ಐಫೋನ್ ಅಸಲಿಯೋ ನಕಲಿಯೋ ತಿಳಿಯುವುದು ಹೇಗೆ? ಈ 6 ವಿಧಾನಗಳ ಮೂಲಕ ಆಪಲ್ ಅಸಲಿಯತ್ತು ತಿಳಿಯಿರಿ
ಫೋನ್‌ಗಳಲ್ಲಿ ದುಬಾರಿ ಫೋನ್ ಐಫೋನ್. ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ಆಪಲ್ ಐಫೋನ್ ಖರೀದಿಸಿದವರಿಗೆ “ಇದು ನಿಜವಾದ ಐಫೋನಾ? ನಕಲಿಯಾ?” ಎಂಬ ಸಂದೇಹ ಬರಬಹುದು. ಆನ್‌ಲೈನ್‌ನಲ್ಲಿ ಪರ್ಚೇಸ್ ಮಾಡುವವರಿಗೆ ಇಂತಹ ಸಂದೇಹ ಹೆಚ್ಚಿರಬಹುದು. ಐಫೋನ್ ಅಸಲಿತನ ತಿಳಿಯಲು ಹಲವು ಮಾರ್ಗಗಳಿವೆ.
ಫೋನ್‌ಗಳಲ್ಲಿ ದುಬಾರಿ ಫೋನ್ ಐಫೋನ್. ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ಆಪಲ್ ಐಫೋನ್ ಖರೀದಿಸಿದವರಿಗೆ “ಇದು ನಿಜವಾದ ಐಫೋನಾ? ನಕಲಿಯಾ?” ಎಂಬ ಸಂದೇಹ ಬರಬಹುದು. ಆನ್‌ಲೈನ್‌ನಲ್ಲಿ ಪರ್ಚೇಸ್ ಮಾಡುವವರಿಗೆ ಇಂತಹ ಸಂದೇಹ ಹೆಚ್ಚಿರಬಹುದು. ಐಫೋನ್ ಅಸಲಿತನ ತಿಳಿಯಲು ಹಲವು ಮಾರ್ಗಗಳಿವೆ. ಜಗತ್ತಿನಾದ್ಯಂತ ಹೆಚ್ಚು ಜನಪ್ರಿಯತೆ ಪಡೆದಿರುವ ಆಪಲ್ ಬ್ರ್ಯಾಂಡ್‌ನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. ಇದರ ದುಬಾರಿ ದರದಿಂದಾಗಿ ಎಲ್ಲಾದರೂ ವಂಚನೆ ನಡೆಯಬಹುದೇ ಎಂಬ ಸಂದೇಹವೂ ಸಾಖಷ್ಟು ಜನರಲ್ಲಿದೆ. ಇದೇ ಸಮಯದಲ್ಲಿ ಕೆಲವೊಂದು ಬ್ರ್ಯಾಂಡ್‌ಗಳು ಐಫೋನ್ ಅನ್ನು ಹೋಲುವಂತಹ ನಕಲಿ ಸಾಧನಗಳನ್ನು ಬಿಡುಗಡೆ ಮಾಡುತ್ತವೆ ಎಂದು ಹೇಳಲಾಗುತ್ತದೆ. ಇಂತಹ ಫೋನ್‌ಗಳನ್ನು ಥರ್ಡ್ ಪಾರ್ಟಿ ಸೆಲ್ಲರ್‌ಗಳ ಮೂಲಕ ಕಳ್ಳ ಮಾರ್ಗದಲ್ಲಿ ಮಾರಾಟ ಮಾಡುತ್ತಿರಬಹುದು ಎಂದು ಚರ್ಚೆಗಳಾಗುತ್ತಿವೆ. ಐಫೋನ್ ಅಸಲಿಯೋ ನಕಲಿಯೋ ಎಂದು ಕಂಡುಹಿಡಿಯಲು ಸುಲಭ ವಿಧಾನಗಳು ಇವೆ.
ಪ್ಯಾಕೇಜ್ ಗಮನಿಸಿ
ಐಫೋನ್ ಪ್ಯಾಕ್ ಬಿಚ್ಚುವ ಮೊದಲು ಪ್ಯಾಕೇಜ್ ಹೇಗಿದೆ ಗಮನಿಸಿ. ಐಫೋನ್ ಪ್ಯಾಕೇಜ್ ಗುಣಮಟ್ಟ ಉತ್ತಮವಾಗಿರಬೇಕು. ಆಪಲ್ ಅತ್ಯುತ್ತಮವಾಗಿ ಪ್ಯಾಕೇಜ್ ಮಾಡಿರುತ್ತದೆ. ಈ ಬಾಕ್ಸ್‌ನಲ್ಲಿರುವ ಅಕ್ಷರಗಳು, ಚಿತ್ರಗಳು ಗುಣಮಟ್ಟ ಹೊಂದಿರುತ್ತವೆ. ಎಲ್ಲಾದರೂ ಲೋಕಲ್ ಪ್ಯಾಕೇಜ್‌ನಂತೆ ಕಂಡರೆ ಎಚ್ಚರಿಕೆಯ ಗಂಟೆಯೆಂದು ತಿಳಿಯಿರಿ. ಪ್ಯಾಕೇಜ್ ಓಪನ್ ಆದಂತೆ ಇದ್ದರೆ, ಸಡಿಲವಾಗಿದ್ದರೂ ಎಚ್ಚರವಹಿಸಿ.
