Relationship; ದಾಂಪತ್ಯ ನೀರಸವಾಗಿದೆಯೇ; ದಂಪತಿ ನಾನೊಂದು ತೀರ, ನೀನೊಂದು ತೀರ ಆಗೋದಕ್ಕೆ 5 ಸಾಮಾನ್ಯ ಕಾರಣಗಳಿವು
Relationship Conflicts; ಸಂಬಂಧದಲ್ಲಿ ಕೆಲವೊಮ್ಮೆ, ಸಂತೋಷ ಮತ್ತು ವಿನೋದವು ಮಸುಕಾಗುವಂತೆ ತೋರುತ್ತದೆ. ನಿಮ್ಮ ಸಂಬಂಧದಲ್ಲಿ ಉತ್ಸಾಹ ಅಥವಾ ಸಂತೋಷದ ಕೊರತೆಯಿದೆ ಎಂಬ ಭಾವನೆ ಉಂಟಾಗಬಹುದು. ಹೀಗಿರುವಾಗ ದಾಂಪತ್ಯ ನೀರಸವಾಗಿದೆ ಯಾಕೆ ಎಂಬ ಪ್ರಶ್ನೆಗೆ ಪರಿಣತರು, “ದಂಪತಿ ನಾನೊಂದು ತೀರ, ನೀನೊಂದು ತೀರ ಆಗೋದಕ್ಕೆ 5 ಸಾಮಾನ್ಯ ಕಾರಣಗಳಿವು" ಎಂದು ಗುರುತಿಸುತ್ತಾರೆ.
ರಿಲೇಷನ್‌ಶಿಪ್ ಅಥವಾ ಸಂಬಂಧ ನಮ್ಮನ್ನು ಭಾವನಾತ್ಮಕವಾಗಿ ಬಲಗೊಳ್ಳುವುದು ಸೇರಿ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಸಂಬಂಧದಲ್ಲಿ, ನಾವು ಒಟ್ಟಿಗೆ ಇರುವ ಸಂತೋಷವನ್ನು ಅನುಭವಿಸಿದಾಗ ನಾವು ಕ್ಷಣಗಳನ್ನು ಹಂಚಿಕೊಳ್ಳುವುದು ಬಹಳ ಮುಖ್ಯ. ಸಂಗಾತಿಯೊಂದಿಗೆ ಮೋಜು ಮತ್ತು ಮೂರ್ಖತನದ ಕ್ಷಣಗಳು ಸಂಬಂಧದಲ್ಲಿ ಸಂಪರ್ಕ ಮತ್ತು ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ.
ಆದರೆ, ಕೆಲವೊಮ್ಮೆ, ಸಂತೋಷ ಮತ್ತು ವಿನೋದವು ಮಸುಕಾಗುವಂತೆ ತೋರುತ್ತದೆ. ನಿಮ್ಮ ಸಂಬಂಧದಲ್ಲಿ ಉತ್ಸಾಹ ಅಥವಾ ಸಂತೋಷದ ಕೊರತೆಯಿದೆ ಎಂಬ ಭಾವನೆ ಉಂಟಾಗಬಹುದು. ಅದಕ್ಕೆ ಒಬ್ಬರೇ ಕಾರಣರಲ್ಲ.
