ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯವೈಭವ ಕಂಡು ದಂಗಾಗಿ ನೋಡುತ್ತ ನಿಂತ ಜನ. ಇದು ಪ್ರೀತಿ ಥಾಪಾ ಎಂಬ ಯುವತಿಯ ಇನ್‌ಸ್ಟಾಗ್ರಾಂ ಖಾತೆಯಲ್ಲಿದ್ದು, ವೈರಲ್ ವಿಡಿಯೋ ಸಂಬಂಧಿಸಿದ ವಿವರ ಇಲ್ಲಿದೆ.

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯವೈಭವ ಕಂಡು ದಂಗಾಗಿ ನೋಡುತ್ತ ನಿಂತ ಜನ.
ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯವೈಭವ ಕಂಡು ದಂಗಾಗಿ ನೋಡುತ್ತ ನಿಂತ ಜನ. (Preeti Thapa)

ಗುವಾಹಟಿ (Guwahati): ಸೋಷಿಯಲ್ ಮೀಡಿಯಾ ಕಂಟೆಂಟ್‌ ಕ್ರಿಯೇಟರ್‌ಗಳು ಹೊಸ ಹೊಸತೇನೋ ಮಾಡಿ ವೀಕ್ಷಕರ ಮನಗೆಲ್ಲಲು ಪ್ರಯತ್ನಿಸುತ್ತಿರುವುದು ಪ್ರಸ್ತುತ ಕಾಲಘಟ್ಟದ ಸಹಜ ವಿದ್ಯಮಾನ. ಇಂತಹ ಕಂಟೆಂಟ್‌ಗಳು ಕೆಲವು ವೈರಲ್ ಆಗಿಬಿಡುತ್ತವೆ. ಅವುಗಳ ಪೈಕಿ ಇದೂ ಒಂದು. ಆದರೆ, ಈ ವೈರಲ್ ವಿಡಿಯೋ (Viral Video) ಆಗಲು, ಗಮನಸೆಳೆಯಲು ಕಾರಣ ಯುವತಿಯ ಅವತಾರ.

ಟ್ರೆಂಡಿಂಗ್​ ಸುದ್ದಿ

ಲೋಕಸಭಾ ಚುನಾವಣಾ ಕಾಲಘಟ್ಟವಾದ ಕಾರಣ, ಪ್ರಚಾರದ ವೇಳೆ ಮಹಿಳಾ ಅಭ್ಯರ್ಥಿಯೊಬ್ಬರು ದೇಶದ ಗಮನಸೆಳೆದಿದ್ದಾರೆ. ಈ ವಿಡಿಯೋ ನೋಡಿದ ಕೂಡಲೇ ಅವರ ನೆನಪಾದರೂ ಅಚ್ಚರಿ ಇಲ್ಲ ಬಿಡಿ. ಒಂದೆರಡು ಕಡೆ ಅವರನ್ನು ಟ್ರೋಲ್ ಮಾಡುವುದಕ್ಕಾಗಿಯೂ ಈ ವಿಡಿಯೋದ ಜಿಫ್‌ ತುಣುಕನ್ನು ಕೆಲವರು ಶೇರ್ ಮಾಡಿದ್ದಾರೆ. ಆ ಜಿಫ್ ತುಣುಕು ನೋಡಿದ ಬಳಿಕ ಹುಡುಕಾಟ ನಡೆಸಿದಾಗ ಅದರ ಮೂಲ ಗುವಾಹಟಿ(Guwahati)ಗೆ ಹೊರಳಿತ್ತು.

ಗುವಾಹಟಿ ಬೀದಿಯಲ್ಲಿ ಮಂಜುಲಿಕಾ ನೃತ್ಯವೈಭವ

ವೈರಲ್ ವಿಡಿಯೋ ದೃಶ್ಯವನ್ನು ಗಮನಿಸಿದರೆ, ಗುವಾಹಟಿಯ ಬೀದಿಯಲ್ಲಿ ಮಂಜುಲಿಕಾ ಡ್ಯಾನ್ಸ್ ಎಂಬುದು ಗಮನಸೆಳೆಯುತ್ತದೆ. ಇದರಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿ ಯುವತಿ 2007ರ ಬಾಲಿವುಡ್ ಸಿನಿಮಾ ಭೂಲ್ ಭುಲೈಯಾ ಸಿನಿಮಾದ ಮಂಜುಲಿಕಾ ಪಾತ್ರಧಾರಿಯಾಗಿ ನೃತ್ಯ ಮಾಡುವುದನ್ನು ತೋರಿಸಲಾಗಿದೆ.

