ಹೆಣ್ಣುಮಕ್ಕಳ ಪೋಷಕರಿಗೆ ಅರ್ಥವಾಗಲೇ ಬೇಕಾದ 5 ವಿಷಯಗಳಿವು, ಮಗಳಿಗೆ ಇವಿಷ್ಟೂ ಗೊತ್ತಿದ್ರೆ ಅವಳು ಸೇಫ್-parenting every father must teach this 5 things to his girl child for her safety relationship tips rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹೆಣ್ಣುಮಕ್ಕಳ ಪೋಷಕರಿಗೆ ಅರ್ಥವಾಗಲೇ ಬೇಕಾದ 5 ವಿಷಯಗಳಿವು, ಮಗಳಿಗೆ ಇವಿಷ್ಟೂ ಗೊತ್ತಿದ್ರೆ ಅವಳು ಸೇಫ್

ಹೆಣ್ಣುಮಕ್ಕಳ ಪೋಷಕರಿಗೆ ಅರ್ಥವಾಗಲೇ ಬೇಕಾದ 5 ವಿಷಯಗಳಿವು, ಮಗಳಿಗೆ ಇವಿಷ್ಟೂ ಗೊತ್ತಿದ್ರೆ ಅವಳು ಸೇಫ್

Safety Rules For Daughter: ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಪೋಷಕರು ಸಾಕಷ್ಟು ತಲೆ ಕೆಡಿಸಿಕೊಳ್ಳುವಂತಾಗಿದೆ. ಆದರೆ ನಿಮ್ಮ ಮಗುವಿನ ಸುರಕ್ಷತೆಗೆ ನೀವು ಈ 5 ವಿಷಯಗಳನ್ನು ಆಕೆಗೆ ಕಲಿಸಲೇಬೇಕು. ಇದರಿಂದ ಅವಳ ಭವಿಷ್ಯವೂ ಸುರಕ್ಷಿತವಾಗಿರುತ್ತದೆ.

ಮಗಳಿಗೆ ಇವಿಷ್ಟೂ ಗೊತ್ತಿದ್ರೆ ಅವಳು ಸೇಫ್
ಮಗಳಿಗೆ ಇವಿಷ್ಟೂ ಗೊತ್ತಿದ್ರೆ ಅವಳು ಸೇಫ್

ಇಂದಿನ ಜನಮಾನದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ನಿಜಕ್ಕೂ ಪೋಷಕರಿಗೆ ಸವಾಲಾಗಿದೆ. ಶಾಲಾ–ಕಾಲೇಜಿನಿಂದ ಹಿಡಿದು ಕೆಲಸದ ಸ್ಥಳದಲ್ಲೂ ಹೆಣ್ಣುಮಕ್ಕಳ ಪಡಿಪಾಟಲು ಪಡುತ್ತಿದ್ದಾರೆ. ಕೆಲವೊಮ್ಮೆ ಪರಿಚಯದವರು ಅಥವಾ ಸಂಬಂಧಿಕರು ಕೂಡ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ. ಆದರೆ ಭಯದಿಂದ ಹಲವರು ಈ ವಿಚಾರವನ್ನು ಯಾರೊಂದಿಗೂ ಹೇಳಿರುವುದಿಲ್ಲ. ನಿಮ್ಮ ಮನೆಯ ಹೆಣ್ಣುಮಗಳನ್ನು ಯಾವುದೇ ಮಾನಸಿಕ ಅಥವಾ ದೈಹಿಕ ಷೋಷಣೆಯಿಂದ ಕಾಪಾಡಲು ಆಕೆಗೆ ತಪ್ಪದೇ ಈ 5 ವಿಚಾರಗಳನ್ನು ಕಲಿಸಬೇಕು. ಇದರಿಂದಾಗಿ ಅವಳು ತನ್ನ ಜೀವನದುದ್ದಕ್ಕೂ ಸುರಕ್ಷಿತವಾಗಿರುತ್ತಾಳೆ.

ಸ್ವಯಂ ರಕ್ಷಣೆ

ಬಾಲ್ಯದಿಂದಲೇ ನಿಮ್ಮ ಮಗಳಿಗೆ ಆತ್ಮರಕ್ಷಣೆ ಕಲಿಸುವ ತರಗತಿಗಳಿಗೆ ಸೇರಿಸಿ. ಅಂದರೆ ಜೂಡೋ-ಕರಾಟೆ, ಟೇಕ್ವಾಂಡೋ, ಮಾರ್ಷಲ್ ಆರ್ಟ್ಸ್‌ನಂತಹ ಸಮರ ಕಲೆಯನ್ನು ಕಲಿಸಿ. ಇದರಿಂದ ನಿಮ್ಮ ಮಗಳಲ್ಲಿ ಧೈರ್ಯ ಮೂಡುವುದು ಮಾತ್ರವಲ್ಲ, ಆಕೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಮರ್ಥಳಾಗುತ್ತಾಳೆ. ಇದರಿಂದ ಅವಳು ದೈಹಿಕವಾಗಿ ಸದೃಢವಾಗುವುದಲ್ಲದೆ ಮಾನಸಿಕವಾಗಿಯೂ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಾಳೆ.

