Rice Ball Recipe: ಅನ್ನ ಹೆಚ್ಚು ಉಳಿದಿದೆ ಅನ್ನೋ ಚಿಂತೆ ಬೇಡ..ಅದರಿಂದ್ಲೇ ಈ ಯಮ್ಮೀ ಸ್ನಾಕ್ಸ್ ತಯಾರಿಸಿ..ಮಕ್ಕಳ ಫೇವರೆಟ್ ಇದು
ರಾತ್ರಿ ಅನ್ನ ಉಳಿದರೆ ಸಾಮಾನ್ಯ ಮರುದಿನ, ಬಹಳಷ್ಟು ಜನರು ಚಿತ್ರಾನ್ನ ತಯಾರಿಸುತ್ತಾರೆ. ಇನ್ನೂ ಕೆಲವರು ಅನ್ನವನ್ನು ಡಸ್ಟ್‌ಬಿನ್‌ಗೆ ಹಾಕುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಅನ್ನವನ್ನು ಎಸೆಯಬೇಡಿ. ಹಾಗೇ ನಿಮಗೆ ಪ್ರತಿ ಬಾರಿ ಉಳಿದ ಅನ್ನದಿಂದ ಚಿತ್ರಾನ್ನ ತಿಂದು ಬೇಸರ ಎನಿಸಿದಲ್ಲಿ, ಈ ರೀತಿಯ ರುಚಿಯಾದ ಸ್ನಾಕ್ಸ್ ಮಾಡಿ ತಿನ್ನಿ.
ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಪ್ರತಿದಿನದ ಊಟಕ್ಕೆ ಅನ್ನ ಮಾಡುತ್ತೇವೆ. ಬೇರೆ ಏನೇ ತಿಂದರೂ ಒಂದು ತುತ್ತು ಅನ್ನ ತಿನ್ನದಿದ್ದರೆ ಬಹಳಷ್ಟು ಜನರಿಗೆ ಸಮಾಧಾನ ಎನ್ನಿಸುವುದಿಲ್ಲ. ಆದರೆ ಊಟಕ್ಕೆ ಮಾಡಿದ ಅನ್ನ ಕೆಲವೊಮ್ಮೆ ಹೆಚ್ಚು ಉಳಿದುಬಿಡುತ್ತದೆ.
ರಾತ್ರಿ ಅನ್ನ ಉಳಿದರೆ ಸಾಮಾನ್ಯ ಮರುದಿನ, ಬಹಳಷ್ಟು ಜನರು ಚಿತ್ರಾನ್ನ ತಯಾರಿಸುತ್ತಾರೆ. ಇನ್ನೂ ಕೆಲವರು ಅನ್ನವನ್ನು ಡಸ್ಟ್‌ಬಿನ್‌ಗೆ ಹಾಕುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಅನ್ನವನ್ನು ಎಸೆಯಬೇಡಿ. ಹಾಗೇ ನಿಮಗೆ ಪ್ರತಿ ಬಾರಿ ಉಳಿದ ಅನ್ನದಿಂದ ಚಿತ್ರಾನ್ನ ತಿಂದು ಬೇಸರ ಎನಿಸಿದಲ್ಲಿ, ಈ ರೀತಿಯ ರುಚಿಯಾದ ಸ್ನಾಕ್ಸ್ ಮಾಡಿ ತಿನ್ನಿ. ಇದನ್ನು ತಿಂದವರು ಅಥವಾ ನೋಡಿದವರು, ಖಂಡಿತ ಇದು ಅನ್ನದಿಂದ ಮಾಡಿರುವ ಸ್ನಾಕ್ಸ್ ಎಂದು ಹೇಳಲು ಸಾಧ್ಯವೇ ಇಲ್ಲ. ಈ ರೈಸ್ ಸ್ನಾಕ್ಸ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ನೋಡೋಣ.
