ಮಕ್ಕಳ ಮುಂದೆ ಸಂಗಾತಿಯ ಜೊತೆ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ, ಅವರ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳ ಮುಂದೆ ಸಂಗಾತಿಯ ಜೊತೆ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ, ಅವರ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು

ಮಕ್ಕಳ ಮುಂದೆ ಸಂಗಾತಿಯ ಜೊತೆ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ, ಅವರ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು

ಮಗು ಶಿಸ್ತಿನಿಂದ, ಸುಸಂಸ್ಕೃತವಾಗಿ ಬೆಳೆಯಬೇಕು ಎಂದರೆ ಪೋಷಕರು ಕೂಡ ಶಿಸ್ತುಪಾಲನೆ ಮಾಡುವುದು ಅಗತ್ಯವಾಗುತ್ತದೆ. ಮಕ್ಕಳ ಮುಂದೆ ಪೋಷಕರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ಮಗುವಿನ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಮಗುವಿದ್ದಾಗ ಸಂಗಾತಿಯ ಜೊತೆ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ.

ಮಕ್ಕಳ ಮುಂದೆ ಸಂಗಾತಿಯ ಜೊತೆ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ
ಮಕ್ಕಳ ಮುಂದೆ ಸಂಗಾತಿಯ ಜೊತೆ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ (PC: Canva)

ಮಕ್ಕಳ ಮೇಲೆ ಹೆತ್ತವರ ವರ್ತನೆ, ನಡವಳಿಕೆಗಳು ಸಾಕಷ್ಟು ಪರಿಣಾಮ ಬೀರುತ್ತದೆ. ಹಲವು ಬಾರಿ, ತಿಳಿದೋ ಅಥವಾ ತಿಳಿಯದೆಯೋ ಪೋಷಕರು ಮಕ್ಕಳ ಮುಂದೆ ಕೆಟ್ಟ ವರ್ತನೆ ತೋರುತ್ತಾರೆ. ಮಕ್ಕಳ ಮುಂದೆ ನೀವು ಸಂಗಾತಿಯ ಜೊತೆ ತೋರುವ ಈ ವರ್ತನೆಗಳು ಅವರ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರಬಹುದು. ಹಾಗಾದರೆ ಮಕ್ಕಳಿದ್ದಾಗ ಸಂಗಾತಿಯ ಜೊತೆ ಯಾವ ಯಾವ ತಪ್ಪುಗಳನ್ನು ಮಾಡಬಾರದು ನೋಡಿ.

ಖಾಸಗಿ ವಿಚಾರ ಚರ್ಚೆ ಬೇಡ

ಬಹುತೇಕ ಪೋಷಕರು ಮಕ್ಕಳು ನಮ್ಮವರೇ ಎಂದುಕೊಂಡು ಖಾಸಗಿ ವಿಚಾರಗಳನ್ನು ಮಕ್ಕಳ ಮುಂದೆ ಚರ್ಚಿಸುತ್ತಾರೆ. ಆದರೆ ಹೀಗೆ ಮಾಡಬಾರದು. ಯಾವಾಗಲೂ ವೈಯಕ್ತಿಕ ವಿಷಯಗಳನ್ನು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಇಟ್ಟುಕೊಳ್ಳಿ. ಇದನ್ನು ಕೇಳಿದ ನಂತರ ಮಕ್ಕಳು ಗೊಂದಲಕ್ಕೊಳಗಾಗುತ್ತಾರೆ ಅಥವಾ ಅಸಮಾಧಾನಗೊಳ್ಳುತ್ತಾರೆ.

ವಾದ ಮಾಡಬೇಡಿ

ಮಕ್ಕಳು ನಿಮ್ಮ ನಡವಳಿಕೆಯನ್ನು ನಕಲಿಸುತ್ತಾರೆ. ಮಕ್ಕಳ ಮುಂದೆ ವಾದ ಮಾಡಿದರೆ ಅವರೂ ವಾದ ಮಾಡುತ್ತಾರೆ, ಎದುರುತ್ತರ ಕಲಿಯಲು ಕಲಿಯುತ್ತಾರೆ. ನಿಮ್ಮ ವಿವಾದಗಳನ್ನು ಖಾಸಗಿ ಸ್ಥಳದಲ್ಲಿ, ನೀವಿಬ್ಬರೇ ಇದ್ದಾಗ ಬಗೆಹರಿಸಿಕೊಳ್ಳಿ.

ಟೀಕೆ ಬೇಡ

ಸಂಗಾತಿಯ ಮಧ್ಯೆ ಜಗಳವಾದಾಗ ಒಬ್ಬರಿಗೊಬ್ಬರು ಟೀಕೆ ಮಾಡಿಕೊಳ್ಳುವುದು ಸಹಜ. ಆದರೆ ಮಕ್ಕಳ ಮುಂದೆ ಟೀಕೆ ಮಾಡುವುದು ತಪ್ಪು. ಪರಸ್ಪರರ ಬಗ್ಗೆ ನಕಾರಾತ್ಮಕವಾಗಿ ಮಾತನಾಡಬೇಡಿ. ಒಬ್ಬರು ಇನ್ನೊಬ್ಬರನ್ನು ಟೀಕೆ ಮಾಡುವುದು, ಕೆಟ್ಟದಾಗಿ ಬಯ್ಯುವುದು ಈ ರೀತಿ ಮಾಡುವುದರಿಂದ ಮಕ್ಕಳಿಗೆ ಪೋಷಕರ ಮೇಲೆ ಗೌರವ ಕಡಿಮೆಯಾಗುತ್ತದೆ. ಅವರು ಕೂಡ ನಿಮ್ಮಂತೆ ವರ್ತಿಸಲು ಶುರು ಮಾಡುತ್ತಾರೆ.

