ಕನ್ನಡ ಸುದ್ದಿ  /  Nation And-world  /  Business News New Sim Card Rules 8 Things You Should Know Before Buying A New Sim After December 1 Mgb

SIM card: ಡಿ.1ರ ಬಳಿಕ ಹೊಸ ಸಿಮ್​ ಕಾರ್ಡ್​ ತಗೋಬೇಕಂದ್ರೆ ಈ 9 ನಿಯಮಗಳು ತಿಳಿದಿರಲಿ

New SIM card rules: ಭಾರತದ ಟೆಲಿಕಾಂ ಇಲಾಖೆಯು ಹೊಸ ಸಿಮ್ ಕಾರ್ಡ್ ನಿಯಮಗಳನ್ನು ಜಾರಿಗೆ ತಂದಿದೆ. ಹೀಗಾಗಿ ಡಿಸೆಂಬರ್ 1 ರ ನಂತರ ಹೊಸ ಸಿಮ್ ಖರೀದಿಸುವ ಮೊದಲು ನೀವು ತಿಳಿದುಕೊಳ್ಳಬೇಕಾದ 9 ಅಂಶಗಳು ಇಲ್ಲಿವೆ.

ಸಿಮ್ ಕಾರ್ಡ್ (istockphoto)
ಸಿಮ್ ಕಾರ್ಡ್ (istockphoto)

ಸಿಮ್ ಕಾರ್ಡ್‌ಗಳ ಮೋಸದ ಮಾರಾಟವನ್ನು ತಡೆಯಲು ಭಾರತದ ಟೆಲಿಕಾಂ ಇಲಾಖೆ ಈ ವರ್ಷದ ಆಗಸ್ಟ್‌ನಲ್ಲಿ ಟೆಲಿಕಾಂ ಆಪರೇಟರ್‌ಗಳಿಗೆ ಹೊಸ ನಿಯಮಗಳನ್ನು ಘೋಷಿಸಿತ್ತು. ಆರಂಭದಲ್ಲಿ, ಈ ನಿಯಮಗಳನ್ನು ಅಕ್ಟೋಬರ್ 1 ರಿಂದ ಜಾರಿಗೆ ತರಲು ನಿರ್ಧರಿಸಲಾಗಿತ್ತು. ಆದರೆ ನಿಯಮಗಳ ಜಾರಿಯನ್ನು ಎರಡು ತಿಂಗಳ ಕಾಲ ಮುಂದೂಡಲಾಯಿತು.

ಇದೀಗ, ಹೊಸ ನಿಯಮಗಳು ಡಿಸೆಂಬರ್ 1 ರಿಂದ ಅನ್ವಯವಾಗಲಿದ್ದು, ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ಮೊಬೈಲ್ ಫೋನ್ ಬಳಕೆದಾರರು ಈ ನಿಯಮಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ಹೊಸ ಸಿಮ್ ಕಾರ್ಡ್ ನಿಯಮಗಳು ಮೋಸದ ಚಟುವಟಿಕೆಗಳಿಗೆ ಫೋನ್ ಸಂಖ್ಯೆಗಳನ್ನು ಬಳಸದಂತೆ ಕ್ರಮ ತೆಗೆದುಕೊಳ್ಳುತ್ತವೆ.

ಹೊಸ ಸಿಮ್ ಕಾರ್ಡ್ ನಿಯಮಗಳು ಹೀಗಿವೆ

1. ವ್ಯಾಪಾರ ಸಂಪರ್ಕದ ಮೂಲಕ ಮಾತ್ರ ಸಿಮ್ ಕಾರ್ಡ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಅನುಮತಿಸಲಾಗಿದೆ. ಸಾಮಾನ್ಯ ಬಳಕೆದಾರರು ಹಿಂದಿನಂತೆ ಈಗಲೂ ಕೂಡ ಒಂದು ಐಡಿಯಲ್ಲಿ 9 ಸಿಮ್ ಕಾರ್ಡ್‌ಗಳನ್ನು ಪಡೆಯಬಹುದು.

2. ಸಿಮ್​ ಕಾರ್ಡ್ ಅನ್ನು ಕ್ಲೋಸ್​ ಆದ 90 ದಿನಗಳ ಅವಧಿಯ ನಂತರವೇ ಆ ಸಂಖ್ಯೆಯನ್ನು ಇನ್ನೊಬ್ಬ ವ್ಯಕ್ತಿಗೆ ನೀಡಲಾಗುತ್ತದೆ.

