ಕನ್ನಡ ಸುದ್ದಿ  /  ಜೀವನಶೈಲಿ  /  ಮನದ ಮಾತು; ನಮ್ಮತನವನ್ನು ಕಳೆದುಕೊಂಡು, ಅಸ್ತಿತ್ವ ಮರೆತು ಧರಿಸುವ ಮುಖವಾಡಕ್ಕೆ ಬೆಲೆ ಇದೆಯೇ? ಭವ್ಯಾ ವಿಶ್ವನಾಥ್‌ ಬರಹ

ಮನದ ಮಾತು; ನಮ್ಮತನವನ್ನು ಕಳೆದುಕೊಂಡು, ಅಸ್ತಿತ್ವ ಮರೆತು ಧರಿಸುವ ಮುಖವಾಡಕ್ಕೆ ಬೆಲೆ ಇದೆಯೇ? ಭವ್ಯಾ ವಿಶ್ವನಾಥ್‌ ಬರಹ

ಭವ್ಯಾ ವಿಶ್ವನಾಥ್‌: ಜೀವನದಲ್ಲಿ ಪ್ರತಿದಿನ ಪ್ರತಿ ವ್ಯಕ್ತಿಯೂ ಸಂದರ್ಭಕ್ಕೆ ಅನುಗುಣವಾಗಿ ಮುಖವಾಡ ಹಾಕಿ ಬದುಕುತ್ತಿದ್ದಾನೆ. ಆದರೆ ಈ ರೀತಿ ಮುಖವಾಡ ಧರಿಸುವುದರಲ್ಲಿ ಏನು ಪ್ರಯೋಜನ? ಅಥವಾ ಇದರಿಂದ ಏನು ಸಮಸ್ಯೆಯಾಗುತ್ತದೆ? ಎಂಬ ಪ್ರಶ್ನೆಗಳಿಗೆ ಈ ಬರಹದಲ್ಲಿ ಉತ್ತರವಿದೆ.

ಮನದ ಮಾತು; ನಮ್ಮತನವನ್ನು ಕಳೆದುಕೊಂಡು, ಅಸ್ತಿತ್ವ ಮರೆತು ಧರಿಸುವ ಮುಖವಾಡಕ್ಕೆ ಬೆಲೆ ಇದೆಯೇ? ಭವ್ಯಾ ವಿಶ್ವನಾಥ್‌ ಬರಹ
ಮನದ ಮಾತು; ನಮ್ಮತನವನ್ನು ಕಳೆದುಕೊಂಡು, ಅಸ್ತಿತ್ವ ಮರೆತು ಧರಿಸುವ ಮುಖವಾಡಕ್ಕೆ ಬೆಲೆ ಇದೆಯೇ? ಭವ್ಯಾ ವಿಶ್ವನಾಥ್‌ ಬರಹ

ನಾವೆಲ್ಲರೂ ನಮ್ಮ ದಿನನಿತ್ಯ ಬದುಕಿನಲ್ಲಿ ಮುಖವಾಡವನ್ನು ಧರಿಸುತ್ತೇವೆ. ಕೆಲವರು ಉದ್ದೇಶ ಪೂವ೯ಕವಾಗಿ ಧರಿಸಿದರೆ ಕೆಲವರು ಅರಿವಿಲ್ಲದೆ ಧರಿಸುತ್ತಾರೆ. ಹಾಗದರೆ, ಏನಿದು ಮುಖವಾಡ ? ನಾವೆಲ್ಲರೂ ಈ ಮುಖವಾಡವನ್ನು ಎಲ್ಲಿಂದ ಕೊಂಡುಕೊಂಡೆವು ? ಇದು ಅಂಗಡಿಯಲ್ಲಿ ಸಿಗುವುದೇ ? ಬೆಲೆ ಎಷ್ಟಿರಬಹುದು ಎಂದು ನಿಮಗೆ ಅನಿಸಿರಬಹುದು ಆದರೆ ಖಂಡಿತವಾಗಿಯೂ ಇದು ಅಂಗಡಿಯಿಂದ ಕೊಂಡುಕೊಳ್ಳುವುದಲ್ಲ, ನಮ್ಮ ವ್ಯಕ್ತಿತ್ವದಲ್ಲೇ ಒಂದು ಮಹತ್ವದ ಭಾಗ.

