ಶವೋಮಿಯಿಂದ ದೀಪಾವಳಿ ಕೊಡುಗೆ: ರೆಡ್ಮಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿ-technology news xiaomi diwali sale 2024 offers on smartphones redmi note 13 pro plus and redmi note 13 pro vbt ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಶವೋಮಿಯಿಂದ ದೀಪಾವಳಿ ಕೊಡುಗೆ: ರೆಡ್ಮಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿ

ಶವೋಮಿಯಿಂದ ದೀಪಾವಳಿ ಕೊಡುಗೆ: ರೆಡ್ಮಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿ

ರೆಡ್ಮಿ ನೋಟ್ 13 ಪ್ರೊ ಪ್ಲಸ್ ಮತ್ತು ರೆಡ್ಮಿ ನೋಟ್ 13 ಪ್ರೊ ಬೆಲೆಗಳು ಭಾರಿ ಇಳಿಕೆ ಕಂಡಿವೆ. ಈಗಾಗಲೇ ಈ ಕೊಡುಗೆಗಳು ಅಧಿಕೃತ Mi ವೆಬ್‌ಸೈಟ್‌ನಲ್ಲಿ ಹಾಗೂ ಪ್ರಮುಖ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಮತ್ತು ಶವೋಮಿಯ ಚಿಲ್ಲರೆ ಪಾಲುದಾರರಲ್ಲಿ ಲಭ್ಯವಿದೆ.

ರೆಡ್ಮಿ ನೋಟ್ 13 ಪ್ರೊ ಪ್ಲಸ್ ಮತ್ತು ರೆಡ್ಮಿ ನೋಟ್ 13 ಪ್ರೊ ಬೆಲೆಗಳು ಭಾರಿ ಇಳಿಕೆ ಕಂಡಿವೆ.
ರೆಡ್ಮಿ ನೋಟ್ 13 ಪ್ರೊ ಪ್ಲಸ್ ಮತ್ತು ರೆಡ್ಮಿ ನೋಟ್ 13 ಪ್ರೊ ಬೆಲೆಗಳು ಭಾರಿ ಇಳಿಕೆ ಕಂಡಿವೆ.

ದಸರಾ ಮತ್ತು ದೀಪಾವಳಿ ಹಬ್ಬದ ಸೀಸನ್​ಗಳು ಶುರುವಾಗಿದೆ. ಮಾರುಕಟ್ಟೆಯಲ್ಲಿರುವ ಎಲ್ಲಾ ಕಂಪನಿಗಳು ಆಫರ್‌ಗಳ ಮೇಲೆ ಆಫರ್‌ಗಳನ್ನು ಘೋಷಿಸುತ್ತಿವೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಜೊತೆಗೆ ಆಫ್‌ಲೈನ್ ಸ್ಟೋರ್‌ಗಳು ಸಹ ಭಾರಿ ರಿಯಾಯಿತಿಗಳನ್ನು ನೀಡುತ್ತಿವೆ. ಅದರ ಭಾಗವಾಗಿ, ಪ್ರಸಿದ್ಧ ಸ್ಮಾರ್ಟ್​​ಫೋನ್ ಕಂಪನಿ ಶವೋಮಿ ಕೂಡ ಅದ್ಭುತ ಕೊಡುಗೆಗಳನ್ನು ಘೋಷಿಸಿದೆ. ಶವೋಮಿ ದೀಪಾವಳಿ ಸೇಲ್ 2024 ಹಮ್ಮಿಕೊಂಡಿದ್ದು, ಇದರಲ್ಲಿ ರೆಡ್ಮಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ

ರೆಡ್ಮಿ ನೋಟ್ 13 ಪ್ರೊ ಪ್ಲಸ್ ಮತ್ತು ರೆಡ್ಮಿ ನೋಟ್ 13 ಪ್ರೊ ಬೆಲೆಗಳು ಭಾರಿ ಇಳಿಕೆ ಕಂಡಿವೆ. ಈಗಾಗಲೇ ಈ ಕೊಡುಗೆಗಳು ಅಧಿಕೃತ Mi ವೆಬ್‌ಸೈಟ್‌ನಲ್ಲಿ ಹಾಗೂ ಪ್ರಮುಖ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಮತ್ತು ಶವೋಮಿಯ ಚಿಲ್ಲರೆ ಪಾಲುದಾರರಲ್ಲಿ ಲಭ್ಯವಿದೆ. ಬೆಲೆಯ ರಿಯಾಯಿತಿಗಳ ಜೊತೆಗೆ, ಬಳಕೆದಾರರು ರೆಡ್ಮಿ ನೋಟ್ 13 ಪ್ರೊ ಮತ್ತು ರೆಡ್ಮಿ ನೋಟ್ 13 ಪ್ರೊ ಪ್ಲಸ್ ಫೋನ್‌ಗಳಲ್ಲಿ ಬ್ಯಾಂಕ್ ಕೊಡುಗೆಗಳು ಮತ್ತು EMI ಆಯ್ಕೆಗಳನ್ನು ಸಹ ಪಡೆಯಬಹುದು.

ರೆಡ್ಮಿ ನೋಟ್ 13 ಪ್ರೊ 5G ಬೆಲೆ, ಕೊಡುಗೆಗಳು

ರೆಡ್ಮಿ ನೋಟ್ 13 ಪ್ರೊ 5G ಅನ್ನು ಬಿಡುಗಡೆ ಮಾಡಿದಾಗ, ಅದರ ಬೆಲೆ ರೂ. 24,999. ಈಗ ಶವೋಮಿ ಘೋಷಿಸಿದ ಈ ದೀಪಾವಳಿ ಮಾರಾಟ 2024 ರಲ್ಲಿ ಇದು ಕೇವಲ 19,999 ರೂ. ಗೆ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಬರೋಬ್ಬರಿ 200MP ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. 6.67 ಇಂಚಿನ AMOLED ಡಿಸ್​ಪ್ಲೇ, 5,100mAh ಬ್ಯಾಟರಿ ಕೂಡ ಇದೆ.

