Opening Bell: ತೈಲ ಬೆಲೆ ಇಳಿಕೆಯಿಂದ ಚೇತರಿಸಿಕೊಂಡ ಭಾರತದ ಷೇರು ಮಾರುಕಟ್ಟೆ, ಇಂದು ಲಾಭ ಗಳಿಸುವ ಸಾಧ್ಯತೆ ಇರುವ ಷೇರುಗಳ ಪಟ್ಟಿ ಹೀಗಿದೆ
Stock Market Opening Bell: ತೈಲ ಬೆಲೆಯ ಏರಿಳಿತವು ಭಾರತದ ಷೇರು ಮಾರುಕಟ್ಟೆ ಲಾಭ ನಷ್ಟದ ಮೇಲೆ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ. ಇಂದು ತೈಲಯಲ್ಲಿ ಕುಸಿತ ಉಂಟಾಗಿದ್ದು, ಈ ಕಾರಣದಿಂದ ಭಾರತದ ಷೇರು ಮಾರುಕಟ್ಟೆಯ ಉತ್ತಮ ಆರಂಭ ಕಾಣುವ ಸಾಧ್ಯತೆ ಗೋಚರವಾಗಿದ್ದವು.
ಬೆಂಗಳೂರು: ಕುಸಿತ ಕಾಣುತ್ತಿರುವ ಅಮೆರಿಕ ಖಜಾನೆ ಇಳುವರಿಯು ಭಾರತದ ಷೇರು ಮಾರುಕಟ್ಟೆಗೆ ವರವಾಗಿದೆ ಎನ್ನಬಹುದು. ಈ ಹಿನ್ನೆಲೆಯಲ್ಲಿ ಇಂದು ಭಾರತದ ಷೇರು ಮಾರುಕಟ್ಟೆಯು ಉತ್ತಮ ಆರಂಭ ಕಾಣುವ ನಿರೀಕ್ಷೆ ಇದೆ. ಇದರೊಂದಿಗೆ ತೈಲ ಬೆಲೆಯಲ್ಲಿನ ಇಳಿಕೆಯು ಮಾರುಕಟ್ಟೆಯ ಲಾಭಕ್ಕೆ ಕಾರಣವಾಗಿದೆ.
ಭಾರತದ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕಗಳಲ್ಲಿ ಒಂದಾದ ನಿಫ್ಟಿಯು ಶೇ 0.02ರಷ್ಟು ಗಳಿಕೆ ಕಾಣುವ ಮೂಲಕ 19,877.50 ಕ್ಕೆ ತಲುಪಿದೆ. ಶುಕ್ರವಾರ ಈ ಬೆಂಚ್‌ಮಾರ್ಕ್ ಸೂಚ್ಯಂಕವು 19,794.70 ಕ್ಕೆ ತಲುಪುವ ಮೂಲಕ ವಹಿವಾಟು ಮುಗಿಸಿತ್ತು.
ಸತತ ನಾಲ್ಕನೇ ವಾರಕ್ಕೆ ನಿಫ್ಟಿಯು ತನ್ನ ಲಾಭವನ್ನು ಮುಂದುವರಿಸಿತ್ತು. ಅಮೆರಿಕ ಆರ್ಥಿಕ ದತ್ತಾಂಶ ಮತ್ತು ಫೆಡರಲ್ ರಿಸರ್ವ್ ಅಧಿಕಾರಗಳ ಹೇಳಿಕೆಯು ಜಾಗತಿಕ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿತ್ತು. ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆಯ ಚಕ್ರವನ್ನು ಅಂತ್ಯಗೊಳಿಸುವ ತೀರ್ಮಾನವನ್ನು ಪ್ರಕಟಿಸಿದೆ.
ದೇಶೀಯ ಸ್ಥೂಲ ಆರ್ಥಿಕ ಮಾಹಿತಿ ಮತ್ತು ನಿರಂತರ ದೇಶೀಯ ಹೂಡಿಕೆದಾರರ ಒಳಹರಿವು ಕೂಡ ಭಾರತೀಯ ಷೇರುಗಳ ಏರಿಕೆಗೆ ನೆರವಾಯಿತು.
ನಿಫ್ಟಿ 50ಯು ಪ್ರತಿ ಸೆಷನ್‌ನಲ್ಲಿ 19,600ಕ್ಕಿಂತ ಹೆಚ್ಚು ಲಾಭ ಗಳಿಸುವ ಮೂಲಕ ವಹಿವಾಟು ಮುಕ್ತಾಯಗೊಳಿಸಿತ್ತು. ಆದರೆ ನವೆಂಬರ್ 14ರಂದು ಯುಎಸ್ ಹಣದುಬ್ಬರ ಡೇಟಾವು ನಿಫ್ಟಿಯು 19,900ಕ್ಕೆ ತಲುಪುವಂತೆ ಮಾಡಿತು.
