WhatsApp Scam: ವಾಟ್ಸ್‌ಆಪ್‌ ಸ್ಕ್ರೀನ್‌ ಶೇರ್‌ ಮಾಡುವ ಮೊದಲು ಯೋಚಿಸಿ; ನಿಮ್ಮ ಬ್ಯಾಂಕ್‌ ಖಾತೆಗಳು ಕ್ಷಣಾರ್ಧದಲ್ಲಿ ಬರಿದಾಗಬಹುದು
ಕನ್ನಡ ಸುದ್ದಿ  /  ಜೀವನಶೈಲಿ  /  Whatsapp Scam: ವಾಟ್ಸ್‌ಆಪ್‌ ಸ್ಕ್ರೀನ್‌ ಶೇರ್‌ ಮಾಡುವ ಮೊದಲು ಯೋಚಿಸಿ; ನಿಮ್ಮ ಬ್ಯಾಂಕ್‌ ಖಾತೆಗಳು ಕ್ಷಣಾರ್ಧದಲ್ಲಿ ಬರಿದಾಗಬಹುದು

WhatsApp Scam: ವಾಟ್ಸ್‌ಆಪ್‌ ಸ್ಕ್ರೀನ್‌ ಶೇರ್‌ ಮಾಡುವ ಮೊದಲು ಯೋಚಿಸಿ; ನಿಮ್ಮ ಬ್ಯಾಂಕ್‌ ಖಾತೆಗಳು ಕ್ಷಣಾರ್ಧದಲ್ಲಿ ಬರಿದಾಗಬಹುದು

ಹೊಸ ಹೊಸ ಸೈಬರ್‌ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿವೆ. ಅದರಲ್ಲಿ ವಾಟ್ಸ್‌ಆಪ್‌ ಸ್ಕ್ರೀನ್‌ ಶೇರ್‌ ವಂಚನೆಗಳೂ ಸೇರಿವೆ. ನೀವು ವಾಟ್ಸ್‌ಆಪ್‌ ಸ್ಕ್ರೀನ್‌ ಶೇರ್‌ ಮಾಡಿದ್ರೆ ಹಣ ಕಳೆದುಕೊಳ್ಳುವುದು ಪಕ್ಕಾ. ಹಾಗಾದ್ರೆ ಇದರಿಂದ ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದಕ್ಕೆ ಇಲ್ಲಿದೆ ಒಂದಿಷ್ಟು ಸಲಹೆ.

ವಾಟ್ಸ್‌ಆಪ್‌ ಸ್ಕ್ರೀನ್‌ ಶೇರ್‌ ವಂಚನೆಗಳು
ವಾಟ್ಸ್‌ಆಪ್‌ ಸ್ಕ್ರೀನ್‌ ಶೇರ್‌ ವಂಚನೆಗಳು (HT File Photo)

ಇಂದಿನ ಡಿಜಿಟಲ್‌ ಯುಗದಲ್ಲಿ ವಾಟ್ಸ್‌ಆಪ್‌, ನಮ್ಮೆಲ್ಲರ ಜೀವನದ ಕೇಂದ್ರಬಿಂದುವಾಗಿದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಸುಲಭದ ಸಾಧನವಾಗಿದೆ. ಫೋಟೋ ಮತ್ತು ಅಗತ್ಯ ಮಾಹಿತಿಗಳನ್ನು ಶೇರ್‌ ಮಾಡಲು, ಹಣ ಪಾವತಿಸಲು, ಮುಂತಾದವುಗಳಿಗೆ ವಾಟ್ಸ್‌ಆಪ್‌ ಅನ್ನೇ ಎಲ್ಲರೂ ನಂಬಿಕೊಂಡಿದ್ದಾರೆ. ಹಾಗಾಗಿ ವಾಟ್ಸ್‌ಆಪ್‌ ಮುಖಾಂತರವೂ ಸೈಬರ್‌ ಅಪರಾಧಗಳು ನಡೆಯುತ್ತಿವೆ. ಬಳಕೆದಾರರಿಂದ ಲಾಭ ಪಡೆದು ಹಣ ವಂಚನೆಯಂತಹ ಕೆಲಸಗಳನ್ನು ಕಿಡಿಗೇಡಿಗಳು ಮಾಡುತ್ತಿದ್ದಾರೆ. ಇವುಗಳಲ್ಲಿ ಹೊಸ ಬೆಳವಣಿಗೆ ಎಂದರೆ ವಾಟ್ಸ್‌ಆಪ್‌ ಸ್ಕ್ರೀನ್‌ ಶೇರ್‌ ಹಗರಣಗಳು.

