Brain Teaser: ‘E‘ ಬಂಡೆ ಉರುಳಿಸಿದರೆ ಸಾಯೋದು ಯಾರು? ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯನಾ ಟ್ರೈ ಮಾಡಿ-viral news brain teaser who will meet their end when e pushes the boulder only the sharpest mind will crack this rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ‘E‘ ಬಂಡೆ ಉರುಳಿಸಿದರೆ ಸಾಯೋದು ಯಾರು? ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯನಾ ಟ್ರೈ ಮಾಡಿ

Brain Teaser: ‘E‘ ಬಂಡೆ ಉರುಳಿಸಿದರೆ ಸಾಯೋದು ಯಾರು? ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯನಾ ಟ್ರೈ ಮಾಡಿ

ರೆಡ್ಡಿಟ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ, ಇಲ್ಲೊಂದು ಪಜಲ್ ಇದ್ದು 'E' ಬಂಡೆಯನ್ನು ಕೆಳಗೆ ತಳ್ಳಿದರೆ ಸಾಯೋದು ಯಾರು ಎಂದು ನೀವು ಕಂಡುಹಿಡಿಯಬೇಕು. ನಿಮ್ಮ ಮೆದುಳು ಬಹಳ ಶಾರ್ಪ್ ಇದ್ದರಷ್ಟೇ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಸಾಧ್ಯ.

ಬ್ರೈನ್ ಟೀಸರ್‌
ಬ್ರೈನ್ ಟೀಸರ್‌

ಬ್ರೈನ್ ಟೀಸರ್‌ಗಳಿಗೆ ಪ್ರತಿನಿತ್ಯ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ರೆ ನಿಮ್ಮ ಮೆದುಳು ಚುರುಕಾಗೋದು ಖಂಡಿತ. ಇದರಲ್ಲಿರುವ ಪ್ರಶ್ನೆಗಳು ಮೆದುಳಿಗೆ ಹುಳ ಬಿಡುವಂತಿದ್ದರೂ ಉತ್ತರ ಕಂಡು ಹುಡುಕಿದಾಗ ಸಖತ್ ಥ್ರಿಲ್ಲಿಂಗ್ ಎನ್ನಿಸುತ್ತದೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಬ್ರೈನ್ ಟೀಸರ್‌ಗಳು ಸಾಕಷ್ಟು ವೈರಲ್ ಆಗುತ್ತವೆ.

ಇಂದು ರೆಡ್ಡಿಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದನ್ನು ನಾವು ನಿಮಗಾಗಿ ತಂದಿದ್ದೇವೆ. ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಖಂಡಿತ ನೀವು ನಿಮ್ಮಲ್ಲಿರುವ ಬುದ್ಧಿಯನ್ನೆಲ್ಲಾ ಖರ್ಚು ಮಾಡಬೇಕಾಗಬಹುದು. ಯಾಕೆಂದರೆ ಇದಕ್ಕೆ ಸುಲಭವಾಗಿ ಉತ್ತರ ಹೇಳಲು ಸಾಧ್ಯವೇ ಇಲ್ಲ, ಒಂದು ವೇಳೆ ನೀವು ಉತ್ತರ ಹೇಳಿದರೆ ಖಂಡಿತ ನಿಮ್ಮ ಐಕ್ಯೂ ಲೆವೆಲ್ ಸೂಪರ್ ಅಂತ ಅರ್ಥ.

@theydidthemath ಎನ್ನುವ ರೆಡ್ಡಿಟ್ ಬಳಕೆದಾರರು ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಒಂದು ಚಿತ್ರದಲ್ಲಿ ಅದರಲ್ಲಿ 'E' ಮೇಲ್ಬಾಗದಿಂದ ಬಂಡೆಯನ್ನು ತಳ್ಳಲು ರೆಡಿ ಆಗಿದ್ದಾನೆ. D,C,B,A ಕ್ರಮವಾಗಿ ಕೆಳಗಿನಿಂದ ಎಡಭಾಗದವರೆಗೆ ನಿಂತಿದ್ದಾರೆ. ಹಾಗಾದರೆ 'E' ಬಂಡೆ ಕಲ್ಲು ಉರುಳಿಸಿದರೆ ಮೊದಲು ಸಾಯೋದು ಯಾರು ಎಂಬುದನ್ನು ನೀವು ಕಂಡುಹಿಡಿಯಬೇಕು.

