Credit Card portability: ಮೊಬೈಲ್‌ ಸಿಮ್‌ನಂತೆ ಕ್ರೆಡಿಟ್‌ ಕಾರ್ಡ್‌ ಪೋರ್ಟ್‌ ಮಾಡಲು ಅವಕಾಶ, ಅಕ್ಟೋಬರ್‌ 1ರಿಂದ ಜಾರಿ, ಇಲ್ಲಿದೆ ವಿವರ-business news india credit card portability from october 1 port to any preferred network visa mastercard rupay pcp ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Credit Card Portability: ಮೊಬೈಲ್‌ ಸಿಮ್‌ನಂತೆ ಕ್ರೆಡಿಟ್‌ ಕಾರ್ಡ್‌ ಪೋರ್ಟ್‌ ಮಾಡಲು ಅವಕಾಶ, ಅಕ್ಟೋಬರ್‌ 1ರಿಂದ ಜಾರಿ, ಇಲ್ಲಿದೆ ವಿವರ

Credit Card portability: ಮೊಬೈಲ್‌ ಸಿಮ್‌ನಂತೆ ಕ್ರೆಡಿಟ್‌ ಕಾರ್ಡ್‌ ಪೋರ್ಟ್‌ ಮಾಡಲು ಅವಕಾಶ, ಅಕ್ಟೋಬರ್‌ 1ರಿಂದ ಜಾರಿ, ಇಲ್ಲಿದೆ ವಿವರ

Credit Card portability: ನಿಮಗೆ ಒಂದು ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಯ ಕ್ರೆಡಿಟ್‌ ಕಾರ್ಡ್‌ ಸೇವೆ ಇಷ್ಟವಾಗಿಲ್ವ? ಹಾಗಾದರೆ ಮತ್ತೊಂದು ಬ್ಯಾಂಕ್‌ನ ಸೇವೆಗೆ ಪೋರ್ಟ್‌ ಆಗಿ. ಮೊಬೈಲ್‌ ಸಿಮ್‌ ಪೋರ್ಟ್‌ ಮಾಡುವಂತೆ ಕ್ರೆಡಿಟ್‌ ಕಾರ್ಡ್‌ ಪೋರ್ಟ್‌ ಮಾಡುವ ಅವಕಾಶ ಇದೇ ವರ್ಷ ಅಕ್ಟೋಬರ್‌ 1ರಿಂದ ದೊರಕಲಿದೆ.

ಕ್ರೆಡಿಟ್‌ ಕಾರ್ಡ್‌ ಪೋರ್ಟ್‌ ಮಾಡಲು ಅವಕಾಶ
ಕ್ರೆಡಿಟ್‌ ಕಾರ್ಡ್‌ ಪೋರ್ಟ್‌ ಮಾಡಲು ಅವಕಾಶ

ರಿಸರ್ಚ್‌ ಬ್ಯಾಂಕ್‌ ಆಫ್‌ ಇಂಡಿಯಾವು ನಿನ್ನೆ ಡೆಬಿಟ್, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್‌ ಕುರಿತು ಹೊರಡಿಸಿದ ಕರಡು ಅಧಿಸೂಚನೆಯಲ್ಲಿ ಒಂದು ಮಹತ್ವದ ಅಂಶವಿದೆ. ಆ ಸುತ್ತೊಲೆಯ ಪ್ರಕಾರ ಗ್ರಾಹಕರಿಗೆ ತಮ್ಮ ವಿತರಣಾ ಬ್ಯಾಂಕ್‌ ಅಥವಾ ಹಣಕಾಸು ಕಂಪನಿಯ ಜತೆ ಮುಂದುವರೆಯುವ ಬದಲು ಅವರು ಬಯಸಿದ ಕಾರ್ಡ್‌ ನೆಟ್‌ವರ್ಕ್‌ಗೆ ಹೋಗುವ ಅವಕಾಶ ನೀಡಲಾಗಿದೆ. ವೀಸಾ, ಮಾಸ್ಟರ್‌ಕಾರ್ಡ್, ರುಪೇಯಂತಹ ಕಾರ್ಡ್ ವಿತರಕರು ಒಂದಕ್ಕಿಂತ ಹೆಚ್ಚು ಕಾರ್ಡ್ ನೆಟ್‌ವರ್ಕ್‌ಗಳಲ್ಲಿ ಕಾರ್ಡ್‌ಗಳನ್ನು ವಿತರಿಸಲು ತಿಳಿಸಲಾಗಿದೆ. ಇದು ಬ್ಯಾಂಕ್‌ ಮಾತ್ರವಲ್ಲದೆ ಬ್ಯಾಂಕಿಂಗ್‌ ಅಲ್ಲದ ಹಣಕಾಸು ಕಂಪನಿಗಳಿಗೆ ಅನ್ವಯವಾಗುತ್ತದೆ ಎಂದು ಸುತ್ತೊಲೆಯಲ್ಲಿ ತಿಳಿಸಲಾಗಿದೆ.