ಎಲ್ಲರಿಗೂ ತಿಳಿದಿರುವಂತೆ ಹಣ ವರ್ಗಾವಣೆ ಮಾಡಲು ಒಟಿಪಿ (ಒನ್‌ ಟೈಮ್‌ ಪಾಸ್‌ವರ್ಡ್‌) ಅವಶ್ಯಕತೆಯಿರುತ್ತದೆ. ವಿವಿಧ ಆನ್‌ಲೈನ್‌ ಸೇವೆಗಳ ನಿಯಂತ್ರಣವನ್ನು ತೆಗೆದುಕೊಳ್ಳಲು ಬಳಸಲಾಗುತ್ತದೆ. ಸಾಮಾನ್ಯವಾಗಿ ಡಿಜಿಟಲ್‌ ಸ್ಕ್ಯಾಮ್‌ಗಳು ಒಟಿಪಿಯನ್ನು ವಂಚಕರೊಂದಿಗೆ ಹಂಚಿಕೊಳ್ಳುವ ಮೂಲಕವೇ ನಡೆಯುತ್ತದೆ. ಸೈಬರ್‌ ಅಪರಾಧಿಗಳು ವಿನಂತಿಸಿದ ಸ್ಕ್ರೀನ್‌ ಶೇರ್‌ ಆಯ್ಕೆಯನ್ನು ಸಕ್ರೀಯಗೊಳಿಸುವುದರ ಮೂಲಕ ಅವರ ಬಲಿಪಶುಗಳಾಗುತ್ತಾರೆ. ಒಮ್ಮೆ ಸಕ್ರೀಯಗೊಳಿಸಿದರೆ ಸಾಕು, ದುಷ್ಕರ್ಮಿಗಳು ನಿಮ್ಮ ಸ್ಮಾರ್ಟ್‌ಫೋನ್‌ಗೆ ಸುಲಭವಾಗಿ ಪ್ರವೇಶ ಪಡೆದುಕೊಳ್ಳುತ್ತಾರೆ. ಒಮ್ಮೆ ನಿಮ್ಮ ಸ್ಮಾರ್ಟ್‌ಫೋನ್‌ಗೆ ಅವರು ಪ್ರವೇಸಿದರೆ ಸಾಕು, ನಂತರ ಒಟಿಪಿ ಒಳಗೊಂಡ ಸಂದೇಶಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಹೀಗೆ ವಂಚನೆ ನಡೆಸುತ್ತಾರೆ.

ಇದನ್ನೂ ಓದಿ: E vehicle booking: ಕರ್ನಾಟಕದಲ್ಲಿ ಎಲೆಕ್ಟ್ರಿಕ್‌ ವಾಹನ ನೋಂದಣಿ ಹೆಚ್ಚಳ: ದಿನಕ್ಕೆ ಎಷ್ಟು ಇ ವಾಹನ ನೋಂದಣಿಯಾಗಬಹುದು

