Brain Teaser: ಎ+ಎ=4, -2ಬಿ +3ಎ = ಎಷ್ಟು? ಗಣಿತದಲ್ಲಿ ಶಾರ್ಪ್ ಇದ್ರೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಇನ್‌ಸ್ಟಾಗ್ರಾಂ ಹಾಗೂ ಎಕ್ಸ್‌ನಲ್ಲಿ ಮ್ಯಾಥ್ಸ್ ಪಜಲ್‌ಗಳನ್ನು ಪೋಸ್ಟ್ ಮಾಡುವ ಕೆಲವು ಪುಟಗಳಿವೆ. ಅಲ್ಲಿ ದಿನಕ್ಕೊಂದು ಗಣಿತ ಪಜಲ್‌ಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇಲ್ಲೊಂದು ಹೊಸ ಗಣಿತದ ಪಜಲ್ ಇದೆ. ಗಣಿತದಲ್ಲಿ ನೀವು ಶಾರ್ಪ್ ಇರೋದು ನಿಜ ಆದ್ರೆ 20 ಸೆಕೆಂಡ್‌ನಲ್ಲಿ ಈ ಪ್ರಶ್ನೆಗೆ ಉತ್ತರ ಹೇಳಬೇಕು.
ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಬ್ರೈನ್ ಟೀಸರ್‌ವೊಂದು ನೆಟ್ಟಿಗರ ತಲೆ ಕೆಡಿಸುತ್ತಿದೆ. ಇಲ್ಲೊಂದು ಗಣಿತದ ಪಜಲ್‌ಗೆ ಇದೆ. ಇದು ಸುಲಭವಾಗಿ ಕಂಡರೂ ಉತ್ತರ ಹೇಳಲು ನೀವು ಕ್ಯಾಲ್ಕುಲೇಟರ್ ಬಳಸವಂತಿಲ್ಲ. ಕೇವಲ 20 ಸೆಕೆಂಡ್‌ನಲ್ಲಿ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಬೇಕು. ಗಣಿತದಲ್ಲಿ ನೀವು ಪಂಟರಾದ್ರೆ ಇದಕ್ಕೆ ಉತ್ತರ ಹೇಳುವುದು ಕಷ್ಟವೇನಲ್ಲ. ಹಾಗಾದರೆ ಸರಿ ಈ ಬ್ರೈನ್ ಟೀಸರ್‌ನಲ್ಲಿ ಏನಿದೆ ಗಮನಿಸಿ.
@ezdailyquiz ಎಂಬ ಎಕ್ಸ್ ಪುಟದಲ್ಲಿ ಪೋಸ್ಟ್ ಮಾಡಲಾದ ಬ್ರೈನ್ ಟೀಸರ್ ಇದಾಗಿದೆ. ಇಂದಿನ ಸುಲಭ ಪ್ರಶ್ನೆಗೆ ನಿಮ್ಮ ಉತ್ತರವೇನು? ಎಂದು ಬರೆಯುವ ಜೊತೆಗೆ ಕ್ಯಾಲ್ಕುಲೇಟರ್ ಇಲ್ಲದೇ ಲೆಕ್ಕಾಚಾರ ಮಾಡಿ ಎಂದು ಶೀರ್ಷಿಕೆ ಬರೆದುಕೊಂಡು ಶೇರ್ ಮಾಡಲಾಗಿದೆ. ಇದರಲ್ಲಿರುವ ಪ್ರಶ್ನೆ ಹೀಗಿದೆ ʼಎ+ಎ=4, ಬಿ+ಬಿ = 5, ಆದರೆ -2ಬಿ + 3ಎ = ಎಷ್ಟು?.
ಏಪ್ರಿಲ್ 23 ರಂದು ಈ ಗಣಿತದ ಪಜಲ್ ಅನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ಇಲ್ಲಿಯವರೆಗೆ ಈ ಪೋಸ್ಟ್ ಅನ್ನು 2000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 50ಕ್ಕೂ ಹೆಚ್ಚು ಮಂದಿ ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್ ಮಾಡಿ ತಿಳಿಸಿದ್ದಾರೆ.
ಹಲವರು ಈ ಬ್ರೈನ್ ಟೀಸರ್‌ಗೆ ಉತ್ತರ 1 ಎಂದು ಕಾಮೆಂಟ್ ಮಾಡಿದ್ದಾರೆ.
A = 2, B = 2.5, -2 x 2.5 + 3 x 2 = -5 + 6 = 1 ಎಂದು ಎಕ್ಸ್ ಬಳಕೆದಾರರೊಬ್ಬರು ಉತ್ತರವನ್ನು ಬಿಡಿಸಿ ತೋರಿಸಿ ಕಾಮೆಂಟ್ ಮಾಡಿದ್ದಾರೆ. ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು ಕಾಮೆಂಟ್ ಮಾಡಿ.
ಈ ಬ್ರೈನ್ ಟೀಸರ್‌ಗಳನ್ನು ಓದಿ
Brain Teaser: 11+11=4, 12+12=6 ಹಾಗಾದ್ರೆ 14+14= ಎಷ್ಟು? 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗಿದು ಚಾಲೆಂಜ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇದೇನು ಮಹಾ ಲೆಕ್ಕ ಎಂದು ಅನ್ನಿಸಿದ್ರೂ ಉತ್ತರ ಹುಡುಕೋಕೆ ಹೊರಟರೆ ತಲೆ ಕೆಡೋದು ಖಂಡಿತ. ಅದೆಲ್ಲಾ ಇರ್ಲಿ 11+11=4 ಆದ್ರೆ, 14+14=? ಇದಕ್ಕೆ ಉತ್ತರ ಹೇಳಿ.
Brain Teaser: 50%÷10%=?, ನೀವೂ ಗಣಿತದಲ್ಲಿ ಪಂಟರಾದ್ರೆ ಕ್ಯಾಲ್ಕುಲೆಟರ್ ಬಳಸದೇ ಈ ಸೂತ್ರಕ್ಕೆ ಉತ್ತರ ಕಂಡುಹಿಡಿಯಿರಿ
ಗಣಿತದಲ್ಲಿ ಶಾರ್ಪ್ ಅನ್ನೋರಿಗಾಗಿ ಇಲ್ಲಿದೆ ಒಂದು ಬ್ರೈನ್ ಟೀಸರ್. ಇದೊಂದು ಗಣಿತದ ಪಜಲ್, 50%÷10%= ಎಷ್ಟು ಎನ್ನುವುದು ಪ್ರಶ್ನೆ. ಇದಕ್ಕೆ ಕ್ಯಾಲ್ಕುಲೆಟರ್ ಬಳಸದೇ ಥಟ್ಟಂತ ಉತ್ತರ ಹೇಳಬೇಕು. ನೋಡೋಣ ನಿಮ್ಮ ಗಣಿತ ಜ್ಞಾನ ಹೇಗಿದೆ ಅಂತ. ಉತ್ತರ ಹೇಳೋಕೆ ಟ್ರೈ ಮಾಡಿ.