ಟ್ರೆಂಡಿಂಗ್​ ಸುದ್ದಿ

ನಮ್ಮ ನಡೆ ನುಡಿಯಲ್ಲಿ, ವತ೯ನೆಯಲ್ಲಿ ಕಾಣ ಬಹುದಾದಂತಹ ಒಂದು ವಿಶಿಷ್ಟ ಗುಣವೆನ್ನಬಹುದು. ಆದ್ದರಿಂದಲೇ ಮನುಷ್ಯನ ಈ ಗುಣವನ್ನು ಮನಶಾಸ್ತ್ರದಲ್ಲಿ ಗುರುತಿಸಿ ಇದನ್ನು “ಮಾಸ್ಕಿಂಗ್(ಮುಖವಾಡ/ ಮರೆಮಾಚುವಿಕೆ) ಎಂದು ಕರೆಯಲಾಗುತ್ತದೆ. “ಮರೆಮಾಚುವಿಕೆ” ಎಂದರೆ ಒಬ್ಬ ವ್ಯಕ್ತಿಯು ತಾನು ಅನುಭವಿಸುತ್ತಿರುವ ಮಾನಸಿಕ ಅಥವ ದೈಹಿಕ ರೋಗಲಕ್ಷಣಗಳು, ನಡವಳಿಕೆಗಳು, ಸ್ವಭಾವ ಅಥವಾ ತನ್ನ ನೋವು, ತೊಂದರೆಗಳನ್ನು ಬೇರೆಯವರ ಬಳಿ ಮರೆಮಾಚುವುದು ಅಥವಾ ನಿಗ್ರಹಿಸುವುದು ಎಂದು.

ಸಂದರ್ಭಕ್ಕೆ ಅನುಗುಣವಾಗಿ ಧರಿಸುವ ಮುಖವಾಡ

ವ್ಯಕ್ತಿಯಲ್ಲಿ ಇದು ಉದ್ದೇಶಪೂರ್ವಕವಾಗಿ ಅಥವ ಉದ್ದೇಶರಹಿತವಾಗಿಯೂ ಸಹ ಸಂಭವಿಸಬಹುದು. ಯಾವಾಗ ವ್ಯಕ್ತಿಯು ತಮ್ಮ ಮೂಲವಾದ (original) ಸ್ವಭಾವನ್ನಾಗಲಿ ಅಥವ ವತ೯ನೆಯನ್ನಾಗಲಿ ಪ್ರಸ್ತುತಪಡಿಸಿ ಜನರಿಂದ ನಕಾರಾತ್ಮಕ (ವ್ಯಂಗ್ಯ, ಅಣುಕು, ದೂಷಣೆ ಇತ್ಯಾದಿ) ಪ್ರತಿಕ್ರಿಯೆಯನ್ನು ಪಡೆದಿದ್ದರೆ, ಸಹಜವಾಗಿ ಅರಿವಿಲ್ಲದೆಯೇ ಮುಖವಾಡವನ್ನು ಧರಿಸಿ ಮರೆ ಮಾಚುತ್ತಾನೆ. ಜನರ ಮೊದಲಿನ ಕಹಿ ಪ್ರತಿಕ್ರಿಯೆಯು ಮತ್ತೆ ಉದ್ಭವಿಸದಂತೆ ನೋಡಿಕೊಳ್ಳುತ್ತಾನೆ.

ಹಾಗೆಯೆ, ನಿಮ್ಮ ವ್ಯಕ್ತಿತ್ವವನ್ನು ಮರೆಮಾಚುವುದು ಎಂದರೆ ಸಮಾಜದಲ್ಲಿ, ಉದ್ಯೋಗದಲ್ಲಿ ಅಥವಾ ವೈಯಕ್ತಿಕ ಸಂವಹನಗಳಲ್ಲಿ ಇತರ ಜನರ ಬಳಿ ನೀವು ನಿಜವಾಗಿಯೂ ಯಾರೆಂಬುದನ್ನು ಮುಚ್ಚಿಡಲು ನೀವು ಪ್ರಯತ್ನ ಪಡುತ್ತೀರಿ. ನಿಮ್ಮ ವ್ಯಕ್ತಿತ್ವವನ್ನು ಪದಗಳು, ಮುಖಭಾವ, ವತ೯ನೆಗಳ ಮೂಲಕ ಮರೆ ಮಾಚಬಹುದು.

