ತೂಕ ಇಳಿಸೋ ವಿಚಾರದಲ್ಲಿ ಮ್ಯಾಜಿಕ್ ಮಾಡಲಿವೆ ಈ ಕೊರಿಯನ್ ಪಾನೀಯಗಳು, ನಿಮ್ಮ ಡಯೆಟ್ ಲಿಸ್ಟ್‌ಗೆ ಇವನ್ನು ಸೇರಿಸಿ
ತೂಕ ಇಳಿಕೆ ಮಾಡಬೇಕು ಎಂದುಕೊಂಡವರಿಗೆ ಏನನ್ನು ತಿನ್ನುವುದು ಏನನ್ನು ಬಿಡುವುದು ಎನ್ನುವುದೇ ಒಂದು ದೊಡ್ಡ ಸವಾಲು. ನೀವು ಕೂಡ ಇದೇ ರೀತಿ ಯೋಚಿಸುತ್ತಿದ್ದರೆ ನಿಮ್ಮ ತೂಕ ಇಳಿಕೆಗೆ ಸಹಕರಿಸುವಂತಹ ಪ್ರಸಿದ್ಧ ಕೊರಿಯನ್ ಟೀಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಈಗಿನ ಜಂಕ್ಫುಡ್ ಜಮಾನದಲ್ಲಿ ಆರೋಗ್ಯಕರ ಜೀವನಶೈಲಿಗೆ ಹೊಂದಿಕೊಳ್ಳುವುದು ಬಹಳವೇ ಕಷ್ಟ. ಯಾವುದನ್ನು ತಿಂದರೆ ಕ್ಯಾಲೋರಿ ಜಾಸ್ತಿಯಾಗಿ ತೂಕ ಏರಿಕೆಯಾಗುತ್ತದೆಯೋ ಎಂಬ ಭಯ ಇದ್ದೇ ಇರುತ್ತದೆ. ನೀವು ಕೂಡ ಇದೇ ರೀತಿ ತೂಕ ಇಳಿಕೆಯ ಪ್ರಯತ್ನದಲ್ಲಿದ್ದರೆ ಸದ್ಯ ಪ್ರಚಲಿತದಲ್ಲಿರುವ ಕೊರಿಯನ್ ಪಾನೀಯಗಳನ್ನು ಟ್ರೈ ಮಾಡಬಹುದಾಗಿದೆ. ಈ ಪಾನೀಯಗಳು ಹೊಟ್ಟೆಯಲ್ಲಿರುವ ಬೊಜ್ಜನ್ನು ಕರಗಿಸಲು ಸಹಕಾರಿಯಾಗಿದೆ. ಹಾಗಾದರೆ ಈ ಆರೋಗ್ಯಕರ ಕೊರಿಯನ್ ಪಾನೀಯಗಳನ್ನು ತಯಾರಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ :
ತೂಕ ನಷ್ಟಕ್ಕೆ ಸಹಕರಿಸುವ ಕೊರಿಯನ್ ಪಾನೀಯಗಳು
ಬಾರ್ಲಿ ಟೀ : ಬಾರ್ಲಿ ಟೀ ಎನ್ನುವುದು ಒಂದು ಜನಪ್ರಿಯ ಕೊರಿಯನ್ ಪಾನೀಯವಾಗಿದೆ. ಇದು ತನ್ನ ರುಚಿ ಹಾಗೂ ವಿವಿಧ ಆರೋಗ್ಯ ಪ್ರಯೋಜನಗಳಿಂದಾಗಿ ಹೆಚ್ಚು ಹೆಸರುವಾಸಿಯಾಗಿದೆ. ಇದನ್ನು ತಯಾರಿಸುವುದು ಸಹ ತುಂಬಾನೇ ಸುಲಭ. ಬಿಸಿ ನೀರಿನಲ್ಲಿ ಹುರಿದ ಬಾರ್ಲಿ ಧಾನ್ಯಗಳನ್ನು ಸೇರಿಸಿ ಕುದಿಸುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಇವುಗಳು ಕೆಫೀನ್ ಮುಕ್ತವಾಗಿದೆ ಮಾತ್ರವಲ್ಲದೆ ಅತ್ಯಂತ ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತದೆ. ಇತರೆ ಸಕ್ಕರೆ ಪಾನೀಯಗಳಿಗೆ ಪರ್ಯಾಯವಾಗಿ ಇದನ್ನು ಕುಡಿಯಬಹುದಾಗಿದೆ.
