ಇಲ್ಲಿ ಸತ್ತವರನ್ನು ಹೂಳುವುದಿಲ್ಲ, ಸುಡುವುದಿಲ್ಲ ವರ್ಷಕ್ಕೊಮ್ಮೆ ಮೃತದೇಹದ ಜೊತೆ ಸಂಭ್ರಮಾಚರಣೆ ಮಾಡುತ್ತಾರೆ! ಏನಿದು ವಿಚಿತ್ರ ಪದ್ಧತಿ-people of the torajan tribe celebrate with the dead body once a year viral news smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಇಲ್ಲಿ ಸತ್ತವರನ್ನು ಹೂಳುವುದಿಲ್ಲ, ಸುಡುವುದಿಲ್ಲ ವರ್ಷಕ್ಕೊಮ್ಮೆ ಮೃತದೇಹದ ಜೊತೆ ಸಂಭ್ರಮಾಚರಣೆ ಮಾಡುತ್ತಾರೆ! ಏನಿದು ವಿಚಿತ್ರ ಪದ್ಧತಿ

ಇಲ್ಲಿ ಸತ್ತವರನ್ನು ಹೂಳುವುದಿಲ್ಲ, ಸುಡುವುದಿಲ್ಲ ವರ್ಷಕ್ಕೊಮ್ಮೆ ಮೃತದೇಹದ ಜೊತೆ ಸಂಭ್ರಮಾಚರಣೆ ಮಾಡುತ್ತಾರೆ! ಏನಿದು ವಿಚಿತ್ರ ಪದ್ಧತಿ

ವೈರಲ್ ನ್ಯೂಸ್‌: ಜಗತ್ತಿನ ಯಾವುದೇ ವ್ಯಕ್ತಿಯಾದರೂ ಸಾಯುವುದು ಖಚಿತ. ನಮ್ಮಲ್ಲಿ ಸತ್ತವರನ್ನು ಸುಡುತ್ತಾರೆ ಅಥವಾ ಮಣ್ಣಿನಲ್ಲಿ ಹೂತು ಹಾಕುತ್ತಾರೆ. ಆದರೆ ಟೊರಾಜನ್ ಬುಡಕಟ್ಟಿನ ಜನರು ಹೀಗೇನೂ ಮಾಡುವುದಿಲ್ಲ. ಅಥವಾ ಪರಮಿಡ್‌ ಕಟ್ಟಿ ಅ ದೇಹವನ್ನು ಅದರೊಳಗಡೆಯೂ ಇಡುವುದಿಲ್ಲ. ಇದೆಂತ ವಿಚಿತ್ರ ಎಂದು ನಿಮಗೆ ಖಂಡಿತ ಅನಿಸಿರುತ್ತದೆ. ಆದರೆ ಇದು ಸತ್ಯ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಗತ್ತಿನ ಯಾವುದೇ ವ್ಯಕ್ತಿಯಾದರೂ ಸಾಯುವುದು ಖಚಿತ. ನಮ್ಮಲ್ಲಿ ಸತ್ತವರನ್ನು ಸುಡುತ್ತಾರೆ ಅಥವಾ ಮಣ್ಣಿನಲ್ಲಿ ಹೂತು ಹಾಕುತ್ತಾರೆ. ಆದರೆ ಟೊರಾಜನ್ ಬುಡಕಟ್ಟಿನ ಜನರು ಹೀಗೇನೂ ಮಾಡುವುದಿಲ್ಲ. ಅಥವಾ ಪರಮಿಡ್‌ ಕಟ್ಟಿ ಅ ದೇಹವನ್ನು ಅದರೊಳಗಡೆಯೂ ಇಡುವುದಿಲ್ಲ. ಇದೆಂತ ವಿಚಿತ್ರ ಎಂದು ನಿಮಗೆ ಖಂಡಿತ ಅನಿಸಿರುತ್ತದೆ. ಆದರೆ ಇದು ಸತ್ಯ. ಹಾಗಾದರೆ ಅವರು ಮಾಡುವುದಾದರೂ ಏನು ಎಂಬ ಪ್ರಶ್ನೆ ನಿಮಗೆ ಬಂದಿರುತ್ತದೆ. ಆ ಕುರಿತು ವಿವರ ಇಲ್ಲೇ ಇದೆ ಗಮನಿಸಿ.

