Brain Teaser: ಸುಲಭ ಇರೋ ಬ್ರೈನ್ ಟೀಸರ್ ಇದು, ಒಂದೇ ಗ್ಲಾಸ್ ಕೈಗೆತ್ತಿಕೊಳ್ಳಲು ಅವಕಾಶ, 30 ಸೆಕೆಂಡ್ ಟೈಮ್ ಇದೆ ನೋಡಿ..
ಬ್ರೈನ್ ಟೀಸರ್‌ಗಳು ಬಹಳ ಸುಲಭ ಇರುತ್ತವೆ. ಆದರೆ ಅದರಲ್ಲಿರುವ ಸವಾಲು ಸ್ವಲ್ಪ ಗೊಂದಲ ಹುಟ್ಟಿಸುವಂಥದ್ದು. ಹೀಗಾಗಿ ಎಲ್ಲರೂ ಸುಲಭವಾಗಿ ಪರಿಹಾರ ಕಂಡುಕೊಳ್ಳಲಾಗುತ್ತಿಲ್ಲ. ಆದರೆ, ಇದು ಮಾತ್ರ ತುಂಬಾ ಸುಲಭ ಇರೋ ಬ್ರೈನ್ ಟೀಸರ್.. ಒಂದೇ ಗ್ಲಾಸ್ ಕೈಗೆತ್ತಿಕೊಳ್ಳಲು ಅವಕಾಶ, 30 ಸೆಕೆಂಡ್ ಟೈಮ್ ಇದೆ. ಒಮ್ಮೆ ಸವಾಲು ಪೂರ್ತಿ ಓದಿಕೊಳ್ಳಿ. ಪ್ರಯತ್ನಿಸಿ ನೋಡಿ..
ಉದಾಸೀನದಿಂದಿರುವ ಮಿದುಳನ್ನು ಚುರುಕುಗೊಳಿಸುವಂಥವು ಈ ಬ್ರೈನ್ ಟೀಸರ್‌ಗಳು. ಮೂಡ್ ಹಾಳಾಗಿದ್ದರೆ ಕೆಲವು ಬ್ರೈನ್ ಟೀಸರ್‌ಗಳನ್ನು ಟ್ರೈ ಮಾಡಿದರೆ ಸಾಕು. ಅದಕ್ಕೆ ಉತ್ತರ ಕಂಡುಕೊಳ್ಳುವುದರಲ್ಲಿ ಮಿದುಳು ಚುರುಕಾಗಿರುತ್ತದೆ. ಹುಮ್ಮಸ್ಸು ಶರೀರವನ್ನು ಆವರಿಸಿಕೊಂಡಿರುತ್ತದೆ. ಹಾಗಾಗಿ ಜನ ಬ್ರೈನ್ ಟೀಸರ್‌ಗಳನ್ನು ಹುಡುಕಿ ಹುಡುಕಿ ಅದಕ್ಕೆ ಉತ್ತರಕ್ಕೆ ಕಂಡುಕೊಳ್ಳುತ್ತಾರೆ. ಅಚ್ಚ ಕನ್ನಡದಲ್ಲಿ ಹೇಳಬೇಕು ಎಂದರೆ ಮೆದುಳಿನ ಕಸರತ್ತುಗಳು. ಇವು ನಿಮ್ಮ ವಿಮರ್ಶಾತ್ಮಕ ಚಿಂತನೆ, ಸಮಸ್ಯೆ-ಪರಿಹರಿಸುವ ಕೌಶಲ್ಯ ಮತ್ತು ಸೃಜನಶೀಲತೆಗೆ ಸವಾಲು ಹಾಕುವ ಒಗಟುಗಳಾಗಿವೆ. ಸಾಮಾನ್ಯವಾಗಿ ಪದಗಳ ಆಟ, ತರ್ಕ ಅಥವಾ ಲ್ಯಾಟರಲ್ ಥಿಂಕಿಂಗ್ ಅಂದರೆ ಪಾರ್ಶ್ವ ಚಿಂತನೆಯನ್ನು ಒಳಗೊಂಡಿರುತ್ತವೆ. ಚೌಕಟ್ಟು ಮೀರಿ ಯೋಚಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಮಿದುಳಿನ ಕಸರತ್ತುಗಳು ಒಗಟುಗಳು, ಗಣಿತದ ಒಗಟುಗಳು, ದೃಶ್ಯ ಸವಾಲುಗಳು ಮತ್ತು ತರ್ಕ ಸಮಸ್ಯೆಗಳು ಸೇರಿದಂತೆ ವಿವಿಧ ರೂಪಗಳಲ್ಲಿ ಬರಬಹುದು. ಅವು ನಿಮ್ಮ ಮನಸ್ಸನ್ನು ತೊಡಗಿಸಿಕೊಳ್ಳಲು ಒಂದು ಮೋಜಿನ ಮಾರ್ಗವಾಗಿದೆ ಮತ್ತು ಶೈಕ್ಷಣಿಕ ಸೆಟ್ಟಿಂಗ್‌ಗಳು, ಆಟಗಳಲ್ಲಿ ಅಥವಾ ಕೇವಲ ಮನರಂಜನೆಗಾಗಿ ಬಳಸಬಹುದು. ಇರಲಿ ಈಗ ವಿಷಯಕ್ಕೆ ಬರೋಣ.
