Indian Temples: ಸಾಲ, ಸಂಬಳ ಸೇರಿದಂತೆ ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡುವ 10 ದೇವಾಲಯಗಳಿವು; ಒಮ್ಮೆ ಇಲ್ಲಿ ಪೂಜೆ ಮಾಡಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Indian Temples: ಸಾಲ, ಸಂಬಳ ಸೇರಿದಂತೆ ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡುವ 10 ದೇವಾಲಯಗಳಿವು; ಒಮ್ಮೆ ಇಲ್ಲಿ ಪೂಜೆ ಮಾಡಿಸಿ

Indian Temples: ಸಾಲ, ಸಂಬಳ ಸೇರಿದಂತೆ ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡುವ 10 ದೇವಾಲಯಗಳಿವು; ಒಮ್ಮೆ ಇಲ್ಲಿ ಪೂಜೆ ಮಾಡಿಸಿ

Indian Temples: ಶ್ರೀ ಮಹಾಲಕ್ಷ್ಮಿಯು ಸಂಪತ್ತಿನ ದೇವತೆ, ಆದರೆ ಕುಬೇರನು ಆ ಸಂಪತ್ತಿನ ಆಡಳಿತ ವ್ಯವಸ್ಥಾಪಕ ಎನ್ನಬಹುದು. ಶ್ರೀ ಲಕ್ಷ್ಮಿ ಕುಬೇರ ದೇವಸ್ಥಾನವು ತಮಿಳುನಾಡಿನ ಚೆನ್ನೈ ಸಮೀಪದ ರತ್ನಮಂಗಲಂನಲ್ಲಿದೆ. ಇಲ್ಲಿ ನೀವು ಕುಬೇರ ಪೂಜೆ ಮಾಡಿಸಿದರೆ, ಸಮೃದ್ಧಿಯನ್ನು ಮತ್ತು ಕಳೆದುಹೋದ ಸಂಪತ್ತನ್ನು ಪಡೆಯಬಹುದೆಂದು ನಂಬಲಾಗಿದೆ.

ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸುವ ಭಾರತದ 10 ದೇವಸ್ಥಾನಗಳು
ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸುವ ಭಾರತದ 10 ದೇವಸ್ಥಾನಗಳು (PC: Unsplash)

Indian Temples: ಜೀವನದಲ್ಲಿ ಯಾರು ತಾನೇ ಕಷ್ಟದಿಂದ ಬದುಕಬೇಕು ಅಂತ ಆಸೆ ಪಡ್ತಾರೆ? ಎಲ್ಲರೂ ತಮಗೆ ಸುಖ , ಸಂಪತ್ತು, ಸಂತೋಷ ಕರುಣಿಸು ದೇವರೇ ಎಂದು ಪ್ರತಿದಿನ ಬೇಡಿಕೊಳ್ಳುತ್ತಾರೆ. ಆದರೆ ಹಿಂದಿನ ಜನ್ಮದ ಪಾಪ ಕರ್ಮದ ಫಲಗಳು, ಗ್ರಹಗತಿಗಳಿಂದ ಎಷ್ಟೇ ಪ್ರಯತ್ನ ಪಟ್ಟರೂ ಆರ್ಥಿಕ ಪರಿಸ್ಥಿತಿ ಸೇರಿದಂತೆ ಇನ್ನಿತರ ಕಷ್ಟಗಳು ಪರಿಹಾರವಾಗುವುದಿಲ್ಲ.

ಆದರೆ ನೀವು ನಿಮ್ಮ ವ್ಯಕ್ತಿತ್ವ ಬದಲಿಸಿಕೊಂಡರೆ, ದಾನ ಧರ್ಮ ಮಾಡುವುದು, ಇತರರನ್ನು ಕಂಡರೆ ಅಸೂಯೆ ಪಡದಿರುವುದು, ಒಳ್ಳೆಯದು ಮಾಡಲಾಗದಿದ್ದರೂ ಕೇಡು ಬಯಸದೆ ಇರುವುದು ಮಾಡಿದರೆ ನಿಮ್ಮ ಜೀವನ ಖಂಡಿತ ಬದಲಾಗುತ್ತದೆ. ಜೊತೆಗೆ ಕೆಲವೊಂದು ದೇವಾಲಯಗಳಲ್ಲಿ ನೀವು ಪೂಜೆ ಮಾಡಿಸಿದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಬಹಳ ಸುಧಾರಿಸಲಿದೆ ಎಂದು ನಂಬಲಾಗಿದೆ. ಆ 10 ದೇವಾಲಯಗಳ ಬಗ್ಗೆ ಇಲ್ಲಿದೆ ವಿವರ.