ಸಂಬಂಧ ಹಗುರಾಗಿದ್ದರೆ ಎಂತಹ ಸನ್ನಿವೇಶವನ್ನಾದರೂ ಎದುರಿಸಬಹುದು
ದಂಪತಿ ತರಬೇತುದಾರರಾಗಿರುವ ಜೂಲಿಯಾ ವುಡ್ಸ್ ಈ ಬಗ್ಗೆ ಹೇಳಿರುವುದು ಹೀಗೆ - "ನಮ್ಮ ಸಂಗಾತಿ ಜತೆಗೆ ಮೋಜು ಮಾಡುವಾಗ ಮತ್ತು ನಗುವಾಗ, ನಾವು ಎದುರಿಸುತ್ತಿರುವ ಭಿನ್ನಾಭಿಪ್ರಾಯ ಅಥವಾ ಉದ್ಭವಿಸುವ ಉದ್ವಿಗ್ನತೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು. ನಾವು ನಮ್ಮ ಹೊಣೆಗಾರಿಕೆ ನಿರ್ವಹಿಸದಿರುವುದನ್ನು ಒಪ್ಪಿಕೊಂಡು ಕ್ಷಮೆ ಕೇಳುವುದು ತುಂಬಾ ಸುಲಭ. ಆದಾಗ್ಯೂ, ನಾವು ರಿಲೇಶನ್‌ಶಿಪ್‌ನಲ್ಲಿ ನಿರಂತರ ಮೋಜು ಮತ್ತು ಪರಸ್ಪರ ಹಗುರ ಬಾಂಧವ್ಯ ಉಳಿಸಿಕೊಳ್ಳದೇ ಇದ್ದಾಗ, ಉದ್ವಿಗ್ನತೆಗಳು ಅಥವಾ ಭಿನ್ನಾಭಿಪ್ರಾಯಗಳು ದೊಡ್ಡದಾಗುತ್ತವೆ. ಇಂತಹ ಸನ್ನಿವೇಶ ಸ್ಟ್ರೆಸ್ ಅಥವಾ ಮಾನಸಿಕ ಒತ್ತಡವನ್ನು ಸೃಷ್ಟಿಸುತ್ತವೆ".
ಸಂಬಂಧದಲ್ಲಿ ಮೋಜು ಮಜಾ ನಿಲ್ಲಲು ಸಾಮಾನ್ಯ 5 ಕಾರಣಗಳಿವು
1) ಬಗೆಹರಿಯದ ಬಿಕ್ಕಟ್ಟು; ಜನಪ್ರಿಯ ನಂಬಿಕೆಗಳಿಗೆ ವಿರುದ್ಧವಾಗಿ, ಸಂಬಂಧದ ಘರ್ಷಣೆಗಳು ಆರೋಗ್ಯಕರವಾಗಿರುತ್ತವೆ. ನಿಜವಾಗಿಯೂ ಇಂತಹ ಘರ್ಷಣೆಗಳು ಎದುರು ಇರುವ ವ್ಯಕ್ತಿಯ ಮನೋಭಾವದ ಬದಲಾವಣೆ ಮತ್ತು ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ಸಂಘರ್ಷ ಎದುರಾದಾಗ ದಿನಗಟ್ಟಲೆ ಸುಮ್ಮನೆ ಕುಳಿತುಕೊಳ್ಳುವುದು ಅಥವಾ ಕೆಟ್ಟದಾಗಿ ನಡೆದುಕೊಳ್ಳುವುದು, ಭಾವನೆಗಳನ್ನು ಎಂದಿಗೂ ತಿಳಿಸದೇ ಇರುವುದು ಮಾಡಿದರೆ ಅದು ಸಂಬಂಧದಲ್ಲಿ ಹತಾಶೆ ಮತ್ತು ಅಸಮಾಧಾನಕ್ಕೆ ಕಾರಣವಾಗಬಹುದು. ಬಿಕ್ಕಟ್ಟು ಬಗೆಹರಿಯದೆ ಮೋಜು ಮರೆಯಾಗಬಹುದು.
2) ನಿರ್ಣಯಕ್ಕೆ ಬಂದುಬಿಡುವುದು: ಸಾಮಾನ್ಯವಾಗಿ ಸಂಬಂಧದಲ್ಲಿ ಯಾವುದನ್ನೂ ಇದು ಹೀಗೆಯೇ ಎಂದು ನಿರ್ಣಯಿಸಲಾಗದು. ಆ ರೀತಿಯಲ್ಲಿ ನಿರ್ಣಯಿಸಲು ನಾವು ಬಯಸಬಾರದು. ಬಯಸುವುದೂ ಇಲ್ಲ. ಸಂಬಂಧದಲ್ಲಿ ನಾವು ಕೇಳುವುದಕ್ಕೆ, ಗಮನಿಸುವುದಕ್ಕೆ ಮತ್ತು ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಪಾಲುದಾರನು ನಾವು ಮಾಡುವ ಪ್ರತಿಯೊಂದಕ್ಕೂ ನಮ್ಮನ್ನು ಇದು ಹೀಗೆ ಎಂದು ತೀರ್ಪು ನೀಡಲಾರಂಭಿಸಿದಾಗ, ನಾವು ಟೀಕೆಗಳನ್ನು ಅನುಭವಿಸಬೇಕಾಗಬಹುದು. ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಪರಿಶೀಲಿಸಬಹುದು. ಇದರಿಂದ ನಮಗೆ ಅನಾನುಕೂಲ ಹೆಚ್ಚಾಗುವುದೇ ಹೊರತು ಸಂಬಂಧ ಸುಧಾರಿಸದು.