ಈ ಬ್ರೈನ್ ಟೀಸರ್ ನಿಮಗಾಗಿ; 30 ಸೆಕೆಂಡ್‌ನಲ್ಲಿ ಮಾಡಿ ತೋರಿಸಿ
ಬ್ರೈನ್ ಟೀಸರ್ ಅತ್ಯುತ್ತಮ ಪಝಲ್ ಮಾಸ್ಟರ್‌ಗಳನ್ನು ಕೂಡ ಗೊಂದಲಕ್ಕೀಡುಮಾಡಬಹುದು. ನೀವು ತಲೆ ಕೆರೆದುಕೊಳ್ಳುವಂತೆ ಮಾಡುವ ಸವಾಲಿನ ಒಗಟುಗಳನ್ನು ಪರಿಹರಿಸುವುದಕ್ಕೆ ನೀವು ಇಷ್ಟಪಡುತ್ತೀರಾದರೆ, ಈ ಬ್ರೈನ್ ಟೀಸರ್ ನಿಮಗೇ ಇರುವಂಥದ್ದು. ಬಹಳ ಸಿಂಪಲ್ ಎಂದು ಕಾಣುವ ಈ ಬ್ರೈನ್ ಟೀಸರ್, ಔಟ್ ಆಫ್ ಬಾಕ್ಸ್ ಆಲೋಚನೆಯ ಹೊರತು ಪರಿಹರಿಸುವುದು ಸ್ವಲ್ಪ ಕಷ್ಟ. ಕೆಲವು ಗಂಟೆಗಳೇ ಬೇಕಾಗಬಹುದು.
ಆರು ಗ್ಲಾಸ್‌ಗಳು - ಮೂರು ಖಾಲಿ, ಮೂರರಲ್ಲಿ ನೀರಿದೆ. ಒಂದೇ ಗ್ಲಾಸ್ ಕೈಗೆತ್ತಿಕೊಂಡು ಸ್ಥಾನ ಪಲ್ಲಟ ಮಾಡಿಕೊಂಡು ಒಂದು ಭರ್ತಿ, ಒಂದು ಖಾಲಿ ಇರುವಂತೆ ಜೋಡಿಸಿ.
ಇಲ್ಲಿ ಕೊಟ್ಟಿರುವ ಈ ಬ್ರೈನ್ ಟೀಸರ್ ಅನ್ನು ರೆಡ್ಡಿಟ್‌ನಲ್ಲಿ ಶೇರ್ ಮಾಡಲಾಗಿದ್ದು, ಹಲವು ಜನ ಇದನ್ನು ಪ್ರಯತ್ನಿಸಿದ್ದಾರೆ. ಇದೀಗ ಈ ಬ್ರೈನ್ ಟೀಸರ್ ಪರಿಹರಿಸುವ ಸರದಿ ನಿಮ್ಮದೇ..
