ಸಂಗಾತಿಗೆ ಖುಷಿಯಾಗುವ ರೀತಿ ರೇಗಿಸುತ್ತಾ ತಮಾಷೆ ಮಾಡುವುದು ಎಷ್ಟು ಮುಖ್ಯ ಗೊತ್ತಾ? ಹೀಗೆ ಮಾಡಿದರೆ ನಿಮ್ಮ ಸಂಬಂಧ ಎಂದೂ ಬೋರಾಗುವುದಿಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  ಸಂಗಾತಿಗೆ ಖುಷಿಯಾಗುವ ರೀತಿ ರೇಗಿಸುತ್ತಾ ತಮಾಷೆ ಮಾಡುವುದು ಎಷ್ಟು ಮುಖ್ಯ ಗೊತ್ತಾ? ಹೀಗೆ ಮಾಡಿದರೆ ನಿಮ್ಮ ಸಂಬಂಧ ಎಂದೂ ಬೋರಾಗುವುದಿಲ್ಲ

ಸಂಗಾತಿಗೆ ಖುಷಿಯಾಗುವ ರೀತಿ ರೇಗಿಸುತ್ತಾ ತಮಾಷೆ ಮಾಡುವುದು ಎಷ್ಟು ಮುಖ್ಯ ಗೊತ್ತಾ? ಹೀಗೆ ಮಾಡಿದರೆ ನಿಮ್ಮ ಸಂಬಂಧ ಎಂದೂ ಬೋರಾಗುವುದಿಲ್ಲ

Relationship tips: ನಿಮ್ಮ ಸಂಗಾತಿಯನ್ನು ಖುಷಿಯಾಗಿಡಲು ನೀವು ಅವರೊಂದಿಗೆ ತಮಾಷೆ ಮಾಡುವುದು ರೇಗಿಸುವುದು ತಪ್ಪೇನಲ್ಲ. ಈ ರೀತಿ ಮಾಡುವುದರಿಂದ ನಿಮ್ಮ ಸಂಬಂಧವೇ ಇನ್ನಷ್ಟು ಗಟ್ಟಿಯಾಗುತ್ತದೆ. ಗಂಡ, ಹೆಂಡತಿ ಅಂದಮೇಲೆ ಕೆಲವೊಮ್ಮೆ ಜಗಳ ಆಗುವುದು ಸಹಜ. ಆದರೆ ಅದನ್ನು ಮೀರಿ ಇರುವ ಅನುಬಂಧವೇ ಈ ಪ್ರೀತಿ ಎಂಬ ನಂಟು.

ಸಂಗಾತಿಯನ್ನು ಖುಷಿಯಾಗಿಡಿ
ಸಂಗಾತಿಯನ್ನು ಖುಷಿಯಾಗಿಡಿ

ಹೆಲ್ದಿ ಟೀಸಿಂಗ್ ಇಸ್ ಆಲ್ವೇಸ್ ಗುಡ್. ನೀವು ನಿಮ್ಮ ಸಂಗಾತಿಯನ್ನು ಅವರಿಗೆ ಇಷ್ಟ ಆಗುವ ರೀತಿಯಲ್ಲಿ ರೇಗಿಸಿದರೆ ಅಥವಾ ತಮಾಷೆ ಮಾಡಿ ನಗಿಸಿದರೆ ಅದರಲ್ಲಿ ತಪ್ಪೇನು ಇಲ್ಲ. ಆದರೆ ಹೀಗೆ ಮಾಡುವಾಗ ಇಬ್ಬರೂ ಕೂಡ ಒಂದೇ ರೀತಿಯ ಮನಸ್ಥಿತಿಯನ್ನು ಹೊಂದಿರುವುದು ಮುಖ್ಯ. ನಿಮ್ಮ ಸಂಗಾತಿ ತುಂಬಾ ವಿಷಯಗಳನ್ನ ಗಂಭೀರವಾಗಿ ತೆಗೆದುಕೊಳ್ಳುವವರಾಗಿದ್ದು ನೀವು ಅವರಿಗೆ ಎಲ್ಲ ವಿಚಾರದಲ್ಲಿ ತಮಾಷೆ ಮಾಡಿದರೆ ಇಷ್ಟ ಆಗುವುದಿಲ್ಲ.

