ವೇಟ್ ಲಾಸ್ ಆಗ್ತಿಲ್ಲ ಅಂತ ಚಿಂತಿಸಬೇಡಿ ನೆಲ್ಲಿಕಾಯಿಯನ್ನು ಹೀಗೆ ಬಳಸಿ ನೋಡಿ; ದೇಹದ ಹಟಮಾರಿ ಕೊಬ್ಬು ಕರಗಿ, ಕೆಲವೇ ದಿನಗಳಲ್ಲಿ ತೂಕ ಇಳಿಯುತ್ತೆ
Weight Loss Tips: ತೂಕ ಇಳಿಸಬೇಕು ಆದರೆ ವರ್ಕೌಟ್ ಮಾಡೋಕೆ ಟೈಮ್ ಇಲ್ಲ ಅನ್ನೋರು ನೀವಾದ್ರೆ ನಿಮಗಾಗಿ ಇಲ್ಲೊಂದು ಟಿಪ್ಸ್ ಇದೆ. ತೂಕ ಇಳಿಸೋಕೆ ನೆಲ್ಲಿಕಾಯಿಗಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ. ಇದನ್ನು 3 ವಿಧಾನಗಳಲ್ಲಿ ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ಕೆಲವೇ ದಿನಗಳಲ್ಲಿ ದೇಹದ ಹಟಮಾರಿ ಕೊಬ್ಬನ್ನು ನಿವಾರಿಸಿ, ತೂಕ ಕಡಿಮೆ ಮಾಡಿಕೊಳ್ಳಬಹುದು.
ನೆಲ್ಲಿಕಾಯಿ ಗಾತ್ರದಲ್ಲಿ ಚಿಕ್ಕದಾದ್ರೂ ಅದರ ಪ್ರಯೋಜನಗಳು ನೂರಾರು. ಹುಳಿ ಮತ್ತು ಕಹಿ ರುಚಿ ಹೊಂದಿರುವ ನೆಲ್ಲಿಕಾಯಿಯಿಂದ ಉಪ್ಪಿನಕಾಯಿ ಮತ್ತು ರಸಂನಂತಹ ರುಚಿಕರ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಇದು ತಿನ್ನಲು ತುಂಬಾ ರುಚಿಯಾಗಿರುತ್ತದೆ. ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಆಮ್ಲಾವನ್ನು ಆಯುರ್ವೇದ ಔಷಧವಾಗಿ ಅನೇಕ ರೋಗಗಳಿಂದ ದೂರವಿಡಲು ಬಳಸಲಾಗುತ್ತದೆ.
ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ನೆಲ್ಲಿಕಾಯಿ ತೂಕ ಇಳಿಸಲು ಕೂಡ ಸಹಕಾರಿ. ನೀವು ತೂಕ ಇಳಿಸುವ ಕಾಯಕದಲ್ಲಿ ತೊಡಗಿದ್ದರೆ ನೆಲ್ಲಿಕಾಯಿಯನ್ನು ನಿಮ್ಮ ಆಹಾರದ ಭಾಗವಾಗಿ ಸೇರಿಸಿಕೊಳ್ಳಬಹುದು.
ನೆಲ್ಲಿಕಾಯಿ ಚಟ್ನಿ
ನೆಲ್ಲಿಕಾಯಿ ಚಟ್ನಿಯನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಎಳೆ ನೆಲ್ಲಿಕಾಯಿಗಳನ್ನು ಬಳಸಬಹುದು. ಇದು ತಿನ್ನಲು ರುಚಿಯಾಗಿರುವುದು ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ನೆಲ್ಲಕಾಯಿ ಚಟ್ನಿ ಮಾಡುವುದು ಸುಲಭ. ನೆಲ್ಲಿಕಾಯಿಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ. ಈಗ 2-3 ಬೆಳ್ಳುಳ್ಳಿ ಎಸಳು, ಸ್ವಲ್ಪ ಜೀರಿಗೆ, ಹಸಿಮೆಣಸಿನಕಾಯಿ ಮತ್ತು ಉಪ್ಪು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಅಷ್ಟೇ ರುಚಿಕರವಾದ ಆಮ್ಲಾ ಅಥವಾ ನೆಲ್ಲಿಕಾಯಿ ಚಟ್ನಿ ರೆಡಿ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ತೂಕ ಕಡಿಮೆಯಾಗುವ ಜೊತೆಗೆ, ನಿಯಂತ್ರಣದಲ್ಲಿರುತ್ತದೆ.
ನೆಲ್ಲಿಕಾಯಿ ಪುಡಿ
ಇದನ್ನು ನಿರಂತರವಾಗಿ ಸೇವಿಸುವುದರಿಂದ ಕೂಡ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿದಿನ ಬೆಳಿಗ್ಗೆ ಒಂದು ಟೀ ಚಮಚ ನೆಲ್ಲಿಕಾಯಿ ಪುಡಿಯನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದು ಸಹ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇವುಗಳೊಂದಿಗೆ ನಿಯಮಿತವಾಗಿ ನೆಲ್ಲಿಕಾಯಿ ಪುಡಿ ಸೇವನೆಯು ಹೊಟ್ಟೆಯನ್ನು ಚೆನ್ನಾಗಿ ಸ್ವಚ್ಛಗೊಳಿಸುತ್ತದೆ, ಇದು ಮಲಬದ್ಧತೆಯಂತಹ ಸಮಸ್ಯೆಯನ್ನು ನಿವಾರಿಸುತ್ತದೆ. ನೆಲ್ಲಿಕಾಯಿ ನಾರಿನಾಂಶದಲ್ಲಿ ಸಮೃದ್ಧವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಅಜೀರ್ಣವನ್ನು ನಿವಾರಿಸುತ್ತದೆ. ಚಯಾಪಚಯವನ್ನು ವೇಗಗೊಳಿಸಿ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡಲು ಇದು ಬಹಳಷ್ಟು ಸಹಾಯ ಮಾಡುತ್ತದೆ.
ನೆಲ್ಲಿಕಾಯಿ ಜ್ಯೂಸ್
ಆಮ್ಲಾ ಜ್ಯೂಸ್ ಮತ್ತು ಅಲೋವೆರಾ ಜ್ಯೂಸ್ ಅನ್ನು ಒಟ್ಟಿಗೆ ಕುಡಿಯುವುದರಿಂದ ತೂಕ ಕಳೆದುಕೊಳ್ಳಬಹುದು. ಇದಕ್ಕಾಗಿ, ಎರಡು ಚಮಚ ಅಲೋವೆರಾ ಜೆಲ್ ಮತ್ತು ಎರಡು ಚಮಚ ಆಮ್ಲಾ ರಸವನ್ನು ಮಿಶ್ರಣ ಮಾಡಿ. ನಂತರ ಅದನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಈ ಜ್ಯೂಸ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ದೇಹದಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ. ನೆಲ್ಲಿಕಾಯಿ ತಿನ್ನುವುದರಿಂದ ನೀವು ಬೇಗನೆ ತೂಕವನ್ನು ಕಳೆದುಕೊಳ್ಳಬಹುದು.
ವಿಭಾಗ