ಚಳಿಗಾಲದಲ್ಲಿ ಚಿಕ್ಕ ಮಕ್ಕಳಿಗೆ ಸ್ನಾನ ಮಾಡಿಸುವ ಸರಿಯಾದ ಕ್ರಮವಿದು; ಎಳೆ ಕಂದಮ್ಮನ ಪೋಷಕರಿಗೆ ಈ ವಿಚಾರ ಗೊತ್ತಿರಬೇಕು
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಚಿಕ್ಕ ಮಕ್ಕಳಿಗೆ ಸ್ನಾನ ಮಾಡಿಸುವ ಸರಿಯಾದ ಕ್ರಮವಿದು; ಎಳೆ ಕಂದಮ್ಮನ ಪೋಷಕರಿಗೆ ಈ ವಿಚಾರ ಗೊತ್ತಿರಬೇಕು

ಚಳಿಗಾಲದಲ್ಲಿ ಚಿಕ್ಕ ಮಕ್ಕಳಿಗೆ ಸ್ನಾನ ಮಾಡಿಸುವ ಸರಿಯಾದ ಕ್ರಮವಿದು; ಎಳೆ ಕಂದಮ್ಮನ ಪೋಷಕರಿಗೆ ಈ ವಿಚಾರ ಗೊತ್ತಿರಬೇಕು

ಚಳಿಗಾಲದಲ್ಲಿ ಚಿಕ್ಕ ಮಕ್ಕಳ ಆರೈಕೆ ಮಾಡುವುದು ಬಹಳ ಮುಖ್ಯ. ಅದರಲ್ಲೂ ಚಿಕ್ಕ ಮಕ್ಕಳಿಗೆ ಸ್ನಾನ ಮಾಡಿಸುವ ಸರಿಯಾದ ಕ್ರಮ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಇಲ್ಲವಾದರೆ ಮಕ್ಕಳು ಬಹಳ ಬೇಗ ಋತುಮಾನದ ಸಾಮಾನ್ಯ ಖಾಯಿಲೆಗಳಿಗೆ ತುತ್ತಾಗುತ್ತಾರೆ. ಚಳಿಗಾಲದಲ್ಲಿ ಚಿಕ್ಕ ಮಕ್ಕಳ ಸ್ನಾನದ ಬಗ್ಗೆ ಹೊಸದಾಗಿ ಪೋಷಕರಾದವರು ಈ ವಿಷಯಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಹೊಸದಾಗಿ ಪೋಷಕರಾದವರು ಈ ವಿಷಯಗಳನ್ನು ಗಮನದಲ್ಲಿಡಿ: ಚಳಿಗಾಲದಲ್ಲಿ ಚಿಕ್ಕ ಮಕ್ಕಳಿಗೆ ಸ್ನಾನ ಮಾಡಿಸುವ ಸರಿಯಾದ ಕ್ರಮ ಹೀಗಿದೆ
ಹೊಸದಾಗಿ ಪೋಷಕರಾದವರು ಈ ವಿಷಯಗಳನ್ನು ಗಮನದಲ್ಲಿಡಿ: ಚಳಿಗಾಲದಲ್ಲಿ ಚಿಕ್ಕ ಮಕ್ಕಳಿಗೆ ಸ್ನಾನ ಮಾಡಿಸುವ ಸರಿಯಾದ ಕ್ರಮ ಹೀಗಿದೆ (PC: Freepik)