ನಿಮ್ಮ ಸಂಗಾತಿ ಮನಸ್ಥಿತಿ ಮುಖ್ಯ

ಆ ಕಾರಣ ನಿಮ್ಮ ಸಂಗಾತಿ ಯಾವುದನ್ನು ಇಷ್ಟಪಡುತ್ತಾರೆ ಅವರು ಯಾವ ರೀತಿ ತಮಾಷೆಯನ್ನು ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಇಲ್ಲವಾದರೆ ತಮಾಷೆ ಮಾಡಲು ಹೋಗಿ ಜಗಳ ಆಗಬಹುದು. ಆದರೆ ಕೆಲ ವಿಷಯಗಳಿಗೆ ಒಬ್ಬರನ್ನೊಬ್ಬರು ತಮಾಷೆ ಮಾಡಿ ನಗುವುದು, ಉದಾಹರಣೆಗೆ ಚಿಕ್ಕ ಪುಟ್ಟ ಸಂಗತಿಗಳು ಕಸಗುಡಿಸುವುದು ಅಥವಾ ಅಡುಗೆ ಮಾಡುವುದು ಇವುಗಳಲ್ಲಿ ಈ ವಿಷಯಗಳನ್ನು ಇಟ್ಟುಕೊಂಡು ಉಪ್ಪು ಜಾಸ್ತಿ ಆಯ್ತು, ಕಸ ಅಲ್ಲೇ ಉಳಿಯಿತು ಅಂತ ರೇಗಾಡುವುದನ್ನು ಬಿಟ್ಟು ಅದನ್ನೇ ತಮಾಷೆಯಾಗಿ ಹೇಳಿ.

ನಿಮ್ಮ ಸಂಗಾತಿಗೂ ನಗು ಬರುವ ತರ ಮಾಡಿ. ನೀವು ಅವರಿಗೆ ಸಹಾಯ ಮಾಡುತ್ತಾ ಹೋದರೆ ನಿಮ್ಮ ಆತ್ಮೀಯತೆ ಇನ್ನೂ ಹೆಚ್ಚುತ್ತದೆ. ಎಲ್ಲ ವಿಷಯಗಳನ್ನು ನೀವು ಕ್ಲೋಸ್ ಆಗಿ ಹಂಚಿಕೊಳ್ಳುತ್ತೀರಾ ಎಂದಾದರೆ ನಿಮಗೆ ನಿಮ್ಮ ಸಂಬಂಧ ಯಾವತ್ತಿಗೂ ಬೋರಾಗುವುದಿಲ್ಲ.

ಸಕಾರಾತ್ಮಕವಾಗಿರಲಿ

ಕೀಟಲೆ ಮಾಡುವುದು ತುಂಬಾ ಹಿತವಾಗಿರಬೇಕು ಅದೇ ಕಿರಿಕಿರಿ ಎನಿಸಿ ಜಗಳಕ್ಕೆ ಕಾರಣವಾಗಬಾರದು. ನೀವು ಅದನ್ನು ತುಂಬಾ ಎಂಜಾಯ್ ಮಾಡಬೇಕು. ನಿಮ್ಮ ಸಂಗಾತಿಯ ಸಕಾರಾತ್ಮಕವಾಗಿ ನೀವು ಹೇಳಿದ್ದನ್ನು ಸ್ವೀಕಾರ ಮಾಡಬೇಕು. ನೀವು ಇಂದು ಹೇಳಿದ್ದನ್ನೇ ಅವರು ಮನಸಿನಲ್ಲಿ ಇಟ್ಟುಕೊಂಡು ಕೊನೆಗೆ ಇನ್ನೊಂದು ದಿನ ಅದನ್ನೇ ಎತ್ತಿ ನಿಮ್ಮ ಮುಂದೆ ಆಡುವುದಲ್ಲ. ಈ ರೀತಿಯಾದರೆ ಸಂಬಂಧ ಹಾಳಾಗುತ್ತದೆ.

ಅದನ್ನು ಅತಿಯಾಗಿ ಮಾಡಬೇಡಿ

ಕೀಟಲೆ ಮಾಡುವುದು ಒಂದು ಹಂತದವರೆಗೆ ಏನೂ ಆಗುವುದಿಲ್ಲ. ನಿಮ್ಮ ಸಂಗಾತಿಗೂ ಇದು ಇಷ್ಟವಾಗುತ್ತದೆ. ಆದರೆ ಯಾವ ಸೀರಿಯಸ್ ವಿಚಾರದಲ್ಲೂ ನೀವು ಎಲ್ಲವನ್ನು ತಮಾಷೆಯಾಗೇ ತೆಗೆದುಕೊಳ್ಳುತ್ತಾ ಹೋದರೆ ತೊಂದರೆ ಆಗುತ್ತದೆ. ಆದ್ದರಿಂದ ಅತಿಯಾಗಿ ಹೋಗದಂತೆ ಎಚ್ಚರಿಕೆ ವಹಿಸಿ.

ಪ್ರಶ್ನೆ ಕೇಳಿ

ತಮಾಷೆಯ ಪ್ರಶ್ನೆಗಳನ್ನು ಕೇಳುವುದು ಅನ್ಯೋನ್ಯತೆಯನ್ನು ಹೆಚ್ಚು ಮಾಡುತ್ತದೆ. ಇದು ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಸಂಘರ್ಷವನ್ನು ಕಡಿಮೆ ಮಾಡುತ್ತದೆ. ನೀವು ತಮಾಷೆ ಮಾಡಲು ಪ್ರಯತ್ನಿಸಬಹುದು. ಆಗ ಅವರ ಹತ್ತಿರ ತಮಾಷೆಯಾಗೇ ಪ್ರಶ್ನೆಗಳನ್ನು ಕೇಳುತ್ತಾ ಅವರ ಹತ್ತಿರಕ್ಕೆ ಹೋಗಿ.

Whats_app_banner