ಬೇಕಾಗುವ ಸಾಮಗ್ರಿಗಳು
ಅನ್ನ - 1 ಕಪ್
ಈರುಳ್ಳಿ - 1
ಬೆಳ್ಳುಳ್ಳಿ - 10 ಎಸಳು
ಬೇಯಿಸಿದ ಆಲೂಗಡ್ಡೆ - 1
ಮೊಜರೊಲಾ ಚೀಸ್ - ಅಗತ್ಯವಿರುವಷ್ಟು
ಕಾರ್ನ್‌ಫ್ಲೋರ್ - 2 ಟೇಬಲ್ ಸ್ಪೂನ್
ಪೆಪ್ಪರ್ ಪೌಡರ್ - 1 ಟೀ ಸ್ಪೂನ್
ಎಣ್ಣೆ - ಕರಿಯಲು
ಉಪ್ಪು - ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
ಅನ್ನವನ್ನು ಮಿಕ್ಸಿಗೆ ಸೇರಿಸಿ ನುಣ್ಣಗೆ ಗ್ರೈಂಡ್ ( ನೀರು ಸೇರಿಸದೆ) ಮಾಡಿಕೊಂಡು ಒಂದು ಬೌಲ್‌ಗೆ ಸೇರಿಸಿ.
ಕತ್ತರಿಸಿದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಎಸಳನ್ನೂ ಚಿಕ್ಕ ಜಾರ್‌ಗೆ ಸೇರಿಸಿ ಕ್ರಷ್ ಮಾಡಿಕೊಳ್ಳಿ.
ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ.
ಗ್ರೈಂಡ್ ಮಾಡಿಕೊಂಡ ಅನ್ನ, ಮ್ಯಾಶ್ ಮಾಡಿಕೊಂಡ ಆಲೂಗಡ್ಡೆ, ಈರುಳ್ಳಿ-ಬೆಳ್ಳುಳ್ಳಿ ಮಿಶ್ರಣವನ್ನು ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿ
ಇದರೊಂದಿಗೆ ಉಪ್ಪು, ಕಾರ್ನ್‌ಫ್ಲೋರ್, ಕರಿಮೆಣಸಿನಪುಡಿ ಸೇರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿ
ಈ ಮಿಶ್ರಣದಿಂದ ಸಣ್ಣ ಸಣ್ಣ ಭಾಗಗಳನ್ನು ತೆಗೆದುಕೊಂಡು ಉಂಡೆ ಕಟ್ಟಿ, ಫ್ಲಾಟ್ ಮಾಡಿಕೊಳ್ಳಿ.
ಮಧ್ಯಭಾಗಕ್ಕೆ ಒಂದು ತುಂಡು ಮೊಜರೊಲಾ ಚೀಸ್ ಸೇರಿಸಿ ಮತ್ತೆ ಮಿಶ್ರಣವನ್ನು ಮುಚ್ಚಿ ಉಂಡೆ ಅಥವಾ ಓವಲ್ ಆಕಾರಕ್ಕೆ ಮಾಡಿಕೊಂಡು ಬಿಸಿ ಎಣ್ಣೆಯಲ್ಲಿ ಎರಡೂ ಕಡೆ ಕಂದು ಬಣ್ಣ ಬರುವರೆಗೂ ಕರಿಯಿರಿ.
ಟೊಮ್ಯಾಟೋ ಕೆಚಪ್, ಮಸ್ಟರ್ಡ್ ಸಾಸ್, ಪುದೀನಾ ಚಟ್ನಿ ಅಥವಾ ನಿಮಗಿಷ್ಟವಾದ ಡಿಪ್ ಜೊತೆ ಎಂಜಾಯ್ ಮಾಡಿ.
ಗಮನಿಸಿ: ಈ ಸ್ನಾಕ್ಸ್ ರುಚಿಯನ್ನು ಮತ್ತಷ್ಟು ಹೆಚ್ಚಿಸಲು ಕೊತ್ತಂಬರಿ, ಪುದೀನಾವನ್ನು ಬಳಸಬಹುದು.
ಪೆಪ್ಪರ್ ಪೌಡರ್ ಬದಲಿಗೆ ಹಸಿಮೆಣಸಿನಕಾಯಿ, ಅಚ್ಚ ಖಾರದ ಪುಡಿ ಬಳಸಬಹುದು.
ವಿಭಾಗ