ತಿರುಪತಿ ಬಾಲಾಜಿ ದೇವಸ್ಥಾನ

ಪ್ರತಿದಿನ ಲಕ್ಷಾಂತರ ಭಕ್ತರು ತಿರುಪತಿಗೆ ಭೇಟಿ ನೀಡುತ್ತಾರೆ. ಹುಂಡಿಯಲ್ಲಿ ಪ್ರತಿದಿನವೂ ಲಕ್ಷಾಂತರ ಹಣ ಸಂಗ್ರಹವಾಗುತ್ತದೆ. ಆದರೆ ವೆಂಕಟೇಶ್ವರನು ಭಕ್ತರಿಗೆ ಅದರ ಎರಡರಷ್ಟು ಕರುಣಿಸುತ್ತಾನೆ.

ಬಂಕೆ ಬಿಹಾರಿ ದೇವಸ್ಥಾನ

ಈ ದೇವಸ್ಥಾನದಲ್ಲಿ ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. ಇಲ್ಲಿನ ವಿಗ್ರಹವನ್ನು ದೈವಿಕ ದಂಪತಿಗಳಾದ ರಾಧಾ ಕೃಷ್ಣ ಎನ್ನುವವರು ಸ್ವಾಮಿ ಹರಿದಾಸ್‌ ಅವರಿಗೆ ಉಡುಗೊರೆಯಾಗಿ ನೀಡಿದ್ದು ಎಂದು ನಂಬಲಾಗಿದೆ. ಈ ವಿಗ್ರಹಕ್ಕೆ ಸದಾ ಪರದೆ ಹಾಕಲಾಗುತ್ತದೆ. ಆದರೆ ಪ್ರತಿ ವರ್ಷ ಅಕ್ಷಯ ತೃತೀಯದಲ್ಲಿ ಮಾತ್ರ ದರ್ಶನಕ್ಕೆ ಅವಕಾಶವಿದೆ. ಕೃಷ್ಣ ಜಯಂತಿಯಂದು ನಡೆಯುವ ಮಂಗಳಾರತಿಗೆ ಬಹಳ ಪ್ರಾಮುಖ್ಯತೆ ಇದೆ. ಅದನ್ನು ನೋಡುವ ಭಕ್ತರಿಗೆ ಆರ್ಥಿಕ ಬಿಕ್ಕಟ್ಟು ಶಮನವಾಗುತ್ತದೆ ಎಂಬ ನಂಬಿಕೆ ಇದೆ.

ಪಡಿಕ್ಕಾಸುನಾಥರ್‌ ದೇವಸ್ಥಾನ

ತಮಿಳುನಾಡಿನ ಕುಂಭಕೋಣಂನ ಅಲಗಾಪುತ್ತೂರಿನಲ್ಲಿರುವ ಪಡಿಕ್ಕಾಸುನಾಥರ್‌ ದೇವಸ್ಥಾನವು ಆರ್ಥಿಕ ಸಮೃದ್ಧಿಯನ್ನು ನೀಡುತ್ತದೆ. ಇಲ್ಲಿ ನಡೆಯುವ ಪಡಿಕಾಸು ಪೂಜೆಯು ಭಕ್ತರಿಗೆ ಸಕಲ ಸಮೃದ್ಧಿಯನ್ನು ತರಲಿದೆ ಎಂಬ ನಂಬಿಕೆ ಇದೆ.

