Travel: ಸೂರ್ಯ ಮುಳುಗದ 6 ದೇಶಗಳಿವು; ಒಮ್ಮೆ ಹೋಗಿ ಬನ್ನಿ, ಆದ್ರೆ ಕತ್ತಲಾಗ್ಲಿ ಅಂತ ಕಾಯಬೇಡಿ
Travel: ಫಿನ್‌ಲ್ಯಾಂಡ್ ಸಾವಿರ ಸರೋವರಗಳು ಹಾಗೂ ದ್ವೀಪಗಳ ಭೂಮಿ ಎಂದು ಹೆಸರಾಗಿದೆ. ಬೇಸಿಗೆಯಲ್ಲಿ ಫಿನ್‌ಲ್ಯಾಂಡ್‌ನ ಕೆಲವೇ ಕೆಲವು ಪ್ರದೇಶಗಳು ಮಾತ್ರ ಸೂರ್ಯನ ಬೆಳಕನ್ನು ಪಡೆಯುತ್ತವೆ. ಆಕರ್ಷಕ ದ್ವೀಪಗಳ ಜೊತೆಗೆ ಇಲ್ಲಿ ಗ್ಲಾಸ್ ಇಗ್ಲೂನಲ್ಲಿ ಉಳಿದುಕೊಂಡು ಪ್ರಕೃತಿಯನ್ನು ಆಸ್ವಾದಿಸಬಹುದು.
Travel: ಬೆಳಗ್ಗೆ ಆದ ನಂತರ ಕತ್ತಲಾಗಬೇಕು, ಸೂರ್ಯ ಮುಳುಗಿದ ನಂತರ ಉದಯಿಸಲೇಬೇಕು ಎಂಬ ಮಾತನ್ನು ಕೇಳಿದ್ದೇವೆ. ಆದರೆ ಜಗತ್ತಿನ ಕೆಲವೊಂದು ಕಡೆ ಸೂರ್ಯ ಎಂದಿಗೂ ಮುಳುಗುವುದೇ ಇಲ್ಲ ಎಂಬ ವಿಚಾರ ನಿಮಗೆ ಗೊತ್ತಾ? ಪ್ರತಿದಿನ ಸೂರ್ಯ ಹುಟ್ಟುವುದನ್ನು ಬೆಳಗ್ಗೆ, ಸೂರ್ಯ ಮುಳುಗುವುದನ್ನು ರಾತ್ರಿ ಎಂದು ಕರೆಯುತ್ತೇವೆ. ಆದರೆ ಸೂರ್ಯನೇ ಮುಳುಗದಿದ್ದರೆ ಅದನ್ನು ಹಗಲು ಎನ್ನಬೇಕೇ? ಕತ್ತಲು ಎನ್ನಬೇಕೇ?
ವಿಶ್ವದಲ್ಲಿ ಸೂರ್ಯ ಮುಳುಗದೆ ಇರುವ ಕೆಲವೊಂದು ರಾಷ್ಟ್ರಗಳಿವೆ, ಅವುಗಳ ಪರಿಚಯ ಮಾಡಿಕೊಳ್ಳೋಣ.
ನಾರ್ವೆ
ನಾರ್ವೆಯನ್ನು ಮಧ್ಯರಾತ್ರಿ ಸೂರ್ಯನ ಭೂಮಿ ಎಂದು ಕರೆಯಲಾಗುತ್ತದೆ. ಮೇ ತಿಂಗಳಿನಿಂದ ಜುಲೈ ಅಂತ್ಯದವರೆಗೆ ಸುಮಾರು 76 ದಿನಗಳ ಕಾಲ ಇಲ್ಲಿ ಸೂರ್ಯ ಅಸ್ತಮಿಸುವುದೇ ಇಲ್ಲ. ಪ್ರಕಾಶಮಾನವಾದ ಸೂರ್ಯನ ಬೆಳಕು ಇಡೀ ಪ್ರದೇಶವನ್ನು ದಿನಕ್ಕೆ ಸುಮಾರು 20 ಗಂಟೆಗಳ ಕಾಲ ಆವರಿಸುತ್ತದೆ. ನಾರ್ವೆಯ ಸ್ವಾಲ್ಬಾರ್ಡ್ ಯುರೋಪಿನ ಉತ್ತರದ ಅತ್ಯಂತ ಜನವಸತಿ ಪ್ರದೇಶವಾಗಿದೆ. ಇಲ್ಲಿ ಏಪ್ರಿಲ್ 10 ರಿಂದ ಆಗಸ್ಟ್ 23 ರವರೆಗೆ ಸೂರ್ಯನು ನಿರಂತರವಾಗಿ ಬೆಳಗುತ್ತಾನೆ.