ಈ ಬ್ರೈನ್ ಟೀಸರ್ ಪರಿಹರಿಸ್ತೀರಾ ನೋಡಿ
ಈ ಬ್ರೈನ್ ಟೀಸರ್ ಬಗ್ಗೆ ಏನಾದರೂ ಐಡಿಯಾ ಇದೆಯಾ? ಹೀಗೊಂದು ಪ್ರಶ್ನೆಯೊಂದಿಗೆ ರೆಡ್ಡಿಟ್‌ನ ಆರ್/ಪಜಲ್ ಖಾತೆಯಲ್ಲಿ ಈ ಬ್ರೈನ್ ಟೀಸರ್ ಪೋಸ್ಟ್ ಆಗಿದೆ. ಇದರಲ್ಲೊಂದು ಚಿತ್ರ ಇದೆ. ಅದರಲ್ಲಿ ಆರು ಗ್ಲಾಸ್‌ಗಳಿದ್ದು ಮೂರರಲ್ಲಿ ನೀರು ತುಂಬಿದ್ದರೆ ಇನ್ನು ಮೂರು ಖಾಲಿ ಇದೆ.
ಈ ಪೈಕಿ ಒಂದು ಗ್ಲಾಸ್ ಕೈಗೆತ್ತಿಕೊಂಡು ಪರ್ಯಾಯವಾಗಿ ಅಂದರೆ ಒಂದು ಪೂರ್ತಿ ತುಂಬಿದ ನೀರಿನ ಗ್ಲಾಸ್, ಅದಾಗಿ ಖಾಲಿ, ಅದಾಗಿ ಪೂರ್ತಿ ತುಂಬಿದ ಗ್ಲಾಸ್, ಅದಾಗಿ ಖಾಲಿ.. ಹೀಗೆ ಮರುಜೋಡಿಸಬೇಕು. ನೆನಪಿಡಿ ಒಂದೇ ಗ್ಲಾಸ್ ಕೈಗೆತ್ತಿಕೊಳ್ಳುವುದಕ್ಕೆ ಅವಕಾಶ. ಸಾಧ್ಯವಾ ಅಂತ ಪ್ರಯತ್ನಿಸಿ ನೋಡಿ. 30 ಸೆಕೆಂಡ್ ಟೈಮ್ ಇದೆ.
ಈ ಬ್ರೈನ್ ಟೀಸರ್‌ಗೆ ಬಹಳ ಜನ ಸ್ಪಂದಿಸಿದ್ದು, ಅದನ್ನು ಪರಿಹರಿಸೋದಕ್ಕೆ ಪ್ರಯತ್ನಿಸಿದ್ದಾರೆ. ಕೆಲವರು ಗೊಂದಲಕ್ಕೆ ಬಿದ್ದಿದ್ದಾರೆ. ಇನ್ನು ಕೆಲವರು ಪ್ರಯತ್ನಿಸಿ, ಸೋತಿದ್ದಾರೆ.
"ಪಝಲ್‌ನ ನಿಯಮಗಳನ್ನು ಉದ್ದೇಶಪೂರ್ವಕವಾಗಿ ತಪ್ಪುದಾರಿಗೆಳೆಯುವ ರೀತಿಯಲ್ಲಿ ವಿವರಿಸಿದಂತೆ ಭಾಸವಾಗುತ್ತಿದೆ" ಎಂದು ಒಬ್ಬ ಬಳಕೆದಾರರು ದೂರಿದ್ದಾರೆ. ಬ್ರೈನ್ ಟೀಸರ್ ಅನ್ನು ಬಿಡಿಸಲು ಸಾಧ್ಯವಾಗದೆ ಹತಾಶೆಗೊಂಡ ಇನ್ನೊಬ್ಬ ಬಳಕೆದಾರರು ಇಡೀ ಸಮಸ್ಯೆಗೆ ಉಲ್ಲಾಸದ ಪರಿಹಾರವನ್ನು ನೀಡಿದರು. “ಒಂದು ಸ್ಟ್ರಾ ತಗೊಂಡು ಎರಡನೇ ಗ್ಲಾಸ್‌ನಲ್ಲಿದ್ದ ನೀರು ಕುಡಿಯಿರಿ,” ಎಂದು ಸರಳ ಉಪಾಯ ಹೇಳಿದ್ದು ಗಮನಸೆಳೆದಿದೆ. ಈಗ ನಿಮ್ಮ ಸರದಿ.. ಪ್ರಯತ್ನಿಸಿ ನೋಡಿ..