Donald Trump: ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ?: ಪೊಲೀಸರ ಮುಂದೆ ಮಂಡಿಯೂರಿ ಕುಳಿತ ಫೈರ್ ಬ್ರ್ಯಾಂಡ್ ನಾಯಕ?
ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬಂಧನವಾಗಿದೆ ಎಂಬ ಸುದ್ದಿ ಅಮೆರಿಕದಲ್ಲಿ ಸಂಚಲನ ಸೃಷ್ಟಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಫೋಟೋವೊಂದು ಭಾರೀ ಸದ್ದು ಮಾಡುತ್ತಿದ್ದು, ಅಧಿಕಾರಗಳ ಮುಂದೆ ಟ್ರಂಪ್ ಮಂಡಿಯೂರಿ ಕುಳಿತಿರುವ ಈ ನಕಲಿ ಫೋಟೋ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.
ವಾಷಿಂಗ್ಟನ್: ಸಾಮಾನ್ಯವಾಗಿ ಭಾರತದಲ್ಲಿ ಯಾವುದೇ ರಾಜಕಾರಣಿಯ ವಿವಾದಾತ್ಮಕ ಛಾಯಾಚಿತ್ರ, ಆಡಿಯೋ, ವಿಡಿಯೋ ಬಿಡುಗಡೆಗೊಂಡರೆ, ನನ್ನ ತೇಜೋವಧೆ ಮಾಡಲು ವಿರೋಧಿಗಳು ಸೃಷ್ಟಿಸಿದ ನಕಲಿ ಅಸ್ತ್ರ ಎಂದು ಹೇಳುವುದನ್ನು ಕೇಳಿರುತ್ತೇವೆ. ಆದರೆ ಈ ಫೇಕ್ ಫೋಟೋಗಳನ್ನು ಸೃಷ್ಟಿಸುವ ರೋಗ, ಜಗತ್ತಿನ ದೊಡ್ಡಣ್ಣ ಅಮೆರಿಕಕ್ಕೂ ಕಾಲಿಟ್ಟಿದೆ.
ಹೌದು, ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬಂಧನವಾಗಿದೆ ಎಂಬ ಸುದ್ದಿ ಅಮೆರಿಕದಲ್ಲಿ ಸಂಚಲನ ಸೃಷ್ಟಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಫೋಟೋವೊಂದು ಭಾರೀ ಸದ್ದು ಮಾಡುತ್ತಿದ್ದು, ಅಧಿಕಾರಗಳ ಮುಂದೆ ಟ್ರಂಪ್ ಮಂಡಿಯೂರಿ ಕುಳಿತಿರುವ ಈ ನಕಲಿ ಫೋಟೋ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.
ಈ ಕುರಿತು ತಮ್ಮದೇ ಆದ ಸೋಷಿಯಲ್ ಮಿಡಿಯಾ 'ಟ್ರೂಥ್ ಸೋಷಿಯಲ್'ನಲ್ಲಿ ಸ್ಪಷ್ಟನೆ ನೀಡಿರುವ ಡೊನಾಲ್ಡ್ ಟ್ರಂಪ್, ತಮ್ಮ ಬಂಧನದ ಫೋಟೋಗಳು ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಾರ್ಥಿಸುವ ಸಮಯದಲ್ಲಿ ತಾವು ಮಂಡಿಯೂರಿ ಕುಳಿತಾಗ ಕ್ಲಿಕ್ಕಿಸಿದ ಫೋಟೋವನ್ನೇ, ಎಡಿಟ್ ಮಾಡಿ ಅಧಿಕಾರಗಲ ಮುಂದೆ ಮಂಡಿಯೂರಿ ಕುಳಿತಿರುವಂತೆ ತೋರಿಸಲಾಗಿದೆ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫೋರ್ಬ್ಸ್‌ನ ವರದಿಯ ಪ್ರಕಾರ, ಟ್ರಂಪ್ ಅವರು ಛಾಯಾಚಿತ್ರದಲ್ಲಿ ಪ್ರಾರ್ಥನೆಗಾಗಿ ಕೈ ಜೋಡಿಸಿದಾಗ, ಅವರ ಬಲಗೈ ಹೆಬ್ಬೆರೆಳು ಕಾಣೆಯಾಗಿದೆ. ಅಲ್ಲದೇ ಬಲ ಮೊಣಕಾಲು ಎಡ ಪಾದದ ಹಿಂದೆ ಕಂಡುಬರುತ್ತಿದ್ದು, ಟ್ರಂಪ್ ಅವರ ಪಾದರಕ್ಷೆಯು ಬ್ರಷ್‌ಗಳನ್ನು ಹೋಲುವ ಅಂಚುಗಳನ್ನು ಹೊಂದಿದೆ ಎಂದು ಸಹ ಗಮನಿಸಲಾಗಿದೆ. ಇದು ನಿಶ್ಚಿತವಾಗಿಯೂ ನಕಲಿ ಫೋಟೋ ಎಂಬುದು ಸಾಬೀತಾಗುತ್ತದೆ.
