ಮತ್ತೆ ತುಸು ಏರಿದ ಚಿನ್ನ, ಬೆಳ್ಳಿ ಕೊಂಚ ಇಳಿಕೆ; 10 ದಿನಗಳ ಹಿಂದಿದ್ದ ಬೆಲೆಗೂ ಇವತ್ತಿನ ದರಕ್ಕೂ ವ್ಯತ್ಯಾಸ ತಿಳಿಯಿರಿ
Summary: ನಿನ್ನೆ (ಆಗಸ್ಟ್ 21) ಚಿನ್ನದ ಬೆಲೆ ಇಳಿಕೆಯಾಗಿದ್ದ ಚಿನ್ನದ ದರ ಮತ್ತೆ ತುಸು ಏರಿಕೆ ಕಂಡಿದೆ. ಆದರೆ ಬೆಳ್ಳಿ ದರಲ್ಲಿ ಅಲ್ಪ ಇಳಿಕೆ ಕಂಡಿದೆ. ಆಗಸ್ಟ್ 22ರ ಗುರುವಾರ ಚಿನ್ನ-ಬೆಳ್ಳಿ ಬೆಲೆ ಹೇಗಿದೆ? ಯಾವ ನಗರದಲ್ಲಿ ದರ ಎಷ್ಟಿದೆ? ಇಲ್ಲಿದೆ ವಿವರ.
ಆಗಸ್ಟ್ 21ರ ಬುಧವಾರ ಅಲ್ಪ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು (ಆಗಸ್ಟ್ 22ರ ಗುರುವಾರ) ಮತ್ತೆ ತುಸು ಏರಿಕೆ ಕಂಡಿದೆ. ಆಗಸ್ಟ್ 17ರಂದು ಚಿನ್ನ ಹೆಚ್ಚಳಗೊಂಡಿದ್ದ ನಂತರ ಸ್ಥಿರವಾಗಿತ್ತು. ನಾಲ್ಕು ದಿನಗಳ ಬಳಿಕ ತುಸು ಜಾಸ್ತಿಯಾಗಿದೆ. ಹಳದಿ ಲೋಹದ ಬೆಲೆಯಲ್ಲಿ ಏರಿದರೂ ಬೆಳ್ಳಿ ಬೆಲೆ ಇಳಿಯುವ ಮೂಲಕ ಗ್ರಾಹಕರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ಆಗಸ್ಟ್ 21ರಂದು ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಆಗಸ್ಟ್ 16 ಹಾಗೂ 17ರಂದು ಕ್ರಮವಾಗಿ 4 ಸಾವಿರ, 2 ಸಾವಿರ ಏರಿತ್ತು. ಆ ಬಳಿಕ ಆಗಸ್ಟ್ 18ರಂದು ಬೆಳ್ಳಿ ಕೆಜಿಯಲ್ಲಿ 3,000 ರೂಪಾಯಿ ಇಳಿಕೆ ಕಂಡಿತ್ತು. ಆ ಬಳಿಕ ಸತತ ಎರಡು ದಿನಗಳ ಕಾಲ ಸ್ಥಿರತೆ ಕಂಡಿದ್ದ ಬೆಲೆ ಮತ್ತೆ ಏರಿಕೆಯಾಗಿದೆ. ಇದರೊಂದಿಗೆ ದಿನದಿಂದ ದಿನಕ್ಕೆ ಏರಿಳಿತ ಕಾಣುತ್ತಿದೆ.
ಕರ್ನಾಟಕದಲ್ಲಿ ಎಲ್ಲೆಲ್ಲಿ ಎಷ್ಟಿದೆ?
ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ಕರ್ನಾಟಕದಲ್ಲಿ ಚಿನ್ನದ ಬೆಲೆ ಏರಿದೆ. ಇಂದು (ಆಗಸ್ಟ್ 22) 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 50 ರೂಪಾಯಿ ಏರಿಕೆಯಾಗಿದೆ. ಪ್ರತಿ ಗ್ರಾಂಗೆ 6710 ಆಗಿದೆ. ಕಳೆದ ದಿನ ಈ ಬೆಲೆ 6,660 ರೂ ಆಗಿತ್ತು. ಇಂದು 10 ಗ್ರಾಂ ಚಿನ್ನಕ್ಕೆ 500 ರೂಪಾಯಿ ಹೆಚ್ಚಳಗೊಂಡು 67,100 ರೂಪಾಯಿ ಆಗಿದೆ. ಇದೇ ವೇಳೆ 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 55 ರೂಪಾಯಿ ಏರಿದ್ದು, 7320 ರೂಪಾಯಿಗೆ ಬಂದು ನಿಂತಿದೆ.
ಪ್ರತಿ ಗ್ರಾಂ ಬೆಳ್ಳಿ ಬೆಲೆಯಲ್ಲಿ 1 ರೂಪಾಯಿ ಇಳಿಕೆಗೊಂಡಿದ್ದು, ಒಂದು ಕೆಜಿ ಬೆಳ್ಳಿಗೆ 1,000 ರೂಪಾಯಿ ಇಳಿಕೆಯಾಗಿದೆ. ಇದೀಗ 1 ಕೆಜಿ ಬೆಲೆ 85 ಸಾವಿರಕ್ಕೆ ಬಂದು ನಿಂತಿದೆ.
ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನದ ದರ (22 ಕ್ಯಾರೆಟ್)
ಬೆಂಗಳೂರು - 67,100 ರೂಪಾಯಿ.
ಮಂಗಳೂರು - 67,100 ರೂಪಾಯಿ.
ಮೈಸೂರು - 67,100 ರೂಪಾಯಿ.
ಚೆನ್ನೈ - 67,100 ರೂಪಾಯಿ.
ಮುಂಬೈ - 67,100 ರೂಪಾಯಿ.
ದೆಹಲಿ - 67,250 ರೂಪಾಯಿ.
ಕೋಲ್ಕತ್ತಾ - 67,100 ರೂಪಾಯಿ.
ಹೈದರಾಬಾದ್ - 67,100 ರೂಪಾಯಿ.
ಕೇರಳ - 67,100 ರೂಪಾಯಿ.
ಕಳೆದ 10 ದಿನಗಳಲ್ಲಿ 5 ಬಾರಿ ಚಿನ್ನ ಏರಿಕೆ
ಆಗಸ್ಟ್ 13ರಿಂದ ಆಗಸ್ಟ್ 22ರ ತನಕ 10 ದಿನಗಳಲ್ಲಿ ಐದು ಬಾರಿ ಚಿನ್ನ ಏರಿಕೆ ಕಂಡಿದೆ. ಈ ಪೈಕಿ 115 ಮತ್ತು 104 ರೂಪಾಯಿ ಏರಿಕೆ ಕಂಡಿದ್ದೇ ಅಧಿಕ. ಇದರ ಜೊತೆಗೆ 50, 27, 11 ರೂಪಾಯಿ ಏರಿದೆ. ಈ ಹತ್ತು ದಿನಗಳಲ್ಲಿ 1 ಗ್ರಾಂಗೆ 307 ಏರಿದೆ. ಆದರೆ ಇಳಿಕೆ ಕಂಡಿರುವುದು ಎರಡೇ ಬಾರಿ. ಅದು ಕೂಡ ಕೇವಲ 23 ರೂಪಾಯಿ.
ಆಗಸ್ಟ್ 13ರಂದು 6,470 (22 ಕ್ಯಾರೆಟ್) ರೂಪಾಯಿ ಇತ್ತು. ಇದರ ಬೆಲೆ ಪ್ರಸ್ತುತ 6710 ರೂಪಾಯಿ ಆಗಿದೆ. ಅದೇ ರೀತಿ 24 ಕ್ಯಾರೆಟ್ ಚಿನ್ನ ಅಂದು 7058 ರೂಪಾಯಿ ಇತ್ತು. ಆದರಿಂದು 7320 ಆಗಿದೆ. ಮುಂದಿನ ದಿನಗಳಲ್ಲಿ ಹಬ್ಬಗಳು ಬರುತ್ತಿರುವ ಕಾರಣ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯೂ ಇದೆ.