'ಇಲ್ಲ' ಎಂದು ಹೇಳಲು ಕಲಿಸಿ

ಇಲ್ಲ ಎಂದು ಹೇಳಲು ನಿಮ್ಮ ಮಗುವಿಗೆ ಕಲಿಸಿ. ಅಂದರೆ ಆಕೆಗೆ ದೌರ್ಜನ್ಯ ಆಗುವಾಗ ಖಂಡಿಸಲು ಪೋಷಕರು ಕಲಿಸಬೇಕು. ಅದು ಶಿಕ್ಷಕರೇ ಆಗಿರಲಿ, ಬಂಧುಗಳೇ ಆಗಿರಲಿ, ಸ್ನೇಹಿತರೇ ಆಗಿರಲಿ ಯಾರಾದರೂ ಆಕೆಯ ಮೈ ಮುಟ್ಟುವುದು, ಅಸಭ್ಯವಾಗಿ ವರ್ತಿಸುವುದು, ಮುಟ್ಟಿ ನೋಯಿಸುವುದು ಇಂತಹ ವರ್ತನೆ ತೋರಿದರೆ ಪ್ರತಿಭಟಿಸಲು ಕಲಿಸಿ, ಈ ಬಗ್ಗೆ ಮನೆಯಲ್ಲಿ ಪೋಷಕರ ಬಳಿ ತಪ್ಪದೇ ಹೇಳಿಕೊಳ್ಳಬೇಕು ಎಂಬುದನ್ನು ನಿಮ್ಮ ಮಗುವಿಗೆ ಅರಿವು ಮೂಡಿಸಿ.

ಸ್ವಾಭಿಮಾನ ಕಲಿಸಿ

ಮಗುವಿಗೆ ಸ್ವಾಭಿಮಾನದ ಬಗ್ಗೆ ತಿಳಿಸಿ. ಯಾವಾಗಲೂ ಸ್ವಾಭಿಮಾನವನ್ನು ಕಾಪಾಡಿಕೊಳ್ಳುವ ಬಗ್ಗೆ ಅವಳಿಗೆ ತಿಳಿ ಹೇಳಿ. ಯಾರಾದರೂ ಬೇಕಾಬಿಟ್ಟಿ ಮಾತನಾಡಿದರೆ ಅಥವಾ ನಿಮಗೆ ಇಷ್ಟವಿಲ್ಲದ ಕೆಲಸ ಮಾಡಿದರೆ, ತಕ್ಷಣ ಅವರನ್ನು ಅಡ್ಡಿಪಡಿಸಿ ಮತ್ತು ಮನೆಯಲ್ಲಿ ಪೋಷಕರಿಗೆ ಈ ವಿಷಯವನ್ನು ತಿಳಿಸಬೇಕು ಎಂಬುದನ್ನು ಒತ್ತಿ ಹೇಳಿ. ಸ್ವಾಭಿಮಾನಿಯಾಗಿ ಬದುಕುವುದರಿಂದ ಅವಳಲ್ಲಿ ಧೈರ್ಯ ಹೆಚ್ಚುತ್ತದೆ.

ಮಾನಸಿಕವಾಗಿ ಸದೃಢಗೊಳಿಸಿ

ಮಗುವನ್ನು ಮಾನಸಿಕವಾಗಿ ಸದೃಢಗೊಳಿಸಿ. ಜೀವನದಲ್ಲಿ ಯಾವುದೇ ಘಟನೆ ಮಗುವಿನ ಹೃದಯ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರಲು ಬಿಡಬೇಡಿ. ಯಾವುದೇ ಸಮಸ್ಯೆ ಬಂದರೂ ಹೆದರಿ ನಡುಗುವ ಬದಲು ಅದನ್ನು ಎದುರಿಸಿ ಮುಂದೆ ಸಾಗುವುದು ಹೇಗೆ ಕಲಿಸಿ. ದಯವಿಟ್ಟು ನಿಮ್ಮ ಮಗಳ ಮನಸ್ಸಿನಲ್ಲಿ ಅಂತಹ ಆಲೋಚನೆಗಳನ್ನು ಹುಟ್ಟುಹಾಕಿ. ಇದು ಪ್ರತಿ ಪೋಷಕರು ಮಗುವಿಗೆ ಕಲಿಸಬೇಕಾದ ಮೂಲ ತತ್ವ.

ಎಚ್ಚರವಾಗಿರಲು ಕಲಿಸಿ

ಮನೆಯಿಂದ ಹೊರಡುವಾಗ ಯಾವಾಗಲೂ ಜಾಗರೂಕರಾಗಿರುವಂತೆ ಹೇಳಿ. ಸುತ್ತಲಿನ ಜನ, ಜಗತ್ತನ್ನು ಗಮನಿಸಲು ಹೇಳಿ. ತಂತ್ರಜ್ಞಾನದ ಸಹಾಯವನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಮಗಳು ಇರುವ ಲೈವ್ ಜಾಗವನ್ನು ಪೋಷಕರೊಂದಿಗೆ ಹಂಚಿಕೊಳ್ಳುವಂತೆ ಹೇಳಿ. ಆದ್ದರಿಂದ ಅವಳು ನಿಮ್ಮೊಂದಿಗೆ ಸಂಪರ್ಕದಲ್ಲಿರುತ್ತಾರೆ ಮತ್ತು ಅಗತ್ಯವಿದ್ದಾಗ ನೀವು ಅವಳನ್ನು ಸಂಪರ್ಕಿಸಲು ಸಹಾಯವಾಗುತ್ತದೆ. ತಂತ್ರಜ್ಞಾನದ ಬಳಕೆಯನ್ನು ಮಕ್ಕಳಿಗೆ ಅಗತ್ಯವಿರುವಷ್ಟು ಕಲಿಸಿ, ಕೆಲವೊಮ್ಮೆ ಇದು ಕೂಡ ಅವಶ್ಯ ಎನ್ನಿಸುತ್ತದೆ.

mysore-dasara_Entry_Point