JioPhone Prima 2: ಹಬ್ಬಕ್ಕೂ ಮುನ್ನ ಜಿಯೋ ಸ್ಫೋಟಕ ಎಂಟ್ರಿ: ಮತ್ತೊಂದು ಅಗ್ಗದ ಫೋನ್ ಬಿಡುಗಡೆ-technology news jiophone prima 2 india launch jiophone prima 2 price specifications vbt ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Jiophone Prima 2: ಹಬ್ಬಕ್ಕೂ ಮುನ್ನ ಜಿಯೋ ಸ್ಫೋಟಕ ಎಂಟ್ರಿ: ಮತ್ತೊಂದು ಅಗ್ಗದ ಫೋನ್ ಬಿಡುಗಡೆ

JioPhone Prima 2: ಹಬ್ಬಕ್ಕೂ ಮುನ್ನ ಜಿಯೋ ಸ್ಫೋಟಕ ಎಂಟ್ರಿ: ಮತ್ತೊಂದು ಅಗ್ಗದ ಫೋನ್ ಬಿಡುಗಡೆ

ಈ ಜಿಯೋ ಫೋನ್‌ನಲ್ಲಿ ನೀವು ಯಾವ ವಿಶೇಷ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ.ಈ ಫೋನ್‌ನ ಬೆಲೆ ಎಷ್ಟು ಮತ್ತು ನೀವು ಈ ಫೋನ್ ಅನ್ನು ಎಲ್ಲಿ ಖರೀದಿಸಬಹುದು? ಎಂಬ ಕುರಿತ ಎಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ. (ಬರಹ: ವಿನಯ್ ಭಟ್)

ಅತಿ ಕಡಿಮೆ ಬೆಲೆಗೆ ಫೋನ್ ಬಿಡುಗಡೆ ಮಾಡಿದ ಜಿಯೋ.
ಅತಿ ಕಡಿಮೆ ಬೆಲೆಗೆ ಫೋನ್ ಬಿಡುಗಡೆ ಮಾಡಿದ ಜಿಯೋ.

ರಿಲಯನ್ಸ್ ಜಿಯೋ ತನ್ನ ಗ್ರಾಹಕರನ್ನು ಸೆಳೆಯಲು ಹಬ್ಬದ ಸೀಸನ್ ಬರುವ ಮೊದಲೇ ಅಗ್ಗದ ಫೋನ್ ಅನ್ನು ಬಿಡುಗಡೆ ಮಾಡಿದೆ. ಜಿಯೋ ಫೋನ್ ಪ್ರೈಮಾ 2 (JioPhone Prima 2) ದೀಪಾವಳಿಯ ಮೊದಲೇ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಫೋನ್ ಕಳೆದ ವರ್ಷ ಬಿಡುಗಡೆಯಾದ ಜಿಯೋ ಫೋನ್ ಪ್ರೈಮಾದ ಅಪ್‌ಗ್ರೇಡ್ ಆವೃತ್ತಿಯಾಗಿದೆ. ಹೊಸ ಬಾಗಿದ ವಿನ್ಯಾಸ ಮತ್ತು ಲೆದರ್ ಫಿನಿಶ್ ರಿಯರ್ ಪ್ಯಾನೆಲ್‌ನೊಂದಿಗೆ ಈ ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ.

ಈ ಜಿಯೋ ಫೋನ್‌ನಲ್ಲಿ ನೀವು ಯಾವ ವಿಶೇಷ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ, ಈ ಫೋನ್‌ನ ಬೆಲೆ ಎಷ್ಟು ಮತ್ತು ನೀವು ಈ ಫೋನ್ ಅನ್ನು ಎಲ್ಲಿ ಖರೀದಿಸಬಹುದು? ಎಂಬ ಕುರಿತ ಎಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ.