3. ಅಸ್ತಿತ್ವದಲ್ಲಿರುವ ತಮ್ಮ ಫೋನ್ ಸಂಖ್ಯೆಗಳಿಗೆ ಸಿಮ್ ಕಾರ್ಡ್‌ಗಳನ್ನು ಖರೀದಿಸುವ ಗ್ರಾಹಕರು ತಮ್ಮ ಆಧಾರ್ ಮತ್ತು ಇತರ ಡೆಮೊಗ್ರಾಫಿಕ್​ ಡೇಟಾವನ್ನು ಸಲ್ಲಿಸಬೇಕಾಗುತ್ತದೆ.

4. ರಿಜಿಸ್ಟರ್​ ಆಗದ ಡೀಲರ್‌ಗಳ ಮೂಲಕ ಸಿಮ್ ಕಾರ್ಡ್‌ಗಳ ಮಾರಾಟ ಮಾಡಿಸಿದರೆ ಟೆಲಿಕಾಂ ಆಪರೇಟರ್‌ಗಳ ಮೇಲೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

5. ರಿಜಿಸ್ಟರ್​ ಆಗದ ಡೀಲರ್‌ಗಳ ಮೂಲಕ ಪಡೆದ ಸಿಮ್​ ಕಾರ್ಡ್ ಹಾಗೂ ಫೋನ್​​ ನಂಬರ್​​​ಗಳನ್ನು ಮರುಪರಿಶೀಲಿಸಲಾಗುತ್ತದೆ.

7. ಅಸ್ತಿತ್ವದಲ್ಲಿರುವ ಪಾಯಿಂಟ್‌ ಆಫ್‌ ಸೇಲ್‌ (ಪಿಒಎಸ್‌) ನವೆಂಬರ್ ಅಂತ್ಯದೊಳಗೆ ದಾಖಲೆಗಳನ್ನು ಸಲ್ಲಿಸಬೇಕು ಮತ್ತು ನೋಂದಾಯಿಸಿಕೊಳ್ಳಬೇಕು. ಪಿಒಎಸ್‌ ಅಥವಾ ಚಿಲ್ಲರೆ ವ್ಯಾಪಾರಿಗಳು ನೋಂದಣಿಗಾಗಿ ಕಾರ್ಪೊರೇಟ್ ಗುರುತಿನ ಸಂಖ್ಯೆ (CIN), ಲಿಮಿಟೆಟ್​ ಲಯಾಬಿಲಿಟಿ ಪಾರ್ಟ್ನರ್​ಶಿಪ್​ ಐಡೆಂಟಿಫಿಕೇಶನ್​ ನಂಬರ್​ (LLPIN) ಅಥವಾ ವ್ಯಾಪಾರ ಪರವಾನಗಿ, ಆಧಾರ್ ಕಾರ್ಡ್​ ಅಥವಾ ಪಾಸ್‌ಪೋರ್ಟ್, ಪಾನ್​ ಕಾರ್ಡ್​, ಸರಕು ಮತ್ತು ಸೇವಾ ತೆರಿಗೆ (GST) ನೋಂದಣಿ ಪ್ರಮಾಣಪತ್ರ ಇತ್ಯಾದಿಗಳನ್ನು ಒದಗಿಸಬೇಕಾಗುತ್ತದೆ.

8. ಪಿಒಎಸ್‌ CIN, LLPIN, ಇನ್ಕಾರ್ಪೊರೇಶನ್ ಪ್ರಮಾಣಪತ್ರ, ಪಾನ್​​ ಮತ್ತು ಜಿಎಸ್​ಟಿ ಪ್ರಮಾಣಪತ್ರವಿಲ್ಲದಿದ್ದರೆ, ಅದು ಅಫಿಡವಿಟ್ ಸಲ್ಲಿಸಬೇಕು. ಮತ್ತು ಈ ದಾಖಲೆಗಳನ್ನು ಲಭ್ಯವಾದ ತಕ್ಷಣವೇ ಸಲ್ಲಿಸಬೇಕಾಗುತ್ತದೆ.

9. ಒಂದು ವೇಳೆ ಪಿಒಎಸ್‌ ನಕಲಿ ದಾಖಲೆಗಳನ್ನು ಸಲ್ಲಿಸಿದರೆ ಟೆಲಿಕಾಂ ಆಪರೇಟರ್‌ಗಳು ಅದರ ಐಡಿ ಅನ್ನು ನಿರ್ಬಂಧಿಸಬೇಕಾಗುತ್ತದೆ ಮತ್ತು ಪಿಒಎಸ್‌ ನಿಂದ ನೋಂದಾಯಿಸಲ್ಪಟ್ಟ ಎಲ್ಲಾ ಗ್ರಾಹಕರ ಸಿಮ್​​ಗಳನ್ನು ಮರುಪರಿಶೀಲಿಸಬೇಕಾಗುತ್ತದೆ.