ಮಕ್ಕಳು ಹೆಚ್ಚಿನ ಮುಖವಾಡವನ್ನು ಧರಿಸುವುದಿಲ್ಲ. ಅವರು ತಮ್ಮ ಮೂಲ ಸ್ವಭಾವ, ವ್ಯಕ್ತಿತ್ವ, ಪರಿಸ್ಥಿತಿಗಳನ್ನು ಇದ್ದ ಹಾಗೆಯೇ ವ್ಯಕ್ತಪಡಿಸುತ್ತಾರೆ. ತಮ್ಮ ಮನಸ್ಸಿನ್ನಲ್ಲಿ ಇರುವುದನ್ನು ನೇರವಾಗಿ ಇದ್ದ ಹಾಗೆಯೇ ಹೇಳುವುದು ಮಕ್ಕಳ ವಿಶೇಷ ಗುಣ. ವ್ಯಕ್ತಿಯ ನಿಜವಾದ ಸ್ವಭಾವವನ್ನು ಮಕ್ಕಳಿದ್ದಾಗ ಹೆಚ್ಚು ತಿಳಿದುಕೊಳ್ಳಬಹುದು. ಹಾಗಾಗಿ, ಇವರು ಹೆಚ್ಚು ಒತ್ತಡ, ಗೊಂದಲಗಳಿಹೆ ಸಿಲುಕಿಕೊಳ್ಳುವುದಿಲ್ಲ. ಆದರೆ ನಂತರದ ದಿನಗಳಲ್ಲಿ ಸಾಮಾಜಿಕ, ಕೌಟುಂಬಿಕ ಮತ್ತು ಶೈಕ್ಷಣಿಕ ಅನುಭವಗಳಿಂದ ಕೆಲವು ಮೂಲ ಸ್ವರೂಪವನ್ನು ಮರೆ ಮಾಚಲು ಕಲಿಯುತ್ತಾರೆ.

ಹಾಗೆಂದು ಸಂಪೂಣ೯ವಾಗಿ ವ್ಯಕ್ತಿಯು ಮಾಸ್ಕಿಂಗ್ ಮಾಡುತ್ತಾನೆಯೇ ?

ಸಂಪೂಣ೯ವಾಗಿ ಮಾಡಲೇಬೇಕು ಎಂದೇನಿಲ್ಲ, ಹಾಗೆಯೇ ಮಾಡಬಾರದು ಎಂದಿಲ್ಲ.

ಮುಖವಾಡದ ಹಿಂದಿರುವ ಕಾರಣಗಳು

- ಜನರ ಮನ ಒಲಿಸಲು, ಪ್ರಶಂಸೆಗೊಳಗಾಗಲು, ತನಗೆ ಇಷ್ಟವಾದ ರೀತಿಯಲ್ಲಿ ಪ್ರಭಾವ ಬೀರಲು, ಒಂದು ಗುಂಪಿಗೆ ಹೊಂದಿಕೊಳ್ಳಲು, ಸರಿಸಮವಾಗಲು, ಸ್ಪಧಿ೯ಸಲು ಇತ್ಯಾದಿ

- ಜನಗಳ ಅವಹೇಳನ, ವ್ಯಂಗ್ಯ, ದೂಷಣೆ, ನೆಗೆಟಿವ್ ಹಣೆಪಟ್ಟಿಗಳನ್ನು ತಡೆಯಲು ಇತ್ಯಾದಿ

- ತನ್ನ ಅಧಿಕಾರ, ಸ್ಥಾನ ಮಾನ ತೋರಿಸಲು

- ಜನಗಳ ಕರುಣೆ ಗಳಿಸಲು, ಪ್ರೀತಿ ಪಾತ್ರರಾಗಲು

- ಸಾಮಾಜಿಕ ನಿರಾಕರಣೆ, ಅಥವಾ ಬೆದರಿಸುವಿಕೆಯಿಂದ ನಿಮ್ಮನ್ನು ನೋಯಿಸದಂತೆ ರಕ್ಷಿಸಲು ಅವರು ಸಹಾಯ ಮಾಡುತ್ತದೆ

