ವಾರೀ ಎನರ್ಜಿಸ್‌ ಷೇರು ವಿಮರ್ಶೆ: ಐಪಿಒ ಲಿಸ್ಟ್‌ ಬಳಿಕ ಶೇಕಡ 56 ಲಾಭ; ಮಾರುವುದೇ, ಇಟ್ಟುಕೊಳ್ಳುವುದೇ?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ವಾರೀ ಎನರ್ಜಿಸ್‌ ಷೇರು ವಿಮರ್ಶೆ: ಐಪಿಒ ಲಿಸ್ಟ್‌ ಬಳಿಕ ಶೇಕಡ 56 ಲಾಭ; ಮಾರುವುದೇ, ಇಟ್ಟುಕೊಳ್ಳುವುದೇ?

ವಾರೀ ಎನರ್ಜಿಸ್‌ ಷೇರು ವಿಮರ್ಶೆ: ಐಪಿಒ ಲಿಸ್ಟ್‌ ಬಳಿಕ ಶೇಕಡ 56 ಲಾಭ; ಮಾರುವುದೇ, ಇಟ್ಟುಕೊಳ್ಳುವುದೇ?

Waaree Energies share price: ಇಂದು (ಅಕ್ಟೋಬರ್‌ 28)ರಂದು ಷೇರುಪೇಟೆಯಲ್ಲಿ ಲಿಸ್ಟ್‌ ಆದ ಚಾರೀ ಎನರ್ಜಿ ಹೂಡಿಕೆದಾರರಿಗೆ ಒಳ್ಳೆಯ ಲಾಭವನ್ನೇ ತಂದುಕೊಟ್ಟಿದೆ. ಸಾಕಷ್ಟು ಜನರು ಐಪಿಒ ಲಿಸ್ಟ್‌ ಆದ ಬಳಿಕ ಮಾರಾಟ ಮಾಡಿದ್ದಾರೆ. ಈ ಷೇರನ್ನು ದೀರ್ಘಕಾಲ ಇಟ್ಟುಕೊಳ್ಳುವುದು ಉತ್ತಮವೇ?

ವಾರೀ ಎನರ್ಜಿಸ್‌ ಷೇರು ವಿಮರ್ಶೆ: ಐಪಿಒ ಲಿಸ್ಟ್‌ ಬಳಿಕ ಶೇ 56 ಲಾಭ
ವಾರೀ ಎನರ್ಜಿಸ್‌ ಷೇರು ವಿಮರ್ಶೆ: ಐಪಿಒ ಲಿಸ್ಟ್‌ ಬಳಿಕ ಶೇ 56 ಲಾಭ

Waaree Energies share price: ಸೋಲಾರ್‌ ಎನರ್ಜೀಸ್‌ ಷೇರುಗಳನ್ನು ಅಕ್ಟೋಬರ್‌ 28ರಂದು ಎನ್‌ಎಸ್‌ಇ, ಬಿಎಸ್‌ಇನಲ್ಲಿ ಲಿಸ್ಟ್‌ ಮಾಡಲಾಗಿದೆ. ದಿನದ ಅಂತ್ಯದಲ್ಲಿ ಈ ಷೇರು ಶೇಕಡ 56ರಷ್ಟು ಏರಿಕೆ ಉಳಿಸಿಕೊಂಡಿದೆ. ಎನ್‌ಎಸ್‌ಇನಲ್ಲಿ ಈ ಷೇರು 2,500 ರೂ.ನಲ್ಲಿ ವಹಿವಾಟು ಆರಂಭಿಸಿತ್ತು. ಇಂಟ್ರಾಡೇಯಲ್ಲಿ ಗರಿಷ್ಠ 2,624.4 ರೂ.ಗೆ ತಲುಪಿತ್ತು. 2,300 ರೂಪಾಯಿ ಕನಿಷ್ಠವನ್ನೂ ತಲುಪಿತ್ತು. ಷೇರುಪೇಟೆಗೆ ಬಾಗಿಲು ಹಾಕುವ ಮೊದಲು 2,338.9 ರೂ. ಅಥವಾ ಶೇಕಡ 55.62 ಏರಿಕೆ ಕಂಡಿದೆ. ಈಗ ಇನ್ನೂ ಮಾರಾಟ ಮಾಡದೆ ಈ ಷೇರನ್ನು ಇಟ್ಟುಕೊಳ್ಳುವವರಿಗೆ "ಇಟ್ಟುಕೊಳ್ಳೋದ, ಮಾರೋದ" ಎಂಬ ಗೊಂದಲ ಇರಬಹುದು.

ವಾರೀ ಎನರ್ಜಿಸ್‌ನ ರೂ 4,321 ಕೋಟಿ ರೂ ಮೌಲ್ಯದ ಆರಂಭಿಕ ಷೇರು ಮಾರಾಟವು ಅಕ್ಟೋಬರ್ 21-23 ರ ಅವಧಿಯಲ್ಲಿ 76.34 ಬಾರಿ ಚಂದಾದಾರಿಕೆಯಾಗಿದೆ, ಇದು ಅಕ್ಟೋಬರ್‌ನಲ್ಲಿ ಪ್ರಾರಂಭವಾದ ಐಪಿಒಗಳಲ್ಲಿಯೇ ಅತ್ಯಧಿಕ ಚಂದಾದಾರಿಕೆಯಾಗಿದೆ. ಕಂಪನಿಯು ತನ್ನ ತಾಜಾ ವಿತರಣೆಯ ಮೂಲಕ 3,600 ಕೋಟಿ ರೂ.ಗಳನ್ನು ಹೊಂದಿದೆ ಮತ್ತು ಆಫರ್-ಫಾರ್-ಸೇಲ್ ಮೂಲಕ 721.44 ಕೋಟಿ ರೂ. ಹೊಂದಿದೆ. ಕಂಪನಿಯು ಮಾರುಕಟ್ಟೆಯಲ್ಲಿ ಪ್ರೀಮಿಯರ್ ಎನರ್ಜಿಸ್ ಮತ್ತು ವೆಬ್‌ಸೊಲ್ ಎನರ್ಜಿ ಸಿಸ್ಟಮ್‌ನೊಂದಿಗೆ ಸ್ಪರ್ಧಿಸುತ್ತದೆ.

