Ola Electric: ಎಲೆಕ್ಟ್ರಿಕ್‌ ವಾಹನಗಳೇ ಡೋಂಟ್‌ವರಿ, ಕೃಷ್ಣಗಿರಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಭಾರತದ ಬೃಹತ್‌ ಓಲಾ ಬ್ಯಾಟರಿ ಫ್ಯಾಕ್ಟರಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ola Electric: ಎಲೆಕ್ಟ್ರಿಕ್‌ ವಾಹನಗಳೇ ಡೋಂಟ್‌ವರಿ, ಕೃಷ್ಣಗಿರಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಭಾರತದ ಬೃಹತ್‌ ಓಲಾ ಬ್ಯಾಟರಿ ಫ್ಯಾಕ್ಟರಿ

Ola Electric: ಎಲೆಕ್ಟ್ರಿಕ್‌ ವಾಹನಗಳೇ ಡೋಂಟ್‌ವರಿ, ಕೃಷ್ಣಗಿರಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಭಾರತದ ಬೃಹತ್‌ ಓಲಾ ಬ್ಯಾಟರಿ ಫ್ಯಾಕ್ಟರಿ

Ola Electric battery cell Gigafactory: ಓಲಾ ಎಲೆಕ್ಟ್ರಿಕ್‌ ಕಂಪನಿಯು ತನ್ನ ಮುಂದಿನ ಬ್ಯಾಟರಿ ಸೆಲ್‌ ಗಿಗಾಫ್ಯಾಕ್ಟರಿಯ ನಿರ್ಮಾಣ ಆರಂಭಿಸಿರುವುದಾಗಿ ಘೋಷಿಸಿದೆ. ಇದು ಭಾರತದಲ್ಲಿಯೇ ಬೃಹತ್‌ ಎಲೆಕ್ಟ್ರಿಕ್‌ ವಾಹನದ ಸೆಲ್‌ ಘಟಕವಾಗಿರುವ ಭರವಸೆಯನ್ನು ಕಂಪನಿ ನೀಡಿದೆ.

Ola Electric: ಓಲಾದಿಂದ ಭಾರತದ ಬೃಹತ್‌ ಬ್ಯಾಟರಿ ಫ್ಯಾಕ್ಟರಿ
Ola Electric: ಓಲಾದಿಂದ ಭಾರತದ ಬೃಹತ್‌ ಬ್ಯಾಟರಿ ಫ್ಯಾಕ್ಟರಿ (Twitter/@Bhash)

ಓಲಾ ಎಲೆಕ್ಟ್ರಿಕ್‌ ಕಂಪನಿಯು ತನ್ನ ಮುಂದಿನ ಬ್ಯಾಟರಿ ಸೆಲ್‌ ಗಿಗಾಫ್ಯಾಕ್ಟರಿಯ ನಿರ್ಮಾಣ ಆರಂಭಿಸಿರುವುದಾಗಿ ಘೋಷಿಸಿದೆ. ಇದು ಭಾರತದಲ್ಲಿಯೇ ಬೃಹತ್‌ ಎಲೆಕ್ಟ್ರಿಕ್‌ ವಾಹನದ ಸೆಲ್‌ ಘಟಕವಾಗಿರುವ ಭರವಸೆಯನ್ನು ಕಂಪನಿ ನೀಡಿದೆ. ಈ ಘಟಕ ನಿರ್ಮಾಣಕ್ಕೆ ಚಾಲನೆ ನೀಡಿರುವ ಮಾಹಿತಿಯನ್ನು ಓಲಾ ಎಲೆಕ್ಟ್ರಿಕ್‌ ಸಿಇಒ ಮತ್ತು ಸಹ ಸ್ಥಾಪಕರಾದ ಭವಿಶ್‌ ಅಗರ್‌ವಾಲ್‌ ನೀಡಿದ್ದಾರೆ. ಇವರು ಇದಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಟ್ವೀಟ್‌ ಮಾಡಿದ್ದಾರೆ. ಎಲೆಕ್ಟ್ರಿಕ್‌ ವಾಹನ ಕ್ಷೇತ್ರದಲ್ಲಿ ದ್ವಿಚಕ್ರ ವಾಹನ ಮಾತ್ರವಲ್ಲದೆ ನಾಲ್ಕು ಚಕ್ರದ ವಾಹನಗಳನ್ನು ಉತ್ಪಾದಿಸಿ ಇವಾಹನ ಕ್ಷೇತ್ರದಲ್ಲಿ ಪ್ರಮುಖ ಕಂಪನಿಯಾಗುವ ಸೂಚನೆಯನ್ನೂ ಓಲಾ ನೀಡಿದೆ.

