನೆಟ್ ಸಿಗುತ್ತದೆ. ಜೊತೆಗೆ ಅನಿಯಮಿತ ಧ್ವನಿ ಕರೆ ಮತ್ತು ಪ್ರತಿದಿನ 100 ಎಸ್‌ಎಂಎಸ್ ಉಚಿತವಾಗಿದೆ. ಇದೇ ವೇಳೆ ಅನಿಯಮಿತ 5G ಇಂಟರ್ನೆಟ್ ಪಡೆಯುತ್ತಾರೆ. ಇದೇ ಪ್ಯಾಕ್‌ನಲ್ಲಿ ಜಿಯೋಟಿವಿ, ಜಿಯೋಸಿನಿಮಾ ಮತ್ತು ಜಿಯೋಕ್ಲೌಡ್ ಚಂದಾದಾರಿಕೆ ಸೇರಿವೆ.
ವಾರ್ಷಿಕ ಯೋಜನೆ
ವಾರ್ಷಿಕ ಯೋಜನೆ ನೋಡುವುದಾದರೆ ವಾರ್ಷಿಕ 3599 ರ ಪ್ಯಾಕ್ ಇದೆ. 365 ದಿನಗಳ ಮಾನ್ಯತೆ ಇದೆ. ದಿನಕ್ಕೆ 2.5GBಯಂತೆ ವರ್ಷಕ್ಕೆ ಒಟ್ಟು 912.5GB ಇಂಟರ್ನೆಟ್ ಸಿಗುತ್ತದೆ. ಸಹಜವಾಗಿ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 ಸಂದೇಶ ಫ್ರೀ ಇರುತ್ತದೆ. ಉಚಿತ ಅನಿಯಮಿತ 5G ಪಡೆಯಬಹುದು. ಚಂದಾದಾರಿಕೆಯಲ್ಲಿ ಜಿಯೋಟಿವಿ, ಜಿಯೋಸಿನಿಮಾ ಮತ್ತು ಜಿಯೋಕ್ಲೌಡ್ ಬಳಸಬಹುದು.
ಏರ್‌ಟೆಲ್‌ನ ಕೈಗೆಟುಕುವ ಮಾಸಿಕ ಮತ್ತು ವಾರ್ಷಿಕ 5G ರೀಚಾರ್ಜ್ ಪ್ಲಾನ್ಸ್
ಏರ್‌ಟೆಲ್‌ನ ಆರಂಭಿಕ ಹಾಗೂ ಕೈಗೆಟುಕುವ ಮಾಸಿಕ ಯೋಜನೆಯ ಬೆಲೆ 409 ರೂ ಆಗಿದೆ. ಇದಕ್ಕೆ 28 ದಿನಗಳ ಮಾನ್ಯತೆ ಇದೆ. ಪ್ರತಿದಿನ 2.5GB ಇಂಟರ್ನೆಟ್ ಬಳಸಬಹುದು. ಅನಿಯಮಿತ ಧ್ವನಿ ಕರೆ ಮತ್ತು 100 SMS ಉಚಿತವಾಗಿದೆ. ಇಲ್ಲಿಯೂ ಉಚಿತ ಅನಿಯಮಿತ 5G ಬಳಸಬಹುದು. 28 ದಿನಗಳವರೆಗೆ ಏರ್‌ಟೆಲ್ ಸ್ಟ್ರೀಮ್ ಪ್ಲೇ (ಉಚಿತ 20+ OTTಗಳು) ಸೇರಿವೆ. ಇದರಲ್ಲಿ Sony LIV, Lionsgate Play, Fancode, Eros Now, hoichoi, ManoramaMAX ಮತ್ತು ಏರ್‌ಟೆಲ್ ಸ್ಟ್ರೀಮ್ ಪ್ಲೇ ಬಳಸಬಹುದು. ಜೊತೆಗೆ ವಿಂಕ್ ಮ್ಯೂಸಿಕ್ ಕೂಡಾ ಲಭ್ಯವಿದೆ.
ವಾರ್ಷಿಕ್ ರೀಚಾರ್ಜ್ ಪ್ಲಾನ್
ಏರ್‌ಟೆಲ್‌ನ ಉತ್ತಮ ಮಾಸಿಕ ಯೋಜನೆಯ ಬೆಲೆ 3599 ರೂಪಾಯಿ. ಇದು 365 ದಿನಗಳ ಮಾನ್ಯತೆಯನ್ನು ಹೊಂದಿದೆ. ಪ್ರತಿದಿನ 2GB ಇಂಟರ್ನೆಟ್, ಅನಿಯಮಿತ ಧ್ವನಿ ಕರೆ ಮತ್ತು 100 ಎಸ್‌ಎಂಎಸ್ ಉಚಿತ. ಜೊತೆಗೆ ಉಚಿತ ಮತ್ತು ಅನಿಯಮಿತ 5G ಬಳಸಬಹುದು.
ಮಾಸಿಕ ರೀಚಾರ್ಜ್ ಪ್ಲಾನ್ ವ್ಯತ್ಯಾಸಗಳು
ಯೋಜನೆ ವಿವರಗಳು | ಜಿಯೋ | ಏರ್‌ಟೆಲ್ |
ಮಾಸಿಕ ಯೋಜನೆ | ₹349 | ₹409 |
ವ್ಯಾಲಿಡಿಟಿ | 28 ದಿನ | 28 ದಿನ |
ಡೇಟಾ | 2GB/day (56GB total) | 2.5GB/day |
ಧ್ವನಿ ಕರೆ | Unlimited | Unlimited |
SMS | 100 SMS/day | 100 SMS/day |
ಹೆಚ್ಚುವರಿ ಪ್ರಯೋಜನಗಳು | JioTV, JioCinema, JioCloud | Airtel stream Play (Free 20+ OTTs),Wynk Music |
ಸ್ಮಾರ್ಟ್ಫೋನ್ಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಐಫೋನ್ ಮತ್ತು ಆಂಡ್ಯಾಯ್ಡ್ ಫೋನ್ನಲ್ಲಿ 5G ಆಫ್ ಮಾಡುವುದು ಹೇಗೆ? ಹಂತವಾರು ವಿವರ ಇಲ್ಲಿದೆ