Adhir Ranjan Chowdhury:ʻರಾಷ್ಟ್ರಪತ್ನಿʼ ಎಂದ ಅಧೀರ್‌; ಸಂಸತ್ತಲ್ಲಿ ಗದ್ದಲ ಕ್ಷಮೆಗೆ ಆಗ್ರಹ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Adhir Ranjan Chowdhury:ʻರಾಷ್ಟ್ರಪತ್ನಿʼ ಎಂದ ಅಧೀರ್‌; ಸಂಸತ್ತಲ್ಲಿ ಗದ್ದಲ ಕ್ಷಮೆಗೆ ಆಗ್ರಹ

Adhir Ranjan Chowdhury:ʻರಾಷ್ಟ್ರಪತ್ನಿʼ ಎಂದ ಅಧೀರ್‌; ಸಂಸತ್ತಲ್ಲಿ ಗದ್ದಲ ಕ್ಷಮೆಗೆ ಆಗ್ರಹ

ರಾಷ್ಟ್ರಪತಿ (President of India) ದ್ರೌಪದಿ ಮುರ್ಮು (Draupadi Murmu) ಅವರನ್ನು 'ರಾಷ್ಟ್ರಪತ್ನಿ' (Rashtrapatni) ಎಂದು ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ (Adhir Ranjan Chowdhury) ನಿನ್ನೆ ನೀಡಿದ ಹೇಳಿಕೆ ಇಂದು ಸಂಸತ್‌ನಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು. ಅವರ ಕ್ಷಮೆಯಾಚನೆಗೆ ಬಿಜೆಪಿ ಸದಸ್ಯರು ಪಟ್ಟು ಹಿಡಿದರು.

<p>ರಾಷ್ಟ್ರಪತಿ (President of India) ದ್ರೌಪದಿ ಮುರ್ಮು (Draupadi Murmu) ಅವರನ್ನು 'ರಾಷ್ಟ್ರಪತ್ನಿ' (Rashtrapatni) ಎಂದು ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ (Adhir Ranjan Chowdhury) ನಿನ್ನೆ ನೀಡಿದ ಹೇಳಿಕೆ ಇಂದು ಸಂಸತ್‌ನಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು.</p>
ರಾಷ್ಟ್ರಪತಿ (President of India) ದ್ರೌಪದಿ ಮುರ್ಮು (Draupadi Murmu) ಅವರನ್ನು 'ರಾಷ್ಟ್ರಪತ್ನಿ' (Rashtrapatni) ಎಂದು ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ (Adhir Ranjan Chowdhury) ನಿನ್ನೆ ನೀಡಿದ ಹೇಳಿಕೆ ಇಂದು ಸಂಸತ್‌ನಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು. (ANI)

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂದು ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ (Adhir Ranjan Chowdhury) ನಿನ್ನೆ ನೀಡಿದ ಹೇಳಿಕೆ ಇಂದು ಸಂಸತ್‌ನಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು. ಅಧೀರ್ ರಂಜನ್ ಚೌಧರಿ ಹೇಳಿಕೆಗೆ ಲೋಕಸಭೆ , ರಾಜ್ಯಸಭೆಯಲ್ಲಿ ಬಿಜೆಪಿ ವಿರೋಧ ವ್ಯಕ್ತವಾಗಿತ್ತು. ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಇದಕ್ಕೂ ಮೊದಲೇ ಅಧೀರ್‌ ರಂಜನ್‌ ಚೌಧರಿ ಪ್ರಮಾದವರಿತು ಕ್ಷಮೆ ಕೋರಿದ್ದರು.

ಸಂಸತ್‌ ಕಲಾಪ ಶುರುವಾದ ಕೂಡಲೆ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ (Adhir Ranjan Chowdhury) ಅವರ ಹೇಳಿಕೆ ಪ್ರಸ್ತಾಪಿಸಿದ ಕೇಂದ್ರ ಸಚಿವ ಸ್ಮೃತಿ ಇರಾನಿ, ಭಾರತದ ಮಹಿಳೆಯರು ಮತ್ತು ಬುಡಕಟ್ಟು ಜನಾಂಗದವರನ್ನು ಕೀಳಾಗಿ ಕಾಣುತ್ತಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ಸಿಗರು ಸಾಂವಿಧಾನಿಕ ಹುದ್ದೆಗಳಲ್ಲಿರುವ ಮಹಿಳೆಯರನ್ನು ಅವಮಾನಿಸುತ್ತಿದ್ದಾರೆ. ಇದಕ್ಕಾಗಿ ಸಂಸತ್ತಿನಲ್ಲಿ ಮತ್ತು ಭಾರತದ ಬೀದಿಗಳಲ್ಲಿ ಕಾಂಗ್ರೆಸ್ ಕ್ಷಮೆ ಯಾಚಿಸಬೇಕು ಎಂದು ಸ್ಮೃತಿ ಇರಾನಿ ಒತ್ತಾಯಿಸಿದರು.

ಭಾರತದ ರಾಷ್ಟ್ರಪತಿಯನ್ನು ರಾಷ್ಟ್ರಪತ್ನಿ ಎಂದು ಸಂಬೋಧಿಸುವುದು ಅವರ ಸಾಂವಿಧಾನಿಕ ಹುದ್ದೆಯನ್ನು ಮಾತ್ರವಲ್ಲದೆ ಅವರು ಪ್ರತಿನಿಧಿಸುವ ಬುಡಕಟ್ಟು ಪರಂಪರೆಯನ್ನು ಸಹ ಅವಮಾನಿಸಿದೆ.

