Brain Teaser: 7=42, 5=20 ಆದ್ರೆ 3= ಎಷ್ಟು? ಕ್ಯಾಲ್ಕುಲೆಟರ್ ಬಳಸದೇ ಉತ್ತರ ಹೇಳಿ, ನೀವೆಷ್ಟು ಜಾಣರು ನೋಡೋಣ
ಗಣಿತದ ಪಜಲ್ ಇರುವ ಬ್ರೈನ್ ಟೀಸರ್‌ವೊಂದು ಇಲ್ಲಿದೆ. ಇದು ಸುಲಭ ಗಣಿತವೇ ಆದ್ರೂ ಕೂಡ ಉತ್ತರ ಕಂಡುಕೊಳ್ಳುವುದು ನಿಮಗೆ ಸವಾಲು ಎನ್ನಿಸಬಹುದು. ಈ ಬ್ರೈನ್ ಟೀಸರ್‌ಗೆ ಉತ್ತರವೇನು ಹೇಳಿ? ನಿಮಗಿದು ಹೊಸ ಚಾಲೆಂಜ್.
ಬಿರುಬೇಸಿಗೆಯ ನಡುವೆ ಕೆಲಸ ಮಾಡುವುದು ನಿಜಕ್ಕೂ ಬೇಸರವೇ. ಇದರಿಂದ ಸಿಕ್ಕಾಪಟ್ಟೆ ಬೋರ್ ಅನ್ನಿಸ್ತಾ ಇದ್ಯಾ? ಮೆದುಳು ಚುರುಕಾಗಿ ಓಡ್ತಾ ಇಲ್ವಾ? ಹಾಗಾದ್ರೆ ನೀವು ಈ ಕೆಲಸ ಮಾಡಿ. ಯಾವ ಕೆಲಸ? ಅಂತ ಪ್ರಶ್ನೆ ಕೇಳ್ತೀರಾ? ನಾವು ಹೇಳ್ತೀವಿ ನೋಡಿ. ನಾವು ನಿಮ್ಮ ಮೆದುಳನ್ನು ಚುರುಕು ಮಾಡುವ ಸಲುವಾಗಿ ದಿನಕ್ಕೊಂದು ಬ್ರೈನ್ ಟೀಸರ್‌ಗಳನ್ನು ಪ್ರಕಟ ಮಾಡುತ್ತೇವೆ. ಇದಕ್ಕೆ ಉತ್ತರ ಹುಡುಕುವುದರಿಂದ ನಿಮ್ಮ ಮೆದುಳು ಚುರುಕಾಗುವುದು ಮಾತ್ರವಲ್ಲ, ಒಂದಿಷ್ಟು ಹೊತ್ತು ಮೋಜು ಸಿಗುತ್ತದೆ. ಇದು ನಿಮ್ಮ ಮೆದುಳನ್ನು ಕ್ರಿಯೇಟಿವ್ ಆಗಿ ಯೋಚಿಸುವಂತೆ ಮಾಡುವುದು ಸುಳ್ಳಲ್ಲ. ಇಲ್ಲೊಂದು ಅಂಥದ್ದೇ ಬ್ರೈನ್ ಟೀಸರ್ ಇದೆ. ಇದು ಮೇಲ್ನೋಟಕ್ಕೆ ಸುಲಭ ಎಂದು ಕಂಡರೂ ಉತ್ತರ ಹುಡುಕಲು ಹೊರಟಾಗ ಸವಾಲು ಎನ್ನಿಸುತ್ತದೆ. ಸರಿ ಅದೇನೆ ಇರಲಿ, ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಕೊಳ್ಳಲು ನಿಮ್ಮಿಂದ ಸಾಧ್ಯವೇ? ಟ್ರೈ ಮಾಡಿ. ಸಾಧ್ಯ ಎಂದಾದರೆ ಕೇವಲ 30 ಸೆಕೆಂಡ್‌ನಲ್ಲಿ ಇದಕ್ಕೆ ಉತ್ತರ ಕಂಡುಕೊಳ್ಳಬೇಕು.