ಹೀಗಿ ನಾನ ಕಾರಣದಿಂದಾಗಿ ವ್ಯಕ್ತಿಯು ತನ್ನ ಮೂಲತನವನ್ನು ಮರೆ ಮಾಚುವ ಕಾರಣದಿಂದಾಗಿ ಮುಖವಾಡವನ್ನು ಧರಿಸಬಹುದು.

ಉದಾಹರಣೆ: ದುಃಖಿತರಾದಾಗ ಒಬ್ಬರು ಸಂತೋಷವಾಗಿರುವಂತೆ ನಟಿಸಬಹುದು ಅಥವಾ ಕೆಲವು ವಿಷಯಗಳನ್ನು ಸೇರಿಸದಿದ್ದಾಗ ಒಬ್ಬರು ಇಷ್ಟಪಡುವಂತೆ ನಟಿಸಬಹುದು.

  • ಪೋಷಕರು ಮಕ್ಕಳ ಬಳಿ ಮನಸ್ಲು ದುಬ೯ಲವಾಗಿದ್ದರೂ ಮಾನಸಿಕವಾಗಿ ಬಹಳ ಸ್ಟ್ರಾಂಗ್ ಇದ್ದೇವೆ ಎಂದು ನಟಿಸುವುದುಕಾರಣವಿಲ್ಲದೆ ಅಥವ ಮನ ಒಲಿಸಲು ಜನರನ್ನು ಹೊಗಳುವುದು . ಇಲ್ಲದೆ, ಇಷ್ಚವಾದರೂ, ಕಾರಣವಿಲ್ಲಗಿದ್ದರೂ ನಿಂದಿಸುವುದು
  • ಆತಂಕ, ಭಯವಿದ್ದರೂ ವಿಚಲಿತವಾಗದೆ ಧೈರ್ಯದಿಂದ ಇದ್ದೇನೆ ಎಂದು ನಟಿಸುವುದು
  • ಸೆಲೆಬ್ರಿಟಿಗಳು ತಮ್ಮ ಮೂಲವಾದ ಜೀವನ ಶೈಲಿ, ಮಾತನಾಡುವ ರೀತಿ, ತಮ್ಮ ಅಭಿರುಚಿಗಳನ್ನು ವ್ಯಕ್ತಪಡಿಸದೇ ಮರೆ ಮಾಚುತ್ತಾರೆ
  • ಮುಖವಾಡಗಳು ನಮ್ಮ ಸ್ವಾಭಿಮಾನ ಮತ್ತು ನೋವನ್ನು ಮರೆಮಾಚಲು ಆತ್ಮರಕ್ಷಣೆಯಾಗಿ ನಿವ೯ಹಿಸಿದಾದರೂ, ಅವುಗಳು ಒತ್ತಡ, ಆತಂಕ, ಖಿನ್ನತೆಗೂ ಸಹ ಕಾರಣವಾಗಬಹುದು. ಸದಾ ಉದ್ದೇಶಪೂವ೯ಕದಿಂದ ತಮ್ಮ ರಕ್ಷಣೆಗೋಸ್ಕರ, ದೌಬ೯ಲ್ಯತೆ, ನೋವು, ಕಷ್ಚಗಳನ್ನು ಮರೆ ಮಾಚುವುದರಿಂದ ಒತ್ತಡ ಉಂಟಾಗುತ್ತದೆ ಮತ್ತು ಅದರ ಸಿದ್ಧತೆ ಸಾಕಷ್ಟು ಇಲ್ಲದಿದ್ದರೆ ಆತಂಕಕ್ಕೆ ಈಡಾಗಬಹುದು, ತಮ್ಮ ಆತ್ಮ ವಿಶ್ವಾಸವೂ ಕುಂದಬಹುದು ಮತ್ತು ತಮ್ಮ ಸಾಮಥ್ಯ೯ದ ಮೇಲೆ ಸಂಶಯ ಹುಟ್ಟಿ ಖಿನ್ನತೆಯಿಂದ ನರಳಬಹುದು.