ಜಿಯೋ ಫೋನ್ ಪ್ರೈಮಾ 2 4G ಫೀಚರ್ಸ್

ಈ ಬಜೆಟ್ ಫೋನ್ 2.4 ಇಂಚಿನ (320 x 240 ಪಿಕ್ಸೆಲ್‌ಗಳು) QVGA ಬಾಗಿದ ಡಿಸ್​ಪ್ಲೇಯನ್ನು ಹೊಂದಿದೆ. ಇದಲ್ಲದೇ, 512MB RAM, 4GB ಸ್ಟೋರೇಜ್, ಕ್ವಾಲ್ಕಾಮ್ ಪ್ರೊಸೆಸರ್ ಜೊತೆಗೆ ಮೈಕ್ರೋ SD ಕಾರ್ಡ್ ಸಹಾಯದಿಂದ 128GB ವರೆಗೆ ವಿಸ್ತರಿಸಬಹುದಾದ ಆಯ್ಕೆ ಇದೆ.

KaiOS 2.5.3 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುವ ಈ ಫೋನ್​ನಲ್ಲಿ ಹಿಂದಿನ ಕ್ಯಾಮೆರಾ ಮತ್ತು 0.3MP (VGA) ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ. ಸಂಪರ್ಕಕ್ಕಾಗಿ 3.5 mm ಹೆಡ್‌ಫೋನ್ ಜ್ಯಾಕ್, ಬ್ಲೂಟೂತ್ ಆವೃತ್ತಿ 5, USB 2.0 ಪೋರ್ಟ್ ಮತ್ತು 4G VoLTE ಬೆಂಬಲ ಲಭ್ಯವಿದೆ.

23 ಭಾರತೀಯ ಭಾಷೆಗಳನ್ನು ಬೆಂಬಲಿಸುವ ಈ ಫೋನ್ ಅನೇಕ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ, ನೀವು ಯಾವುದೇ ಅಪ್ಲಿಕೇಶನ್ ಇಲ್ಲದೆ ನೇರ ವೀಡಿಯೊ ಕರೆ ಮಾಡಲು ಸಾಧ್ಯವಾಗುತ್ತದೆ. ಇದಲ್ಲದೆ, ನೀವು JioPay UPI ಮೂಲಕ ಯಾರಿಗಾದರೂ ಸುಲಭವಾಗಿ ಪಾವತಿ ಮಾಡಬಹುದು.

ಈ ಫೋನ್​ನಲ್ಲಿ 2000mAh ನ ಶಕ್ತಿಶಾಲಿ ಬ್ಯಾಟರಿಯನ್ನು ಒದಗಿಸಲಾಗಿದೆ. Kai-OS ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ ಫೇಸ್‌ಬುಕ್, ಯೂಟ್ಯೂಬ್ ಮತ್ತು ಗೂಗಲ್ ವಾಯ್ಸ್ ಅಸಿಸ್ಟೆಂಟ್‌ಗೆ ಬೆಂಬಲವನ್ನು ಹೊಂದಿದೆ. ಇದಲ್ಲದೆ, ಈ ಫೀಚರ್ ಫೋನ್ ಜಿಯೋ ಟಿವಿ, ಜಿಯೋ ಸಾವನ್ ಮತ್ತು ಜಿಯೋ ಸಿನಿಮಾದಂತಹ ಅನೇಕ ಅಪ್ಲಿಕೇಶನ್‌ಗಳನ್ನು ಸಹ ಬೆಂಬಲಿಸುತ್ತದೆ.

ಜಿಯೋ ಫೋನ್ ಪ್ರೈಮಾ 2 4G ಬೆಲೆ

ಈ ಫೀಚರ್ ಫೋನ್‌ನ ಬೆಲೆ ಕೇವಲ 2,799 ರೂ. ಈ ಫೋನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಶೀಘ್ರದಲ್ಲೇ ಜಿಯೋ ಮಾರ್ಟ್, ರಿಲಯನ್ಸ್ ಡಿಜಿಟಲ್ ಮತ್ತು ಇತರ ಚಿಲ್ಲರೆ ವ್ಯಾಪಾರಿಗಳಲ್ಲಿ ಕೂಡ ಸೇಲ್ ಕಾಣಲಿದೆ.

mysore-dasara_Entry_Point