Math Quiz, Game and Puzzles ಎಂಬ ಇನ್‌ಸ್ಟಾಗ್ರಾಂ ಪುಟದಲ್ಲಿ ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಲಾಗಿದೆ. ಈ ಪುಟದಲ್ಲಿ ಹಲವು ಬ್ರೈನ್ ಟೀಸರ್‌ಗಳನ್ನು ಪೋಸ್ಟ್ ಮಾಡಲಾಗಿದೆ. ಇಲ್ಲಿರುವ ಮ್ಯಾಥ್ಸ್ ಪಜಲ್‌ನಲ್ಲಿ ಒಂದು ವೇಳೆ 7=42, 6=30, 5=20 ಆದ್ರೆ 3= ಎಷ್ಟಾಗುತ್ತೆ? ಉತ್ತರ ಹೇಳಿ. ನಿಮ್ಮ ಸಮಯ ಈಗ ಶುರು.
ಕೆಲವು ದಿನಗಳ ಹಿಂದೆ ಈ ಬ್ರೈನ್ ಟೀಸರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಹಲವರು ಲೈಕ್ ಕಾಮೆಂಟ್ ಮಾಡಿದ್ದಾರೆ.
ಕಾಮೆಂಟ್‌ಗಳು ಹೀಗಿದೆ
6×7=42,,5×6=30,,,4×5=20,,3×4=12,,2×3=6." ಎಂದು ವ್ಯಕ್ತಿಯೊಬ್ಬರು ಈ ಸೂತ್ರವನ್ನು ಬಿಡಿಸಿ ಉತ್ತರ ಹೇಳಿದ್ದಾರೆ.
ʼಉತ್ತರ 9. ಯಾಕೆಂದರೆ 7*6=42, 6*5=30, 5*4=20, So 3*3=9ʼ ಎಂದು ಎರಡನೇ ವ್ಯಕ್ತಿ ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. "7*6=42, 6*5=30, 5*4=20, 3*3=9" ಎಂದು ಮೂರನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.
ಹಲವರು ಈ ಬ್ರೈನ್ ಟೀಸರ್‌ಗೆ 6 ಎಂದು ಉತ್ತರ ಹೇಳಿದ್ದಾರೆ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಎ+ಎ=4, -2ಬಿ +3ಎ = ಎಷ್ಟು? ಗಣಿತದಲ್ಲಿ ಶಾರ್ಪ್ ಇದ್ರೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಇನ್‌ಸ್ಟಾಗ್ರಾಂ ಹಾಗೂ ಎಕ್ಸ್‌ನಲ್ಲಿ ಮ್ಯಾಥ್ಸ್ ಪಜಲ್‌ಗಳನ್ನು ಪೋಸ್ಟ್ ಮಾಡುವ ಕೆಲವು ಪುಟಗಳಿವೆ. ಅಲ್ಲಿ ದಿನಕ್ಕೊಂದು ಗಣಿತ ಪಜಲ್‌ಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇಲ್ಲೊಂದು ಹೊಸ ಗಣಿತದ ಪಜಲ್ ಇದೆ. ಗಣಿತದಲ್ಲಿ ನೀವು ಶಾರ್ಪ್ ಇರೋದು ನಿಜ ಆದ್ರೆ 20 ಸೆಕೆಂಡ್‌ನಲ್ಲಿ ಈ ಪ್ರಶ್ನೆಗೆ ಉತ್ತರ ಹೇಳಬೇಕು.
Brain Teaser: 11+11=4, 12+12=6 ಹಾಗಾದ್ರೆ 14+14= ಎಷ್ಟು? 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗಿದು ಚಾಲೆಂಜ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇದೇನು ಮಹಾ ಲೆಕ್ಕ ಎಂದು ಅನ್ನಿಸಿದ್ರೂ ಉತ್ತರ ಹುಡುಕೋಕೆ ಹೊರಟರೆ ತಲೆ ಕೆಡೋದು ಖಂಡಿತ. ಅದೆಲ್ಲಾ ಇರ್ಲಿ 11+11=4 ಆದ್ರೆ, 14+14=? ಇದಕ್ಕೆ ಉತ್ತರ ಹೇಳಿ.