112 ಅಡಿ ಎತ್ತರದ ದುರ್ಗಾದೇವಿ ವಿಗ್ರಹ ಸ್ಥಾಪಿಸುವ ಸಂಕಲ್ಪ ಮಾಡಿ ಕೈಬಿಟ್ಟ ಭಕ್ತರು; ಪ್ರಾಯಶ್ಚಿತ್ತಕ್ಕೆ ತಲೆ ಬೋಳಿಸಿಕೊಂಡ 80ಗ್ರಾಮಗಳ ಪುರುಷರು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  112 ಅಡಿ ಎತ್ತರದ ದುರ್ಗಾದೇವಿ ವಿಗ್ರಹ ಸ್ಥಾಪಿಸುವ ಸಂಕಲ್ಪ ಮಾಡಿ ಕೈಬಿಟ್ಟ ಭಕ್ತರು; ಪ್ರಾಯಶ್ಚಿತ್ತಕ್ಕೆ ತಲೆ ಬೋಳಿಸಿಕೊಂಡ 80ಗ್ರಾಮಗಳ ಪುರುಷರು

112 ಅಡಿ ಎತ್ತರದ ದುರ್ಗಾದೇವಿ ವಿಗ್ರಹ ಸ್ಥಾಪಿಸುವ ಸಂಕಲ್ಪ ಮಾಡಿ ಕೈಬಿಟ್ಟ ಭಕ್ತರು; ಪ್ರಾಯಶ್ಚಿತ್ತಕ್ಕೆ ತಲೆ ಬೋಳಿಸಿಕೊಂಡ 80ಗ್ರಾಮಗಳ ಪುರುಷರು

durga puja 2024: ರಣಘಾಟ್‌ನ ಕಮಲಾಪುರದಲ್ಲಿದ್ದ ವಿಶ್ವದ ಅತಿದೊಡ್ಡ 112 ಅಡಿ ದುರ್ಗದೇವಿ ವಿಗ್ರಹ ಪೂಜೆಯನ್ನು ನಿಲ್ಲಿಸಲಾಗಿದೆ. ತಾಯಿ ದುರ್ಗೆಗೆ ಪೂಜೆಯನ್ನು ನಿಲ್ಲಿಸುವ ನಿರ್ಧಾರ ಕೈಗೊಂಡ ಹಿನ್ನೆಲೆ ಪ್ರಾಯಶ್ಚಿತ ಪಟ್ಟ 80 ಗ್ರಾಮಗಳ ಭಕ್ತರು ತಲೆಬೋಳಿಸಿಕೊಂಡಿದ್ದಾರೆ.

112 ಅಡಿ ಎತ್ತರದ ದುರ್ಗಾದೇವಿ ವಿಗ್ರಹ
112 ಅಡಿ ಎತ್ತರದ ದುರ್ಗಾದೇವಿ ವಿಗ್ರಹ

ಪಶ್ಚಿಮ ಬಂಗಾಳ: 112 ಅಡಿ ಎತ್ತರದ ದುರ್ಗಾದೇವಿ ವಿಗ್ರಹ ಸ್ಥಾಪಿಸುವ ಸಂಕಲ್ಪ ಮಾಡಿ ಕೈಬಿಟ್ಟ ಪರಿಣಾಮ ಪ್ರಾಯಶ್ಚಿತ್ತಕ್ಕಾಗಿ 80 ಹಳ್ಳಿಗಳ ಎಲ್ಲಾ ಪುರುಷ ಭಕ್ತರು ಸಾಮೂಹಿಕವಾಗಿ ತಲೆ ಬೋಳಿಸಿಕೊಂಡಿದ್ದಾರೆ. ಹಣಕಾಸಿನ ಸಮಸ್ಯೆಗಳ ಕಾರಣ ಆಡಳಿತದ ಆದೇಶದ ಮೇರೆಗೆ ರಣಘಾಟ್‌ನ ಕಮಲಾಪುರದಲ್ಲಿದ್ದ ವಿಶ್ವದ ಅತಿದೊಡ್ಡ 112 ಅಡಿ ದುರ್ಗದೇವಿ ವಿಗ್ರಹ  ಪೂಜೆಯನ್ನು ನಿಲ್ಲಿಸಲಾಗಿದೆ. ತಾಯಿ ದುರ್ಗಾದೇವಿ ವಿಗ್ರಹವನ್ನು ಸ್ಥಾಪಿಸುವುದನ್ನೂ ಅರ್ಧಕ್ಕೆ ನಿಲ್ಲಿಸಲಾಗಿದೆ. ಹೀಗಾಗಿ ಪೂಜೆ ನಿಲ್ಲಿಸುವ ನಿರ್ಧಾರ ಕೈಗೊಂಡ ಹಿನ್ನೆಲೆ ಪ್ರಾಯಶ್ಚಿತಪಟ್ಟ ಭಕ್ತರು ಈ ನಿರ್ಧಾರ ಕೈಗೊಂಡಿದ್ದಾರೆ.