ದ್ರೌಪದಿ ಮುರ್ಮು ರಾಷ್ಟ್ರಪತಿ ಸ್ಥಾನಕ್ಕೆ ನಾಮನಿರ್ದೇಶನಗೊಂಡಾಗಿನಿಂದ ಅವರನ್ನು ಕಾಂಗ್ರೆಸ್ ಗುರಿಯಾಗಿಸಿಕೊಂಡಿದೆ. ರಾಷ್ಟ್ರಪತಿಯಾಗಿ ಆಯ್ಕೆಯಾದ ನಂತರವೂ ಅವರ ವಿರುದ್ಧ ದಾಳಿಗಳು ನಿಲ್ಲುವಂತೆ ಕಾಣುತ್ತಿಲ್ಲ ಎಂದು ಸ್ಮೃತಿ ಇರಾನಿ ಹೇಳಿದರು.

ಇನ್ನೊಂದೆಡೆ, ರಾಜ್ಯಸಭೆಯಲ್ಲಿ ಅಧೀರ್ ರಂಜನ್ ಚೌಧರಿ ಹೇಳಿಕೆಗೆ ಸೋನಿಯಾ ಗಾಂಧಿ (Sonia Gandhi) ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಒತ್ತಾಯಿಸಿದ್ದು, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯಸಭೆಯಲ್ಲಿ ಆಡಳಿತ, ಪ್ರತಿಪಕ್ಷ ಸದಸ್ಯರು ಪರಸ್ಪರರ ಪ್ರತಿಭಟನೆ ನಡೆ ಸಿದರು. ಇದೇ ವೇಳೆ, ಕಲಾಪ ಸುಗಮಗೊಳಿಸುವ ನಿಟ್ಟಿನಲ್ಲಿ ಮಾತನಾಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಷ್ಟ್ರಪತಿಗೆ ಅವಮಾನ ಮಾಡಬಾರದು, ಸದನದ ಹೊರಗೆ ರಾಷ್ಟ್ರಪತಿ ಬಗ್ಗೆ ಹಗುರವಾಗಿ ಮಾತನಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯಸಭಾ ಕಲಾಪವನ್ನು ಇಂದು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿತ್ತು. ಲೋಕಸಭೆಯಲ್ಲೂ ಕಲಾಪ ಮುಂದೂಡಲ್ಪಟ್ಟಿದೆ.

ಚೌಧರಿ ಹೇಳಿಕೆ ನೀಡಿದ್ದು ಯಾವಾಗ?

ಇಡಿ ವಿಚಾರಣೆ ವಿರುದ್ಧ ಕಾಂಗ್ರೆಸ್ಸಿಗರು ನಿನ್ನೆ ಪ್ರತಿಭಟನೆ ನಡೆಸಿದಾಗ, ಅಧೀರ್‌ ರಂಜನ್‌ ಚೌಧರಿ ಅವರು ʻರಾಷ್ಟ್ರಪತ್ನಿʼ (Rashtrapatni) ಹೇಳಿಕೆ ನೀಡಿದ್ದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದ ಇಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭದಲ್ಲಿ ಅಧೀರ್ ಚೌಧರಿ ಈ ದ್ರೌಪದಿ ಮರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆದಿದ್ದಾರೆ.

ಬಿಜೆಪಿಯ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅಧೀರ್ ಚೌಧರಿ, ನನ್ನ ಹೇಳಿಕೆಗೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನಾನು ತಪ್ಪಾಗಿ ‘ರಾಷ್ಟ್ರಪತ್ನಿ’ ಎಂದು ಹೇಳಿದ್ದೇನೆ. ಅದಕ್ಕಾಗಿ ಅವರು ನನ್ನನ್ನು ಗಲ್ಲಿಗೇರಿಸಲು ಬಯಸಿದರೆ ಗಲ್ಲಿಗೇರಿಸಬಹುದು ಎಂದಿದ್ದಾರೆ.

ಸಂಸತ್ತಿನಲ್ಲಿ ಗದ್ದಲ ಹೆಚ್ಚಾಗುವ ಲಕ್ಷಣಗಳು ಗೋಚರಿಸಿದ ಕೂಡಲೇ ಈ ಕುರಿತು ಕ್ಷಮೆಯಾಚಿಸಿದ ಅಧೀರ್‌ ರಂಜನ್‌ ಚೌಧರಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭೇಟಿಗೆ ಸಮಯ ಕೋರಿದರು. ಇನ್ನೊಂದೆಡೆ, ಲೋಕಸಭೆಯಲ್ಲಿ ಮಾತನಾಡುವುದಕ್ಕೆ ಅವಕಾಶ ಕೋರಿ ಮನವಿ ಸಲ್ಲಿಸಿದರು.

ತನಗೆ ಹಿಂದಿ ಭಾಷೆ ಅಷ್ಟಾಗಿ ಹಿಡಿತ ಇಲ್ಲ. ಆದ್ದರಿಂದ ತಪ್ಪಾಗಿ “ರಾಷ್ಟ್ರಪತ್ನಿ” ಎಂದು ಉಲ್ಲೇಖಿಸಿದ್ದೆ. ಈ ಬಗ್ಗೆ ವಿಷಾಧವಿದೆ ಎಂಬ ತಣ್ಣನೆಯ ಹೇಳಿಕೆ ನೀಡಿ ಸಮಜಾಯಿಷಿ ಕೊಟ್ಟಿದ್ದರು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.