ಶ್ರೀ ಲಕ್ಷ್ಮಿ ಕುಬೇರ ದೇವಸ್ಥಾನ

ಶ್ರೀ ಮಹಾಲಕ್ಷ್ಮಿಯು ಸಂಪತ್ತಿನ ದೇವತೆ, ಆದರೆ ಕುಬೇರನು ಆ ಸಂಪತ್ತಿನ ಆಡಳಿತ ವ್ಯವಸ್ಥಾಪಕ ಎನ್ನಬಹುದು. ಶ್ರೀ ಲಕ್ಷ್ಮಿ ಕುಬೇರ ದೇವಸ್ಥಾನವು ತಮಿಳುನಾಡಿನ ಚೆನ್ನೈ ಸಮೀಪದ ರತ್ನಮಂಗಲಂನಲ್ಲಿದೆ. ಇಲ್ಲಿ ನೀವು ಕುಬೇರ ಪೂಜೆ ಮಾಡಿಸಿದರೆ, ಸಮೃದ್ಧಿಯನ್ನು ಮತ್ತು ಕಳೆದುಹೋದ ಸಂಪತ್ತನ್ನು ಪಡೆಯಬಹುದೆಂದು ನಂಬಲಾಗಿದೆ. ತಿರುಪತಿಗೆ ಭೇಟಿ ನೀಡುವ ಮುನ್ನ ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ ನಿಮ್ಮ ಆರ್ಥಿಕ ಸ್ಥಿತಿ ಸಂಪೂರ್ಣ ಅಭಿವೃದ್ಧಿ ಹೊಂದಲಿದೆ.

ಕದನ್ ನಿವರ್ತೀಶ್ವರರ್ ತಿರುಚೆರೈ ದೇವಸ್ಥಾನ

ತಮಿಳುನಾಡಿನ ಕುಂಭಕೋಣಂ ಸಮೀಪದಲ್ಲಿರುವ ತಿರುಚೆರೈ ಕದನ್ ನಿವರ್ತೇಶ್ವರರ್ ದೇವಸ್ಥಾನವು ಹಣಕಾಸಿನ ಸಾಲಗಳಿಂದ ವಿಮುಕ್ತಿ ನೀಡುತ್ತದೆ. ಕದನ್ ಎಂಬ ಪದವು ಸಾಲವನ್ನು ಸೂಚಿಸಿದರೆ, ನಿವರ್ತೀಶ್ವರರ್‌ ಎಂಬುದು ಸಾಲದ ಸಮಸ್ಯೆಯಿಂದ ವಿಮುಕ್ತಿ ನೀಡುವುದು ಎಂದರ್ಥ.

ಅರಿಯನಾಥಸ್ವಾಮಿ ಹರಿಕೇಶವನಲ್ಲೂರು

ತಮಿಳುನಾಡಿನಲ್ಲಿರುವ ಅರಿಯನಾಥಸ್ವಾಮಿ ಹರಿಕೇಶವನಲ್ಲೂರು ದೇವಸ್ಥಾನವು 1400 ವರ್ಷಗಳಷ್ಟು ಹಳೆಯದು. ಇದು ತಿರುನಲ್ವೇಲಿ ಜಿಲ್ಲೆಯ ಹರಿಕೇಶವನಲ್ಲೂರಿನಲ್ಲಿದೆ. ಇದನ್ನು ಕುಬೇರಪುರಿ ಎಂದು ಕರೆಯಲಾಗುತ್ತದೆ. ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದಲು, ಸಂಪತ್ತು ಪಡೆಯಲು ಇಲ್ಲಿ ಜನರು ಕುಬೇರನನ್ನು ಪೂಜಿಸುತ್ತಾರೆ.

ಕಾಳಹಸ್ತೀಶ್ವರರ್ ದೇವಸ್ಥಾನ

ತಮಿಳುನಾಡಿನ ಕುಂಭಕೋಣಂನಲ್ಲಿರುವ ಕಾಳಹಸ್ತೀಶ್ವರರ್ ದೇವಾಲಯವು ಶಿವನ ದೇವಾಲಯವಾಗಿದೆ. ಇಲ್ಲಿ ದುರ್ಗಾ, ಸರಸ್ವತಿ ಮತ್ತು ಲಕ್ಷ್ಮಿ ದೇವಿಗೂ ಪೂಜೆ ಮಾಡಲಾಗುತ್ತದೆ. ಇಲ್ಲಿ ಲಕ್ಷ್ಮಿಗೆ ಸಹಸ್ರನಾಮ ಪೂಜೆ ಮಾಡಿಸುವದರಿಂದ ಎಲ್ಲಾ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ.