ಐಸ್ಲ್ಯಾಂಡ್
ಐಸ್ಲ್ಯಾಂಡ್, ಸುಂದರವಾದ ದೇಶ, ಗ್ರೇಟ್ ಬ್ರಿಟನ್ ನಂತರ ಯೂರೋಪ್‌ನ ಅತಿದೊಡ್ಡ ದ್ವೀಪವಿದು. ಮೇ 10 ರಿಂದ ಜುಲೈ ವರೆಗೆ ಸೂರ್ಯನ ಬೆಳಕು ಆವರಿಸಿರುತ್ತದೆ. ಏಕೆಂದರೆ ಈ ಸಮಯದಲ್ಲಿ ಸೂರ್ಯ ಪ್ರಕಾಶಮಾನವಾಗಿ ಬೆಳಗುತ್ತಿರುತ್ತಾನೆ. ಕಣ್ಮನ ಸೆಳೆಯುವ ದ್ವೀಪಗಳು ಮಾತ್ರವಲ್ಲದೆ ಇಲ್ಲಿ ಹೈಕಿಂಗ್, ವನ್ಯಜೀವಿ ವೀಕ್ಷಣೆ, ತಿಮಿಂಗಿಲ ವೀಕ್ಷಣೆ, ಗುಹೆಗಳು, ಸೈಕ್ಲಿಂಗ್ ಮತ್ತು ರಾಷ್ಟ್ರೀಯ ಉದ್ಯಾನವನಗಳಿಗೆ ಭೇಟಿ ನೀಡಬಹುದು. ಇದು ನಿಮಗೆ ಬಹಳ ವಿಭಿನ್ನ ಅನುಭವ ನೀಡುತ್ತದೆ.
ಕೆನಡಾ
ಇದು ವಿಶ್ವದ ಎರಡನೇ ಅತಿದೊಡ್ಡ ದೇಶ. ಕೆನಡಾದ ಬಹುತೇಕ ಭಾಗಗಳು ವರ್ಷಪೂರ್ತಿ ಹಿಮದಿಂದ ಆವೃತವಾಗಿರುತ್ತವೆ. ಇನುವಿಕ್ ಮತ್ತು ವಾಯುವ್ಯ ಪ್ರಾಂತ್ಯಗಳಂತಹ ಸ್ಥಳಗಳಲ್ಲಿ ಬೇಸಿಗೆಯಲ್ಲಿ ಸುಮಾರು 50 ದಿನಗಳವರೆಗೆ ಸೂರ್ಯ ಬೆಳಗುತ್ತಾನೆ. ಈ ಅವಧಿಯಲ್ಲಿ ಕೆನಡಾದಲ್ಲಿ ನೀವು ಕತ್ತಲೆಯನ್ನು ಕಲ್ಪನೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಕೆನಡಾದಲ್ಲಿ ನೀವು ಅರೋರಾ (ಆಕಾಶದಿಂದ ಮೂಡಿಬರುವ ನೈಸರ್ಗಿಕ ಬೆಳಕು) ವೀಕ್ಷಣೆ, ರಾಕ್ ಕ್ಲೈಂಬಿಂಗ್, ಬಿಸಿನೀರಿನ ಬುಗ್ಗೆಗಳು, ತೂಗು ಸೇತುವೆಯ ನಡಿಗೆ, ವಿಸ್ತಾರಗಳಲ್ಲಿ ರಸ್ತೆಗಳು, ಐತಿಹಾಸಿಕ ಸ್ಮಾರಕಗಳನ್ನು ನೋಡಬಹುದು.
