ಕನ್ನಡ ಸುದ್ದಿ  /  Lifestyle  /  One Minute Yoga: Do You Feel Very Stress Try This One Minute Yoga And Say Good By To Stress Check Here For Malaika Arora Yoga Video

One minute yoga: ಸಿಕ್ಕಾಪಟ್ಟೆ ಸ್ಟ್ರೆಸ್ಸಾ?: ಮಲೈಕಾ ವಿಡಿಯೋ ನೋಡಿ 1 ಮಿನಿಟ್‌ ಯೋಗ ಮಾಡಿ!

Say goodbye to stress with this ‘one minute’ yoga asana: ಸ್ಪರ್ಧಾತ್ಮಕ ಯುಗದ ಬದುಕಿನಲ್ಲಿ ಸ್ಟ್ರೆಸ್‌ ಅನ್ನೋದು ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಸಿಕ್ಕಾ ಪಟ್ಟೆ ಸ್ಟ್ರೆಸ್‌ ಅನ್ನಿಸ್ತಿದೆಯಾ? ಹಾಗಾದ್ರೆ ಬಾಲಿವುಡ್‌ ನಟಿ ಮಲೈಕಾ ಅರೋರಾ ವಿಡಿಯೋ ನೋಟಿ ಒನ್‌ ಮಿನಿಟ್‌ ಯೋಗ ಮಾಡಿ! ಇಲ್ಲಿದೆ ಆ ವಿವರ ಮತ್ತು ವಿಡಿಯೋ!

ಬಾಲಿವುಡ್‌ ನಟಿ ಮಲೈಕಾ ಅರೋರಾ (Photo by SUJIT JAISWAL / AFP)
ಬಾಲಿವುಡ್‌ ನಟಿ ಮಲೈಕಾ ಅರೋರಾ (Photo by SUJIT JAISWAL / AFP) (AFP)

ನಿತ್ಯ ಬದುಕಿನಲ್ಲಿ ಮನಸ್ಸಿನ ಆರೋಗ್ಯ ಉತ್ತಮವಾಗಿ ಇಟ್ಟುಕೊಳ್ಳುವುದಕ್ಕೆ ಯೋಗ ಅತ್ಯುತ್ತಮ ಮಾರ್ಗ. ಇಂದಿನ ಬದುಕಿನ ಜಂಜಾಟದಲ್ಲಿ ಸ್ಟ್ರೆಸ್‌ ಅನ್ನೋದು ಉಸಿರಿನಷ್ಟೆ ಸಾಮಾನ್ಯವಾಗಿ ಬಿಟ್ಟಿದೆ. ಈ ಸ್ಟ್ರೆಸ್‌ ಕಡಿಮೆ ಮಾಡುವುದಕ್ಕೆ ಯೋಗ ಮಾಡಿ ಅಂತ ಬಲ್ಲವರು, ಪರಿಣತರು ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಲೇ ಇರುತ್ತಾರೆ. ಸೆಲೆಬ್ರಿಟಿಗಳು ಕೂಡ ಯೋಗ ಮಾಡುತ್ತಿದ್ದು, ಅವರೂ ಆಗಾಗ ಈ ಬಗ್ಗೆ ಜಾಗೃತಿ ಮೂಡಿಸುತ್ತಿರುತ್ತಾರೆ.

ಅಂತಹ ಸೆಲೆಬ್ರಿಟಿ ನಟಿಯರ ಪೈಕಿ ಮಲೈಕಾ ಅರೋರಾ ಕೂಡ ಒಬ್ಬರು. ಮಧ್ಯ ವಯಸ್ಸಿನಲ್ಲೂ ಅವರು ತಮ್ಮ ಫಿಟ್‌ನೆಸ್‌ ಕಾಪಾಡಿಕೊಂಡಿದ್ದು, ಸದಾ ತಮ್ಮ ಸುಂದರ ಮೈಮಾಟದೊಂದಿಗೆ ಈಗಲೂ ಸುದ್ದಿಯಲ್ಲಿದ್ದಾರೆ. ಅಲ್ಲದೆ, ತಮ್ಮ ಫಿಟ್‌ನೆಸ್‌ ಚಟುವಟಿಕೆಯ ವಿಡಿಯೋಗಳನ್ನು ನಿಯತವಾಗಿ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡುತ್ತಿರುತ್ತಾರೆ.