ಈ ವಾಟ್ಸ್‌ಆಪ್‌ ಸ್ಕ್ರೀನ್‌ ಶೇರ್‌ನಿಂದಾಗಿ ಜನರು ತಾವು ಕಷ್ಟಪಟ್ಟು ದುಡಿದ ಹಣವನ್ನು ಕಳೆದುಕೊಂಡ ಹಲವಾರು ವರದಿಗಳು ಆಗಿವೆ. ಇದಿಷ್ಟೇ ಅಲ್ಲ, ಜನರು ತಮ್ಮ ಸ್ವಂತ ಸೊಷಿಯಲ್‌ ಮೀಡಿಯಾ ಖಾತೆಗಳಿಂದ ಲಾಕ್‌ ಔಟ್‌ ಆಗುತ್ತಿದ್ದಾರೆ. ಹೇಗೆಂದರೆ ವೈಶಿಷ್ಟ್ಯಗಳನ್ನು ಬಳಸಿಕೊಂಡು ಪಾಸ್‌ವರ್ಡ್‌ ಬದಲಾಯಿಸಬಹುದು ಅಥವಾ ತಿರುಚಹುದು. ಒಮ್ಮೆ ನೀವು ಸ್ಕ್ರೀನ್‌ ಶೇರ್‌ ಸಕ್ರೀಯಗೊಳಿಸಿದರೆ ಸ್ಕ್ಯಾಮರ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ಗೆ ರಿಯಲ್‌–ಟೈಮ್‌ನಲ್ಲೇ ಪ್ರವೇಶಪಡೆದುಕೊಳ್ಳುತ್ತಾರೆ. ಇದರಿಂದ ನಿಮಗೆ ಬರುವ ಸಂದೇಶಗಳನ್ನು ಮತ್ತು ಒಟಪಿಗಳನ್ನು ಸುಲಭವಾಗಿ ಅವರು ಓದಬಹುದು. ಈ ರೀತಿಯಾಗಿ ಸೈಬರ್‌ ವಂಚನೆ ಪ್ರಾರಂಭವಾಗುತ್ತದೆ. ಸ್ಕ್ರೀನ‌್ ಮಿರರಿಂಗ್‌ ವಂಚನೆಗಳು ಹೊಸದಲ್ಲ, ಆದರೆ ಈಗ ಪ್ರಕರಣಗಳ ಸಂಖ್ಯೆ ಗಗನಕ್ಕೇರಿದೆ.

ವಾಟ್ಸ್‌ಆಪ್‌ ಹಗರಣದಿಂದ ಸುರಕ್ಷಿತವಾಗಿರುವುದು ಹೇಗೆ?

– ವಾಟ್ಸ್‌ಆಪ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ಬರುವ ಧ್ವನಿ ಅಥವಾ ವೀಡಿಯೊ ಕರೆಗಳನ್ನು ಎಂದಿಗೂ ಸ್ವೀಕರಿಸಬೇಡಿ.

– ನಿಮ್ಮ ಕ್ರೆಡಿಟ್‌ / ಡೆಬಿಟ್‌ ಕಾರ್ಡ್‌ ಸಂಖ್ಯೆಯನ್ನು ಎಂದಿಗೂ ಹಂಚಿಕೊಳ್ಳಬೇಡಿ.

– ಒಟಿಪಿ (OTP) ಮತ್ತು ಕಾರ್ಡ್‌ ವೆರಿಫಿಕೇಷನ್‌ ವೆಲ್ಯೂ (CVV) ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ.

– ಪಾಸ್‌ವರ್ಡ್‌ ಅನ್ನು ಎಂದಿಗೂ ಬಹಿರಂಗಪಡಿಸಬೇಡಿ.

– ನಿಮಗೆ ಖಚಿತವಾಗದ ಹೊರತು ಅಂದರೆ ನಿಮ್ಮ ಪರಿಚಯದವರ ಹೊರತು ಯಾರೊಂದಿಗೂ ಸ್ಕ್ರೀನ್‌ ಹಂಚಿಕೆ (ಸ್ಕ್ರೀನ್‌ ಶೇರಿಂಗ್‌)ವಿನಂತಿಗಳನ್ನು ಸ್ವೀಕರಿಸಬೇಡಿ.

– ಸ್ಕ್ರೀನ್‌ ಶೇರಿಂಗ್‌ ಆಯ್ಕೆಯನ್ನು ಸಕ್ರೀಯಗೊಳಿಸದಿರುವುದನ್ನು ಖಚಿತಪಡಿಸಿಕೊಳ್ಳಿ.

Whats_app_banner