Realme P2 Pro 5G: ಹೊಸ ರಿಯಲ್‌ಮಿ ಪಿ2 ಪ್ರೊ 5ಜಿ ಹೇಗಿದೆ? 21999 ರೂನ ಸ್ಮಾರ್ಟ್‌ಫೋನ್‌ನಲ್ಲಿ ಬೊಂಬಾಟ್‌ ಫೀಚರ್ಸ್‌-technology news realme p2 pro 5g smartphone in india at 21999 early bird sale sept 17 on online store pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Realme P2 Pro 5g: ಹೊಸ ರಿಯಲ್‌ಮಿ ಪಿ2 ಪ್ರೊ 5ಜಿ ಹೇಗಿದೆ? 21999 ರೂನ ಸ್ಮಾರ್ಟ್‌ಫೋನ್‌ನಲ್ಲಿ ಬೊಂಬಾಟ್‌ ಫೀಚರ್ಸ್‌

Realme P2 Pro 5G: ಹೊಸ ರಿಯಲ್‌ಮಿ ಪಿ2 ಪ್ರೊ 5ಜಿ ಹೇಗಿದೆ? 21999 ರೂನ ಸ್ಮಾರ್ಟ್‌ಫೋನ್‌ನಲ್ಲಿ ಬೊಂಬಾಟ್‌ ಫೀಚರ್ಸ್‌

Realme P2 Pro 5G: ಭಾರತದಲ್ಲಿ ಇತ್ತೀಚೆಗೆ ರಿಯಲ್‌ಮಿ ಪಿ2 ಪ್ರೊ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದೆ. ಇದು ಸ್ನ್ಯಾಪ್‌ಡ್ರ್ಯಾಗನ್‌ 7 ಜೆನ್‌ 2 ಪ್ರೊಸೆಸರ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್ನ ಫೀಚರ್‌ಗಳು ಮತ್ತು ಅಪ್‌ಗ್ರೇಡ್‌ಗಳ ವಿವರ ಪಡೆಯೋಣ.

ಹೊಸ ರಿಯಲ್‌ಮಿ ಪಿ2 ಪ್ರೊ 5ಜಿ
ಹೊಸ ರಿಯಲ್‌ಮಿ ಪಿ2 ಪ್ರೊ 5ಜಿ (Realme)

Realme P2 Pro 5G: ದೇಶದ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಮಧ್ಯಮ ಶ್ರೇಣಿಯಲ್ಲಿ ಹೊಸ ಪಿ ಸರಣಿಯ ಸ್ಮಾರ್ಟ್‌ಫೋನ್‌ ಪರಿಚಯಿಸುವುದಾಗಿ ರಿಯಲ್‌ಮಿ ಈ ವರ್ಷದ ಆರಂಭದಲ್ಲಿ ಘೋಷಿಸಿತ್ತು. ಇದೀಗ ಕೆಲವು ತಿಂಗಳು ಕಳೆದಿವೆ. ಕಂಪನಿಯು ಎರಡನೇ ತಲೆಮಾರಿನ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ರಿಯಲ್‌ಮಿ ಪಿ2 ಪ್ರೊ 5ಜಿ ಮೂಲಕ ಯುವ ಜನರನ್ನು ಸೆಳೆಯಲು ಯತ್ನಿಸಿದೆ. ಇದೇ ಸಮಯದಲ್ಲಿ ಇದರ ದರವೂ 21999 ಇರುವುದರಿಂದ ಹೆಚ್ಚಿನ ಜನರಿಗೆ ಕೈಗೆಟುಕುವಂತೆ ಇದೆ.

ಹೊಸ ರಿಯಲ್‌ಮಿ ಪಿ2 ಪ್ರೊ 5ಜಿ ಹೇಗಿದೆ?

ಮೊದಲಿಗೆ ಈ ಸ್ಮಾರ್ಟ್‌ಫೋನ್‌ನ ಸ್ಪೆಸಿಫಿಕೇಷನ್‌ ಮತ್ತು ಫೀಚರ್ಸ್‌ ತಿಳಿಯೋಣ. ಇದು 6.7 ಇಂಚಿನ ಸ್ಯಾಮ್‌ಸಂಗ್‌ ಕರ್ವ್ಡ್‌ ಅಮೊಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್‌ರೇಟ್‌ ಮತ್ತು 2000ನಿಟ್ಸ್‌ ಪೀಕ್‌ ಬ್ರೇಟ್‌ನೆಸ್‌ ಹೊಂದಿದೆ. ಇದು ಸ್ನ್ಯಾಪ್‌ಡ್ರ್ಯಾಗನ್‌ 7ಎಸ್‌ ಜೆನ್‌ 2 5ಜಿ ಚಿಪ್‌ಸೆಟ್‌ ಹೊಂದಿದೆ. ಇದು 12 ಜಿಬಿ ರಾಮ್‌ ಮತ್ತು 512 ಜಿಬಿ ಆಂತರಿಕ ಸ್ಟೋರೇಜ್‌ ವ್ಯವಸ್ಥೆ ಹೊಂದಿದೆ. ಮಲ್ಟಿ ಟಾಸ್ಕಿಂಗ್‌ ಸಮಯದಲ್ಲಿ ಫೋನ್‌ ಅತಿಯಾಗಿ ಬಿಸಿಯಾಗುವುದನ್ನು ತಪ್ಪಿಸಲು ಈ ಸ್ಮಾರ್ಟ್‌ಫೋನ್‌ 9 ಲೇಯರ್‌ ಕೂಲಿಂಗ್‌ ಸಿಸ್ಟಮ್‌ ಹೊಂದಿದೆ.

