ಗ್ಯಾಲಕ್ಸಿ ಎಸ್24 ಅಲ್ಟ್ರಾ ಸ್ಮಾರ್ಟ್ ಫೋನ್ಗೆ ಅತ್ಯಾಕರ್ಷಕ ರಿಯಾಯಿತಿ ಬೆಲೆ ಘೋಷಿಸಿದ ಸ್ಯಾಮ್‌ಸಂಗ್; ಕಡಿಮೆಯಾಯ್ತು 20 ಸಾವಿರ
Samsung Galaxy S24 Ultra: ಗ್ಯಾಲಕ್ಸಿ ಎಸ್24 ಅಲ್ಟ್ರಾ ಸ್ಮಾರ್ಟ್ ಫೋನ್ಗೆ ಸೀಮಿತ ಅವಧಿಗೆ ಅತ್ಯಾಕರ್ಷಕ ರಿಯಾಯಿತಿ ಬೆಲೆಗೆ ಸ್ಯಾಮ್‌ಸಂಗ್ ಘೋಷಿಸಿದೆ. ಈಗ ಗ್ಯಾಲಕ್ಸಿ ಎಸ್24 ಅಲ್ಟ್ರಾದ ಹೊಸ ಆರಂಭಿಕ ಬೆಲೆ 1,09,999 ರೂಪಾಯಿ.
Samsung Galaxy S24 Ultra: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ಇಂದು (ಸೆಪ್ಟೆಂಬರ್ 16) ತನ್ನ ಪ್ರಮುಖ ಸ್ಮಾರ್ಟ್ ಫೋನ್ ಗ್ಯಾಲಕ್ಸಿ ಎಸ್24 ಅಲ್ಟ್ರಾಗೆ ಅತ್ಯಾಕರ್ಷಕ ರಿಯಾಯಿತಿ ಬೆಲೆಯನ್ನು ಘೋಷಿಸಿದೆ. ಇದೇ ತಿಂಗಳು ಸೆಪ್ಟೆಂಬರ್ 12ರಿಂದ ಈ ಸೀಮಿತ ಅವಧಿಯ ಆಫರ್ ಆರಂಭವಾಗಿದ್ದು, ಗ್ಯಾಲಕ್ಸಿ ಎಸ್24 ಅಲ್ಟ್ರಾ ಕೇವಲ 1,09,999 ರೂಪಾಯಿಗೆ ದೊರೆಯಲಿದೆ. ಆದರೆ ಸ್ಮಾರ್ಟ್‌ಫೋನ್‌ನ ಮೂಲ ಆರಂಭಿಕ ಬೆಲೆ 1,29,999 ರೂಪಾಯಿ. ಹೀಗಾಗಿ, 20,000 ರೂಪಾಯಿ ರಿಯಾಯಿತಿ ಘೋಷಿಸಲಾಗಿದೆ.
ಈ ವಿಶೇಷ ಬೆಲೆಯಲ್ಲಿ 8000 ರೂಪಾಯಿ ಇನ್ ಸ್ಟಾಂಟ್ ಕ್ಯಾಶ್ ಬ್ಯಾಕ್, 12,000ರ ಹೆಚ್ಚುವರಿ ಅಪ್‌ಗ್ರೇಡ್ ಬೋನಸ್ ಸಹ ಒಳಗೊಂಡಿರುತ್ತದೆ. ವಿಶೇಷವಾಗಿ ಗ್ರಾಹಕರು 24 ತಿಂಗಳವರೆಗಿನ ನೋ ಕಾಸ್ಟ್ ಇಎಂಐ ಸೌಲಭ್ಯವನ್ನೂ ಪಡೆಯಬಹುದಾಗಿದೆ. ಗ್ಯಾಲಕ್ಸಿ ಎಸ್24 ಅಲ್ಟ್ರಾ ಮೊಬೈಲ್ ಎಐಯ ಹೊಸ ಅಧ್ಯಾಯವನ್ನು ಆರಂಭಿಸಿದ್ದು, ಗ್ಯಾಲಕ್ಸಿ ಎಐ ಮೂಲಕ ಗ್ರಾಹಕರಿಗೆ ಹಲವಾರು ಕಾರ್ಯಗಳನ್ನು ಸುಲಭವಾಗಿ ಮಾಡಲು ಅನುವು ಮಾಡಿಕೊಡುತ್ತದೆ. ಗ್ಯಾಲಕ್ಸಿ ಎಸ್24 ಅಲ್ಟ್ರಾ ಫೋನ್ ಮೂಲಭೂತ ಪಾತ್ರವನ್ನು ಸೂಕ್ತವಾಗಿ ನಿರ್ವಹಿಸುತ್ತದೆ.
