ಕನ್ನಡ ಸುದ್ದಿ  /  ಜೀವನಶೈಲಿ  /  18000 ಲೀಟರ್​ ನಕಲಿ ಖಾದ್ಯ ತೈಲ ವಶ; ಆರೋಗ್ಯಕ್ಕೆ ಹಾನಿಕಾರಕವಾದ ನಕಲಿ ಅಡುಗೆ ಎಣ್ಣೆ ಪತ್ತೆ ಹಚ್ಚುವುದೇಗೆ?

18000 ಲೀಟರ್​ ನಕಲಿ ಖಾದ್ಯ ತೈಲ ವಶ; ಆರೋಗ್ಯಕ್ಕೆ ಹಾನಿಕಾರಕವಾದ ನಕಲಿ ಅಡುಗೆ ಎಣ್ಣೆ ಪತ್ತೆ ಹಚ್ಚುವುದೇಗೆ?

fake cooking oil: ರಾಜಸ್ಥಾನದಲ್ಲಿ 18000 ಲೀಟರ್​ ಅಡುಗೆ ಎಣ್ಣೆಯನ್ನು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯು ವಶಕ್ಕೆ ಪಡೆದಿದೆ. ಆರೋಗ್ಯಕ್ಕೆ ಹಾನಿಕಾರಕವಾದ ನಕಲಿ ಅಡುಗೆ ಎಣ್ಣೆ ಪತ್ತೆ ಹಚ್ಚುವುದೇಗೆ? ಇಲ್ಲಿದೆ ವಿವರ.

18000 ಲೀಟರ್​ ನಕಲಿ ಖಾದ್ಯ ತೈಲ ವಶ; ಆರೋಗ್ಯಕ್ಕೆ ಹಾನಿಕಾರಕವಾದ ನಕಲಿ ಅಡುಗೆ ಎಣ್ಣೆ ಪತ್ತೆ ಹಚ್ಚುವುದೇಗೆ?
18000 ಲೀಟರ್​ ನಕಲಿ ಖಾದ್ಯ ತೈಲ ವಶ; ಆರೋಗ್ಯಕ್ಕೆ ಹಾನಿಕಾರಕವಾದ ನಕಲಿ ಅಡುಗೆ ಎಣ್ಣೆ ಪತ್ತೆ ಹಚ್ಚುವುದೇಗೆ?

ಪ್ರಸಿದ್ಧ ಬ್ರಾಂಡ್​​ಗಳ ನಕಲಿ ಲೇಬಲ್​​ಗಳನ್ನು ಅಂಟಿಸಿದ್ದ 18,000 ಲೀಟರ್ ನಕಲಿ ಖಾದ್ಯ ತೈಲವನ್ನು ರಾಜಸ್ಥಾನದಲ್ಲಿ ಅಜ್ಮೀರ್‌ನ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯು ವಶಕ್ಕೆ ಪಡೆದಿದೆ. ಕಲಬೆರಕೆ ಜೊತೆಗೆ ಈ ವಸ್ತುಗಳಿಗೆ ವಿವಿಧ ಪ್ರಸಿದ್ಧ ಬ್ರಾಂಡ್‌ಗಳ ನಕಲಿ ಲೇಬಲ್‌ಗಳನ್ನು ಬಳಸಿಕೊಂಡು ಅಡುಗೆ ಎಣ್ಣೆ ತಯಾರಿಕೆ ಮಾಡಲಾಗುತ್ತಿತ್ತು ಎಂದು ಆರೋಗ್ಯ ಇಲಾಖೆ ಟ್ವೀಟ್‌ನಲ್ಲಿ ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಗಳ ಹಿರಿಯ ಸಲಹೆಗಾರ ಸುದೀಪ್ ಖನ್ನಾ, ನಕಲಿ ತೈಲ ತಯಾರಿಸಿ ಕಡಿಮೆ ವೆಚ್ಚಕ್ಕೆ ಮಾರಾಟ ಮಾಡಲಾಗುತ್ತಿದೆ. ಕಲಬೆರಕೆ, ಅಪಾಯಕಾರಿ ವಸ್ತುಗಳನ್ನು ಬಳಸುವುದರ ಮೂಲಕ ತಯಾರಿಸಲಾಗುತ್ತದೆ ಎಂದು ಹೇಳಿದ್ದಾರೆ. ಕಲಬೆರಕೆಯು ಸಾಮಾನ್ಯವಾಗಿ ಆಲಿವ್ ಅಥವಾ ಆವಕಾಡೊ ಎಣ್ಣೆಯಂತಹ ಹೆಚ್ಚಿನ ಮೌಲ್ಯದ ಬ್ರಾಂಡ್​​ಗಳ ಎಣ್ಣೆಗಳಿಗೆ ಪಾಮ್ ಅಥವಾ ಸೋಯಾಬೀನ್ ಎಣ್ಣೆಯಂತಹ ಅಗ್ಗದ ತೈಲಗಳನ್ನು ಕಲಬೆರಕೆ ಮಾಡಲಾಗುತ್ತಿದೆ.

