ರಾಮ್​ ಗೋಪಾಲ್ ವರ್ಮಾಗೆ ಬಂಧನದ ಭೀತಿ? ವಿವಾದಾತ್ಮಕ ನಿರ್ದೇಶಕ ಆರ್​ಜಿವಿ ವಿರುದ್ಧ ಬಿತ್ತು ಕೇಸ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರಾಮ್​ ಗೋಪಾಲ್ ವರ್ಮಾಗೆ ಬಂಧನದ ಭೀತಿ? ವಿವಾದಾತ್ಮಕ ನಿರ್ದೇಶಕ ಆರ್​ಜಿವಿ ವಿರುದ್ಧ ಬಿತ್ತು ಕೇಸ್

ರಾಮ್​ ಗೋಪಾಲ್ ವರ್ಮಾಗೆ ಬಂಧನದ ಭೀತಿ? ವಿವಾದಾತ್ಮಕ ನಿರ್ದೇಶಕ ಆರ್​ಜಿವಿ ವಿರುದ್ಧ ಬಿತ್ತು ಕೇಸ್

Ram Gopal Varma: ವಿವಾದಕ್ಕೆ ಕೇರ್​ ಆಫ್ ಅಡ್ರೆಸ್ ಆಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಮದ್ದಪಾಡು ಪಿಎಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮ್​ ಗೋಪಾಲ್ ವರ್ಮಾಗೆ ಬಂಧನದ ಭೀತಿ? ವಿವಾದಾತ್ಮಕ ನಿರ್ದೇಶಕ ಆರ್​ಜಿವಿ ವಿರುದ್ಧ ಬಿತ್ತು ಕೇಸ್
ರಾಮ್​ ಗೋಪಾಲ್ ವರ್ಮಾಗೆ ಬಂಧನದ ಭೀತಿ? ವಿವಾದಾತ್ಮಕ ನಿರ್ದೇಶಕ ಆರ್​ಜಿವಿ ವಿರುದ್ಧ ಬಿತ್ತು ಕೇಸ್

ಆಂಧ್ರ ಪ್ರದೇಶ: ಸೆನ್ಸೇಷನಲ್ ಹಾಗೂ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಬಂಧನದ ಭೀತಿಗೆ ಸಿಲುಕಿದ್ದಾರೆ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಡ್ಡಿಪಾಡು ಪೊಲೀಸ್ ಠಾಣೆಯಲ್ಲಿ ಆರ್​ಜಿವಿ ವಿರುದ್ಧ ಪ್ರಕರಣ ದಾಖಲಾಗಿದೆ. ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ರಾಜಕೀಯ ಪ್ರಯಾಣ ಆಧರಿಸಿದ 'ವ್ಯೂಹಂ' ಚಿತ್ರದ ಪ್ರಚಾರದ ವೇಳೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಸಿಎಂ ಪುತ್ರ ಹಾಗೂ ಸಚಿವ ನಾರಾ ಲೋಕೇಶ್, ಇವರ ಪತ್ನಿ ನಾರಾ ಬ್ರಾಹ್ಮಣಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅನುಚಿತ ಪೋಸ್ಟ್ ಹಾಕಿದ್ದ ಹಿನ್ನೆಲೆ ಆರ್​ಜಿವಿ ವಿರುದ್ಧ ಟಿಡಿಪಿ ಮುಖಂಡ ರಾಮಲಿಂಗಂ ಪ್ರಕಾಶಂ ಜಿಲ್ಲಾ ಪೊಲೀಸರಿಗೆ ದೂರು ನೀಡಿದ್ದಾರೆ. 

ದೂರಿನ ಆಧಾರದ ಮೇಲೆ ಪೊಲೀಸರು ಐಟಿ ಕಾಯ್ದೆಯಡಿ ರಾಮ್​ ಗೋಪಾಲ್ ವರ್ಮಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ವರ್ಮಾ ಈ ಹಿಂದಿನಿಂದಲೂ ಚಂದ್ರಬಾಬು ನಾಯ್ಡು, ಲೋಕೇಶ್ ಮತ್ತು ಪವನ್ ಕಲ್ಯಾಣ್ ಸೇರಿ ಆಂಧ್ರದ ಮೈತ್ರಿ ನಾಯಕರನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಪದೇ ಪದೇ ದಾಳಿ ಮಾಡುತ್ತಿದ್ದರು. ವೈಎಸ್ಆರ್​ಪಿ ಸರ್ಕಾರದ ಅವಧಿಯಲ್ಲಿ ಬೋರುಗಡ್ಡ ಅನಿಲ್ ಕುಮಾರ್, ಶ್ರೀ ರೆಡ್ಡಿ, ಆರ್​ಜಿವಿ, ಪೋಸಾನಿ ಕೃಷ್ಣ ಮುರಳಿ ಸೇರಿದಂತೆ ಹಲವರು ಮೈತ್ರಿ ನಾಯಕರನ್ನು ಗುರಿಯಾಗಿಸಿ ಜಾಲತಾಣಗಳಲ್ಲಿ ಹದ್ದು ಮೀರಿ ವರ್ತಿಸಿದ್ದು ಸಾಕಷ್ಟು ಚರ್ಚೆಯಾಗಿತ್ತು. 