ಇದನ್ನೂ ಓದಿ: 10ನೇ ಕ್ಲಾಸ್ ಫೇಲ್ ಆಗಿ ಅಪ್ಪ-ಅಮ್ಮನಿಗೆ ಬುದ್ಧಿ ಕಲಿಸ್ತೀನಿ ಎನ್ನುತ್ತಾಳೆ ಈ ಮಗಳು, ಇವಳ ಭವಿಷ್ಯಕ್ಕೆ ಏನು ಒಳ್ಳೆಯದು? -ಮನದ ಮಾತು

ಕೆಲವು ವ್ಯಕ್ತಿತ್ವ ಸಂಬಧಪಟ್ಟ ಮುಖವಾಡಗಳು

1. ಸಂತ್ರಸ್ತ ಮುಖವಾಡ - ಎಲ್ಲರ ಬೆಂಬಲ ಮತ್ತು ಕರುಣೆಯನ್ನು ಗಳಿಸಲು ಸಂತ್ರಸ್ತ ಮುಖವಾಡವನ್ನು ಧರಿಸುವುದು

2. ಬೆದರಿಕೆಯ ಮುಖವಾಡ - ನಮಗಾಗಿರುವ ಅನ್ಯಾಯ, ನಿಂದನೆ, ಬೆದರಿಕೆಯನ್ನು ತಡೆಯುವುದಕ್ಕೆ ನಾವೇ ಎಲ್ಲರನ್ನೂ ಬೆದರಿಸಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು

3. ಹಾಸ್ಯ ಮುಖವಾಡ - ನಮ್ಮ ನೋವು ದುಃಖವನ್ನು ಮರೆಯಲು ಹಾಸ್ಯದ ಮೂಲಕ ಸದಾ ನಕ್ಕು ನಲಿಸುವುದು

4. ಅಧಿಕ ಸಾಧನೆ - ಜನರ ಪ್ರಶಂಸೆ, ಗಮನ ಸೆಳೆಯಲು ನಮ್ಮ ಸಾಮಥ್ಯ೯ ಇಷ್ಟವನ್ನು ಮೀರಿ ಹೆಚ್ಚಿನ ಸಾಧನೆ ಮಾಡುವುದಕ್ಕೆ ಸವ೯ಯತ್ನ ಮಾಡುವುದು. ಪರಿಪೂರ್ಣತೆಯನ್ನು ಹೊಂದುವುದಕ್ಕೆ ಒತ್ತಡವನ್ನು ತಮಗೆ ತಾವು ಹೇರಿಕೊಳ್ಳುವುದು

5. ಪ್ರಶಾಂತತೆಯ ಮುಖವಾಡ - ನಮ್ಮ ಕೋಪ, ಅಸಮಾಧಾನ, ಅಸಹಾಯಕತೆಯನ್ನು ಮರೆಮಾಚಿ ಶಾಂತವಾದ ಮುಖವಾಡವನ್ನು ಹಾಕಿಕೊಳ್ಳುವುದು

6. ತಪ್ಪಿಸಿಕೊಳ್ಳುವ ಅಥವ ಹಿಂಜರಿಯುವ ಮುಖವಾಡ - ಜನರ ನಿಂದನೆ , ಅವಹೇಳನ , ತೀಪ೯ನ್ನು ತಡೆಯಲು ನಾವೇ ಹಿಂಜರಿದು ಜನರಿಂದ ತಪ್ಪಿಸಿಕೊಳ್ಳುವುದು

7. ಮನವೊಲಿಸುವ ಮುಖವಾಡ- ಜನರನ್ನು ಮನವೊಲಿಸಲು ನಾವು ನಮ್ಮ ಮೂಲ ಸ್ವಭಾವವನ್ನು ಮರೆಮಾಚುವುದು. ಅವರು ಬಯಸಿದ್ದನ್ನು ಮಾಡುವುದು, ಬೇರೆಯವರು ಬಯಸಿದ್ದನ್ನು ಆಯ್ಕೆ ಮಾಡುವುದು, ನಡೆದುಕೊಂಡು ಸಂತೋಷವಾಗಿದ್ದೇನೆಂದು ನಟಿಸುವುದು ನಾವು ಬಯಸ್ಸಿದ್ದನ್ನು ಮರೆಮಾಚುವುದು.

