ಕನ್ನಡ ಸುದ್ದಿ  /  ಜೀವನಶೈಲಿ  /  ವೀಳ್ಯಗದೆಲೆಯೊಂದಿಗೆ ಹಲಸು, ಸೌತೆಕಾಯಿ ಜೊತೆಗೆ ಟೀ ಸೇರಿ ದೇಹಕ್ಕೆ ಹಾನಿಕಾರಕ 11 ಆಹಾರ ಕಾಂಬಿನೇಷನ್‌ಗಳಿವು

ವೀಳ್ಯಗದೆಲೆಯೊಂದಿಗೆ ಹಲಸು, ಸೌತೆಕಾಯಿ ಜೊತೆಗೆ ಟೀ ಸೇರಿ ದೇಹಕ್ಕೆ ಹಾನಿಕಾರಕ 11 ಆಹಾರ ಕಾಂಬಿನೇಷನ್‌ಗಳಿವು

ಆಹಾರದಲ್ಲಿ ಕಾಂಬಿನೇಷನ್‌ನಲ್ಲಿ ಇಲ್ಲದಿದ್ದರೆ ಕೆಲವರಿಗೆ ಆ ದಿನದ ಊತ ತೃಪ್ತಿಯನ್ನೇ ನೀಡುವುದಿಲ್ಲ. ಆದರೆ ಆಹಾರದಲ್ಲಿನ ಕೆಲವು ಕಾಂಬಿನೇಷನ್‌ಗಳು ಆರೋಗ್ಯಕ್ಕೆ ಹೇಗೆ ಹಾನಿಕಾರಕ? ಯಾವೆಲ್ಲಾ ಆಹಾರ ಪದಾರ್ಥಗಳನ್ನು ಒಟ್ಟೊಟ್ಟಿಗೆ ತಿನ್ನಬಾರದು ಅನ್ನೋದರ ವಿವರ ಇಲ್ಲಿದೆ.

ವೀಳ್ಯದೆಲೆಯೊಂದಿಗೆ ಹಲಸು, ಸೌತೆಕಾಯಿ ಜೊತೆಗೆ ಟೀ ಸೇರಿ ದೇಹಕ್ಕೆ ಹಾನಿಕಾರಕ 11 ಆಹಾರ ಕಾಂಬಿನೇಷನ್‌ಗಳಿವು
ವೀಳ್ಯದೆಲೆಯೊಂದಿಗೆ ಹಲಸು, ಸೌತೆಕಾಯಿ ಜೊತೆಗೆ ಟೀ ಸೇರಿ ದೇಹಕ್ಕೆ ಹಾನಿಕಾರಕ 11 ಆಹಾರ ಕಾಂಬಿನೇಷನ್‌ಗಳಿವು

ಬೆಂಗಳೂರು: ಪ್ರತಿಯೊಬ್ಬರ ಆರೋಗ್ಯದಲ್ಲಿ ಆಹಾರದ ಕ್ರಮ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಇಂತಹದ್ದೇ ಆಹಾರ ಇರಬೇಕಾಗುತ್ತದೆ. ಸಿಕ್ಕ ಸಿಕ್ಕ ಆಹಾರ, ತಿಂಡಿ ತನಿಸುಗಳನ್ನು ಸೇವಿಸಿದರೂ ಆರೋಗ್ಯದ (Health) ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ತಿಂಡಿ ಅಥವಾ ಊಟ ತಿನ್ನುವಾಗ ಕಾಂಬಿನೇಷನ್‌ಗಳು (Food Combinations) ಇರಲೇಬೇಕು. ಇಲ್ಲದಿದ್ದರೆ ಅಂದಿನ ಊಟ ತೃಪ್ತಿಯಾಗುವುದಿಲ್ಲ. ಆಹಾರದ ಕಾಂಬಿನೇಷ್‌ನಲ್ಲಿ ಯಾವುದನ್ನು ತಿನ್ನಬಾರದು, ಆರೋಗ್ಯದ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ವೀಳ್ಯದೆಲೆಯೊಂದಿಗೆ ಹಲಸು, ಸೌತೆಕಾಯಿಯೊಂದಿಗೆ ಟೀ ಹೀಗೆ ಏವೆಲ್ಲಾ ಕಾಂಬಿನೇಷನ್‌ಗಳು ಹಾನಿಕಾರಕ ಅನ್ನೋದರ ವಿವರ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಸರಿಯಾದ ಹಾಗೂ ಪೌಷ್ಟಿಕಾಂಶದ ಆಹಾರದ ಸಂಯೋಜನೆ ನಿಮ್ಮದಾಗಿದ್ದರೆ ದೇಹ ಫಿಟ್ ಆಗುವುದರ ಜೊತೆಗೆ ಆರೋಗ್ಯವು ಉತ್ತಮವಾಗಿರುತ್ತದೆ. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ಆಹಾರದ ಕಾಂಬಿನೇಷ್‌ಗಳನ್ನು ತಿಳಿದುಕೊಳ್ಳೋಣ.