ನಿರ್ಲಕ್ಷ್ಯ ಭಾವ ಸಲ್ಲ

ಸಂಗಾತಿಯನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ, ಅದರಲ್ಲೂ ಮಕ್ಕಳ ಮುಂದೆ ತಪ್ಪಿಯೂ ನಿರ್ಲಕ್ಷ್ಯ ಮಾಡದಿರಿ. ಸಂಗಾತಿಗೆ ಅಗತ್ಯವಿರುವಾಗ ಅವರಿಗೆ ಕಾಳಜಿ ತೋರಿ, ಪ್ರೀತಿ ತೋರಿಸಿ. ಇದರಿಂದ ಮಕ್ಕಳು ಸಂಬಂಧವನ್ನು ನಿಭಾಯಿಸುವುದನ್ನು ಕಲಿಯುತ್ತದೆ.

ಸಂಗಾತಿಯನ್ನು ಬೆಂಬಲಿಸಿ

ನಿಮ್ಮ ಸಂಗಾತಿಯ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿ ಮತ್ತು ಯಾವಾಗಲೂ ಅವನ/ಆಕೆಯ ಬೆಂಬಲವಾಗಿರಿ. ಅದರಲ್ಲೂ ಮಗು ಎದುರಿದ್ದಾಗ ಒಬ್ಬರಿಗೊಬ್ಬರು ಬೆಂಬಲವಾಗಿರಿ. ಇದರಿಂದ ಮಗುವಿಗೆ ಸಂಬಂಧಗಳ ಮೌಲ್ಯ, ಅವಶ್ಯಕತೆ ಅರಿವಾಗುತ್ತದೆ. ಮಗು ಕೂಡ ಪೋಷಕರಿಗೆ ಬೆಂಬಲ ನೀಡಲು ಕಲಿಯುತ್ತದೆ.

ಜಗಳ ಮಾಡಬೇಡಿ

ಮಗುವಿನ ಮುಂದೆ ಸಂಗಾತಿಯ ಜೊತೆ ಅನುಚಿತವಾಗಿ ವರ್ತಿಸಬೇಡಿ. ಹೊಡೆಯುವುದು, ಕೈ ಎತ್ತುವುದು ಮಾಡಬೇಡಿ. ಇದು ಮಕ್ಕಳ ಮನಸ್ಸನ್ನು ದುರ್ಬಲಗೊಳಿಸುತ್ತದೆ. ಇದು ಮಕ್ಕಳ ಮನಸ್ಸಿನಲ್ಲಿ ಭಯ ಹುಟ್ಟಲು ಕಾರಣವಾಗುತ್ತದೆ. ಯಾವುದೇ ಸಮಸ್ಯೆಯಿದ್ದರೂ ಮಾತನಾಡುವ ಮೂಲಕ ಪರಿಹರಿಸಿಕೊಳ್ಳಿ. ನಿಮ್ಮ ಸಂಗಾತಿಯ ಮೇಲೆ, ವಿಶೇಷವಾಗಿ ಮಗುವಿನ ಮುಂದೆ ನಿಮ್ಮ ಕೋಪವನ್ನು ಹೊರಹಾಕಬೇಡಿ.

ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುವುದು

ಹೆಚ್ಚಿನ ಬಾರಿ ಪೋಷಕರು ಮಗು ಎದುರಿಗೆ ಇದ್ದಾಗಲೇ ಸಂಬಂಧಿಕರ ಬಗ್ಗೆ, ಪರಿಚಿತರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಬಯ್ಯುವುದು ಮಾಡುತ್ತಾರೆ. ಇದು ತುಂಬಾ ತಪ್ಪು. ಹೀಗೆ ಮಾಡುವುದರಿಂದ ಮಕ್ಕಳ ಮನಸ್ಸಿನಲ್ಲಿ ನಿಮ್ಮ ಸಂಬಂಧಿಕರು ಮಾತ್ರವಲ್ಲದೆ ನಿಮ್ಮ ಇಮೇಜ್ ಕೂಡ ಹಾಳಾಗುತ್ತದೆ.

ನೋಡಿದ್ರಲ್ಲ ಮಕ್ಕಳ ಮುಂದೆ ನೀವು ಹೇಗೆ ಇರುತ್ತೀರಿ ಎಂಬುದು ಅವರ ವರ್ತನೆ ಮಾತ್ರವಲ್ಲ ಅವರ ಭವಿಷ್ಯದ ಮೇಲೂ ಪ್ರಭಾವ ಬೀರುತ್ತದೆ. ಆ ಕಾರಣಕ್ಕೆ ಮಕ್ಕಳ ಮುಂದೆ ಸಂಗಾತಿಯ ಜೊತೆ ಈ ತಪ್ಪಗಳನ್ನು ಎಂದಿಗೂ ಮಾಡದಿರಿ.

Whats_app_banner