ಗುಜರಾತ್ ಫಲಿತಾಂಶ; 26 ಲೋಕಸಭಾ ಸ್ಥಾನಗಳಲ್ಲಿ ವಿಜೇತರಾದವರ ಸಂಪೂರ್ಣ ಪಟ್ಟಿ, ಪಕ್ಷವಾರು ವಿವರ ಇಲ್ಲಿದೆ
ಲೋಕಸಭಾ ಚುನಾವಣೆ 2024ರ ಫಲಿತಾಂಶ ಪ್ರಕಟವಾಗಿದೆ. ಗುಜರಾತ್‌ನಲ್ಲಿ ಈ ಬಾರಿ ಬಿಜೆಪಿಗೆ ಕ್ಲೀನ್ ಸ್ವೀಪ್ ಮಾಡುವುದು ಸಾಧ್ಯವಾಗಿಲ್ಲ. ಹ್ಯಾಟ್ರಿಕ್ ಕೈತಪ್ಪಿ ಹೋಗಿದ್ದು, ಒಂದು ಸ್ಥಾನ ಗೆಲ್ಲುವ ಕಡೆಗೆ ಕಾಂಗ್ರೆಸ್ ಮುಂದಡಿ ಇರಿಸಿದೆ. ಗುಜರಾತ್‌ನಲ್ಲಿ 26 ಲೋಕಸಭಾ ಸ್ಥಾನಗಳಲ್ಲಿ ವಿಜೇತರಾದವರ ಸಂಪೂರ್ಣ ಪಟ್ಟಿ, ಪಕ್ಷವಾರು ವಿವರ ಇಲ್ಲಿದೆ.
ಅಹಮದಾಬಾದ್: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದೆ. ಗುಜರಾತ್‌ನ 25 ಸ್ಥಾನಗಳ ಮತ ಎಣಿಕೆ ಪ್ರಗತಿಯಲ್ಲಿದೆ. ಬಿಜೆಪಿ 24 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 1 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಸೂರತ್‌ನಲ್ಲಿ ಈಗಾಗಲೇ ಬಿಜೆಪಿ ಅವಿರೋಧವಾಗಿ ಆಯ್ಕೆಯಾಗಿತ್ತು. ಗುಜರಾತ್‌ನಲ್ಲಿ 26ರ ಪೈಕಿ 25 ಲೋಕಸಭಾ ಸ್ಥಾನಗಳಿಗೆ ಮೇ 7 ರಂದು ಒಂದೇ ಹಂತದಲ್ಲಿ ಮತದಾನ ನಡೆಯಿತು.
ಗುಜರಾತ್‌ನ 26 ಕ್ಷೇತ್ರಗಳಲ್ಲಿ ಬಿಜೆಪಿ ಒಂಟಿಯಾಗಿ ಸ್ಪರ್ಧಿಸಿದೆ. ಇಲ್ಲಿ, ಗಾಂಧಿನಗರ - ಅಮಿತ್ ಷಾ (ಬಿಜೆಪಿ), ರಾಜ್ ಕೋಟ್ - ಪುರುಷೋತ್ತಮ ರೂಪಾಲ (ಬಿಜೆಪಿ), ಪೋರ್ ಬಂದರ್ - ಮನ್‌ಸುಖ್ ಮಾಂಡವೀಯ (ಬಿಜೆಪಿ), ಸಬರ್‌ಕಾಂತಾ - ತುಷಾರ್ ಚೌಧರಿ (ಕಾಂಗ್ರೆಸ್), ಸುರೇಂದರ ನಗರ್ - ಋತ್ವಿಕ್ ಮಕ್ವಾನಾ (ಕಾಂಗ್ರೆಸ್) ಅವರ ಸ್ಪರ್ಧೆ ಗಮನಸೆಳೆದಿದೆ. ಪಠಾಣ್ ಮತ್ತು ಬಾಣಸಕಾಂತಾದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿರುವುದು ಕಂಡುಬಂದಿದೆ.
ಇಂಡಿಯಾ ಒಕ್ಕೂಟದಲ್ಲಿ ಗುಜರಾತ್‌ನ 26 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 23 ರಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿತ್ತು. ಸೂರತ್‌ನಲ್ಲಿ ಒಂದು ನಾಮಪತ್ರ ತಿರಸ್ಕೃತವಾಗಿದೆ. ಇನ್ನು 2 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ) ಸ್ಪರ್ಧಿಸಿದೆ. ಇದಕ್ಕೆ ಹೊರತಾಗಿ ಬಿಎಸ್‌ಪಿ 24 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಸಮಾಜವಾದಿ ಪಕ್ಷ 1 ಸ್ಥಾನದಲ್ಲಿ ಸ್ಪರ್ಧಿಸಿತ್ತು.
