ಹುಡುಗಿಯರು ಫೋಟೋ ಕ್ಲಿಕ್ಕಿಸುವಾಗಲೇ ತಲೆ ಕೆರೆದುಕೊಳ್ಳೋದು ಯಾಕೆ? ಈ ಹಾಸ್ಯಚಟಾಕಿ ಓದಿದ್ರೆ ನೀವು ನಕ್ಕೇನಗ್ತೀರಿ!
ಕನ್ನಡ ಸುದ್ದಿ  /  ಜೀವನಶೈಲಿ  /  ಹುಡುಗಿಯರು ಫೋಟೋ ಕ್ಲಿಕ್ಕಿಸುವಾಗಲೇ ತಲೆ ಕೆರೆದುಕೊಳ್ಳೋದು ಯಾಕೆ? ಈ ಹಾಸ್ಯಚಟಾಕಿ ಓದಿದ್ರೆ ನೀವು ನಕ್ಕೇನಗ್ತೀರಿ!

ಹುಡುಗಿಯರು ಫೋಟೋ ಕ್ಲಿಕ್ಕಿಸುವಾಗಲೇ ತಲೆ ಕೆರೆದುಕೊಳ್ಳೋದು ಯಾಕೆ? ಈ ಹಾಸ್ಯಚಟಾಕಿ ಓದಿದ್ರೆ ನೀವು ನಕ್ಕೇನಗ್ತೀರಿ!

ಫೋಟೋ ಕ್ಲಿಕ್ಕಿಸುವಾಗಲೋ, ಸೆಲ್ಫಿ ತೆಗೆಯುವಾಗಲೋ ಒಂದಷ್ಟು ಹುಡುಗಿಯರು ತಮ್ಮ ಕೂದಲು ಸೆಟ್ ಮಾಡಿಕೊಳ್ಳುವ ಪ್ರಸಂಗವನ್ನು ನೀವು ಸಹ ಕಂಡಿರಬಹುದು. ಲೇಖಕ ಮಧು ವೈಎನ್ ಅವರು ಫೇಸ್‌ಬುಕ್‌ನಲ್ಲಿ ಹೀಗೊಂದು ಹಾಸ್ಯಚಟಾಕಿಯನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಬಂದ ಪ್ರತಿಕ್ರಿಯೆಗಳು ಸಹ ಅಷ್ಟೇ ಮಜಭರಿತವಾಗಿವೆ.

ಸೆಲ್ಫಿ ತೆಗೆದುಕೊಳ್ಳುತ್ತಿರುವ ಹುಡುಗಿಯರು (ಸಾಂದರ್ಭಿಕ ಚಿತ್ರ)
ಸೆಲ್ಫಿ ತೆಗೆದುಕೊಳ್ಳುತ್ತಿರುವ ಹುಡುಗಿಯರು (ಸಾಂದರ್ಭಿಕ ಚಿತ್ರ)

"ಈ ಹುಡ್ಗೀರಂದ್ರೇ ಒಂಥರಾ ವಿಚಿತ್ರ ಕಣ್ರೋ ಯಾವಾಗ ಹೆಂಗ್ ಆಡ್ತಾರೆ ಹೇಳೋಕೇ ಆಗಲ್ಲ ಏನನ್ನ ಬೇಕಾದ್ರೂ ಅರ್ಥ ಮಾಡ್ಕೊಬಹುದು, ಆದ್ರೆ ಹುಡ್ಗೀರ್ ಮನ್ಸಲ್ಲಿ ಏನ್ ನಡೀತಿದೆ ಅಂತ ಅವ್ರಿಗೂ ಅರ್ಥ ಆಗಲ್ವೇನೋ" ಹೀಗಂತ ಹುಡುಗರ ಸರ್ಕಲ್‌ಗಳಲ್ಲಿ ನಗೆಗಡಲಲ್ಲಿ ಮಾತುಗಳು ಕೇಳಿಬರುವುದು ಮಾಮೂಲಿ. ಹುಡುಗಿಯರ ಮೆಕಾನಿಸಮ್ಮೇ ಹಾಗೆ, ಒಂದಕ್ಕಿಂತ ಒಂದು ಚಿತ್ರ, ಇನ್ನೊಂದು ವಿಚಿತ್ರ, ಮತ್ತೊಂದು ವಿಭಿನ್ನ!

ಅನಾದಿ ಕಾಲದಿಂದಲು ಹೆಣ್ಣಿನ ಮನಸಿನ ಆಳ ಅಳೆಯಲಾಗದೇ ಬಿಟ್ಟವರು ಅದೆಷ್ಟು ಜನರು. ಇದೇ ರೂಢಿ ಬಿಟ್ಟರೆಂದರೂ ಬಿಡದು ಈ ಮಾಯೆ ಎಂಬಂತೆ ಆಧುನಿಕ ಲೋಕದ ಸಾಮಾಜಿಕ ಜಾಲತಾಣದಲ್ಲೂ ಅನೂಚಾನವಾಗಿ ಮುಂದುವರೆಯುತ್ತಿದೆ. ಹೆಣ್ಮಕ್ಕಳು ಫೋಟೋ ಕ್ಲಿಕ್ಕಿಸುವಾಗಿನ ವರ್ತನೆಯೊಂದು ಹಲವರಿಗೆ ಬಗೆಬಗೆಯಾಗಿ ಕಾಣಿಸಿ ವರ್ಣನೆಗೆ ಒಳಗಾಗಿದೆ!