ಇಂಡೋನೇಷ್ಯಾ

ಇಂಡೋನೇಷ್ಯಾದ ಟೊರಾಜಾ ಪ್ರದೇಶದಲ್ಲಿ ದಕ್ಷಿಣ ಸುಲವೇಸಿಯಲ್ಲಿ ವಾಸಿಸುವ ಈ ಅಪರೂಪದ ಸ್ಥಳೀಯ ಬುಡಕಟ್ಟು ಜನರು ಇನ್ನೂ ವಿಚಿತ್ರವಾದ ಪದ್ಧತಿಗಳನ್ನು ಆಚರಿಸುತ್ತಾರೆ. ಮೃತ ದೇಹಗಳನ್ನು ಅವರು ಸುಡುವುದಿಲ್ಲ ಅಥವಾ ಹೂಳುವುದಿಲ್ಲ. ಅವುಗಳನ್ನು ಎಚ್ಚರಿಕೆಯಿಂದ ಸಂರಕ್ಷಿಸಲಾಗಿದೆ. ಟೊರಾಜನ್ ಬುಡಕಟ್ಟಿನ ಜನರು ತಮ್ಮ ಪೂರ್ವಜರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ ಅವರನ್ನು ತುಂಬಾ ಗೌರವ ಹಾಗೂ ಪ್ರೀತಿಯಿಂದ ಕಾಣುತ್ತಾರೆ. ಆ ಕಾರಣಕ್ಕಾಗಿ ಅವರು ಅವರ ದೇಹವನ್ನು ನಾಶ ಮಾಡುವುದಿಲ್ಲ. ಈ ಒಂದು ವಿಚಿತ್ರ ಪದ್ದತಿ ಈಗಲೂ ಇದೆಯಂತೆ.

ವಿಶೇಷ ಆಚರಣೆ

ಭಾರತದಲ್ಲಿ ಪೂರ್ವಜರನ್ನು ಸ್ಮರಿಸಲು ವಿಶೇಷ ಆಚರಣೆಗಳಿರುವಂತೆ ಇಂಡೋನೇಷ್ಯಾದ ದಕ್ಷಿಣ ಸುಲವೇಸಿ ಪ್ರದೇಶದಲ್ಲಿ ವರ್ಷಕ್ಕೊಮ್ಮೆ ಪೂರ್ವಜರ ಸ್ಮರಣೆಯ ದಿನವಿದೆ. ಆ ದಿನ, ಸ್ಥಳೀಯ ತೋಜರಾನ್ ಬುಡಕಟ್ಟು ಜನರು ಮೊದಲು ಸತ್ತ ಜನರು ಮತ್ತು ಸಾಕುಪ್ರಾಣಿಗಳನ್ನು ನೆನಪಿಸಿಕೊಳ್ಳುತ್ತಾರೆ. ಅವುಗಳಲ್ಲಿ ಆತ್ಮಗಳು ಇನ್ನೂ ಅಲ್ಲೇ ಇದೆ ಎಂದು ಅವರು ನಂಬುತ್ತಾರೆ. ಅಂದಿನ ದಿನ ಅವರಿಗೆ ಇಷ್ಟವಾದ ಎಲ್ಲ ರೀತಿಯ ಆಚರಣೆಯನ್ನು ಮಾಡುತ್ತಾರೆ.

ಹೂತು ಹೊರತೆಗೆಯುತ್ತಾರೆ!