ನೋಟ್ ಅಸಿಸ್ಟ್ ಫೀಚರ್
ಸ್ಯಾಮ್‌ಸಂಗ್ ನೋಟ್ಸ್ನಲ್ಲಿ ನೋಟ್ ಅಸಿಸ್ಟ್ ಫೀಚರ್ ಮೂಲಕ ಬಳಕೆದಾರರು ಎಐ ಮೂಲಕ ರಚಿಸಲಾಗುವ ಸಾರಾಂಶಗಳನ್ನು ಹೊಂದಬಹುದು. ಪೂರ್ವ-ನಿರ್ಮಿತ ಸ್ವರೂಪಗಳಲ್ಲಿ ಟಿಪ್ಪಣಿಗಳನ್ನು ನೋಟ್ ಮಾಡಿಟ್ಟುಕೊಳ್ಳುವ ಟೆಂಪ್ಲೇಟ್ಗಳನ್ನು ರಚಿಸಬಹುದು. ಗ್ಯಾಲಕ್ಸಿ ಎಸ್24 ಅಲ್ಟ್ರಾ ಸ್ಮಾರ್ಟ್ ಫೋನ್ ಪ್ರೊ ವಿಶುವಲ್ ಎಂಜಿನ್ ಫೀಚರ್ ಹೊಂದಿದೆ. ಇದು ಎಐ ಆಧರಿತ ಸಾಧನಗಳ ಸಮಗ್ರ ಗುಂಪು ಆಗಿದ್ದು, ಫೋಟೋ ಸೆರೆಹಿಡಿಯುವ ರೀತಿಯನ್ನೇ ಬದಲಿಸಲಿದೆ. ಸೃಜನಶೀಲವಾಗಿ ಫೋಟೋ ಸಿದ್ಧಗೊಳಿಸಲು ಅನುವು ಮಾಡಿ ಕೊಡಲಿದೆ.
2x, 3x, 5x ನಿಂದ 10x ವರೆಗೆ ಜೂಮ್ ಮಟ್ಟಗಳನ್ನು ಹೊಂದಿಸಲು ನೆರವಾಗುವ 50 ಎಂಪಿ ಸೆನ್ಸರ್ ಮೂಲಕ ಕಾರ್ಯನಿರ್ವಹಿಸುವ 5x ಆಪ್ಟಿಕಲ್ ಜೂಮ್ ಲೆನ್ಸ್ ಹೊಂದಿರುವ ಕ್ವಾಡ್ ಟೆಲಿ ಸಿಸ್ಟಮ್ ಅನ್ನು ಗ್ಯಾಲಕ್ಸಿ ಎಸ್24 ಅಲ್ಟ್ರಾ ಹೊಂದಿದೆ. ಅಡಾಪ್ಟಿವ್ ಪಿಕ್ಸೆಲ್ ಸೆನ್ಸರ್ನಿಂದ ಇಂಥಾ ಸೌಲಭ್ಯ ಒದಗಿಸಿಸಲಾಗಿದೆ. ಹೆಚ್ಚಿನ ಡಿಜಿಟಲ್ ಜೂಮ್ ಮೂಲಕ 100x ನಷ್ಟು ಜೂಮ್ ಮಾಡಿದರೂ ಫೋಟೋ ಸ್ಫಟಿಕ ಸ್ಪಷ್ಟವಾಗಿ ಮೂಡಿ ಬರುತ್ತದೆ.