ಇದರಲ್ಲಿ ಸಾಕಷ್ಟು ಆಕರ್ಷಕ ಫೀಚರ್‌ಗಳು ಇದ್ದು, ದೇಶದ ತರುಣ ತರುಣಿಯರ ಗಮನ ಸೆಳೆಯುತ್ತಿದೆ. ಇದು ಡ್ಯೂಯೆಲ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. 50 ಮೆಗಾಫಿಕ್ಸೆಲ್‌ನ ಮುಖ್ಯ ಕ್ಯಾಮೆರಾವು ಸೋನಿ ಎಲ್‌ವೈಟಿ 600 ಸೆನ್ಸಾರ್‌ ಹೊಂದಿದೆ. 8 ಮೆಗಾಫಿಕ್ಸೆಲ್‌ ಆಲ್ಟ್ರಾ ವೈಡ್‌ ಕ್ಯಾಮೆರಾವು ಒಐಎಸ್‌ ಸಪೋರ್ಟ್‌ ಹೊಂದಿದೆ. ಮುಂಭಾಗದಲ್ಲಿ 32 ಮೆಗಾಫಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಹೊಂದಿದೆ. ಎಐ ಆಲ್ಟ್ರಾ ಕ್ಲಾರಿಟಿ, ಎಐ ಸ್ಮಾರ್ಟ್‌ ರಿಮೂವಲ್‌, ಎಐ ಗ್ರೂಪ್‌ ಫೋಟೋ ಎನ್‌ಹ್ಯಾನ್ಸ್‌, ಎಐ ಆಡಿಯೋ ಝೂಮ್‌ ಮುಂತಾದ ಎಐ ಫೀಚರ್‌ಗಳನ್ನು ರಿಯಲ್‌ಮಿ ಪಿ2 ಪ್ರೊ 5ಜಿ ಹೊಂದಿದೆ.

ಈ ಸ್ಮಾರ್ಟ್‌ಫೋನ್‌ನಲ್ಲಿ 5200 ಎಂಎಎಚ್‌ ಬ್ಯಾಟರಿ ಹೊಂದಿದೆ. ಇದು 80 ವೋಲ್ಟೇಜ್‌ ಸೂಪರ್‌ವೋಕ್‌ ಫಾಸ್ಟ್‌ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ. ಆಂಡ್ರಾಯ್ಡ್‌ 14ಆಧರಿತ ರಿಯಲ್‌ ಯುಐ 5.0 ಆಪರೇಟಿಂಗ್‌ ಸಿಸ್ಟಮ್‌ ಇದರಲ್ಲಿದೆ.

ದರ ಮತ್ತು ಲಭ್ಯತೆ

ರಿಯಲ್‌ಮಿ ಪಿ2 ಪ್ರೊ 5ಜಿ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಪ್ಯಾರೇಟ್‌ ಗ್ರೀನ್‌ ಮತ್ತು ಈಗಲ್‌ ಗ್ರೇ ಬಣ್ಣಗಳಲ್ಲಿ ದೊರಕುತ್ತದೆ. ಇದರ ಆರಂಭಿಕ ದರ 21999 ರೂಪಾಯಿ ಇದೆ. ಅಂದರೆ 8 ಜಿಬಿ ರಾಮ್‌ ಮತ್ತು 128 ಜಿಬಿ ಸ್ಟೋರೇಜ್‌ ಆವೃತ್ತಿಗೆ 21999 ರೂ. ಇದೆ. ಇದೇ ಸಮಯದಲ್ಲಿ ಕಂಪನಿಯು 2000 ರೂಪಾಯಿ ಕೂಪನ್‌ ಸಹ ನೀಡುತ್ತಿದ್ದು, ಇದರಿಂದ ದರ ಇನ್ನಷ್ಟು ಕಡಿಮೆಯಾಗಿದೆ. Realme P2 Pro 5G ಅರ್ಲಿ ಬರ್ಡ್‌ ಗ್ರಾಹಕರಿಗೆ ಅಂದರೆ, ಸೆಪ್ಟೆಂಬರ್‌ 17ರಂದು ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯ ನಡುವೆ ಖರೀದಿಸುವವರಿಗೆ ಅರ್ಲಿ ಬರ್ಡ್‌ ಆಫರ್‌ ದೊರಕಲಿದೆ. ಫ್ಲಿಪ್‌ಕಾರ್ಟ್‌ ಅಥವಾ ರಿಯಲ್‌ಮಿ ಇಂಡಿಯಾ ಆನ್‌ಲೈನ್‌ ಅಂಗಡಿಗಳಲ್ಲಿ ಈ ಸ್ಮಾರ್ಟ್‌ಫೋನ್‌ ಖರೀದಿಸಬಹುದು.

mysore-dasara_Entry_Point