ಮರಣವು ಭೌತಿಕ ದೇಹಕ್ಕೆ ಒಂದು ಹಂತವಾಗಿದೆ ಸಾವಿನ ನಂತರವೂ ಆತ್ಮಗಳು ಜೀವಂತವಾಗಿರುತ್ತವೆ ಎಂದು ಅವರು ನಂಬುತ್ತಾರೆ. ಅವರ ಪ್ರೀತಿಪಾತ್ರರು ಸತ್ತರೆ ಮೃತ ದೇಹಗಳ ಸುತ್ತಲೂ ಬಟ್ಟೆಗಳನ್ನು ಬಿಗಿಯಾಗಿ ಸುತ್ತುತ್ತಾರೆ. ನಂತರ ಅವುಗಳನ್ನು ಪೆಟ್ಟಿಗೆಯಲ್ಲಿ ಹಾಕಿ ಫಾರ್ಮಾಲ್ಡಿಹೈಡ್ ದ್ರಾವಣವನ್ನು ಅವರ ದೇಹದ ಮೇಲೆ ಹಾಕುತ್ತಾರೆ. ನಂತರ ಅದನ್ನು ಭೂಮಿಯ ಪದರಗಳ ಅಡಿಯಲ್ಲಿ ಸಂಗ್ರಹಿಸಿ ಇಡುತ್ತಾರೆ. ಈ ರೀತಿಯಾಗಿ ಇಟ್ಟರೆ ಮೃತ ದೇಹಗಳು ವರ್ಷಗಳವರೆಗೆ ಕೊಳೆಯುವುದಿಲ್ಲ. ಅವು ಒಣಗುತ್ತವೆ ಆದರೆ ಸಂಪೂರ್ಣವಾಗಿ ನಾಶವಾಗುವುದಿಲ್ಲ.

ಏನೀ ಆಚರಣೆ?

ಪ್ರತಿ ವರ್ಷ ಪೂರ್ವಜರು ಸತ್ತ ದಿನದಂದು ಅವರು ತಮ್ಮ ಪ್ರೀತಿಪಾತ್ರರ ಮೃತ ದೇಹಗಳನ್ನು ಎಚ್ಚರಿಕೆಯಿಂದ ಹೊರತೆಗೆಯುತ್ತಾರೆ. ಸ್ನಾನ ಮಾಡಿಸುತ್ತಾರೆ. ಹೊಸ ಬಟ್ಟೆಗಳಿಂದ ಅಲಂಕರಿಸುತ್ತಾರೆ. ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಹಾಡುಗಳನ್ನು ಹಾಡಲಾಗುತ್ತದೆ. ಬದುಕಿದ್ದಾಗ ಕುಟುಂಬಕ್ಕೆ ಮಾಡಿದ ಸೇವೆ, ತ್ಯಾಗವನ್ನು ನೆನೆದು ಕಣ್ಣೀರಿಡುತ್ತಾರೆ. ಅವರೊಂದಿಗೆ ಕಳೆದ ಸಂತೋಷದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ. ಇದಕ್ಕಾಗಿ ವಿಶೇಷ ಫೋಟೋ ಸೆಷನ್ ವ್ಯವಸ್ಥೆ ಮಾಡಲಾಗುತ್ತದೆ. ಸಂಬಂಧಿಕರು ಮತ್ತು ಸ್ನೇಹಿತರು ಉತ್ಸಾಹದಿಂದ ಫೋಟೋ ತೆಗೆದುಕೊಳ್ಳುತ್ತಾರೆ. ಮಕ್ಕಳು ಮತ್ತು ವಯಸ್ಕರು ಅವರ ಮುಂದೆ ಒಟ್ಟಿಗೆ ನೃತ್ಯ ಮಾಡುತ್ತಾರೆ. ಅವರಲ್ಲಿರುವ ಶ್ರೇಷ್ಠ ಗುಣಗಳನ್ನು ಇಂದಿನ ಪೀಳಿಗೆಯೂ ಉದಾಹರಣೆಯಾಗಿ ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಾರೆ.

mysore-dasara_Entry_Point