OnePlus 13: ಮುಂದಿನ ತಿಂಗಳು ಒನ್‌ಪ್ಲಸ್‌ 13 ಬಿಡುಗಡೆ, ಭಾರತದಲ್ಲಿ ಲಾಂಚ್‌ ಯಾವಾಗ? ಒನ್‌ಪ್ಲಸ್‌ 12ಗಿಂತ ಹೆಚ್ಚು ಬ್ಯಾಟರಿ ಪವರ್‌-technology news oneplus 13 launch in india oneplus flagship expected to make india debut details pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Oneplus 13: ಮುಂದಿನ ತಿಂಗಳು ಒನ್‌ಪ್ಲಸ್‌ 13 ಬಿಡುಗಡೆ, ಭಾರತದಲ್ಲಿ ಲಾಂಚ್‌ ಯಾವಾಗ? ಒನ್‌ಪ್ಲಸ್‌ 12ಗಿಂತ ಹೆಚ್ಚು ಬ್ಯಾಟರಿ ಪವರ್‌

OnePlus 13: ಮುಂದಿನ ತಿಂಗಳು ಒನ್‌ಪ್ಲಸ್‌ 13 ಬಿಡುಗಡೆ, ಭಾರತದಲ್ಲಿ ಲಾಂಚ್‌ ಯಾವಾಗ? ಒನ್‌ಪ್ಲಸ್‌ 12ಗಿಂತ ಹೆಚ್ಚು ಬ್ಯಾಟರಿ ಪವರ್‌

OnePlus 13 launch in India: ಅಕ್ಟೋಬರ್‌ ತಿಂಗಳಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಒನ್‌ಪ್ಲಸ್‌ 13 ಆಗಮಿಸಲಿದೆ. ಒನ್‌ಪ್ಲಸ್‌ 12ಗೆ ಹೋಲಿಸಿದರೆ ನೂತನ ಸ್ಮಾರ್ಟ್‌ಫೊನ್‌ನ ಬ್ಯಾಟರಿ ಸಾಮರ್ಥ್ಯ ಹೆಚ್ಚಿರಲಿದೆ. ಇದರೊಂದಿಗೆ ಸಾಕಷ್ಟು ಹೊಸತನವನ್ನು ಒನ್‌ಪ್ಲಸ್‌ 13ನಲ್ಲಿ ನಿರೀಕ್ಷಿಸಬಹುದು.

OnePlus 13: ಮುಂದಿನ ತಿಂಗಳು ಒನ್‌ಪ್ಲಸ್‌ 13 ಬಿಡುಗಡೆ, ಭಾರತದಲ್ಲಿ 
 2025ರ ಜನವರಿಯಲ್ಲಿ ಬಿಡುಗಡೆಯಾಗಲಿದೆ. (Image used for representative purpose only)
OnePlus 13: ಮುಂದಿನ ತಿಂಗಳು ಒನ್‌ಪ್ಲಸ್‌ 13 ಬಿಡುಗಡೆ, ಭಾರತದಲ್ಲಿ 2025ರ ಜನವರಿಯಲ್ಲಿ ಬಿಡುಗಡೆಯಾಗಲಿದೆ. (Image used for representative purpose only) (OnePlus)

OnePlus 13 launch in India: ಅಕ್ಟೋಬರ್‌ ತಿಂಗಳಲ್ಲಿ ಒನ್‌ಪ್ಲಸ್‌ 13 ಭಾರತದಲ್ಲಿ ಬಿಡುಗಡೆಯಾಗುವ ಸೂಚನೆ ದೊರಕಿದೆ. ಒನ್‌ಪ್ಲಸ್‌ ಚೀನಾದ ಅಧ್ಯಕ್ಷ ಲೂಯಿಸ್‌ ಲೀ ಮುಂಬರುವ ಒನ್‌ಪ್ಲಸ್‌ ಫ್ಲಾಗ್‌ಶಿಪ್‌ ಫೋನ್‌ ಆಗಮನದ ಕುರಿತು ಖಚಿತಪಡಿಸಿದ್ದಾರೆ. ಇದೇ ಸಮಯದಲ್ಲಿ ಒನ್‌ಪ್ಲಸ್‌ 13ನಲ್ಲಿ ಏನೆಲ್ಲ ಹೊಸ ಫೀಚರ್‌ಗಳು ಇರಲಿವೆ ಎಂದು ಚೀನಾದ ಸೋಷಿಯಲ್‌ ಮೀಡಿಯಾ ಫ್ಲಾಟ್‌ಫಾರ್ಮ್‌ ವೈಬೊದಲ್ಲಿ ಲೀಕ್‌ ಆಗಿದೆ. ಅಕ್ಟೋಬರ್‌ ತಿಂಗಳಲ್ಲಿ ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದಾದ ಬಳಿಕ ಭಾರತ ಸೇರಿದಂತೆ ಜಗತ್ತಿನ ಇತರೆ ಮಾರುಕಟ್ಟೆಗೂ ಆಗಮಿಸಲಿದೆ. ಭಾರತಕ್ಕೆ ಒನ್‌ಪ್ಲಸ್‌ 13 ಜನವರಿ 2025ರಲ್ಲಿ ಆಗಮಿಸಲಿದೆ.