ವಿವಿಧ ವಾಣಿಜ್ಯ ವೆಬ್‌ಸೈಟ್‌ಗಳಲ್ಲಿ ಈಗಾಗಲೇ ತಜ್ಞರು ಈ ಷೇರನ್ನು ಇಟ್ಟುಕೊಳ್ಳಬಹುದೇ ಅಥವಾ ಮಾರಾಟ ಮಾಡಬಹುದೇ ಎನ್ನುವ ವಿಚಾರಕ್ಕೆ ಸಂಬಂಧಪಟ್ಟಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ದೀರ್ಘಕಾಲಕ್ಕೆ ಇಟ್ಟುಕೊಳ್ಳುವುದು ಒಳ್ಳೆಯದು ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ. ಅಲ್ಪಾವಧಿಯಲ್ಲಿ ಮಾರಾಟ ಮಾಡಲು ಬಯಸುವವರು 2,750-2,800 ರೂಪಾಯಿ ನಡುವೆ ಗುರಿ ಇಟ್ಟುಕೊಂಡು ಮಾರಾಟ ಮಾಡಬಹುದು. ಐಪಿಒ ವಿತರಣೆಯಾಗದೆ ಇರುವವರು ಷೇರುಪೇಟೆಯಿಂದ ಈ ಷೇರನ್ನು 2,200-2,300 ರೂ ನಡುವಿನ ದರದಲ್ಲಿ ಖರೀದಿಸಬಹುದು ಎಂದು ಕೆಲವರು ಷೇರು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನವೀಕರಿಸಬಹುದಾದ ಶಕ್ತಿಯ ಕಂಪನಿಯಾಗಿರುವ ವಾರೀ ಎನರ್ಜೀಸ್‌ನ ಬೆಳವಣಿಗೆಯ ಸಾಮರ್ಥ್ಯವನ್ನು ನೋಡುವುದಾದರೆ ಇದು ದೀರ್ಘಾವಧಿಗೆ ಇಟ್ಟುಕೊಳ್ಳಬಹುದಾದ ಷೇರು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಭವಿಷ್ಯದ ಬಗ್ಗೆ, ಕಾಯುವ ಬಗ್ಗೆ ವ್ಯಯದಾನ ಇಲ್ಲದವರು ಈಗಿನ ದರದಲ್ಲಿ ಮಾರಿದರೆ ಶೇಕಡ 50ರ ಆಸುಪಾಸಿನಲ್ಲಿ ಲಾಭ ಖಾತ್ರಿ ಎಂದು ಕೆಲವು ಷೇರುಪೇಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಾರೀಎನರ್ಜಿಸ್ ತನ್ನ ಮಾರುಕಟ್ಟೆಯನ್ನು ವ್ಯಾಪಕವಾಗಿ ವಿಸ್ತರಿಸುತ್ತಿದೆ. ಕಂಪನಿಯ ಈ ಹಿಂದಿನ ಮಾರುಕಟ್ಟೆ ಪರ್ಫಾಮೆನ್ಸ್‌ ಕೂಡ ಚೆನ್ನಾಗಿದೆ. 2022-2024 ಹಣಕಾಸು ವರ್ಷದಲ್ಲಿ ಕಂಪನಿಯ ಕಾರ್ಯಾಚರಣೆಯ ಆದಾಯವು ಶೇಕಡ 99.8ರಷ್ಟು ಬೆಳವಣಿಗೆ ಕಂಡಿದೆ. ತೆರಿಗೆಯ ನಂತರದ ಲಾಭವು 2022ರ ಹಣಕಾಸು ವರ್ಷದಲ್ಲಿ 79.6 ಕೋಟಿ ರೂ. ಇತ್ತು. 2024ರ ಹಣಕಾಸು ವರ್ಷಕ್ಕೆ ಆಗುವಾಗ ಇದು 1,274.3 ಕೋಟಿ ರೂಪಾಯಿಗಳಿಗೆ ಏರಿಕೆ ಕಂಡಿದೆ. ಈಕ್ವಿಟಿ ಮೇಲಿನ ಆದಾಯವು ಶೇಕಡ 17.69 ರಿಂದ 30.26ರಷ್ಟು ಸುಧಾರಿಸಿದೆ.

ಡಿಸ್ಕೈಮರ್‌: ಇದು ಷೇರುಪೇಟೆ, ಐಪಿಒ ಮಾಹಿತಿಗಾಗಿ ನೀಡಲಾದ ಬರಹ. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಯಾವುದೇ ಷೇರನ್ನು ಖರೀದಿಸುವಂತೆ ಓದುಗರನ್ನು ಪ್ರೇರೇಪಿಸುತ್ತಿಲ್ಲ. ಷೇರು ಮಾರುಕಟ್ಟೆ ಹಣಕಾಸು ಅಪಾಯಗಳನ್ನು ಹೊಂದಿರುತ್ತದೆ. ಹೂಡಿಕೆದಾರರು ಸ್ವಯಂ ವಿವೇಚನೆಯಿಂದ ಸಾಕಷ್ಟು ರಿಸರ್ಚ್‌ ಮಾಡಿ ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.