ಕನ್ನಡ ಸುದ್ದಿ  /  Lifestyle  /  Automobiles News Kia To Hike Prices On Selected Car On Up To 3 Percent From April 1 Rmy

ಏಪ್ರಿಲ್ 1 ರಿಂದ ಕಿಯಾ ಮೋಟಾರ್ಸ್‌ ಕಾರುಗಳ ಬೆಲೆ ಏರಿಕೆ; ಸಾನೆಟ್, ಸೆಲ್ಟೋಸ್, ಕಾರೆನ್ಸ್ ಮೇಲೆ ಶೇ 3 ರಷ್ಟು ಹೆಚ್ಚಳ

KIA Car Price Hike: ಕಿಯಾ ಮೋಟಾರ್ಸ್ ಇಂಡಿಯಾ ಏಪ್ರಿಲ್ 1 ರಿಂದ ತನ್ನ ಪ್ರಮುಖ ಕಾರುಗಳ ಬೆಲೆಯಲ್ಲಿ ಶೇಕಡಾ 3 ರಷ್ಟು ಹೆಚ್ಚಳ ಮಾಡಲು ಮುಂದಾಗಿದೆ. ಯಾವುವು ಆ ಕಾರುಗಳು, ಪ್ರಸ್ತುತ ಬೆಲೆಯ ವಿವರ ತಿಳಿಯಿರಿ.

ಏಪ್ರಿಲ್ 1 ರಿಂದ ಕಿಯಾ ತನ್ನ ಪ್ರಮುಖ ಹಾಗೂ ಜನಪ್ರಿಯ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಣೆ ಮಾಡಿದೆ.
ಏಪ್ರಿಲ್ 1 ರಿಂದ ಕಿಯಾ ತನ್ನ ಪ್ರಮುಖ ಹಾಗೂ ಜನಪ್ರಿಯ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಣೆ ಮಾಡಿದೆ.

ಕಿಯಾ ಮೋಟಾರ್ಸ್ ಇಂಡಿಯಾ (Kia Motors India) ತನ್ನ ಗ್ರಾಹಕರ ಬೇಜಿಗೆ ಕತ್ತರಿ ಹಾಕಲು ಮುಂದಾಗಿದೆ. 2024ರ ಏಪ್ರಿಲ್ 1 ರಿಂದ ಅಂದರೆ ಮುಂದಿನ ತಿಂಗಳಿನಿಂದ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಗುರುವಾರ (ಮಾರ್ಚ್ 21) ಘೋಷಣೆ ಮಾಡಿದೆ. ಮುಂದಿನ ತಿಂಗಳಿನಿಂದ ಕಿಯಾ ಸಾನೆಟ್, ಕಿಯಾ ಸೆಲ್ಟೋಸ್ ಹಾಗೂ ಕಿಯಾ ಕಾರೆನ್ಸ್ ಕಾರುಗಳ ಬೆಲೆಯಲ್ಲಿ ಶೇಕಡಾ 3 ರಷ್ಟು ಹೆಚ್ಚಾಗಲಿದೆ. ತನ್ನ ವಾಹನಗಳ ಬೆಲೆ ಏರಿಕೆಗೆ ಸಂಸ್ಥೆ ಕಾರಣವನ್ನೂ ನೀಡಿದೆ. ಹೆಚ್ಚುತ್ತಿರುವ ಸರಕುಗಳ ಬೆಲೆಗಳು ಮತ್ತು ಹೆಚ್ಚುತ್ತಿರುವ ಪೂರೈಕೆ ಸರಪಳಿ ಸಂಬಂಧಿತ ಇನ್ಫುಟ್ ವೆಚ್ಚದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ಈ ವರ್ಷ ಬೆಲೆ ಹೆಚ್ಚಳ ಮಾಡುತ್ತಿರುವುದು ಇದೇ ಮೊದಲು ಎಂದು ಕಿಯಾ ಮೋಟಾರ್ಸ್ ಇಂಡಿಯಾ ತಿಳಿಸಿದೆ.

ಯಾವ ಮಾದರಿಯಲ್ಲಿ ಎಷ್ಟು ಬೆಲೆ ಏರಿಕೆ ಮಾಡಲುತ್ತಿದೆ ಎಂಬುದರ ಮಾಹಿತಿಯನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಮಾದರಿ ಮತ್ತು ವೇರಿಯಂಟ್‌ಗಳನ್ನು ಅವಲಂಬಿಸಿ ಬೆಲೆಗಳು ಬದಲಾಗಬಹುದು ಎಂಬ ನಿರೀಕ್ಷೆಗಳು ಮಾರುಕಟ್ಟೆಯಲ್ಲಿವೆ. ಕಂಪನಿಯಂದ ಅತ್ಯಂತ ಕೈಗೆಟುಕುವ ವಾಹನ ಎಂದು ಕರೆಯಲ್ಪಡುವ ಕಿಯಾ ಸಾನೆಟ್ ಬೆಲೆ 7.99 ಲಕ್ಷ ರಿಂದ 14.69 ಲಕ್ಷ ರೂಪಾಯಿವರೆಗೆ ಇರುತ್ತದೆ.

ಸಾನೆಟ್, ಸೆಲ್ಟೋಸ್ ಹಾಗೂ ಕಾರೆನ್ಸ್ ಪ್ರಸ್ತುತ ಬೆಲೆ

ಕಿಯಾ ಕಾರೆನ್ಸ್ ಎಂಪಿವಿ ಬೆಲೆ 10.45 ಲಕ್ಷ ರೂನಿಂದ 18.95 ಲಕ್ಷ ರೂಪಾಯಿವರೆಗೆ ಇದೆ. ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಸ್‌ಯುವಿ ಕಿಯಾ ಸೆಲ್ಟೋಸ್ ಬೆಲೆ 10.90 ಲಕ್ಷ ರೂಪಾಯಿಯಿಂದ 20.30 ಲಕ್ಷ ರೂಪಾಯಿವರೆಗೆ ಇದೆ. ಈ ಎಲ್ಲಾ ಬೆಲೆಗಳು ಎಕ್ಸ್‌ ಶೋರೂಂ ಬೆಲೆಗಳಾಗಿವೆ.