1. ಮೊಸರಿನೊಂದಿಗೆ ಅಕ್ಕಿ ಕಡಬಹು, ಹಾಲು, ಚೀಸ್, ಕಲ್ಲಂಗಡಿ ಹಾಗೂ ಮೂಲಂಗಿಯನ್ನು ಸೇವಿಸಬಾರದು

2. ಬೆಣ್ಣೆಯೊಂದಿಗೆ ತಣ್ಣನೆಯ ಹಾಲು, ನೀರು ಹಾಗೂ ಜೇನುತುಪ್ಪವನ್ನು ಸಮಾನ ಪ್ರಮಾಣದಲ್ಲಿ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ. ಬೆಣ್ಣೆ ಮತ್ತು ಜೇನುತುಪ್ಪದ ಪ್ರಮಾಣ ಯಾವಾಗಲೂ ಭಿನ್ನವಾಗಿರಬೇಕೆಂದು ತಜ್ಞರು ಹೇಳುತ್ತಾರೆ.

3. ಅರ್ಮೇನಿಯನ್ ಸೌತೆಕಾಯಿ ಮತ್ತು ಸಾಮಾನ್ಯ ಸೌತೆಕಾಯಿಗಳನ್ನು ಒಟ್ಟಿಗೆ ತಿನ್ನುವುದು ಕೂಡ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆಗಳಿವೆ

4. ವೀಳ್ಯದೆಲೆಯೊಂದಿಗೆ ಹಲಸನ್ನು ಒಟ್ಟಿಗೆ ತಿನ್ನುವುದನ್ನು ತಪ್ಪಿಸಬೇಕು. ಹಲಸಿನ ಹಣ್ಣಿನಲ್ಲಿನ ಆಕ್ಸಲೇಟ್ ವೀಳ್ಯದೆಲೆಯೊಂದಿಗೆ ಸೇರಿಕೊಂಡಾಗ ದೇಹದಲ್ಲಿ ವಿಷಕಾರಿ ಉಂಟುಮಾಡಬಹುದು. ಇದು ಹೊಟ್ಟೆ ಸಮಸ್ಯೆಗೆ ಕಾಣವಾಗುತ್ತೆ

5. ಅನ್ನಕ್ಕೆ ವಿನೆಗರ್ ಸೇರಿಸುವುದನ್ನು ತಪ್ಪಿಸಬೇಕು. ಇದು ಕೂಡ ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ

6. ಮೂಲಂಗಿಯೊಂದಿಗೆ ಬೆಲ್ಲ ಮತ್ತು ಹಾಲಿನ ಸೇವೆಯು ಆರೋಗ್ಯಕ್ಕೆ ಅಪಾಯ ಎಂದು ತಜ್ಞರು ಹೇಳುತ್ತಾರೆ

7. ಅಕ್ಕಿ-ಕಾಳು ಗಂಜಿ, ಹಲಸು ಮತ್ತು ಹುರಿದ ಕಾಳುಗಳನ್ನು ಅಕ್ಕಿ ಪಾಯಸದೊಂದಿಗೆ ತಿನ್ನಬಾರದು

8. ಕಡಲೆಕಾಯಿ, ಬೆಣ್ಣೆ, ಎಣ್ಣೆ, ಕಲ್ಲಂಗಡಿ, ಪೇರಲ, ಸೌತೆಕಾಯಿ ಹಾಗೂ ಅರ್ಮೇನಿಯನ್ ಸೌತೆಕಾಯಿಗಳಲ್ಲಿ ಸಾಕಷ್ಟು ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿವೆ. ಈ ಆಹಾರಗಲೊಂದಿಗೆ ತಣ್ಣೀರು ಸೇವಿಸುವುದು ದೇಹಕ್ಕೆ ಹಾನಿಕಾರಕ

9. ಕಲ್ಲಂಗಡಿ ತಿಂದ ನಂತರ ನೀರು ಕುಡಿಯಬಾರದು. ಕಲ್ಲಂಗಡಿ ತಿಂದ ನಂತರ ಅತಿಯಾದ ದ್ರವ ಸೇವನೆಯು ಅತಿಸಾರ, ಹೊಟ್ಟೆ ಉಬ್ಬುವುದು ಇಲ್ಲವೇ ವಾಂತಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ.

10. ತಣ್ಣೀರು, ಹಣ್ಣು ಅಥವಾ ಸೌತೆಕಾಯಿಯನ್ನು ಟೀದೊಂದಿಗೆ ಸೇವಮನೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದು ಜೀರ್ಣಕ್ರಿಯೆ ಪ್ರಕ್ರಿಯೆಗೆ ಅಡ್ಡಿಪಡಿಸುತ್ತೆ. ಇವು ವಿಭಿನ್ನ ತಾಪಮಾನಗಳನ್ನು ಹೊಂದಿರುವ ಆಹಾರಗಳಾಗಿವೆ. ಇದರಿಂದ ವಾಕರಿಕೆ ಉಂಟಾಗಬಹುದು.

11. ಕಲ್ಲಂಗಡಿ ಜೊತೆಗೆ ಬೆಳ್ಳುಳ್ಳಿ, ಮೂಲಂಗಿ, ಹಾಲು ಹಾಗೂ ಮೊಸರು ಮುಂತಾದ ಆಹಾರಗಳ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)