ಲೇಖಕ ಮಧು ವೈಎನ್ ಅವರು ಫೇಸ್‌ಬುಕ್‌ನಲ್ಲಿ ಹೀಗೊಂದು ಹಾಸ್ಯಚಟಾಕಿಯನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಬಂದ ಪ್ರತಿಕ್ರಿಯೆಗಳು ಸಹ ಅಷ್ಟೇ ಮಜಭರಿತವಾಗಿವೆ.

ಅವರ ಪೋಸ್ಟ್‌ನ ಯಥಾವತ್ತು ರೂಪ ಇದು:

'ಬಹು' ಸಮಯ ಡವಟು.

ಈ ಹುಡುಗಿಯರು ಫೋಟೋ ತೆಗೆಯುವುದಿಲ್ಲ, ಎಲ್ಲೆಂದರಲ್ಲಿ ಯಾಕೆ ತಲೆ ಕೆರೆದುಕೊಳ್ಳುತ್ತಾರೆ, ಅದೂ ಪಕ್ಕಕ್ಕೆ ಬಾಗಿ

(ಒಳ್ಳೆಯ ಹುಡುಗಿಯರೇ, ಸರಿಯಾಗಿ ಬೀಳಬೇಡಿ)

ಫೋಟೋ ಕ್ಲಿಕ್ಕಿಸುವಾಗಲೋ, ಸೆಲ್ಫಿ ತೆಗೆಯುವಾಗಲೋ ಒಂದಷ್ಟು ಹುಡುಗಿಯರು ತಮ್ಮ ಕೂದಲು ಸೆಟ್ ಮಾಡಿಕೊಳ್ಳುವ ಪ್ರಸಂಗವನ್ನು ನೀವು ಸಹ ಕಂಡಿರಬಹುದು. ಅರೇ! ಮೊದಲೂ ಇಲ್ಲದ, ನಂತರವೂ ಇಲ್ಲದ ಈ ಕೂದಲು ಸರಿಪಡಿಸಿಕೊಳ್ಳುವ ಪ್ರಕ್ರಿಯೆ ಫೋಟೋ ಕ್ಲಿಕ್ಕಿಸುವಾಗಲೇ ಯಾಕೆ ಎಂಬ ಪ್ರಶ್ನೆ ನಿಮ್ಮನ್ನೂ ಕಾಡಿರಬಹುದು. ಅದೇ ಪ್ರಶ್ನೆಯೇ ಈ ಲೇಖಕರಿಗೂ ಹದವಾದ ಹಾಸ್ಯದ ಅನುಭವವಾಗಿ ಕಾಡಿರಲಿಕ್ಕೆ ಸಾಕು! ಅಂದಹಾಗೆ ಮಧು ವೈಎನ್ ಅವರ ಫೇಸ್‌ಬುಕ್ ಪೋಸ್ಟ್‌ಗೆ ಬಂದ ಪ್ರತಿಕ್ರಿಯೆಗಳು ಸಹ ಮುಗುಳುನಗೆ ಮೂಡಿಸುವಂತಿವೆ.

ಶರತ್ ಅಳಿಗೆ ಅವರು ಈ ಕಾಮೆಂಟ್ ಹಾಕಿದ್ದಾರೆ

ಹೊಸದಾಗಿ ಮೂಗುತಿ ದರಿಸಿದವಳಿಗೆ ಶೀತವಾಗೀ ಸೀನುತ್ತಿದ್ದಳು. ಫೋಟೋಗಾಗಿ ಹೊಸ ಶ್ಯಾಂಪೂ ಬಳಸಿ ಅವಸರದಲ್ಲಿ ತಲೆ ಒಣಗಿಸದೇ ಉರಿತವಾಗಿ ತುರಿಸಿಕೊಳ್ಳೋದನ್ನೂ ತೋರಿಸದೆ ತಲೆಬಾಗಿ ಓರೆಕೋರೆ ಮಾಡೋದು ಕೊನೆಗೆ ಮರೆಮಾಚಲು ಕಿವಿ ಹಿಡಿದು ಪೋಸ್ ಕೊಡೋದ್ನೆಲ್ಲ ಪ್ರಶ್ನಿಸಬಾರದು ಅಲ್ವಾ

ಪಲ್ಲವಿ ಇಡೂರ್ ಅವರಿಗೆ ನೆನಪಾಗಿದ್ದು ಇದು

ನಂದು ಆ ತರ ತಲೆ ಕೆರ್ಕೊಂಡಿರೊ ಫೋಟೊ ಇದ್ಯಾ ಅಂತ ಹುಡುಕ್ಬೇಕು ಈಗ

ಕಾವ್ಯ ಎಸ್ ಕೋಳಿವಾಡ್ ಅವರ ಕಾಮೆಂಟ್ ಹೀಗಿದೆ

ಇನ್ನೊಂದಿರತ್ತೆ ಕಿವಿ ಹಿಡ್ಕೊಳೊ ಪೋಸ್..ಅಲ್ಲಾ ಇಯರ್ ರಿಂಗ್ ನ ಫೋಟೋದಲ್ಲಿ ಯಾಕ್ ಹಾಕೊಬೇಕ್ ಅಂತ

ಸುಶ್ಮಾ ಕಶ್ಯಪ್ ಅವರಿಗೆ 'ತಲೆ ಹೊಟ್ಟಿನ ಕಾರಣಕ್ಕೆ ಹೆಣ್ಣುಮಕ್ಕಳು ಈ ಫೋಸ್ ಕೊಡ್ತಾರೆ' ಎಂಬ ಕಾರಣ ಹೊಳೆದಿದೆ!

ಲೇಖಕ ಮಧು ವೈಎನ್
ಲೇಖಕ ಮಧು ವೈಎನ್
Whats_app_banner