ಇತ್ತೀಚಿನದ್ದು, ಒನ್‌ ಮಿನಿಟ್‌ ಯೋಗದ ವಿಡಿಯೋ. ಇದು ಸ್ಟ್ರೆಸ್‌ ಅನ್ನು ಹೇಗೆ ಕಡಿಮೆ ಮಾಡುತ್ತದೆ ಎಂಬ ಜಾಗೃತಿಯನ್ನು ಮೂಡಿಸಿದ್ದಾರೆ. ಮಾರ್ಜರ್ಯಾಸನ ಅಂದರೆ ಬೆಕ್ಕು-ದನದ ಪೋಸ್‌ ನೀಡಿ ಈ ಆಸನ ಮಾಡಿ ತೋರಿಸಿದ್ದಾರೆ. ಒಂದು ನಿಮಿಷದ ವಿಡಿಯೋ ಈಗ ವೈರಲ್‌ ಆಗಿದೆ.

ಇದನ್ನು "ಮನಸ್ಸು ಮತ್ತು ದೇಹಕ್ಕೆ ಯೋಗ" ಎಂದು ವಿಡಿಯೋ ಕ್ಯಾಪ್ಶನ್‌ ಬರೆದಿರುವ ಅವರು, "ನೀವು ನನ್ನಂತೆಯೇ ಇದ್ದರೆ, ನಿಮ್ಮ ಸೋಮವಾರ ವಾರದ ಆಲೋಚನೆಗಳೊಂದಿಗೆ ಪ್ರಾರಂಭವಾಗುತ್ತದೆ ಎಂದು ನನಗೆ ಖಾತ್ರಿಯಿದೆ. ನೀವು ಸಾಧಿಸಬೇಕಾದ ಎಲ್ಲದರ ಬಗ್ಗೆ ಮತ್ತು ಅವುಗಳನ್ನು ಸಾಧಿಸಲು ನೀವು ಮಾಡಬೇಕಾದ ವಿಷಯಗಳ ಬಗ್ಗೆ ನೀವು ಯೋಚಿಸುತ್ತೀರಿ. ಇದು ಅನೈಚ್ಛಿಕವಾಗಿ ಸ್ಟ್ರೆಸ್‌ ಅನ್ನು ಉಂಟುಮಾಡುತ್ತದೆ.

ಮಾರ್ಜರ್ಯಾಸನ ಬಿಟಿಲಾಸನ ಅಥವಾ ಬೆಕ್ಕು-ಹಸುವಿನ ಭಂಗಿಯು ಬೆನ್ನುಮೂಳೆ, ದೇಹ ಮತ್ತು ಮನಸ್ಸಿಗೆ ಸಹಾಯ ಮಾಡುವ ಎರಡು ವಿಸ್ತರಣೆಗಳ ಸಮ್ಮಿಳನವಾಗಿದೆ. ಈ ಆಸನವು ಪ್ರತಿ ಚಕ್ರದೊಂದಿಗೆ ನಿಮ್ಮ ಬೆನ್ನನ್ನು ಮೇಲಕ್ಕೆ ಮತ್ತು ಕೆಳಕ್ಕೆ ತಳ್ಳುವಾಗ ನೀವು ಉಸಿರಾಡಲು ಮತ್ತು ಬಿಡಲು ಅಗತ್ಯವಿರುತ್ತದೆ. ಯೋಗ ಭಂಗಿಯನ್ನು ಎರಡು ಕೈ ಮತ್ತು ಎರಡು ಕಾಲುಗಳ ಮೇಲೆ ಮಾಡಲಾಗುತ್ತದೆ.

ದಿನದ ಯಾವುದೇ ಸಮಯದಲ್ಲಿ ಈ ಆಸನ ಮಾಡಬಹುದು. ಇದು ವಿಶ್ರಾಂತಿ ಒದಗಿಸುವುದಲ್ಲದೆ ಒತ್ತಡವನ್ನು ಸಂಪೂರ್ಣವಾಗಿ ನಿವಾರಿಸುತ್ತದೆ. ಈ ವಾರ ಇದನ್ನು ಪ್ರಯತ್ನಿಸಿ ಮತ್ತು ನೀವು ಖುಷಿಯಾಗಿದ್ದರೆ ನನಗೆ ತಿಳಿಸಿ ಎಂದು ಮಲೈಕಾ ಅವರು ಯೋಗ ಭಂಗಿಯ ಪ್ರಯೋಜನಗಳನ್ನು ವಿವರಿಸಿದ್ದಾರೆ.

ಅಂದ ಹಾಗೆ, ಸಿಕ್ಕಾಪಟ್ಟೆ ಸ್ಟ್ರೆಸ್ಸಾ?: ಮಲೈಕಾ ಅರೋರಾ ಅವರ ಈ ವಿಡಿಯೋ ನೋಡಿ; 1 ಮಿನಿಟ್‌ ಯೋಗ ಮಾಡಿ! ಇಲ್ಲೇ ಕೆಳಗಿದೆ ವಿಡಿಯೋ…