6.8 ಇಂಚಿನ ಫ್ಲಾಟ್ ಡಿಸ್ ಪ್ಲೇ
ಗ್ಯಾಲಕ್ಸಿ ಎಸ್24 ಅಲ್ಟ್ರಾ 6.8 ಇಂಚಿನ ಫ್ಲಾಟ್ ಡಿಸ್ ಪ್ಲೇ ಹೊಂದಿದೆ. ಈ ಡಿಸ್ ಪ್ಲೇಯನ್ನು ಕೇವಲ ವೀಕ್ಷಣೆಗೆ ಮಾತ್ರವಲ್ಲದೆ ಕಾರ್ಯನಿರ್ವಹಣೆ ಉದ್ದೇಶದಿಂದಲೂ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಗ್ಯಾಲಕ್ಸಿಗಾಗಿ ರೂಪುಗೊಳಿಸಿರುವ ಸ್ನ್ಯಾಪ್ ಡ್ರಾಗನ್ ® 8 ಜೆನ್ 3 ಮೊಬೈಲ್ ಪ್ಲಾಟ್‌ಫಾರ್ಮ್ ಅನ್ನು ಹೊಂದಿದ್ದು, ಇದು ಅತ್ಯಪೂರ್ವ ಎಐ ಪ್ರಕ್ರಿಯೆಯಗಳನ್ನು ಸಾಧ್ಯವಾಗಿಸುವ ಅದ್ಭುತ ಎನ್ಪಿಯು ಕಾರ್ಯನಿರ್ವಹಣೆ ಒದಗಿಸುತ್ತದೆ. ಗ್ಯಾಲಕ್ಸಿ ಎಸ್24 ಅಲ್ಟ್ರಾ 2600nits ನಷ್ಟು ಗರಿಷ್ಠ ಬ್ರೈಟ್ ನೆಸ್ ಅನ್ನು ಹೊಂದಿದೆ.
ಗ್ಯಾಲಕ್ಸಿ ಎಸ್24 ಅಲ್ಟ್ರಾ ನಲ್ಲಿರುವ ಕಾರ್ನಿಂಗ್ ಗೊರಿಲ್ಲಾ ಆರ್ಮರ್ ಅನ್ನು ಈ ಸ್ಮಾರ್ಟ್ ಫೋನ್ ಉತ್ತಮ ಬಾಳಿಕೆ ಬರಲು ದೃಗ್ವೈಜ್ಞಾನಿಕವಾಗಿ ರೂಪಿಸಲಾಗಿದೆ. ಈ ಮೂಲಕ ಅತಿ ಹೆಚ್ಚು ಬೆಳಕು ಇರುವ ಪರಿಸ್ಥಿತಿಗಳಲ್ಲಿಯೂ ಶೇಕಡಾ 75ರಷ್ಟು ಪ್ರತಿಫಲನವನ್ನು ಕಡಿಮೆ ಮಾಡುತ್ತದೆ. ಉತ್ತಮವಾಗಿ ಡಿಸ್ ಪ್ಲೇ ಕಾಣುವಂತೆ ಮಾಡುತ್ತದೆ. ಸುಗಮವಾದ, ಆರಾಮದಾಯಕವಾದ ವೀಕ್ಷಣೆಯ ಅನುಭವವನ್ನು ಒದಗಿಸುತ್ತದೆ. ಗ್ಯಾಲಕ್ಸಿ ಎಸ್24 ಅಲ್ಟ್ರಾ ಎಲ್ಲಾ ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ರಿಟೇಲ್ ಅಂಗಡಿಗಳಲ್ಲಿ ಲಭ್ಯವಿದೆ.