ಕುಬೇರಪುರೀಶ್ವರರ್‌ ದೇವಾಲಯ

ತಮಿಳುನಾಡಿನ ತಂಜಾವೂರಿನಲ್ಲಿರುವ ಕುಬೇರಪುರೀಶ್ವರರ್‌ ದೇವಾಲಯ ಕೂಡಾ ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸುವ ದೇವಾಲಯಗಳಲ್ಲಿ ಒಂದು. ಪುರಾಣಗಳಲ್ಲಿ ಉಲ್ಲೇಖವಾಗಿರುವ ಕಥೆಯ ಪ್ರಕಾರ, ರಾವಣನಿಂದ ಕಳೆದು ಹೋದ ತನ್ನ ಸಂಪತ್ತನ್ನು ಮರಳಿ ಪಡೆಯಲು ಕುಬೇರನು ಶಿವನನ್ನು ಪೂಜಿಸಲು ಭೇಟಿ ನೀಡಿದ ಸ್ಥಳವೇ ತಂಜೂರಿನ ಈ ಕುಬೇರಪುರೀಶ್ವರರ್ ದೇವಾಲಯ. ಶಿವನು ಕುಬೇರಪುರೀಶ್ವರನ ರೂಪದಲ್ಲಿ ಇಲ್ಲಿ ನೆಲೆಸಿದ್ದಾನೆ ಎಂದು ನಂಬಲಾಗಿದೆ.

ಸ್ವರ್ಣಪುರೀಶ್ವರರ್‌ ದೇವಸ್ಥಾನ

ತಮಿಳುನಾಡಿನ ಅರಿಯಲೂರು ಜಿಲ್ಲೆಯಲ್ಲಿರುವ ತೆನ್ಪೊನ್ಪರಪ್ಪಿ ಸ್ವರ್ಣಪುರೀಶ್ವರರ್ ದೇವಸ್ಥಾನವನ್ನು 10 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ದೇವಸ್ಥಾನದ ಹೆಸರೇ ಸೂಚಿಸಿರುವಂತೆ ಸ್ವರ್ಣಪುರೇಶ್ವರರ್ ತನ್ನ ಭಕ್ತರಿಗೆ ಹೇರಳವಾದ ಸ್ವರ್ಣ (ಸಂಪತ್ತು) ನೀಡುತ್ತಾನೆ ಎನ್ನಲಾಗಿದೆ.

ತಿರು ಸೆಂಪೊನ್ ಸೇಯ್ ದೇವಸ್ಥಾನ

ತಿರು ಸೆಂಪೊನ್ ಸೇಯ್ ದೇವಸ್ಥಾನ ತಮಿಳುನಾಡಿನ ತಂಜಾವೂರಿನಲ್ಲಿದೆ. ಭಕ್ತರ ಬಡತನವನ್ನು ನಿವಾರಿಸುವ ದೇವಸ್ಥಾನವಿದು ಎಂದು ನಂಬಲಾಗಿದೆ. ಭಾರತದಲ್ಲಿರುವ 108 ದಿವ್ಯದೇಶಮ್‌ಗಳಲ್ಲಿ ಇದೂ ಕೂಡಾ ಒಂದು. ಈ ದೇವಾಲಯದಲ್ಲಿ ಶ್ರೀ ವಿಷ್ಣುವನ್ನು ಆರಾಧಿಸಲಾಗುತ್ತದೆ.

ಈ ದೇವಸ್ಥಾನಗಳನ್ನು ಹೊರತುಪಡಿಸಿ ದೆಹಲಿಯ ಲಕ್ಷ್ಮಿ ನಾರಾಯಣ ದೇವಸ್ಥಾನ, ವೆಲ್ಲೂರಿನ ಗೋಲ್ಡನ್‌ ಟೆಂಪಲ್‌, ಕೊಲ್ಹಾಪುರಿ ಮಹಾಲಕ್ಷ್ಮಿ ದೇವಸ್ಥಾನ, ಚೆನ್ನೈನ ಅಷ್ಟಲಕ್ಷ್ಮಿ ದೇವಸ್ಥಾನ, ಹಾಸನದ ಲಕ್ಷ್ಮಿದೇವಿ ದೇವಸ್ಥಾನ, ಮುಂಬೈನ ಮಹಾಲಕ್ಷ್ಮಿ ದೇವಾಲಗಳಿಗೆ ಭೇಟಿ ನೀಡಿದರೆ ಭಕ್ತರ ಆರ್ಥಿಕ ಸಮಸ್ಯೆ ಪರಿಹಾರವಾಗಲಿದೆ.

Whats_app_banner