ಪ್ರತಿಯೊಂದು ಋತುಗಳ ಆಗಮನದಿಂದ ಅನುಕೂಲ ಹಾಗೂ ಅನಾನುಕೂಲ ಪರಿಸ್ಥಿತಿಗಳು ಎದುರಾಗುತ್ತವೆ. ಚಳಿಗಾಲದಲ್ಲಿ ಪ್ರಯೋಜನಗಳು ಹೆಚ್ಚಿದ್ದರೂ, ಸವಾಲುಗಳೂ ಕಡಿಮೆಯಿಲ್ಲ. ಈ ಋತುವಿನಲ್ಲಿ ವಾತಾವರಣವು ತಣ್ಣಗಾಗಲು ಪ್ರಾರಂಭಿಸುತ್ತದೆ. ಆಗ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸ ಬೇಕಾಗುತ್ತದೆ. ಅದರಲ್ಲೂ ಮನೆಯಲ್ಲಿ ನವಜಾತ ಶಿಶು ಅಥವಾ ಚಿಕ್ಕ ಮಕ್ಕಳಿದ್ದರೆ ಅವರ ಬಗ್ಗೆ ವಿಶೇಷ ಕಾಳಜಿ ವಹಿಸುವು ಅವಶ್ಯಕತೆಯಿರುತ್ತದೆ. ಆಗ ಪೋಷಕರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗುತ್ತದೆ. ಚಿಕ್ಕ ಮಕ್ಕಳ ಊಟ–ತಿಂಡಿಯಿಂದ ಹಿಡಿದು ಅವರ ಹಾಸಿಗೆ–ಬಟ್ಟೆಯವರೆಗೆ ಜಾಗರೂಕರಾಗಿಬೇಕಾಗುತ್ತದೆ. ಇವುಗಳಲ್ಲಿ ಸ್ವಲ್ಪ ವ್ಯತ್ಯಾಸ ಅಥವಾ ಸ್ವಲ್ಪ ಅಜಾಗರೂಕತೆಯು ಸಹ ಮಕ್ಕಳ ಆರೋಗ್ಯದ ಮೇಲೆ ಕಟ್ಟ ಪರಿಣಾಮ ಬೀರಬಹುದು. ಅದೇ ರೀತಿ ಚಿಕ್ಕ ಮಕ್ಕಳನ್ನು ಸ್ನಾನ ಮಾಡಿಸುವಾಗಲೂ ಅನೇಕ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಚಳಿಗಾಲದಲ್ಲಿ ನವಜಾತ ಶಿಶುಗಳಿಗೆ ಸ್ನಾನ ಮಾಡಿಸುವಾಗ ನೀರು ಎಷ್ಟು ಬಿಸಿ ಇರಬೇಕು, ಸ್ನಾನ ಮಾಡಿಸುವ ಸರಿಯಾದ ಕ್ರಮ ಯಾವುದು, ಏನೇನು ಕಾಳಜಿ ವಹಿಸಬೇಕು ಮುಂತಾದ ವಿಷಯಗಳ ಬಗ್ಗೆ ತಿಳಿಯೋಣ.

ಚಳಿಗಾಲದಲ್ಲಿ ಚಿಕ್ಕ ಮಕ್ಕಳಿಗೆ ಸ್ನಾನ ಮಾಡಿಸುವ ಸರಿಯಾದ ಕ್ರಮ

ಬಿಸಿ ನೀರಿನ ಬಗ್ಗೆ ನಿಗಾವಹಿಸಿ: ಚಳಿಗಾಲದಲ್ಲಿ ಚಿಕ್ಕ ಮಕ್ಕಳನ್ನು ಸ್ನಾನ ಮಾಡಿಸಲು ಬಳಸುವ ನೀರಿನ ತಾಪಮಾನ ತುಂಬಾ ಮುಖ್ಯವಾಗಿದೆ. ಏಕೆಂದರೆ ಚಿಕ್ಕ ಮಕ್ಕಳನ್ನು ಅತಿ ಬಿಸಿ ಅಥವಾ ತಂಪು ನೀರಿನಿಂದ ಸ್ನಾನ ಮಾಡಿಸಬಾರದು. ಮಕ್ಕಳನ್ನು ಸ್ನಾನ ಮಾಡಿಸಲು ಸದಾ ಉಗುರಬೆಚ್ಚಗಿನ ನೀರನ್ನು ಬಳಸಬೇಕು. ಅದಕ್ಕಾಗಿ ನೀವು ಮೊದಲು ನೀರನ್ನು ಪರೀಕ್ಷಿಸಿ. ಪ್ರತಿದಿನವೂ ನೀರಿನ ತಾಪಮಾನ ಒಂದೇ ರೀತಿ ಇರುವಂತೆ ನೋಡಿಕೊಳ್ಳಿ.