ಎಲ್ಲಿ ನಿರ್ಮಾಣವಾಗುತ್ತಿದೆ ಓಲಾ ಫ್ಯಾಕ್ಟರಿ?

ಓಲಾ ಎಲೆಕ್ಟ್ರಿಕ್‌ನ ಸೆಲ್‌ ಗಿಗಾಫ್ಯಾಕ್ಟರಿಯು ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಿರ್ಮಾಣಗೊಳ್ಳುತ್ತಿದೆ. ಇಲ್ಲಿ ಪ್ರತಿ ತಿಂಗಳು 10 ಗಿಗಾ ವ್ಯಾಟ್‌ ಅವರ್ಸ್‌ (ಜಿಡಬ್ಲ್ಯುಎಂ) ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಈ ಫ್ಯಾಕ್ಟರಿಯಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಮಾತ್ರವಲ್ಲದೆ ಇತರೆ ಅವಶ್ಯಕತೆಯ ಬ್ಯಾಟರಿಗಳನ್ನೂ ಉತ್ಪಾದಿಸಲಾಗುತ್ತದೆ. ದೊಡ್ಡ ಮಟ್ಟದಲ್ಲಿ ಚೀನಾದಂತೆ ಭಾರತದಲ್ಲಿ ಇಲ್ಲಿಯವರೆಗೆ ಬ್ಯಾಟರಿ ಸೆಲ್‌ ತಯಾರಿಕೆ ಮಾಡಲಾಗುತ್ತಿರಲಿಲ್ಲ. ಚೀನಾ, ಥೈವಾನ್‌ ಮತ್ತು ದಕ್ಷಿಣ ಕೊರಿಯಾದಲ್ಲಿ ಬ್ಯಾಟರಿ ಕೋಶಗಳ ಉತ್ಪಾದನೆಗೆ ಬೃಹತ್‌ ಫ್ಯಾಕ್ಟರಿಗಳಿವೆ. ಭಾರತದಲ್ಲಿ ಇಂತಹ ದೊಡ್ಡ ಬ್ಯಾಟರಿ ಫ್ಯಾಕ್ಟರಿಗಳು ಇಲ್ಲ. ಇದೀಗ ಈ ನಿರ್ವಾತವನ್ನು ಓಲಾ ಎಲೆಕ್ಟ್ರಿಕ್‌ ತಗ್ಗಿಸಲಿದೆ.

ಭವಿಶ್‌ ಅಗರ್‌ವಾಲ್‌ ಅವರು ಮಾಡಿದ ಟ್ವೀಟ್‌ ಈ ರೀತಿಯಿದೆ. "ನಮ್ಮ ಸೆಲ್‌ ಗಿಗಾಫ್ಯಾಕ್ಟರಿಯ ಕೆಲಸ ಆರಂಭವಾಗಿದೆ. ಅತ್ಯಧಿಕ ವೇಗದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಇದು ಭಾರತದ ಬೃಹತ್‌ ಮತ್ತು ಜಗತ್ತಿನ ಬೃಹತ್‌ ಸೆಲ್‌ ಫ್ಯಾಕ್ಟರಿಯಾಗಲಿದೆ" ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಭಾರತ ಸರಕಾರವೂ ಎಲೆಕ್ಟ್ರಿಕ್‌ ವಾಹನಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಪಿಎಲ್‌ಐ ಸ್ಕೀಮ್‌ ಮೂಲಕ ಬ್ಯಾಟರಿ ಉತ್ಪಾದನೆ ಸೇರಿದಂತೆ ಎಲೆಕ್ಟ್ರಿಕ್‌ ವಾಹನ ಉತ್ಪಾದನೆಗೆ ಬೆಂಬಲ ನೀಡುತ್ತಿದೆ. ಭಾರತದಲ್ಲಿ ರಿಲಯೆನ್ಸ್‌ ಇಂಡಸ್ಟ್ರಿ ಕೂಡ ಸೆಲ್‌ ಫ್ಯಾಕ್ಟರಿ ನಿರ್ಮಿಸಲು ಯೋಜಿಸಿದೆ. ಬೆಂಗಳೂರು ಮೂಲದ ಸ್ಟಾರ್ಟಪ್‌ ಲೊಗೊ9 ಮೆಟಿರಿಯಲ್ಸ್‌ ಭಾರತದ ಮೊದಲ ಸ್ವದೇಶಿ ಬ್ಯಾಟರಿ ಸೆಲ್ಸ್‌ ಉತ್ಪಾದಕ ಕಂಪನಿಯಾಗಲಿದೆ.