ಶ್ರೀ ರೆಡ್ಡಿ ಕ್ಷಮೆಯಾಚನೆ

ಹಿಂದಿನ ಸರ್ಕಾರದಲ್ಲಿ ವಿರೋಧಿಗಳನ್ನು ಗುರಿಯಾಗಿಸಿಕೊಂಡವರ ವಿರುದ್ಧ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಅತಿರೇಕದ ಪೋಸ್ಟ್​​ಗಳನ್ನು ಮಾಡಿದವರ ವಿರುದ್ಧ ಪೊಲೀಸರು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಇಂತಹ ಹಲವಾರು ಪ್ರಕರಣಗಳಲ್ಲಿ ವೈಎಸ್ಆರ್​ಪಿ ಬೆಂಬಲಿಗ ಬೋರುಗಡ್ಡ ಅನಿಲ್ ಕುಮಾರ್​​ರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಶ್ರೀ ರೆಡ್ಡಿ, ಪೊಸಾನಿ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ದೂರಿನ ಮೇರೆಗೆ ಪ್ರಕಾಶಂ ಜಿಲ್ಲಾ ಪೊಲೀಸರು ಆರ್​​ಜಿವಿ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಆದರೆ ಶ್ರೀ ರೆಡ್ಡಿ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದು, ಚಂದ್ರಬಾಬು, ಲೋಕೇಶ್, ಪವನ್ ಕಲ್ಯಾಣ್ ಸೇರಿದಂತೆ ಮೈತ್ರಿ ನಾಯಕರ ಕ್ಷಮೆಯಾಚಿಸಿದ್ದಾರೆ.

ಸೋಷಿಯಲ್ ಮೀಡಿಯಾ ಮೇಲೆ ಕಣ್ಣಿಟ್ಟ ಪೊಲೀಸರು

ವೈಎಸ್ಆರ್​​ಪಿ ಸರ್ಕಾರದ ಅವಧಿಯಲ್ಲಿ ಹಿರಿಯ ನಾಯಕರ ಆದೇಶದ ಮೇರೆಗೆ ಮೈತ್ರಿ ನಾಯಕರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ಗಳನ್ನು ಹಾಕಿದ್ದಾಗಿ ಅವರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಂತ ಕೆಟ್ಟ ಭಾಷೆ ಬಳಸುತ್ತಿರುವವರ ವಿರುದ್ಧ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಚಂದ್ರಬಾಬು ನಾಯ್ಡು ಅವರ ಸೂಚನೆಯ ಮೇರೆಗೆ ಪೊಲೀಸರು ಸಾಮಾಜಿಕ ಮಾಧ್ಯಮಗಳ ಮೇಲೆ ಕೇಂದ್ರೀಕರಿಸಿದ್ದು, ಮಿತಿ ಮೀರಿ ವರ್ತಿಸುವವರ ವಿರುದ್ಧ ಕೇಸ್ ಜಡಿಯಲಾಗುತ್ತಿದೆ. ಬಂಧನದ ನಂತರ ಪೋಸ್ಟ್​​ಗಳು ಎಷ್ಟು ಅನುಚಿತವಾಗಿ ಎಂಬುದರ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ವಿವರಿಸುತ್ತಿದ್ದಾರೆ.

ಸಾಮಾಜಿಕ ಮೀಡಿಯಾ ಗ್ರೂಪ್​​ಗಳಲ್ಲಿ ಮೆಸೇಜ್​ಗಳನ್ನು ಫಾರ್ವರ್ಡ್ ಮಾಡಿದವರನ್ನು ಪೊಲೀಸ್ ಠಾಣೆಗಳಿಗೆ ಕರೆಸಿ ವಿವರ ಪಡೆಯಲಾಗುತ್ತಿದೆ. ವಿವಾದಾತ್ಮಕ ಪೋಸ್ಟ್​ಗಳಿಗೆ ಲೈಕ್ ಒತ್ತಿದರೆ ವಾಟ್ಸಾಪ್ ಮೂಲಕ 160 ಸಿಆರ್​​ಪಿಸಿ ನೋಟಿಸ್​ ಕಳುಹಿಸಲಾಗುತ್ತಿದೆ. ರಾಜಕೀಯ ದುರುದ್ದೇಶದಿಂದ ಮೈತ್ರಿ ನಾಯಕರ ಫೋಟೋಗಳು ಮತ್ತು ಅಶ್ಲೀಲ ವಿಡಿಯೋಗಳನ್ನು ಮಾರ್ಫಿಂಗ್ ಮಾಡಿದವರ ವಿರುದ್ಧ ಬಿಎನ್​ಎಸ್ ಸೆಕ್ಷನ್ 111 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.