ಸ್ನಾನದ ನಂತರ ಮಗುವನ್ನು ಬೆಚ್ಚಗಿರಿಸಿ: ಚಳಿಗಾಲದಲ್ಲಿ ಚಿಕ್ಕ ಮಕ್ಕಳಿಗೆ ಸ್ನಾನ ಮಾಡಿಸಿದ ನಂತರ ಬೆಚ್ಚಗಿಡುವುದು ಬಹಳ ಮುಖ್ಯ. ಇಲ್ಲದಿದ್ದರೆ ಮಕ್ಕಳು ಶೀತ, ನೆಗಡಿ, ಕೆಮ್ಮಿನಿಂದ ಬಳಲುತ್ತಾರೆ. ಆದ್ದರಿಂದ ನಿಮ್ಮ ಮಗುವಿಗೆ ಸ್ನಾನ ಮಾಡಿಸಿದ ನಂತರ ಮೃದುವಾದ, ಹತ್ತಿಯ ಟವಲ್‌ನಿಂದ ದೇಹವನ್ನು ಚೆನ್ನಾಗಿ ಒರೆಸಿ. ಬೆಚ್ಚಿಗಿನ ಬಟ್ಟೆಯನ್ನು ಹಾಕಿ. ಸ್ವಲ್ಪ ಹೊತ್ತು ಎಳೆ ಬಿಸಿಲು ಬೀಳುವಂತೆ ಹೊರಗಡೆ ಕರೆದುಕೊಂಡು ಹೋಗಿ.

ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ನೀರಿಗೆ ಸೇರಿಸಿಕೊಳ್ಳಿ: ಚಳಿಗಾಲದಲ್ಲಿ ಬಿಸಿ ನೀರಿನಿಂದ ಚಿಕ್ಕ ಮಕ್ಕಳಿಗೆ ಸ್ನಾನ ಮಾಡಿಸುವುದರಿಂದ ಮಗುವಿನ ದೇಹದ ಮೇಲೆ ಕೆಲವೊಮ್ಮೆ ದದ್ದುಗಳು ಉಂಟಾಗುತ್ತವೆ ಮತ್ತು ಚರ್ಮವೂ ತುಂಬಾ ಒಣಗುತ್ತದೆ. ಆದ್ದರಿಂದ ಈ ಎಲ್ಲಾ ಚರ್ಮದ ಸಮಸ್ಯೆಗಳನ್ನು ತಪ್ಪಿಸಲು ಸ್ನಾನ ಮಾಡಿಸುವ ನೀರಿಗೆ 2–3 ಹನಿ ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಸೇರಿಸಿ. ಇದರಿಂದ ಮಗುವಿನ ತ್ವಚೆ ತೇವಾಂಶದಿಂದ ಕೂಡಿರುತ್ತದೆ ಮತ್ತು ತ್ವಚೆ ಒಣಗುವುದಿಲ್ಲ.