3) ತಿರಸ್ಕಾರ ಭಾವದ ಹೆಚ್ಚಳ: ಸಂಬಂಧದಲ್ಲಿ ಕಹಿ ಮತ್ತು ಹತಾಶೆ ಬೆಳೆಯಲು ಪ್ರಾರಂಭಿಸಿದಾಗ, ಅದು ತಿರಸ್ಕಾರಕ್ಕೆ ಮತ್ತು ಮೂದಲಿಕೆಗೆ ಕಾರಣವಾಗಬಹುದು. ಇದು ಮುಂದೆ ನಾವು ಸಂಗಾತಿಗಿಂತ ಶ್ರೇಷ್ಠರು ಎಂಬ ಭಾವನೆ ಮೂಡಿಸುತ್ತದೆ. ನಾವು ಸಂಗಾತಿಯನ್ನು ನಮ್ಮ ಮಾನದಂಡಗಳ ಅಡಿಯಲ್ಲಿ ನೋಡಲಾರಂಭಿಸಿದಾಗ, ನಾವು ಸಂಬಂಧದಲ್ಲಿ ಮೋಜು ಮಾಡಲು, ಆನಂದವನ್ನು ಅನುಭವಿಸುವುದು ಸಾಧ್ಯವಾಗುವುದಿಲ್ಲ.
4) ಮನ್ನಿಸುವಿಕೆ ಅಥವಾ ಸಬೂಬು ಹೇಳವುದು: ಸಂಬಂಧದಲ್ಲಿ ತಿರಸ್ಕಾರ ಮತ್ತು ಅಸಮಾಧಾನ ಹೆಚ್ಚಳವಾದಾಗ, ನಾವು ಪರಸ್ಪರ ಅಂತರ ಕಾಯ್ದುಕೊಳ್ಳುವುದಕ್ಕೆ ಸಬೂಬು ಹೇಳಲಾರಂಭಿಸುತ್ತೇವೆ. ಅಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಬಳಸುವ ಸಬೂಬುಗಳ ಪೈಕಿ, ನಾವು ಒಟ್ಟಿಗೆ ಸಮಯ ಕಳೆಯಲು ಸಾಧ್ಯವಾಗದಷ್ಟು ಕೆಲಸದ ಒತ್ತಡದಲ್ಲಿದ್ದೇವೆ. ಸತ್ಯವೆಂದರೆ ನಾವು ಇನ್ನು ಮುಂದೆ ನಮ್ಮ ಸಂಗಾತಿಗಾಗಿ ಸಮಯವನ್ನು ನೀಡುವುದಿಲ್ಲ ಎಂಬುದನ್ನು ಸಿಂಪಲ್ಲಾಗಿ ಹೇಳುವ ವಿಧಾನ ಇದು.
5) ಸಂಬಂಧದಲ್ಲಿ ನಿಯಮಗಳು: ಸಂಬಂಧದಲ್ಲಿ ಹೊಂದಾಣಿಕೆ ಇರದಿದ್ದಾಗ ನಿಯಮಗಳನ್ನು ಜಾರಿಗೊಳಿಸುವುದಕ್ಕೆ ಪ್ರಾರಂಭಿಸುತ್ತೇವೆ. ವಿನೋದದಿಂದ ಅಥವಾ ಒಟ್ಟಿಗೆ ಸಿಲ್ಲಿಯಾಗಿರುವುದನ್ನು ನಿರ್ಬಂಧಿಸುತ್ತೇವೆ. ನಾವು ನಿಯಮಗಳಿಗೆ ಅಂಟಿಕೊಂಡಂತೆ, ಅದು ಒಗ್ಗಟ್ಟಿನ ಸಂತೋಷವನ್ನು ಕಸಿದುಕೊಳ್ಳುತ್ತದೆ. ಸಂಬಂಧವೂ ಇನ್ನಷ್ಟು ಹದಗೆಡುವಂತೆ ಮಾಡುತ್ತದೆ.
ವಿಭಾಗ