ಮುಖವಾಡ ಹಾಕುವುದರಲ್ಲಿ ತಪ್ಪು ಸರಿ ಅನ್ನುವುದಕ್ಕಿಂತ ನಿಮಗೆ ಹೇಗೆ ಅನ್ನಿಸುತ್ತದೆ ಅನ್ನುವುದು ಮುಖ್ಯ. ಇದರಿಂದ ನಿಮಗೆ ಲಾಭವೇ ಅಥವ ನಷ್ಟವೇ ಎಂದು ಯೋಚಿಸಿ. ಮನಸ್ಸಿಗೆ ಮುದ, ತೃಪ್ತಿ , ಸಂತೋಷ ನೀಡುತ್ತದೆಯೇ? ಇಲ್ಲವೇ ಅನ್ನುವುದು ಮುಖ್ಯ. ಬದುಕಿನಲ್ಲಿ ನಮ್ಮ ಪಾತ್ರಗಳ ತಕ್ಕ ಹಾಗೆ ಕುಟುಂಬ, ಉದ್ಯೋಗ, ಶಿಕ್ಷಣ, ಸಮಾಜದಲ್ಲಿ ನಾವು ನಾನಾ ರೀತಿಯ ಮುಖವಾಡಗಳನ್ನು ಬದಲಾಯಿಸುತ್ತಿರುತ್ತೇವೆ. ಈ ಜಂಜಾಟದ ನಡುವೆ “ನಾನು” ಯಾರು? ನನ್ನ ಅಸ್ತಿತ್ವವೇನೆಂಬುದು ಅರಿವೆಗೆ ಬರುವುದಿಲ್ಲ. ಒತ್ತಡ, ಆತಂಕ, ಗೆೊಂದಲಗಳಿಗೆ ಸಿಲುಕಿಕೊಳ್ಳುತ್ತೇವೆ. ಮುಂದೆ ನಮ್ಮ ತನವನ್ನು ಕಳೆದುಕೊಳ್ಳಬೇಕಾಗಬಹುದು.

ನನ್ನ ದೌಬ೯ಲ್ಯ ಮತ್ತು ಸಾಮಥ್ಯ೯ವೇನು ? ನನಗೇನು ಒಳಿತು? ನನ್ನ ಬಯಕೆಗಳೇನು ? ನನ್ನ ಪ್ರತಿಭೆ ಹಾಗು ನನ್ನ ಬದುಕಿನ ಉದ್ದೇಶವೇನು ಎನ್ನುವ ತಿಳುವಳಿಕೆ ಯಿದ್ದರೆ ಮುಖವಾಡಗಳಿಗೆ ಮನುಷ್ಯ ಹೆಚ್ಚು ಬಲಿಯಾಗುವುದಿಲ್ಲ.

ಒಂದು ಪಕ್ಷ ನೀವು ಈ ರೀತಿಯ ಮುಖವಾಡಗಳನ್ನು ಧರಿಸಿ ನಿಮ್ಮತನವನ್ನು ಕಳೆದುಕೊಂಡು , ಗೆೊಂದಲಕ್ಕೀಡಗಿದ್ದರೆ ಆಪ್ತ ಸಮಾಲೋಚಕರನ್ನು ಸಂಪಕಿ೯ಸಿ ಮಾಗ೯ದಶ೯ನ ಪಡೆದುಕೊಂಡು ಮುಖವಾಡಗಳಿಂದ ಮುಕ್ತಿ ಪಡೆದುಕೊಳ್ಳಿ.

👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ

kannada.hindustantimes.com/elections