Gold-Silver Rate Today: ವಾರಾಂತ್ಯದಲ್ಲೂ ಇಳಿಯದ ಬೆಳ್ಳಿ-ಬಂಗಾರ, ಆಭರಣ ಪ್ರಿಯರಿಗೆ ನಿರಾಸೆ; ಇಂದಿನ ಬೆಲೆ ತಿಳಿಯಿರಿ
Gold and Silver Price Today: ಚಿನಿವಾರ ಪೇಟೆಯಲ್ಲಿ ಆಗಸ್ಟ್ 18ರ ಭಾನುವಾರ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ. ಬಂಗಾರದ ಜೊತೆಗೆ ಬೆಳ್ಳಿಯಲ್ಲೂ ಏರಿಕೆಯಾಗಿದೆ. ಇವತ್ತಿನ ದರ ಹೇಗಿದೆ? ಯಾವ ನಗರದಲ್ಲಿ ಎಷ್ಟಿದೆ ಎಂಬುದರ ವಿವರ ಇಂತಿದೆ.
ಸತತ ಮೂರನೇ ದಿನವೂ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಕೆ ಕಂಡಿದೆ. ವಾರಾಂತ್ಯದಲ್ಲಿ ಇಳಿಕೆಯಾಗುವ ನಿರೀಕ್ಷೆಯೊಂದಿಗೆ ಖರೀದಿಸುವ ಉತ್ಸಾಹದಲ್ಲಿದ್ದ ಆಭರಣ ಪ್ರಿಯರಿಗೆ ತೀವ್ರ ನಿರಾಸೆಯಾಗಿದೆ. ವರಮಹಾಲಕ್ಷ್ಮೀ ಹಬ್ಬದ ನಂತರ ಆಗಸ್ಟ್ 17ರ ಶನಿವಾರ ಚಿನ್ನ ಪ್ರತಿ ಗ್ರಾಂಗೆ 10 ರೂಪಾಯಿ ಏರಿಕೆಯಾಗಿತ್ತು. ಆದರೆ ಇಂದು (ಆಗಸ್ಟ್ 18ರಂದು) ಭರ್ಜರಿ ಏರಿಕೆ ಕಂಡಿದ್ದು, ಹಳದಿ ಲೋಹಕ್ಕೆ 115 ರೂಪಾಯಿ ಹೆಚ್ಚಳಗೊಂಡಿದೆ. ಗ್ರಾಹಕರು ಈ ಲೋಹದ ಖರೀದಿಗೆ ಹಿಂದೆ ಮುಂದೆ ನೋಡುವಂತಾಗಿದೆ.
ಇದೇ ವೇಳೆ ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡಿದೆ. ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 2000 ರೂಪಾಯಿ ಹೆಚ್ಚಳವಾಗಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಆಗಸ್ಟ್ 18ರ ಭಾನುವಾರ 22 ಕ್ಯಾರೆಟ್‌ನ ಚಿನ್ನದಲ್ಲಿ ಪ್ರತಿ ಗ್ರಾಂಗೆ 105 ರೂಪಾಯಿ ಏರಿಕೆಯಾಗಿದೆ. ಹೀಗಾಗಿ ಇಂದು 6,670 ರೂಪಾಯಿ ಆಗಿದೆ. ನಿನ್ನೆ ಪ್ರತಿ ಗ್ರಾಂಗೆ 6,565 ರೂಪಾಯಿ ಇತ್ತು. 10 ಗ್ರಾಂ ಚಿನ್ನದಲ್ಲಿ 1,050 ರೂಪಾಯಿ ಏರಿಕೆ ಕಂಡು 66,700 ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದಲ್ಲಿ 115 ರೂಪಾಯಿ ಏರಿಕೆಯಾಗಿದ್ದು, ಪ್ರತಿ ಗ್ರಾಂಗೆ 7.277 ರೂಪಾಯಿಯಂತೆ ಇಂದು 10 ಗ್ರಾಂಗೆ 72770 ರೂಪಾಯಿ ಆಗಿದೆ.