ದೇಶದ ವಾಹನ ವಲಯದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಸ್ಥಳೀಯವಾಗಿ ಬ್ಯಾಟರಿ ಉತ್ಪಾದನೆಯು ಸಾಕಷ್ಟು ಪ್ರಯೋಜನಕಾರಿಯಾಗಲಿದೆ. ಮೊದಲನೆಯದಾಗಿ ಇದು ಬ್ಯಾಟರಿ ಪೂರೈಕೆ ಕೊರತೆ ಕಡಿಮೆ ಮಾಡಲಿದೆ. ಬ್ಯಾಟರಿ ದರವೂ ಕಡಿಮೆಯಾಗಲಿದೆ. ಆಮದು ಶುಲ್ಕ ಕಡಿಮೆ ಮಾಡಲಿದೆ. ಲಾಜಿಸ್ಟಿಕ್‌ ವೆಚ್ಚ ಕಡಿಮೆ ಮಾಡಲಿದೆ. ಓಲಾದ ಸೆಲ್‌ ಗಿಗಾ ಫ್ಯಾಕ್ಟರಿಯು ಕಾರ್ಯನಿರ್ವಹಣೆಗೆ ಸಿದ್ಧವಾಗಲು ಇನ್ನೂ ಹಲವು ವರ್ಷ ಬೇಕಿದೆ.

ಭಾರತದ ರಸ್ತೆಗಿಳಿದ ಮೆಕ್‌ಲಾರೆನ್‌ ಅರ್ಟುರಾ ಸೂಪರ್‌ ಕಾರು

ಭಾರತದ ರಸ್ತೆಗೆ ಅರ್ಟುರಾ ಹೆಸರಿನ ಸೂಪರ್‌ಕಾರೊಂದನ್ನು ಮೆಕ್‌ಲಾರೆನ್‌ ಆಟೋಮೋಟಿವ್‌ ಕಂಪನಿಯು ಪರಿಚಯಿಸಿದೆ. ಇದರ ಎಕ್ಸ್‌ಶೋರೂಂ ದರ 5.1 ಕೋಟಿ ರೂಪಾಯಿ. ರಸ್ತೆ ತೆರಿಗೆ ಇತ್ಯಾದಿಗಳೆಲ್ಲ ಸೇರಿ ಆನ್‌ರೋಡ್‌ ದರ ಆರು ಕೋಟಿ ರೂಪಾಯಿ ದಾಟಿದರೂ ಅಚ್ಚರಿಯಿಲ್ಲ. ಆರ್ಟ್‌ ಮತ್ತು ಫ್ಯೂಚರ್‌ (ಕಲೆ ಮತ್ತು ಭವಿಷ್ಯ) ಎಂಬೆರಡು ಪದಗಳ ಯುಗಳಗೀತೆಯಾಗಿ ಅರ್ಟುರಾ ಎಂಬ ಹೆಸರನ್ನು ಈ ಸೂಪರ್‌ಕಾರಿಗೆ ಇಡಲಾಗಿದೆ ಎಂದು ಮೆಕ್‌ಲಾರೆನ್‌ ತಿಳಿಸಿದೆ. ಈ ಕಾರಿನ ಕುರಿತು ಸಂಪೂರ್ಣ ವಿವರ ಇಲ್ಲಿದೆ ಓದಿರಿ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.