ವಾಲ್‌ಸ್ಟ್ರೀಟ್ ಇಕ್ವಿಟಿಗಳು ಸೋಮವಾರ ನಷ್ಟದ ಹಾದಿ ಹಿಡಿದವು. ಯುಎಸ್ ಖಜಾನೆ ಇಳುವರಿ ಡೇಟಾವು ನಿನ್ನೆ ಷೇರು ಮಾರುಕಟ್ಟೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿತ್ತು. ಇದು ನಿಧಾನಗತಿಯ ಆರ್ಥಿಕತೆಗೆ ಕಾರಣವಾಗಿತ್ತು.
ಯುಎಸ್ ಖಜಾನೆ ಇಳುವರಿ ಕುಸಿತ ಕಂಡಿತು. ಆದರೆ ಫೆಡ್ ಬಡ್ಡಿದರಗಳನ್ನು ಕಡಿತಗೊಳಿಸುತ್ತದೆ ಎಂಬ ನಿರೀಕ್ಷೆಗಳ ಮೇಲೆ ಹೆಚ್ಚಿನ ಪ್ರಮುಖ ಕರೆನ್ಸಿಗಳ ವಿರುದ್ಧ ಡಾಲರ್ ಮೌಲ್ಯವು ಕುಸಿಯಿತು. ಇದು ಏಷ್ಯನ್ ಮಾರುಕಟ್ಟೆಗಳ ಏರಿಕೆಗೆ ಕಾರಣವಾಯಿತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ ನಿವ್ವಳ ಆಧಾರದ ಮೇಲೆ 26.25 ಶತಕೋಟಿ ರೂಪಾಯಿ (314.88 ಮಿಲಿಯನ್ ಡಾಲರ್) ಮೌಲ್ಯದ ಭಾರತೀಯ ಷೇರುಗಳನ್ನು ಖರೀದಿಸಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು 1.34 ಶತಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದರು.
ತೈಲ ಬೆಲೆಯು ಸೋಮವಾರ ಪ್ರತಿ ಬ್ಯಾರೆಲ್‌ಗೆ 80 ಡಾಲರ್‌ಗೆ ಕುಸಿಯಿತು. ರಷ್ಯಾ ಸೇರಿದಂತೆ ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಸಂಘಟನೆಗಳು ನವೆಂಬರ್ 30 ರಂದು ಮೀಟಿಂಗ್ ನಡೆಸಲಿವೆ.
ಇಂದು ಗಮನಿಸಬಹುದಾದ ಷೇರುಗಳು
* ಒನ್ 97 ಕಮ್ಯೂನಿಕೇಷನ್
* ಈಥರ್ ಮೋಟರ್ಸ್
* ಮಾರುತಿ ಸುಜುಕಿ ಇಂಡಿಯಾ
* ಜೆಕೆ ಸಿಮೆಂಟ್
* ಪಿಬಿ ಪಿನ್‌ಟೆಕ್
* ಟಾಟಾ ಮೋಟರ್ಸ್
* ವಿಪ್ರೊ
* ಎಚ್‌ಡಿಎಫ್‌ಸಿ ಬ್ಯಾಂಕ್
* ಟಾಟಾ ಸ್ಟೀಲ್
* ಟಾಟಾ ಕನ್ಸ್‌ಲ್‌ಟೆನ್ಸಿ
* ಶೀಲ ಫೋಂ
* ಬಾಲಕೃಷ್ಣ ಇಂಡಸ್ಟ್ರೀಸ್
* ಸಿಪ್ಲಾ
* ಅವೆನ್ಯೂ ಸೂಪರ್ ಮಾರ್ಕೆಟ್
* ಸೆಲ್ಲೋ ವರ್ಡ್
* ಇಂಡಿಯನ್ ಓವರ್‌ಸಿಸ್ ಬ್ಯಾಂಕ್
* ಬ್ಯಾಂಕ್ ಆಫ್ ಬರೋಡಾ
* ಸಿಮೆನ್ಸ್
* ಟ್ರಾನ್ಸ್ ಇಂಡಿಯಾ ರಿಯಲ್ ಎಸ್ಟೇಟ್
* ಇಂಟೆಗ್ರಾ ಎಸೆನ್ಷಿಯಾ