ಅಲಾಸ್ಕಾ
ಮೇ ಅಂತ್ಯದಿಂದ ಜುಲೈ ಅಂತ್ಯದವರೆಗೆ ಅಲಾಸ್ಕಾದಲ್ಲಿ ಸೂರ್ಯ ಮುಳುಗುವುದಿಲ್ಲ. ಚಳಿಗಾಲದ ಬಹುತೇಕ ಸಮಯದಲ್ಲಿ ಇಲ್ಲಿ ಹೆಚ್ಚು ಕತ್ತಲೆ ತುಂಬಿರುತ್ತದೆ. ಅಲಾಸ್ಕಾ, ಅದ್ಭುತ ಹಿಮನದಿಗಳು ಮತ್ತು ಹಿಮದಿಂದ ಆವೃತವಾದ ಪರ್ವತಗಳಿಗೆ ಹೆಸರುವಾಸಿಯಾಗಿದೆ, ನೀವು ಇಲ್ಲಿ ಟ್ರೆಕ್ಕಿಂಗ್ ಹೋಗಬಹುದು, ಅದ್ಭುತ ದೃಶ್ಯಗಳನ್ನು ಸೆರೆಹಿಡಿಯಬಹುದು. ಬೆಳಗಿನ ಜಾವ 2 ಗಂಟೆಗೆ ಹಿಮದಿಂದ ಹೊಳೆಯುತ್ತಿರುವ ಆ ಸುಂದರ ಪರ್ವತಗಳನ್ನು ನೋಡುವುದೇ ಖುಷಿಯ ವಿಚಾರ.
ಸ್ವೀಡನ್
ಈಗ ತಿಳಿಸಿದ ಇತರ ದೇಶಗಳಿಗೆ ಹೋಲಿಸಿದರೆ ಸ್ವೀಡನ್ ವಾತಾವರಣ ಸಾಮಾನ್ಯವಾಗಿ ಬೆಚ್ಚಗಿರುತ್ತದೆ. ಸ್ವೀಡನ್‌ನಲ್ಲಿ ಮಧ್ಯರಾತ್ರಿ ಸೂರ್ಯಾಸ್ತವಾದರೆ ಮೇ ಆರಂಭದಿಂದ ಆಗಸ್ಟ್ ಅಂತ್ಯದವರೆಗೆ 4:30ಕ್ಕೆ ಸೂರ್ಯೋದಯವಾಗುತ್ತದೆ. ನೀವು ಸಾಹಸಪ್ರಿಯರಾದಲ್ಲಿ ಈ ಸ್ಥಳಗಳಲ್ಲಿ ಉತ್ತಮ ಸಮಯ ಕಳೆಯಬಹುದು. ಮೀನುಗಾರಿಕೆ, ಗಾಲ್ಫ್ ಆಡುವುದು, ಸ್ಕೀಯಿಂಗ್, ಉತ್ತರ ದೀಪಗಳನ್ನು ವೀಕ್ಷಿಸುವುದು, ರಾಷ್ಟ್ರೀಯ ಉದ್ಯಾನವನಗಳಿಗೆ ಭೇಟಿ ನೀಡುವುದು ನಿಮಗೆ ಎಂದೂ ಮರೆಯದ ಅನುಭವ ನೀಡುತ್ತದೆ.
ಫಿನ್‌ಲ್ಯಾಂಡ್
ಫಿನ್‌ಲ್ಯಾಂಡ್ ಸಾವಿರ ಸರೋವರಗಳು ಹಾಗೂ ದ್ವೀಪಗಳ ಭೂಮಿ ಎಂದು ಹೆಸರಾಗಿದೆ. ಬೇಸಿಗೆಯಲ್ಲಿ ಫಿನ್‌ಲ್ಯಾಂಡ್‌ನ ಕೆಲವೇ ಕೆಲವು ಪ್ರದೇಶಗಳು ಮಾತ್ರ ಸೂರ್ಯನ ಬೆಳಕನ್ನು ಪಡೆಯುತ್ತವೆ. ಆಕರ್ಷಕ ದ್ವೀಪಗಳ ಜೊತೆಗೆ ಇಲ್ಲಿ ಗ್ಲಾಸ್ ಇಗ್ಲೂನಲ್ಲಿ ಉಳಿದುಕೊಂಡು ಪ್ರಕೃತಿಯನ್ನು ಆಸ್ವಾದಿಸಬಹುದು. ಶರದೃತುವಿನಲ್ಲಿ ಸ್ಕೀಯಿಂಗ್ ಹೋಗಬಹುದು. ಈ ಸಮಯದಲ್ಲಿ ಇಲ್ಲಿನ ಮಡ ಗಿರಗಳು ಹಸಿರು ಬಣ್ಣ ಬದಲಾಗುತ್ತದೆ.
ನೀವು ಫಾರಿನ್ ಟ್ರಿಪ್ ಪ್ಲಾನ್ ಮಾಡುತ್ತಿದ್ದಲ್ಲಿ ಸೂರ್ಯ ಮುಳುಗದ ಈ ದೇಶಗಳಿಗೆ ಒಮ್ಮೆ ಭೇಟಿ ನೀಡಿ. ಆದರೆ ಕತ್ತಲೆ ಆಗಲಿ ಅಂತ ಕಾಯಬೇಡಿ.