ದುರ್ಗಾಪೂಜೆ ಬಂಗಾಳದ ಪ್ರಸಿದ್ಧ ಹಬ್ಬವಾಗಿದ್ದರೂ ಆಡಳಿತಾತ್ಮಕ ಅಸಹಕಾರದಿಂದ ನಾಡಿಯಾದ ರಾಣಾಘಾಟ್ ಕಮಲಾಪುರದಲ್ಲಿ 112 ಅಡಿ ದುರ್ಗಾಪೂಜೆ ಮಾಡಲು ಸಾಧ್ಯವಾಗಲಿಲ್ಲ ಎಂದು ಕಮಲಾಪುರ ಅಭಿಜನ ಸಂಘ ಪೂಜಾ ಸಮಿತಿ ಆರೋಪಿಸಿದೆ. ಬಂಗಾಳದಲ್ಲಿ ಜರುಗುವ ಸಾಂಪ್ರದಾಯಿಕ ಮತ್ತು ಹಬ್ಬದ ಆಚರಣೆಗಳ ಕುರಿತು ಜಗತ್ತಿನ ಮೂಲೆಮೂಲೆಗೂ ತಿಳಿದಿದೆ. ಆದರೆ ಈ ಬಾರಿ ಪೂಜೆ ನಿಲ್ಲಿಸಿದ ಕಾರಣ ದೇಶ-ವಿದೇಶಗಳ ಭಕ್ತರಿಗೆ ತೀವ್ರ ನಿರಾಶೆಯಾಗಿದೆ. ಎಲ್ಲಾ ತಪ್ಪನ್ನು ತಮ್ಮದೆಂದು ಸ್ವೀಕರಿಸಿ ಉದ್ಯಮಿಗಳು ಮಹಾನವಮಿಯ ಇಂದು ತಾಯಿ ಬಳಿ ಕ್ಷಮೆ ಕೇಳಲು ತಲೆ ಬೋಳಿಸಿಕೊಂಡಿದ್ದಾರೆ.