ಸ್ನಾನ ಮಾಡಿಸುವ ಸರಿಯಾದ ಕ್ರಮ: ಚಳಿಗಾಲದ ತಂಪು ವಾತಾವರಣದಲ್ಲಿ ಚಿಕ್ಕ ಮಕ್ಕಳನ್ನು ಸ್ನಾನ ಮಾಡಿಸುವುದು ಒಂದು ದೊಡ್ಡ ಸವಾಲಾಗಿದೆ. ಮಗುವಿಗೆ ಸ್ನಾನ ಮಾಡಿಸುವ ಮೊದಲು ಉಗುರು ಬೆಚ್ಚಗಿನ ಎಣ್ಣೆಯಿಂದ ಮಸಾಜ್‌ ಮಾಡಿ. ಇದು ಮಗುವಿನ ದೇಹದಲ್ಲಿ ಉಷ್ಣತೆಯನ್ನು ಕಾಪಾಡಲು ನೆರವಾಗುತ್ತದೆ. ಸೂರ್ಯನ ಬೆಳಕಿನಲ್ಲಿ ಮಸಾಜ್‌ ಮಾಡಿದರೆ ಇನ್ನೂ ಉತ್ತಮ. ಆದರೆ ನೆನಪಿಡಿ ಹೊರಗಡೆ ಗಾಳಿಯಿದ್ದರೆ ಆಗ ನಿಮ್ಮ ಕೋಣೆಯಲ್ಲೇ ಮಸಾಜ್‌ ಮಾಡಿ. ಸ್ನಾನ ಮಾಡಿಸುವ ಮೊದಲು ಬಾತ್‌ ಟಬ್‌ ಅಥವಾ ಬಕೆಟ್‌ನಲ್ಲಿ ಉಗುರು ಬೆಚ್ಚಗಿನ ನೀರನ್ನು ತುಂಬಿಸಿಕೊಳ್ಳಿ. ಆ ನೀರಿಗೆ 1 ಚಮಚ ತೆಂಗಿನಎಣ್ಣೆ ಅಥವಾ ಸಾಸಿವೆ ಎಣ್ಣೆ ಸೇರಿಸಿ. ನಂತರ ಮಗುವಿಗೆ ನಿಧಾನವಾಗಿ ಸ್ನಾನ ಮಾಡಿಸಿ. ತ್ವಚೆಯನ್ನು ಗಟ್ಟಿಯಾಗಿ ಉಜ್ಜಬೇಡಿ. ಏಕೆಂದರೆ ಮಕ್ಕಳ ತ್ವಚೆ ಕೋಮಲವಾಗಿರುತ್ತದೆ. ಚಿಕ್ಕ ಮಕ್ಕಳಿಗೆಂದೇ ಸ್ನಾನ ಮುಗಿದ ನಂತರ ಮೃದುವಾದ ಒಂದು ದೊಡ್ಡ ಟವಲ್‌ ತೆಗೆದುಕೊಂಡು ಮಗುನಿನ ಮೈಯನ್ನು ಚೆನ್ನಾಗಿ ಒರೆಸಿ. ನಂತರ ಬೇಬಿ ಮಾಯ್‌ಶ್ಚರೈಸರ್‌ ಹಚ್ಚಿ. ಇದಾದ ನಂತರ ಮಗುವಿಗೆ ಸ್ವಚ್ಛ ಒಣಗಿದ ಬಟ್ಟೆ ಹಾಕಿ.

ಎಷ್ಟು ಬಾರಿ ಸ್ನಾನ ಮಾಡಿಸಬೇಕು: ಚಳಿಗಾಲದಲ್ಲಿ ಮಕ್ಕಳಿಗೆ ಪ್ರತಿದಿನವೂ ಸ್ನಾನ ಮಾಡಿಸಬೇಕೆಂದಿಲ್ಲ. ವಾರದಲ್ಲಿ ಎರಡು ಅಥವಾ ಮೂರು ದಿನ ಸ್ನಾನ ಮಾಡಿಸಿದರೂ ಸಾಕು. ಉಳಿದ ದಿನ ಹತ್ತಿಯ ಬಟ್ಟೆ ಅಥವಾ ವೈಪ್ಸ್‌ನಿಂದ ಮೈ ಒರೆಸಬಹುದು. ಚಳಿಗಾಲದ ದಿನಗಳಲ್ಲಿ ಚಿಕ್ಕ ಮಕ್ಕಳನ್ನು ಆದಷ್ಟು ಬೆಚ್ಚಗಿರಿಸುವುದರಿಂದ ಋತುಮಾನದ ಸಾಮಾನ್ಯ ಖಾಯಿಲೆಗಳಿಂದ ದೂರವಿಡಬಹುದು.

Whats_app_banner