ಈ ನಿಯಮವನ್ನು ಅಕ್ಟೋಬರ್‌ 1ರಿಂದ ಜಾರಿಗೆ ತರಬೇಕು, ಕ್ರೆಡಿಟ್ ಕಾರ್ಡ್ ವಿತರಕರು ಗ್ರಾಹಕರಿಗೆ ತಮ್ಮ ಆಯ್ಕೆಯ ನೆಟ್‌ವರ್ಕ್ ಆಯ್ಕೆ ಮಾಡುವ ಆಯ್ಕೆಯನ್ನು ನೀಡಬೇಕು ಎಂದು ಆರ್‌ಬಿಐ ಪ್ರಸ್ತಾಪಿಸಿದೆ. ಇದರಿಂದ ಕ್ರೆಡಿಟ್‌ ಕಾರ್ಡ್‌ ಬಳಕೆದಾರರು ಒಂದು ನೆಟ್‌ವರ್ಕ್‌ನಿಂದ ಇನ್ನೊಂದಕ್ಕೆ ಬದಲಾಯಿಸಿಕೊಳ್ಳಬಹುದು . ಈಗ ಭಾರತದ ಗ್ರಾಹಕರು ವೀಸಾ, ಮಾಸ್ಟರ್‌ಕಾರ್ಡ್, ರುಪೇ, ಅಮೇರಿಕನ್ ಎಕ್ಸ್‌ಪ್ರೆಸ್ ಮತ್ತು ಡಿನರ್ಸ್ ಕ್ಲಬ್ ಎಂಬ ಐದು ಕ್ರೆಡಿಟ್ ಕಾರ್ಡ್ ನೆಟ್‌ವರ್ಕ್‌ ಹೊಂದಿದ್ದಾರೆ.

ಇತರೆ ಕಾರ್ಡ್‌ ನೆಟ್‌ವರ್ಕ್‌ಗಳ ಜತೆ ಟೈಯಪ್‌ ಮಾಡುವ ಸಾಮರ್ಥ್ಯಕ್ಕೆ ಮಿತಿ ಹಾಕುವುದನ್ನು ಆರ್‌ಬಿಐ ನಿರ್ಬಂಧಿಸಿದೆ. ಕಾರ್ಡ್ ವಿತರಕರು ಮತ್ತು ಕಾರ್ಡ್ ನೆಟ್‌ವರ್ಕ್‌ಗಳು ತಿದ್ದುಪಡಿ ಅಥವಾ ನವೀಕರಣದ ಸಮಯದಲ್ಲಿ ಅಸ್ತಿತ್ವದಲ್ಲಿರುವ ಒಪ್ಪಂದಗಳನ್ನು ಬದಲಾಯಿಸಿ ಈ ನೂತನ ನಿಯಮಗಳಿಗೆ ತಕ್ಕಂತೆ ಗ್ರಾಹಕರೊಂದಿಗಿನ ಅಗ್ರಿಮೆಂಟ್‌ ಬದಲಾಯಿಸಿಕೊಳ್ಳಬೇಕು ಎಂದು ಆರ್‌ಬಿಐ ತಿಳಿಸಿದೆ. ಈ ಬದಲಾವಣೆಗಳು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದ್ದು, ಆಗಸ್ಟ್ 4 ರೊಳಗೆ ಪ್ರತಿಕ್ರಿಯೆ ಆಹ್ವಾನಿಸಲಾಗಿದೆ ಎಂದು ಆರ್‌ಬಿಐ ತನ್ನ ಸುತ್ತೊಲೆಯಲ್ಲಿ ತಿಳಿಸಿದೆ.