ವಿಷಾದನೀಯ ಎಂದ ಭಕ್ತರು

ಇಡೀ ದೇಶದಲ್ಲಿ ಈ ಘಟನೆ ಕೋಲಾಹಲ ಸೃಷ್ಟಿಸಿದೆ. ದುರ್ಗಾಪೂಜೆ ನಿಲ್ಲಿಸಿದ್ದು ನಿಜಕ್ಕೂ ಅವಮಾನಕರ. ಪ್ರತಿಯೊಬ್ಬ ಬಂಗಾಳಿಯೂ ಆಘಾತಕ್ಕೆ ಒಳಗಾಗಿದ್ದಾನೆ. ಪೂಜೆ ನಿಲ್ಲಿಸಿದ್ದಕ್ಕೆ ಪ್ರತಿಯೊಬ್ಬ ನಾಡಿಯಾ ನಿವಾಸಿಗಳು ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ಇದು ವಿಶ್ವದ ಅತಿದೊಡ್ಡ ದುರ್ಗಾ ದೇವಿ ವಿಗ್ರಹ ಎಂಬುದನ್ನು ಯುನೆಸ್ಕೋ ಗುರುತಿಸಿದ್ದು, ಗಿನ್ನೆಸ್ ಬುಕ್ ಆಫ್ ವರ್ಲ್ಡ್​ ರೆಕಾರ್ಡ್ಸ್​ಗೂ ಸೇರಿದೆ. ಇದು ರಾಜ್ಯದ ಮತ್ತು ಎಲ್ಲಾ ಬಂಗಾಳಿಗಳ ಹೆಮ್ಮೆ. ಆದರೆ ಹಲವು ಅಸಂಬದ್ಧ ವಿಚಾರಗಳನ್ನು ಮುಂದಿಟ್ಟುಕೊಂಡು ದುರ್ಗಾಪೂಜೆ ನಿಲ್ಲಿಸಿರುವುದು ವಿಷಾದನೀಯ ಎನ್ನುತ್ತಿದ್ದಾರೆ ಭಕ್ತರು.

ಗ್ರಾಮಸ್ಥರ ಹಣದಲ್ಲೇ ಪೂಜೆ ಆಯೋಜನೆ

ಯಾವುದೇ ಖಾಸಗಿ ಪ್ರಾಯೋಜಕತ್ವ ಇಲ್ಲದೆ ಗ್ರಾಮಸ್ಥರ ಹಣದಲ್ಲಿ ಪೂಜೆಯನ್ನು ಆಯೋಜಿಸಲಾಗಿತ್ತು ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ. ಈಗಾಗಲೇ 50 ಲಕ್ಷ ರೂಪಾಯಿಗೂ ಹೆಚ್ಚು ವೆಚ್ಚ ಮಾಡಲಾಗಿದೆ ಎಂದು ಹೇಳಿದ ಸದಸ್ಯರು, ವಿಶ್ವದ ಅತಿ ಎತ್ತರದ ದುರ್ಗಾ ವಿಗ್ರಹ ನಿರ್ಮಾಣದ ಯೋಜನೆ ನನೆಗುದಿಗೆ ಬಿದ್ದಿದೆ ಎಂದರು. ಸೋಮವಾರದ ಹಿಂದಿನ ವಿಚಾರಣೆಯಲ್ಲಿ ಪೂಜೆಗೆ ಅವಕಾಶ ನೀಡುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ನ್ಯಾಯಾಲಯವು ಜಿಲ್ಲಾಧಿಕಾರಿಯನ್ನು ಕೋರಿತ್ತು.

ವಿದ್ಯುತ್ ಇಲಾಖೆ, ಅಗ್ನಿಶಾಮಕ ದಳ, ಪೊಲೀಸ್, ಬಿಡಿಒ ಮತ್ತು ರಣಘಾಟ್ ಉಪವಿಭಾಗಾಧಿಕಾರಿಗಳು ಪೂಜಾ ಸಮಿತಿಯ ಅರ್ಜಿಯನ್ನು ತಿರಸ್ಕರಿಸಿದ್ದಾರೆ ಎಂದು ಡಿಎಂ ಈ ಮೊದಲು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರ ಪೀಠಕ್ಕೆ ತಿಳಿಸಿದ್ದರು. ವಿದ್ಯುತ್ ಇಲಾಖೆಯ ಪ್ರಕಾರ, ಪೂಜಾ ಸಮಿತಿಯು ದಿನಕ್ಕೆ 3 ಕಿಲೋವ್ಯಾಟ್‌ಗೆ ಬೇಡಿಕೆಯಿತ್ತು. ಆದರೆ ಪ್ಯಾಂಡಲ್‌ನ ಗಾತ್ರಕ್ಕೆ ಹೋದರೆ ಅದಕ್ಕೆ 20-25 ಕಿಲೋವ್ಯಾಟ್ ವಿದ್ಯುತ್ ಬೇಕಾಗುತ್ತದೆ ಎಂದು ಇಲಾಖೆ ಹೇಳಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.