ಬಿಡಿಭಾಗಗಳನ್ನು ಪರಿಶೀಲನೆ ಮಾಡಿ
ಐಫೋನ್ ಬಾಕ್ಸ್ ತೆರೆದು ನೋಡಿ. ಅದರಲ್ಲಿ ಕೇಬಲ್‌ನಂತಹ ಬಿಡಿಭಾಗಗಳು ಇರುತ್ತವೆ. ಕೇಬಲ್ ಗುಣಮಟ್ಟ ಉತ್ತಮವಾಗಿರುವುದೇ ಎಂದು ನೋಡಿ. ಅದು ಕೂಡ ಲೋಕಲ್‌ನಂತೆ ಕಂಡರೆ ಎಲ್ಲೋ ಸಮಸ್ಯೆಯಿದೆ ಎಂದರ್ಥ.
ಸೀರಿಯಲ್ ಸಂಖ್ಯೆ ಮತ್ತು ಐಎಂಇಐ ಸಂಖ್ಯೆ ದೃಢೀಕರಣ
ಪ್ರತಿಯೊಂದು ಸ್ಮಾರ್ಟ್‌ಫೋನ್‌ಗಳಂತೆ ಐಫೋನ್ ಕೂಡ ಐಎಂಇಐ ಎಂಬ ವಿಶೇಷ ಸಂಖ್ಯೆ ಹೊಂದಿರುತ್ತದೆ. ಸೆಟ್ಟಿಂಗ್, ಜನರಲ್, ಅಬೌಟ್‌ಗೆ ಹೋಗಿ. ಇದಾದ ಬಳಿಕ ಆಪಲ್‌ನ ಚೆಕ್ ಕವರೇಜ್‌ಪೇಜ್‌ಗೆ ಹೋಗಿ. ಅಲ್ಲಿ ಸೀರಿಯಲ್ ಸಂಖ್ಯೆ ನಮೂದಿಸಿ. ನಿಮ್ಮ ಐಫೋನ್ ಅಸಲಿಯಾಗಿದ್ದರೆ ಆ ವೆಬ್‌ಸೈಟ್‌ನಲ್ಲಿ ಐಫೋನ್ ಮಾಡೆಲ್ ವಿವರ ದೊರಕುತ್ತದೆ. ಐಎಂಇಐ ಸಂಖ್ಯೆ ತಿಳಿಯಲು *#06# ಸಂಖ್ಯೆಗೆ ಡಯಲ್ ಮಾಡಿ.
ನಿರ್ಮಾಣ ಗುಣಮಟ್ಟ ಪರಿಶೀಲಿಸಿ
ಐಫೋನ್ ಅತ್ಯುತ್ತಮ ನಿರ್ಮಾಣಕ್ಕೆ ಹೆಸರುವಾಸಿಯಾಗಿದ. ಗಟ್ಟಿಮುಟ್ಟಾದ ನಿರ್ಮಾಣ ಹೊಂದಿಲ್ಲದಿದ್ದರೆ ನಕಲಿ ಎಂದು ತಿಳಿಯಿರಿ.
ಆಪಲ್‌ನ ಸಾಫ್ಟ್‌ವೇರ್‌ಗಳನ್ನು ಪರಿಶೀಲಿಸಿ
ಸೆಟ್ಟಿಂಗ್>> ಜನರಲ್? ಸಾಫ್ಟ್‌ವೇರ್ ಅಪ್‌ಡೇಟ್ ಪರಿಶೀಲನೆ ಮಾಡಿ. ಲೇಟೆಸ್ಟ್ ಐಒಎಸ್ ಚಾಲಿತವಾಗಿರುವುದನ್ನು ಖಚಿತಪಡಿಸಿ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಗಳಂತೆ ನಕಲಿ ಐಫೋನ್ ಆಗಿದ್ದರೆ ಐಒಎಸ್‌ನಂತೆ ಕಾಣಿಸುವ ಆಂಡ್ರಾಯ್ಡ್ ಸಾಫ್ಟ್‌ವೇರ್ ಇರುತ್ತದೆ.
ಸಿರಿ ಜತೆ ಮಾತನಾಡಿ
ಪವರ್ ಬಟನ್ ಹೋಲ್ಡ್ ಮಾಡಿ ಹೇ ಸಿರಿ ಎಂದು ಮಾತನಾಡಿ. ಸಿರಿ ಮಾತನಾಡದೆ ಇದ್ದರೆ ಇದು ನಕಲಿ ಎಂದೇ ತಿಳಿಯಿರಿ. ಸಿರಿ ಐಒಎಸ್‌ನಲ್ಲಿ ಮಾತ್ರ ಕೆಲಸ ಮಾಡುತ್ತದೆ.
ಆಪಲ್ ಸರ್ವೀಸ್ ಸೆಂಟರ್‌ಗೆ ಭೇಟಿ ನೀಡಿ
ಖರೀದಿಸಿರುವ ಐಫೋನ್ ಕುರಿತು ಸಂದೇಹಗಳಿದ್ದರೆ ಹತ್ತಿರದ ಆಪಲ್ ಸರ್ವೀಸ್ ಸೆಂಟರ್‌ಗೆ ಭೇಟಿ ನೀಡಿ, ಐಫೋನ್‌ನ ಅಸಲಿತನ ಪರೀಕ್ಷಿಸಿಕೊಳ್ಳಿ.