ಇಷ್ಟೇ ಅಲ್ಲದೇ ಈ ಚಿತ್ರದಲ್ಲಿರುವ ಇತರ ಜನರು ಮಂಡಿಯೂರಿ ಕುಳಿತ ಟ್ರಂಪ್ ಅವರತ್ತ ಗಮನಹರಿಸುತ್ತಿಲ್ಲ. ಓರ್ವ ಮಾಜಿ ಅಧ್ಯಕ್ಷನ ಬಂಧನವಾದಾದರೆ, ಅಧಿಕಾರಿಗಳು ಖಂಡಿತ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಹಲವು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಪೋರ್ನ್ ಸ್ಟಾರ್ ಓರ್ವೀಗೆ ಹಣವನ್ನು ಪಾವತಿಸಿದ ಆರೋಪ ಎದುರಿಸುತ್ತಿರುವ ಡೊನಾಲ್ಡ್ ಟ್ರಂಪ್, ಒಂದು ವೇಳೆ ದೋಷಾರೋಪ ಪಟ್ಟಿ ಸಲ್ಲಿಕೆಯಾದರೆ ಅಪರಾಧದ ಆರೋಪಕ್ಕೆ ಗುರಿಯಾದ ಮೊದಲ ಮಾಜಿ ಅಥವಾ ಅಧ್ಯಕ್ಷ ಎಂಬ ಕುಖ್ಯಾತಿಗೆ ಪಾತ್ರರಾಗಲಿದ್ದಾರೆ.
ಅಷ್ಟೇ ಅಲ್ಲದೇ ಯುಎಸ್ ಕ್ಯಾಪಿಟಲ್‌ನಲ್ಲಿ ನಡೆದ ಗಲಭೆಯ ಪ್ರಕರಣದಲ್ಲೂ ಟ್ರಂಪ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗುವ ಸಾಧ್ಯತೆ ಇದ್ದು, ಇದರ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸುವಂತೆ ತಮ್ಮ ಬೆಂಬಲಿಗರಿಗೆ ಟ್ರಂಪ್ ಕರೆ ನೀಡಿದ್ದಾರೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಟ್ರಂಪ್ ಬೆಂಬಲಿಗರು ಪ್ರತಿಭಟನೆಗೆ ಮುಂದಾಗದಿರುವುದು ಗಮನ ಸೆಳೆದಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಧಿಖೃತ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿರುವ ಡೊನಾಲ್ಡ್ ಟ್ರಂಪ್, ತಮ್ಮದೇ ಪಕ್ಷದ ನಿಕ್ಕಿ ಹ್ಯಾಲೆ ಅವರೊಂದಿಗೆ ಆಂತರಿಕ ಸ್ಪರ್ಧೆ ನಡೆಸಬೇಕಿದೆ.
ಸಂಬಂಧಿತ ಸುದ್ದಿ
Donald Trump: ಮೂರನೇ ಮಹಾಯುದ್ಧವನ್ನು ತಡೆಯುವ ಸಾಮರ್ಥ್ಯ ನನಗೆ ಮಾತ್ರ ಇದೆ: ಡೊನಾಲ್ಡ್ ಟ್ರಂಪ್!
ಜಗತ್ತು ಈಗ ಮೂರನೇ ಮಹಾಯುದ್ಧದ ಹೊಸ್ತಿಲಲ್ಲಿದ್ದು, ಮಾನವ ಜನಾಂಗದ ಅಳಿವು-ಉಳಿವು ಈ ವಿಶ್ವಯುದ್ಧವನ್ನು ನಿರ್ಧರಿಸಿದೆ. ಆದರೆ ಈ ಭೀಕರ ವಿಶ್ವಯುದ್ಧವನ್ನು ತಡೆಯಬಲ್ಲ ಸಾಮರ್ಥ್ಯ ತಮಗೆ ಮಾತ್ರವಿದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ತಮ್ಮ ಭಾಷಣದಲ್ಲಿ ಅಧ್ಯಕ್ಷ ಜೋ ಬೈಡನ್ ವಿರುದ್ಧ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
ವಿಭಾಗ