ಗುಜರಾತ್ ಲೋಕಸಭಾ ಫಲಿತಾಂಶ 2024- ವಿಜೇತರ ಸಂಪೂರ್ಣ ಪಟ್ಟಿ
ಕ್ಷೇತ್ರ | ವಿಜೇತ ಅಭ್ಯರ್ಥಿ | ಪಕ್ಷ |
ಅಹಮದಾಬಾದ್ ಪೂರ್ವ | ಎಚ್ ಎಸ್ ಪಟೇಲ್ | ಬಿಜೆಪಿ |
ಅಹಮದಾಬಾದ್ ಪಶ್ಚಿಮ | ದಿನೇಶ್ ಭಾಯ್ ಮಕ್ವಾನಾ | ಬಿಜೆಪಿ |
ಅಮ್ರೇಲಿ | ಭರತ್ಭಾಯತ್ ಮನುಭಾಯ್ ಸುತರಿಯಾ | ಬಿಜೆಪಿ |
ಆನಂದ್ | ಮಿತೇಶ್ ಪಟೇಲ್ (ಬಕಾಭಾಯ್) | ಬಿಜೆಪಿ |
ಬಾಣಸಕಾಂತಾ | ಗೇನಿಬೆನ್ ನಾಗಜಿ ಠಾಕೂರ್ | ಕಾಂಗ್ರೆಸ್ |
ಬರ್ದೋಲಿ | ಪ್ರಭುಭಾಯ್ ನಾಗರ್‌ಭಾಯ್ ವಾಸವ | ಬಿಜೆಪಿ |
ಭರೂಚ್ | ಮನ್ಸುಖ್ಭಾಯ್ ಧನ್‌ಜಿಭಾಯ್ ವಾಸವ | ಬಿಜೆಪಿ |
ಭಾವನಗರ್ | ನಿಮುಬೆನ್ ಬಂಭನಿಯಾ | ಬಿಜೆಪಿ |
ಛೋಟಾ ಉದಯಪುರ | ಜಶುಭಾಯ್ ಭಿಲುಭಾಯ್ ರಾತ್ವಾ | ಬಿಜೆಪಿ |
ದಹೋಡ್ | ಜಸ್ವಂತ್ ಸಿಂಗ್ ಸುಮನ್‌ಭಾಯ್ ಭಭೋರ್ | ಬಿಜೆಪಿ |
ಗಾಂಧಿನಗರ | ಅಮಿತ್ ಷಾ | ಬಿಜೆಪಿ |
ಜಾಮ್ನಗರ | ಪೂನಮ್ಬೆನ್ ಹೇಮಂತ್ ಭಾಯ್ ಮಾದಮ್ | ಬಿಜೆಪಿ |
ಜುನಾಗಡ | ಚೂಡಾಸಮ ರಾಜೇಶ್ ಭಾಯ್ ನರನ್ ಭಾಯ್ | ಬಿಜೆಪಿ |
ಕಛ್ | ಚಾವ್ಡಾ ವಿನೋದ್ ಲಖಂಶಿ | ಬಿಜೆಪಿ |
ಖೇಡ | ದೇವುಸಿಂಗ್ ಚೌಹಾನ್ | ಬಿಜೆಪಿ |
ಮಹೆಸಾನ | ಹರಿಭಾಯ್ ಪಟೇಲ್ | ಬಿಜೆಪಿ |
ನವ್‌ಸರಿ | ಸಿಆರ್ ಪಾಟಿಲ್ | ಬಿಜೆಪಿ |
ಪಂಚಮಹಲ್ | ರಾಜ್ಪಾಲ್ ಸಿಂಗ್ ಮಹೆಂದ್ರ ಸಿಂಗ್ ಜಾದವ್ | ಬಿಜೆಪಿ |
ಪಠಾಣ್ | ಧಾಬಿ ಭರತ್‌ಸಿಂಗ್‌ಜಿ ಶಂಕರ್ಜಿ | ಬಿಜೆಪಿ |
ಪೋರ್ಬಂದರ್ | ಮನ್‌ಸುಖ್ ಮಾಂಡವೀಯ | ಬಿಜೆಪಿ |
ರಾಜ್ ಕೋಟ್ | ಪುರುಷೋತ್ತಮ ಭಾಯ್ ರೂಪಾಲ | ಬಿಜೆಪಿ |
ಸಬರ್‌ಕಾಂತಾ | ಶೋಭನಾಬೆನ್ ಮಹೇಂದ್ರ ಸಿಂಗ್ ಬರೈಯಾ | ಬಿಜೆಪಿ |
ಸೂರತ್ | ಮುಕೇಶ್ ಕುಮಾರ್ ಚಂದ್ರಕಾಂತ್ ದಲಾಲ್ (ಅವಿರೋಧ ಆಯ್ಕೆ) | ಬಿಜೆಪಿ |
ಸುರೇಂದ್ರನಗರ | ಚಂದೂಭಾಯ್ ಛಗನ್‌ಭಾಯ್ ಶಿಹೋರಾ | ಬಿಜೆಪಿ |
ವಡೋದರಾ | ಡಾ. ಹೇಮಂಗ್ ಜೋಷಿ | ಬಿಜೆಪಿ |
ವಲ್ಸದ್ | ಧವಲ್ ಲಕ್ಷ್ಮಣ್ ಭಾಯ್ ಪಟೇಲ್ | ಬಿಜೆಪಿ |
ಗುಜರಾತ್‌ನಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದ ಜೊತೆಗೆ ಗುಜರಾತ್‌ನ 26ಕ್ಕೆ 26 ಲೋಕಸಭಾ ಕ್ಷೇತ್ರಗಳನ್ನು ಮತದಾರರು ಗೆಲ್ಲಿಸಿಕೊಟ್ಟರು. 2019ರ ಚುನಾವಣೆಯಲ್ಲಿ ಇದು ಪುನರಾವರ್ತನೆಯಾಯಿತು. ಈ ಬಾರಿ ಕೂಡ ಕ್ಲೀನ್ ಸ್ವೀಪ್‌ನೊಂದಿಗೆ ಹ್ಯಾಟ್ರಿಕ್ ಸಾಧನೆ ಮಾಡಿದಂತೆ ಆಗಲಿತ್ತು. ಆದರೆ ಹಾಗಾಗಲಿಲ್ಲ.
👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.