2000 ಹೆಚ್ಚಾಯ್ತು ಬೆಳ್ಳಿ ದರ
ಇಂದು ಬೆಳ್ಳಿಯಲ್ಲಿ ಪ್ರತಿ ಗ್ರಾಂಗೆ 2 ರೂಪಾಯಿ ಏರಿಕೆ ಕಂಡಿದೆ. ಹೀಗಾಗಿ ಗ್ರಾಂಗೆ 86 ರೂಪಾಯಿಯಂತೆ, 1 ಕೆಜಿ ಬೆಳ್ಳಿ ಬೆಲೆ 86 ಸಾವಿರಕ್ಕೆ ಏರಿದೆ. ಆದರೆ ನಿನ್ನೆ (ಆಗಸ್ಟ್ 17) ಬೆಳ್ಳಿಯಲ್ಲಿ 4000 ರೂಪಾಯಿ ಏರಿಕೆ ಕಂಡಿತ್ತು. ಕಳೆದ ಎರಡು ವಾರಗಳಿಗೆ ಹೋಲಿಸಿದರೆ ಒಂದೇ ಬಾರಿಗೆ 4 ಸಾವಿರ ಏರಿಕೆಯಾಗಿದ್ದು ಇದೇ ಮೊದಲಾಗಿತ್ತು. ಆಗಸ್ಟ್ 13ರಂದು 1000 ರೂಪಾಯಿ ಏರಿತ್ತು. ಉಳಿದಂತೆ ಕೊನೆಯ 10 ದಿನಗಳಲ್ಲಿ ಬೆಳ್ಳಿ ಬೆಲೆ ಏರಿರಲಿಲ್ಲ. ಆದರೀಗ 2000 ಏರಿಕೆ ಕಂಡಿದೆ.
ಪ್ರಮುಖ ನಗರಗಳಲ್ಲಿ ಚಿನ್ನದ ದರ (22 ಕ್ಯಾರೇಟ್ 10ಗ್ರಾಂಗೆ)
ಬೆಂಗಳೂರು - 66,700 ರೂಪಾಯಿ.
ಮಂಗಳೂರು - 66,700 ರೂಪಾಯಿ.
ಮೈಸೂರು - 66,700 ರೂಪಾಯಿ.
ಚೆನ್ನೈ - 66,700 ರೂಪಾಯಿ.
ಮುಂಬೈ - 66,700 ರೂಪಾಯಿ.
ದೆಹಲಿ - 66,850 ರೂಪಾಯಿ.
ಕೋಲ್ಕತ - 66,700 ರೂಪಾಯಿ.
ಹೈದರಾಬಾದ್ - 66,700 ರೂಪಾಯಿ.
ಪ್ರಮುಖ ನಗರಗಳಲ್ಲಿ ಚಿನ್ನದ ದರ (24 ಕ್ಯಾರೇಟ್ 10ಗ್ರಾಂಗೆ)
ಬೆಂಗಳೂರು - 72,770 ರೂಪಾಯಿ.
ಮಂಗಳೂರು - 72,770 ರೂಪಾಯಿ.
ಮೈಸೂರು - 72,770 ರೂಪಾಯಿ.
ಚೆನ್ನೈ - 72,770 ರೂಪಾಯಿ.
ಮುಂಬೈ - 72,770 ರೂಪಾಯಿ.
ದೆಹಲಿ - 72,920 ರೂಪಾಯಿ.
ಕೋಲ್ಕತ - 72,770 ರೂಪಾಯಿ.
ಹೈದರಾಬಾದ್ - 72,770 ರೂಪಾಯಿ.
ದಿನಾಂಕ (ಕಳೆದ 10 ದಿನಗಳಿಂದ ಬೆಂಗಳೂರಿನಲ್ಲಿ 1 ಗ್ರಾಂ ಚಿನ್ನದ ದರ | 22K (ಏರಿಕೆ) | 24K (ಏರಿಕೆ) |
---|---|---|
ಆಗಸ್ಟ್ 17, 2024 | 6,670 (+105) | 7,277 (+115) |
ಆಗಸ್ಟ್ 16, 2024 | 6,565 (+10) | 7,162 (+11) |
ಆಗಸ್ಟ್ 15, 2024 | 6,555 (0) | 7,151 (0) |
ಆಗಸ್ಟ್ 14, 2024 | 6,555 (-10) | 7,151 (-11) |
ಆಗಸ್ಟ್ 13, 2024 | 6,565 (+95) | 7,162 (+104) |
ಆಗಸ್ಟ್ 12, 2024 | 6,470 (+25) | 7,058 (+27) |
ಆಗಸ್ಟ್ 11, 2024 | 6,445 (0) | 7,031 (0) |
ಆಗಸ್ಟ್ 10, 2024 | 6,445 (+20) | 7,031 (+22) |
ಆಗಸ್ಟ್ 9, 2024 | 6,425 (+75) | 7,009 (+82) |
ಆಗಸ್ಟ್ 8, 2024 | 6,350 (0) | 6,927 (0) |