ಒನ್‌ಪ್ಲಸ್‌ 13: ಸಾಕಷ್ಟು ಹೊಸ ಫೀಚರ್ಸ್‌ ನಿರೀಕ್ಷೆ

ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್‌ನಲ್ಲಿ ಬಿಒಇ ಎಕ್ಸ್‌2 ಡಿಸ್‌ಪ್ಲೇ ಇರಲಿದೆ. ಇದು 2ಕೆ ರೆಸಲ್ಯೂಷನ್‌ ಹೊಂದಿರಲಿದೆ ಎಂದು ವರದಿಗಳು ತಿಳಿಸಿವೆ. ಇದು 6.8 ಇಂಚಿನ 8ಟಿ ಎಲ್‌ಟಿಪಿಒ ಮೈಕ್ರೊ ಕರ್ವ್ಡ್‌ ಡಿಸ್‌ಪ್ಲೇ ಹೊಂದಿರಲಿದೆ. ಇದು ಆಲ್ಟ್ರಾಸೋನಿಕ್‌ ಇನ್‌ ಸ್ಕ್ರೀನ್‌ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ಹೊಂದಿರಲಿದೆ. ಇದರ ರಿಫ್ರೆಶ್‌ ರೇಟ್‌ 120Hz ಇರಲಿದೆ.

ಒನ್‌ಪ್ಲಸ್‌ 13ರಲ್ಲಿ ಕ್ವಾಲ್‌ಕಂ ನೆಕ್ಸ್ಟ್‌ ಜನರೇಷನ್‌ ಸ್ನ್ಯಾಪ್‌ಡ್ರ್ಯಾಗನ್‌ 8 ಜನರೇಷನ್‌ 4 ಎಸ್‌ಒಸಿ ಇರಲಿದೆ. ಇದರಲ್ಲಿ 16ಜಿಬಿ ರಾಮ್‌ ಇರುವ ಸಾಧ್ಯತೆ ಇದೆ. ಆಂಡ್ರಾಯ್ಡ್‌ 14 ಆಧರಿತ ಕಲರ್‌ಒಎಸ್‌15 ಇರುವ ಸಾಧ್ಯತೆ ಇದೆ.

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ ಫೋಟೋಗ್ರಫಿಗೆ ಫೇಮಸ್‌. ಇದರ ಕ್ಯಾಮೆರಾ ಅತ್ಯುತ್ತಮವಾಗಿರುತ್ತದೆ ಎಂದು ಸಾಕಷ್ಟು ಜನರು ಖರೀದಿಸುತ್ತಾರೆ. ನೂತನ ಒನ್‌ಪ್ಲಸ್‌ 13 ಕೂಡ ಕ್ಯಾಮೆರಾಪ್ರಿಯರಿಗೆ ಮೋಸಮ ಆಡದು. ಇದರಲ್ಲಿ ಎಲ್‌ವೈಟಿ 808 ಸೆನ್ಸಾರ್‌ ಮತ್ತು f/1.6 ಅಪಾರ್ಚರ್‌ನ ತ್ರಿಪಲ್‌ ಕ್ಯಾಮೆರಾ ಸೆಟಪ್‌ ಇರಲಿದೆ. ಇದೇ ರೀತಿಯ ಕ್ಯಾಮೆರಾ ಸೆಟಪ್‌ ಒನ್‌ಪ್ಲಸ್‌ 12ನಲ್ಲೂ ಇದೆ. ಹಿಂಬದಿ ಕ್ಯಾಮೆರವು 50 ಮೆಗಾಫಿಕ್ಸೆಲ್‌ನ ಅಲ್ಟ್ರಾವೈಡ್‌ ಲೆನ್ಸ್‌ ಮತ್ತು 50 ಮೆಗಾಫಿಕ್ಸೆಲ್‌ ಪೆರಿಸ್ಕೋಪ್‌ ಟೆಲಿಫೋಟೋ ಲೆನ್ಸ್‌ ಹೊಂದಿರಲಿದೆ.

ಒನ್‌ಪ್ಲಸ್‌ 12ಗೆ ಹೋಲಿಸಿದರೆ ಒನ್‌ಪ್ಲಸ್‌13ನ ಬ್ಯಾಟರಿ ಸಾಮರ್ಥ್ಯ ಗಮನಾರ್ಹವಾಗಿ ಬದಲಾಗಲಿದೆ ಎಂದು ವದಂತಿಗಳು ತಿಳಿಸಿವೆ. ಇದರಲ್ಲಿ 100ಡಬ್ಲ್ಯು ಕೇಬಲ್‌ ಚಾರ್ಜಿಂಗ್‌ ಮತ್ತು 50 ವ್ಯಾಟ್‌ ವೈರ್‌ಲೆಸ್‌ ಚಾರ್ಜಿಂಗ್‌ ಸಾಮರ್ಥ್ಯದ 6 ಸಾವಿರ ಎಂಎಎಚ್‌ ಬ್ಯಾಟರಿ ಇರುವ ನಿರೀಕ್ಷೆಯಿದೆ.

ಒನ್‌ಪ್ಲಸ್‌ 13 ಖರೀದಿಸಬೇಕೆಂದು ಭಾರತೀಯರು ಕಾಯುತ್ತಿದ್ದರೆ ಮುಂದಿನ ವರ್ಷದ ಜನವರಿಯವರೆಗೆ ಕಾಯಬೇಕು. ಚೀನಾದಲ್ಲಿ ಮುಂದಿನ ತಿಂಗಳು ಲಾಂಚ್‌ ಆಗಲಿದ್ದು, ಅದರ ಫೀಚರ್‌ಗಳು, ಸ್ಪೆಸಿಫಿಕೇಷನ್‌ಗಳ ಕುರಿತು ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ತಿಳಿಯಲಿದೆ.

mysore-dasara_Entry_Point