ಪ್ರೀತಿ ಥಾಪಾಸೊಸ್‌ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಶೇರ್ ಆಗಿದೆ. ಪ್ರೀತಿ ಥಾಪಾ ಹಸಿರುಬಣ್ಣದ ಸೀರೆ ಉಟ್ಟು, ಕೆದರಿದ ಕೂದಲು, ಚೆಲ್ಲಾಪಿಲ್ಲಿಯಾದ ಮೇಕಪ್‌ನೊಂದಿಗೆ ಕಾಣಿಸಿರುವುದು ಗಮನಸೆಳೆದಿದೆ. ವಿಡಿಯೋ ದೃಶ್ಯ ಶುರುವಾದಂತೆ, ಅಮಿ ಜೆ ತೋಮರ್ ಹಾಡು ಕೇಳಿಸುತ್ತದೆ. ಅದಕ್ಕೆ ತಕ್ಕಂತೆ ನೃತ್ಯವೂ ಮುಂದುವರಿಯುತ್ತದೆ.

ಮಂಜುಲಿಕಾ ನೃತ್ಯವೈಭವ ವಿಡಿಯೋ ಇಲ್ಲಿದೆ

ಪ್ರೀತಿ ಥಾಪಾ ಅವರು ಈ ವಿಡಿಯೋ ಜೊತೆಗೆ, ಮೆಚ್ಚುಗೆ ವ್ಯಕ್ತಪಡಿಸಿದವರಿಗೆ ಕೃತಜ್ಞತೆಯನ್ನೂ ವ್ಯಕ್ತಪಡಿಸಿದ್ದಾರೆ. “ಎಲ್ಲರಿಗೂ ಧನ್ಯವಾದ ಹೇಳಲು ಪದಗಳು ಸಾಲದು. ನಿಮ್ಮೆಲ್ಲರ ಪ್ರೀತಿ ಬೆಂಬಲದ ಪ್ರವಾಹದಲ್ಲಿ ಮುಳುಗಿಹೋಗಿದ್ದೇನೆ. ನಿಮ್ಮನ್ನು ಶಾಶ್ವತವಾಗಿ ರಂಜಿಸುತ್ತಿರಲು ಬಯಸುತ್ತೇನೆ. ಆದ್ದರಿಂದ ಬೆಂಬಲಿಸಿ, ಆಶೀರ್ವದಿಸಿ. ಗುವಾಹಟಿಯ ವಿಶೇಷವಾಗಿ ಫ್ಯಾನ್ಸಿ ಬಜಾರ್‌ನ ಸಂಚಲನವನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಪ್ರೀತಿ ಥಾಪಾ ಹೇಳಿಕೊಂಡಿದ್ದಾರೆ.

ಪ್ರೀತಿ ಥಾಪಾ ಅವರ ವಿಡಿಯೋಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಇದನ್ನು "ಹಾನಿಕರವಲ್ಲದ ಮೋಜು" ಎಂದು ಕರೆದರೆ, ಇತರರು ಸಂಚಾರಕ್ಕೆ ಅಡ್ಡಿ ಉಂಟುಮಾಡುವ ಕೆಲಸ ಎಂದು ಟೀಕಿಸಿದ್ದಾರೆ. ''ಪ್ರಿಯ ಮಂಜುಲಿಕಾ ದಯವಿಟ್ಟು ಟ್ರಾಫಿಕ್ ನಿಯಮಗಳನ್ನು ಪಾಲಿಸಿ'' ಎಂದು ಒಬ್ಬರು ಬರೆದಿದ್ದಾರೆ.

ಎದ್ದೋ ಬಿದ್ದೋ ಹೇಗೋ ಒಟ್ಟು ಚಾಲ್ತಿಯಲ್ಲಿರಬೇಕು ಅಂತ ಹೇಳ್ತಾರಲ್ಲ ಅಂಥ ಒಂದು ಪ್ರಯತ್ನ ಇದು ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, ನಿಮ್ಮ ಆತ್ಮವಿಶ್ವಾಸದ ಮಟ್ಟವನ್ನು ಗೌರವಿಸುತ್ತೇನೆ ಎಂದು ಹೇಳಿರುವುದು ಕಂಡುಬಂದಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

IPL_Entry_Point