ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ 2024: ಭಾರತದ ಮೂರನೇ ಪ್ರಧಾನ ಮಂತ್ರಿ ಜನ್ಮದಿನದಂದು ಈ ಮಾಹಿತಿ ನೆನಪಿಸಿಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ 2024: ಭಾರತದ ಮೂರನೇ ಪ್ರಧಾನ ಮಂತ್ರಿ ಜನ್ಮದಿನದಂದು ಈ ಮಾಹಿತಿ ನೆನಪಿಸಿಕೊಳ್ಳಿ

ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ 2024: ಭಾರತದ ಮೂರನೇ ಪ್ರಧಾನ ಮಂತ್ರಿ ಜನ್ಮದಿನದಂದು ಈ ಮಾಹಿತಿ ನೆನಪಿಸಿಕೊಳ್ಳಿ

ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ: ಸಮಾಜ ಹಾಗೂ ಶಿಕ್ಷಣಕ್ಕಾಗಿ ಅವರು ನೀಡಿದ ಕೊಡುಗೆ ಸ್ಮರಣೀಯ. ಭಾರತದ ಮೂರನೇ ಪ್ರಧಾನ ಮಂತ್ರಿಯಾಗಿ ಇವರು ಸಮಾಜಕ್ಕೆ ನೀಡಿದ ಕೊಡುಗೆ ಹಾಗೂ ಅವರ ಶ್ರಮದ ಬಗ್ಗೆ ಇಂದು ಎಲ್ಲೆಡೆ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.

ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ
ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ

ಅಕ್ಟೋಬರ್ 2 ಹಲವು ಕಾರಣಗಳಿಗಾಗಿ ವಿಶೇಷವಾಗಿದೆ. ಯಾಕೆಂದರೆ ಇಂದು ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್‌ ಶಾಸ್ತ್ರಿ ಜಯಂತಿ ಎರಡನ್ನೂ ಆಚರಿಸಲಾಗುತ್ತದೆ. ರಾಷ್ಟ್ರಪಿತ - ಮಹಾತ್ಮ ಗಾಂಧಿ ಅವರ ಕೊಡುಗೆಗಳು ಹಾಗೂ ಅವರ ತ್ಯಾಗವನ್ನು ಈ ಸಂದರ್ಭದಲ್ಲಿ ನೆನೆಯಲಾಗುತ್ತದೆ. ಅದೇ ರೀತಿ ಇಂದು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನೂ ಆಚರಿಸಲಾಗುತ್ತದೆ. 1947 ರಲ್ಲಿ ಸ್ವಾತಂತ್ರ್ಯದ ನಂತರ ದೇಶದ ಮೂರನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದವರು ಲಾಲ್ ಬಹದ್ದೂರ್ ಶಾಸ್ತ್ರಿ ಅವರು. ಈ ದಿನ, ನಾವು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ ಮತ್ತು ಅವರ ಸಾಧನೆಗಳನ್ನು ಸ್ಮರಿಸುವ ಸಲುವಾಗಿ ಜಯಂತಿಯನ್ನು ಆಚರಿಸುತ್ತೇವೆ.

ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ

ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಪ್ರತಿ ವರ್ಷ ಅಕ್ಟೋಬರ್ 2 ರಂದು ಆಚರಿಸಲಾಗುತ್ತದೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಉತ್ತರ ಪ್ರದೇಶದಲ್ಲಿ 1904 ರಲ್ಲಿ ಜನಿಸಿದ್ದರು. ಅವರ ಜನ್ಮ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಉತ್ತರ ಪ್ರದೇಶದ ಮುಘರ್‌ಸರಾಯ್‌ನಲ್ಲಿ ಶಾರದಾ ಪ್ರಸಾದ್ ಶ್ರೀವಾಸ್ತವ ಮತ್ತು ರಾಮದುಲಾರಿ ದೇವಿಯವರ ಪುತ್ರನಾಗಿ ಜನಿಸಿದರು. ಅವರು ತಮ್ಮ ಶೈಕ್ಷಣಿಕ ಶ್ರೇಷ್ಠತೆಗಾಗಿ ಶಾಸ್ತ್ರಿ ಎಂಬ ಬಿರುದನ್ನು ಪಡೆದರು. ಶಿಕ್ಷಣದ ಬಗ್ಗೆ ಅವರ ಆಸಕ್ತಿ ತುಂಬಾ ಇತ್ತು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗಾಗಿ ಅವರು ಶ್ರಮಿಸಿದರು. ನಂತರ 1964 ರಲ್ಲಿ ದೇಶದ ಮೂರನೇ ಪ್ರಧಾನ ಮಂತ್ರಿಯನ್ನಾಗಿ ಆಯ್ಕೆ ಮಾಡಲಾಯಿತು. 1966 ರಲ್ಲಿ ಅವರ ಅಕಾಲಿಕ ಮರಣದವರೆಗೂ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದವರಾಗಿದ್ದಾರೆ. ಹದಿಮೂರು ದಿನಗಳ ಕಾಲ ಹಂಗಾಮಿ ಪ್ರಧಾನಿಯಾಗಿದ್ರು ಗುಲ್ಜಾರಿಲಾಲ್ ನಂದಾ. ಹಾಗಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಮೂರನೇಯ ಪ್ರಧಾನ ಮಂತ್ರಿಯಾದರು.

ಆಚರಣೆಯ ಮಹತ್ವ

ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಮತ್ತು ಮಹಿಳೆಯರ ಸಬಲೀಕರಣದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕೊಡುಗೆ ತುಂಬಾ ಇದೆ. ಅವರು ಸಮಾಜಕ್ಕೆ ಸಾಕಷ್ಟು ಅಗತ್ಯ ಬದಲಾವಣೆಗಳನ್ನು ತಂದಿದ್ದಾರೆ. ಸುಧಾರಣೆಯ ಹಾದಿಯಲ್ಲಿ ನಡೆದವರಾಗಿದ್ದಾರೆ. ಏನು ಕುಂದು ಕೊರತೆ ಇದೆ ಎಂಬುದನ್ನು ಅರಿತು ಅದರ ಸುಧಾರಣೆಗಾಗಿ ಅವರು ತುಂಬಾ ಶ್ರಮವಹಿಸಿದ್ದಾರೆ. ರಾಷ್ಟ್ರವನ್ನು ಉತ್ತಮವಾಗಿ ಅಭಿವೃದ್ಧಿಪಡಿಸುವಲ್ಲಿ ಶ್ರಮಿಸಿದ್ದಾರೆ.

ಶಿಕ್ಷಣಕ್ಕಾಗಿ ಅವರ ಕೊಡುಗೆ ಅಪಾರ

ಹಾಗಾಗಿ ಈ ದಿನದಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಸ್ಮರಿಸಲಾಗುತ್ತದೆ. ದೇಶಕ್ಕಾಗಿ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲಾಗುತ್ತಿದೆ. ಇಂದು ಎಲ್ಲಾ ಶಾಲಾ, ಕಾಲೇಜುಗಳಲ್ಲೂ ಸಹ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಗುತ್ತದೆ. ಅವರು ಸಮಾಜಕ್ಕೆ ನೀಡಿದ ಕೊಡುಗೆಯ ಕುರಿತು ಮಾತನಾಡಲಾಗುತ್ತದೆ ಮತ್ತು ಅವರನ್ನು ಗೌರವಿಸಲಾಗುತ್ತದೆ.

Whats_app_banner