ಗ್ರೀನ್ ಟೀ : ಕೊರಿಯಾದಲ್ಲಿ ಅತ್ಯಂತ ಜನಪ್ರಿಯವಾದ ಪಾನೀಯವೆಂದರೆ ಅದು ಗ್ರೀನ್ ಟೀ. ಇದರಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇವುಗಳಲ್ಲಿ ಆಂಟಿಆಕ್ಸಿಡಂಟ್ಗಳು ಅಗಾಧ ಪ್ರಮಾಣದಲ್ಲಿ ಇರುತ್ತದೆ. ಇದು ದೇಹದಲ್ಲಿ ಚಯಾಪಚಯ ಕ್ರಿಯೆಯಲ್ಲಿ ಹೆಚ್ಚಿಸುತ್ತದೆ ಮಾತ್ರವಲ್ಲದೇ ಕೊಬ್ಬಿನಂಶವನ್ನು ಕರಗಿಸುವಲ್ಲಿ ಸಹಕಾರಿಯಾಗಿದೆ. ಹೀಗಾಗಿ ತೂಕ ಇಳಿಕೆಯ ಪ್ರಕ್ರಿಯೆಯಲ್ಲಿ ಇರುವವರು ಖಂಡಿತವಾಗಿ ಇದನ್ನು ಸೇವಿಸಬೇಕು.
ರೋಸ್ ಟೀ : ಇದನ್ನು ಗುಲ್ ಚಾ ಅಥವಾ ಗುಲಾಬಿ ಚಹಾ ಎಂದು ಕರೆಯುತ್ತಾರೆ. ಇದು ಕೂಡ ತೂಕ ಇಳಿಕೆಗೆ ಪರಿಣಾಮಕಾರಿಯಾದ ಒಂದು ಕೊರಿಯನ್ ಪಾನೀಯವಾಗಿದೆ. ಕೇಸರಿ ಹಾಗೂ ಗುಲಾಬಿ ದಳಗಳಿಂದ ತಯಾರಿಸಿದ ಐಷಾರಾಮಿ ಚಹಾ ಇದಾಗಿದೆ. ಇವುಗಳಲ್ಲಿ ವಿಟಮಿನ್ ಸಿ ಹಾಗೂ ಫ್ಲೇವನಾಯ್ಡ್ಗಳು ಸಮೃದ್ಧವಾಗಿ ಇರುತ್ತದೆ. ಇದರಲ್ಲಿ ರೋಗ ನಿರೋಧಕ ಶಕ್ತಿ ಅಗಾಧವಾಗಿ ಇರುತ್ತದೆ.
ಒಮಿಜಾ ಟೀ : ಇದನ್ನು ಐದು ರೀತಿಯ ಫ್ಲೇವರ್ಗಳನ್ನು ಹೊಂದಿರುವ ಬೆರ್ರಿ ಟೀ ಎಂದು ಕರೆಯುತ್ತಾರೆ. ಇದನ್ನು ಸ್ಕಿಸಂದ್ರ ಚೈನೆನ್ಸಿಸ್ ಎಂಬ ಸಸ್ಯದ ಹಣ್ಣುಗಳನ್ನು ಒಣಗಿಸಿ ತಯಾರಿಸಲಾಗುತ್ತದೆ. ಇವುಗಳಲ್ಲಿ ಸಿಹಿ,ಹುಳಿ, ಉಪ್ಪು,ಕಹಿ ಹಾಗೂ ಮಸಾಲೆ ಎಲ್ಲಾ ರೀತಿಯ ಮಿಶ್ರಣ ಇರುತ್ತದೆ. ಈ ಚಹಾದ ಪರಿಮಳವಂತೂ ವರ್ಣಿಸಲು ಅಸಾಧ್ಯ ಎಂಬಂತೆ ಇರುತ್ತದೆ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ತೂಕ ನಷ್ಟ ಮಾಡಬೇಕು ಎಂದುಕೊಂಡವರು ಖಂಡಿತವಾಗಿ ಇದನ್ನು ಸೇವನೆ ಮಾಡಬಹುದಾಗಿದೆ.