ಕ್ರೆಡಿಟ್‌ ಕಾರ್ಡ್‌ ಬದಲಾಯಿಸಿ

ಬ್ಯಾಂಕ್‌ಗಳು ಇತರೆ ಕಾರ್ಡ್‌ ನೆಟ್‌ವರ್ಕ್‌ಗಳ ಜತೆ ಸಹಭಾಗಿತ್ವ ಮಾಡಿಕೊಳ್ಳಬಾರದು. ಹೀಗೆ ಮಾಡಿದರೆ ಗ್ರಾಹಕರಿಗೆ ತಮಗೆ ಬೇಕಾದ ಕಾರ್ಡ್‌ ಪೂರೈಕೆದಾರರಲ್ಲಿಗೆ ಹೋಗಲು ಸಾಧ್ಯವಾಗುವುದಿಲ್ಲ. ಕೆಲವೊಂದು ಬ್ಯಾಂಕ್‌ಗಳು ನಿರ್ದಿಷ್ಟ ಕಾರ್ಡ್‌ ಬಳಸುವಂತೆ ಗ್ರಾಹಕರನ್ನು ಒತ್ತಾಯಿಸುತ್ತವೆ. ಆದರೆ, ಅದು ಗ್ರಾಹಕರಿಗೆ ಇಷ್ಟವಾಗುವುದಿಲ್ಲ. ಈ ರೀತಿ ಮಾಡಲು ಅವಕಾಶ ನೀಡದೆ ಇರಲು ಆರ್‌ಬಿಐ ಬಯಸಿದೆ. ಒಂದು ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಯ ಕ್ರೆಡಿಟ್‌ ಕಾರ್ಡ್‌ ಇಷ್ಟವಾಗಿಲ್ಲ ಎಂದಾದರೆ ಮೊಬೈಲ್‌ ಸಿಮ್‌ ಅನ್ನು ಬೇರೆ ನೆಟ್‌ವರ್ಕ್‌ಗೆ ಬದಲಾಯಿಸಿದಂತೆ ಬದಲಾಯಿಸಲು ಗ್ರಾಹಕರಿಗೆ ಸಾಧ್ಯವಾಗಬೇಕು ಎಂದು ಆರ್‌ಬಿಐ ಬಯಸಿದೆ.

ಕ್ರೆಡಿಟ್‌ ಕಾರ್ಡ್‌ ಪೋರ್ಟ್‌ ಮಾಡುವುದು ಹೇಗೆ?

ಇದಕ್ಕಾಗಿ ಒಂದು ಸೂಕ್ತ ವ್ಯವಸ್ಥೆ ಬರಲಿದೆ. ಈಗ ಸಿಮ್‌ ಕಾರ್ಡ್‌ ಪೋರ್ಟ್‌ ಮಾಡಲು ಸಂದೇಶ ಕಳುಹಿಸುವಂತೆ ಕ್ರೆಡಿಟ್‌ ಕಾರ್ಡ್‌ ಪೋರ್ಟ್‌ ಮಾಡಲು ಅವಕಾಶ ದೊರಕಲಿದೆ. ಇದಕ್ಕೆ ಸಂಬಂಧಪಟ್ಟಂತೆ ಬ್ಯಾಂಕ್‌ಗಳು ತಮ್ಮಲ್ಲಿ ಈ ವ್ಯವಸ್ಥೆ ರೂಪಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ಗ್ರಾಹಕರೊಬ್ಬರು ಬೇರೆ ಕಡೆಗೆ ಪೋರ್ಟ್‌ ಮಾಡಲು ಮುಂದಾದಗ ವಿವಿಧ ಆಫರ್‌ ಅಥವಾ ಆಮೀಷಗಳ ಮೂಲಕ ಗ್ರಾಹಕರನ್ನು ತಮ್ಮಲ್ಲಿ ಉಳಿಸಲು ಕಾರ್ಡ್‌ ಕಂಪನಿಗಳು ಪ್ರಯತ್ನಿಸಬಹುದು. ಒಟ್ಟಾರೆ, ಕ್ರೆಡಿಟ್‌ ಕಾರ್ಡ್‌ ಹೊಂದಿರುವವರಿಗೆ ಆರ್‌ಬಿಐನ ಈ ನಿರ್ಧಾರದಿಂದ ಸಾಕಷ್ಟು ಅನುಕೂಲತೆಗಳಾಗುವ ಸಾಧ್ಯತೆಯಿದೆ.

mysore-dasara_Entry_Point

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.