ಕಿಯಾ ಇಂಡಿಯಾದ ಸೇಲ್ಸ್ ಅಂಡ್ ಮಾರ್ಕೆಟಿಂಗ್ ನ್ಯಾಷನಲ್ ಹೆಡ್ ಹರ್ದೀಪ್ ಸಿಂಗ್ ಬ್ರಾರ್ ಅವರು ಬೆಲೆ ಏರಿಕೆಯ ಬಗ್ಗೆ ಮಾತನಾಡಿದ್ದು, ಕಿಯಾದಲ್ಲಿ ನಾವು ನಮ್ಮ ಮೌಲ್ಯಯುತ ಗ್ರಾಹಕರಿಗೆ ಪ್ರೀಮಿಯಂ ಆಗಿದ್ದೇವೆ. ತಾಂತ್ರಿಕವಾಗಿ ಮುಂದುವರಿದ ಉತ್ಪನ್ನಗಳನ್ನು ಒದಗಿಸಲು ನಾವು ನಿರಂತರವಾಗಿ ಪ್ರಯತ್ನಿಸುತ್ತೇವೆ. ಆದಗ್ಯೂ ಸರಕುಗಳ ಬೆಲೆಗಳಲ್ಲಿ ನಿರಂತರ ಹೆಚ್ಚಳ, ವಿನಿಮಯ ದರ ಮತ್ತು ಹೆಚ್ಚುತ್ತಿರುವ ಇನ್ಫುಟ್ ವೆಚ್ಚದ ಕಾರಣ, ಭಾಗಶಃ ಬೆಲೆ ಏರಿಕೆ ಅನಿವಾರ್ಯವಾಗಿದೆ. ಗ್ರಾಹಕರ ಮೇಲೆ ಹೆಚ್ಚಿನ ಪರಿಣಾಮ ಬೀರುವುದನ್ನು ತಪ್ಪಿಸಲು ಕಂಪನಿ ಕ್ರಮ ಕೈಗೊಂಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿ ಐದು ವರ್ಷಗಳಲ್ಲಿ ಗಣನೀಯ ಪ್ರಗತಿ ಕಂಡ ಕಿಯಾ ಮೋಟಾರ್ಸ್

2019 ರಲ್ಲಿ ಭಾರತಕ್ಕೆ ಎಂಟ್ರಿ ಕೊಟ್ಟಾಗಿನಿಂದ ಮಾರಾಟ ಪಟ್ಟಿಯಲ್ಲಿ ಕಿಯಾ ಗಮನಾರ್ಹ ಏರಿಕೆಯನ್ನು ಕಂಡಿದೆ. ಭಾರತೀಯ ಆಟೋ ವಲಯದ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ. ಸೆಲ್ಟೋಸ್ 6.13 ಲಕ್ಷ, ಸಾನೆಟ್ 3.95 ಲಕ್ಷ ಹಾಗೂ ಕಾರೆನ್ಸ್ 1.59 ಲಕ್ಷ ಯೂನಿಟ್‌ಗಳನ್ನು ಮಾರಾಟ ಮಾಡಿದೆ. ಇವಿ6 ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿ ಕಂಪ್ಲಿಟ್ಲಿ ಬಿಲ್ಟ್ ಯೂನಿಟ್ (ಸಿಬಿಯು)ನಲ್ಲಿ ಭಾರತದ ಮಾರುಕಟ್ಟೆಗೆ ತಂದಿದೆ.

ಕಿಯಾ ಮೋಟಾರ್ಸ್ ಒಂದೇ ಅಲ್ಲ, ಭಾರತದ ಬಹುತೇಕ ಎಲ್ಲಾ ಪ್ರಮುಖ ಆಟೋಮೊಬೈಲ್ ಕಂಪನಿಗಳು ವಾಹನಗಳ ಬೆಲೆಯನ್ನು ಹೆಚ್ಚಿಸುವ ಪ್ರಕ್ರಿಯೆಯಲ್ಲಿವೆ. ಕಳೆದ ಎರಡು ವರ್ಷಗಳಿಂದ ವಾಹನಗಳ ಬೆಲೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ಆದರೆ ಬೇಡಿಕೆ ಕಡಿಮೆಯಾಗದ ಕಾರಣ ಕಂಪನಿಗಳು ಹರಸಾಹಸಪಟ್ಟು ಮತ್ತೆ ಬೆಲೆಗಳನ್ನು ಏರಿಸುವ ನಿರ್ಧಾರ ಕೈಗೊಳ್ಳುತ್ತಿವೆ. ಟಾಟಾ ಮೋಟಾರ್ಸ್, ಮಾರುತಿ ಸುಜುಕಿಯಂತಹ ಕಂಪನಿಗಳು ಈ ವರ್ಷದ ಈಗಾಗಲೇ 1 ಬಾರಿ ಬೆಲೆಗಳನ್ನು ಹೆಚ್ಚಳ ಮಾಡಿವೆ. ಮುಂದಿನ ದಿನಗಳಲ್ಲಿ ಯಾವೆಲ್ಲಾ ಕಂಪನಿಗಳು ಈ ಪಟ್ಟಿಗೆ ಸೇರಲಿವೆ ಅನ್ನೋದನ್ನ ಕಾದು ನೋಡಬೇಕಿದೆ.