ಮತ್ತೊಂದು ಅಚ್ಚರಿಯ ಸಂಗತಿಯೆಂದರೆ ತೈಲದ ಕೆಳಮಟ್ಟ ಮತ್ತು ಗುಣಮಟ್ಟವನ್ನು ಮರೆಮಾಚಲು ಕೃತಕ ಬಣ್ಣ ಮತ್ತು ಪರಿಮಳವನ್ನು ಬಳಸಲಾಗುತ್ತಿದೆ. ಇದು ಗ್ರಾಹಕರನ್ನು ಮೋಸಗೊಳಿಸುವುದರ ಜೊತೆಗೆ ನಿಜವಾದ ಪೌಷ್ಟಿಕಾಂಶದ ಪ್ರಯೋಜನ ಮತ್ತು ಸುರಕ್ಷತೆಯನ್ನು ದುರ್ಬಲಗೊಳಿಸಲಿವೆ ಎಂದು ಖನ್ನಾ ಹೇಳಿದ್ದಾರೆ. ಅಲ್ಲದೆ, ನಕಲಿ ಖಾದ್ಯ ತೈಲಗಳ ಸೇವನೆಯು ಆರೋಗ್ಯದ ಮೇಲೆ ಹೇಗೆಲ್ಲಾ ಪರಿಣಾಮ ಉಂಟು ಮಾಡಬಹುದು ಎಂದು ಡಾ ಖನ್ನಾ ವಿವರಿಸಿದ್ದಾರೆ.

ಆರೋಗ್ಯದ ಮೇಲೂ ಪರಿಣಾಮ

- ಈ ತೈಲಗಳಲ್ಲಿ ಕೊಬ್ಬಿನಾಂಶ ಹೆಚ್ಚಿರುತ್ತದೆ. ಇದು ಹೃದಯರಕ್ತನಾಳದ ಕಾಯಿಲೆ, ಸ್ಥೂಲಕಾಯತೆ ಮತ್ತು ಟೈಪ್-2 ಮಧುಮೇಹದ ಅಪಾಯ ಸೂಚಿಸುತ್ತವೆ.

- ಕಲಬೆರಕೆ ತೈಲಗಳು ಲೋಹಗಳು, ಕೀಟನಾಶಕಗಳ ಅವಶೇಷಗಳು ಅಥವಾ ಕೈಗಾರಿಕಾ ರಾಸಾಯನಿಕಗಳಂತಹ ವಿಷಕಾರಿ ಮಾಲಿನ್ಯಕಾರಕ ಕೂಡ ಒಳಗೊಂಡಿರುತ್ತವೆ. ಇದು ಯಕೃತ್ತು ಮತ್ತು ಮೂತ್ರಪಿಂಡದ ಹಾನಿ, ನರಗಳ ದುರ್ಬಲತೆಗೆ ಕಾರಣವಾಗಬಹುದು.

- ನಕಲಿ ಎಣ್ಣೆಗಳಿಂದ ರೋಗನಿರೋಧಕ ಶಕ್ತಿಯ ಕೊರತೆಗೂ ಕಾರಣವಾಗುತ್ತದೆ. ಅಗತ್ಯವಾದ ಪ್ರಮುಖ ಪೋಷಕಾಂಶಗಳ ದೇಹವನ್ನು ವಂಚಿತಗೊಳಿಸುತ್ತದೆ .

- ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು. ಗಂಭೀರವಾದ ವೈದ್ಯಕೀಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು.

ನಕಲಿ ತೈಲಗಳನ್ನು ಗುರುತಿಸುವುದೇಗೆ?

- ಅಸಾಮಾನ್ಯ ರುಚಿ, ಬಣ್ಣ ಅಥವಾ ವಾಸನೆಯ ಮೂಲಕ ಮರು ಪರಿಶೀಲನೆ ಅಗತ್ಯ.

- ಪ್ರಯೋಗಾಲಯ ಪರೀಕ್ಷೆಯ ಮೂಲಕ ಪರಿಶೀಲಿಸಬಹುದು.

- ಕ್ಯೂಆರ್ ಕೋಡ್‌ಗಳು ಅಥವಾ ಪ್ರತಿಷ್ಠಿತ ಬ್ರ್ಯಾಂಡ್‌ಗಳು ಒದಗಿಸಿದ ಟ್ರೇಸಬಿಲಿಟಿ ಸಿಸ್ಟಮ್‌ಗಳ ಮೂಲಕ ದೃಢೀಕರಣ ಪರಿಶೀಲಿಸಬಹುದು.

- ಕಡಿಮೆ ಬೆಲೆಗಳು ಅಥವಾ ಸರಿಯಾದ ಲೇಬಲಿಂಗ್ ಕೊರತೆಯಂತಹ ನಕಲಿ ಅಡುಗೆ ಎಣ್ಣೆಗಳ ಚಿಹ್ನೆಗಳ ಬಗ್ಗೆ ಅರಿವು ಮತ್ತು ಶಿಕ್ಷಣವು ಗ್ರಾಹಕರಿಗೆ ನಕಲಿ ಉತ್ಪನ್ನಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ವಿಭಾಗ