ಬೆಲೆಯ ವಿವರ: 8GB RAM, 128GB ಸ್ಟೋರೇಜ್ ರೂಪಾಂತರದ ಮೂಲ ಬೆಲೆ ರೂ. 24,999, ಶವೋಮಿ ದೀಪಾವಳಿ ಮಾರಾಟದ ಸಮಯದಲ್ಲಿ ರಿಯಾಯಿತಿಗಳು ಮತ್ತು ಬ್ಯಾಂಕ್ ಕೊಡುಗೆಗಳೊಂದಿಗೆ 19,999 ಕ್ಕೆ ಲಭ್ಯವಿದೆ.

8GB RAM, 256GB ಸ್ಟೋರೇಜ್ ರೂಪಾಂತರದ ಮೂಲ ಬೆಲೆ ರೂ. 26,999, ಶವೋಮಿ ದೀಪಾವಳಿ ಮಾರಾಟದ ಸಮಯದಲ್ಲಿ ರಿಯಾಯಿತಿಗಳು ಮತ್ತು ಬ್ಯಾಂಕ್ ಕೊಡುಗೆಗಳೊಂದಿಗೆ 21,999 ಕ್ಕೆ ಲಭ್ಯವಿದೆ.

12GB RAM, 256GB ಸ್ಟೋರೇಜ್ ರೂಪಾಂತರದ ಮೂಲ ಬೆಲೆ ರೂ. 28,999, ಶವೋಮಿ ದೀಪಾವಳಿ ಮಾರಾಟದ ಸಮಯದಲ್ಲಿ ರಿಯಾಯಿತಿಗಳು ಮತ್ತು ಬ್ಯಾಂಕ್ ಕೊಡುಗೆಗಳೊಂದಿಗೆ 22,999 ಗೆ ಲಭ್ಯವಿದೆ.

ರೆಡ್ಮಿ ನೋಟ್ 13 ಪ್ರೊ ಪ್ಲಸ್ ಬೆಲೆ, ಕೊಡುಗೆಗಳು

ರೆಡ್ಮಿ ನೋಟ್ 13 ಪ್ರೊ ಪ್ಲಸ್ ಬೆಲೆ ಈ ಹಿಂದೆ ರೂ. 30,999 ಇತ್ತು. ಇದೀಗ ಡಿಸ್ಕೌಂಟ್ ಭಾಗವಾಗಿ, ಈ ಫೋನ್ ಕೇವಲ 24,999 ರೂ. ಗೆ ಲಭ್ಯವಿದೆ. ವಿಶಿಷ್ಟವಾದ ವಿನ್ಯಾಸದೊಂದಿಗೆ ಬರುವ ಈ ಫೋನ್ ಬಾಗಿದ AMOLED ಡಿಸ್​ಪ್ಲೇ ಹೊಂದಿದೆ. ಇದು ಕೂಡ 200MP ಪ್ರಾಥಮಿಕ ಕ್ಯಾಮೆರಾ ಹೊಂದಿದೆ. IP68 ಪ್ರಮಾಣೀಕರಣ ಮತ್ತು 120W ವೇಗದ ಚಾರ್ಜಿಂಗ್ ಬೆಂಬಲವಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 7200 ಅಲ್ಟ್ರಾ ಚಿಪ್ ಸೆಟ್‌ನೊಂದಿಗೆ ಬರುತ್ತದೆ. 5000mAh ಬ್ಯಾಟರಿ ಇದೆ.

ಬೆಲೆಯ ವಿವರ: 8GB RAM, 256GB ಸ್ಟೋರೇಜ್ ರೂಪಾಂತರದ ಮೂಲ ಬೆಲೆ ರೂ. 30,999, ಶವೋಮಿ ದೀಪಾವಳಿ ಮಾರಾಟದ ಸಮಯದಲ್ಲಿ ರಿಯಾಯಿತಿಗಳು ಮತ್ತು ಬ್ಯಾಂಕ್ ಕೊಡುಗೆಗಳೊಂದಿಗೆ 24,999 ಕ್ಕೆ ಲಭ್ಯವಿದೆ.

12GB RAM, 256GB ಸ್ಟೋರೇಜ್ ರೂಪಾಂತರದ ಮೂಲ ಬೆಲೆ ರೂ. 32,999, ಶವೋಮಿ ದೀಪಾವಳಿ ಮಾರಾಟದ ಸಮಯದಲ್ಲಿ ರಿಯಾಯಿತಿಗಳು ಮತ್ತು ಬ್ಯಾಂಕ್ ಕೊಡುಗೆಗಳೊಂದಿಗೆ 26,999 ಗೆ ಲಭ್ಯವಿದೆ.

12GB RAM, 512GB ಸ್ಟೋರೇಜ್ ರೂಪಾಂತರದ ಮೂಲ ಬೆಲೆ ರೂ. 34,999, ಶವೋಮಿ ದೀಪಾವಳಿ ಮಾರಾಟದ ಸಮಯದಲ್ಲಿ ರಿಯಾಯಿತಿಗಳು ಮತ್ತು ಬ್ಯಾಂಕ್ ಕೊಡುಗೆಗಳೊಂದಿಗೆ 28,999 ಕ್ಕೆ ಲಭ್ಯವಿದೆ.

mysore-dasara_Entry_Point