ಈ ಪೋಸ್ಟ್ ಈಗಾಗಲೇ 8500ಕ್ಕೂ ಹೆಚ್ಚು ಅಪ್‌ವೋಟ್‌ಗಳನ್ನು ಪಡೆದುಕೊಂಡಿದೆ. ಹಲವರು ಕಾಮೆಂಟ್ ಮಾಡುವ ಮೂಲಕ ನಮ್ಮ ಬುದ್ಧಿವಂತಿಕೆ ಪ್ರದರ್ಶಿಸಲು ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ಉತ್ತರ ಹೇಳಿದ್ದಾರೆ. ಕೆಲವರು 'E' ಸಾಯಬಹುದು ಎಂದು ಉತ್ತರಿಸಿದ್ದಾರೆ. ಅದಕ್ಕೆ ಕಾರಣ 'E' ಸಣಕಲು ಇರೋದ್ರಿಂದ ಬಂಡೆ ನೂಕುವಾಗಲೇ ಅವನು ಸಾಯುತ್ತಾನೆ ಎಂದೆಲ್ಲಾ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಹಾಗಾದರೆ ನಿಮ್ಮ ಪ್ರಕಾರ ಮೊದಲು ಸಾಯುವವರು ಯಾರು? ಈ ಪ್ರಶ್ನೆಗೆ ನೀವು ಎಷ್ಟು ಬೇಗ ಉತ್ತರ ಕಂಡುಹಿಡಿಯುತ್ತೀರಿ ನೋಡಿ. ನಿಮಗೆ ಉತ್ತರ ಸಿಕ್ಕರೆ ನಿಮ್ಮ ಸ್ನೇಹಿತರು, ಆತ್ಮೀಯರಿಗೂ ಈ ಪ್ರಶ್ನೆ ಕಳುಹಿಸಿ, ಅವರಿಂದ ಉತ್ತರ ಕಂಡುಹಿಡಿಯಲು ಸಾಧ್ಯವಾಗುವುದೇ ಪರೀಕ್ಷಿಸಿ.

ಈ ಬ್ರೈನ್ ಟೀಸರ್ ಅನ್ನೂ ಓದಿ 

Brain Teaser: ಇಲ್ಲಿರುವ 5 ಜನರಲ್ಲಿ ಎಡಗೈ ಬಳಸುವ ವ್ಯಕ್ತಿ ಯಾರು? ಮೆದುಳು ಶಾರ್ಪ್ ಇದ್ರೆ 11 ಸೆಕೆಂಡ್ ಒಳಗೆ ಕಂಡುಹಿಡಿಯಿರಿ

Brain Teaser: ಸ್ಪರ್ಧಾತ್ಮಕ ಪರೀಕ್ಷೆಗಳನ್ನ ನೀವು ಎದುರಿಸಿದ್ದರೆ ಲಾಜಿಕಲ್ ರಿಸನಿಂಗ್ ಪ್ರಶ್ನೆಗಳನ್ನು ನೋಡಿರುತ್ತೀರಿ. ಇಲ್ಲೊಂದು ಅಂಥದ್ದೇ ಪ್ರಶ್ನೆ ಇದೆ. ಇದು ನಿಮ್ಮ ಐಕ್ಯೂ ಹಂತವನ್ನು ಪರೀಕ್ಷೆ ಮಾಡುತ್ತದೆ. ಚಿತ್ರದಲ್ಲಿರುವ ಅಷ್ಟೂ ಜನರಲ್ಲಿ ಎಡಗೈ ಬಳಸುವ ವ್ಯಕ್ತಿ ಯಾರು ಎಂಬುದನ್ನು 11 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು.

Brain Teaser: 2+3=10, 8+4=96 ಆದ್ರೆ 9+7= ಎಷ್ಟು? ಗಣಿತ ಎಕ್ಸ್‌ಪರ್ಟ್ ನೀವಾದ್ರೆ 10 ಸೆಕೆಂಡ್ ಒಳಗೆ ಉತ್ತರ ಹೇಳಿ

Brain Teaser: ಗಣಿತ ಖಂಡಿತ ಎಲ್ಲರಿಗೂ ಕಬ್ಬಿಣದ ಕಡಲೆಯಲ್ಲ, ಗಣಿತ ಕೆಲವರಿಗೆ ಫೇವರಿಟ್ ಸಬ್ಜೆಕ್ಟ್ ಕೂಡ ಹೌದು. ನೀವೂ ಗಣಿತಪ್ರೇಮಿಯಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಇದೆ. ಇದಕ್ಕೆ ನೀವು 10 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ಬುದ್ಧಿಗೆ ಗುದ್ದು ಕೊಡುವ ಈ ಬ್ರೈನ್ ಟೀಸರ್‌ಗೆ ಥಟ್ಟಂತ ಉತ್ತರ ಹೇಳಲು ಸಾಧ್ಯವೇ? ಟ್ರೈ ಮಾಡಿ.

 

mysore-dasara_Entry_Point