ಅಧೀರ್ ರಂಜನ್ ವಿರುದ್ಧ 85 ಸಾವಿರ ಮತಗಳ ಗೆಲುವು; ಸ್ಪರ್ಧೆ ಸುಲಭವಿರಲಿಲ್ಲ, ಯೂಸುಫ್ ಪಠಾಣ್ ಮನದ ಮಾತು- HT Interview
ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಪಶ್ಚಿಮ ಬಂಗಾಳದ ಬಹರಾಂಪುರ ಗಮನಸೆಳೆದಿದೆ. ಕಾಂಗ್ರೆಸ್‌ನ ಪ್ರಭಾವಿ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನೇ 85,000 ಮತಗಳ ಅಂತರದಿಂದ ಸೋಲಿಸಿದ ಯೂಸುಫ್ ಪಠಾಣ್, ಅಧೀರ್ ವಿರುದ್ಧ ಸ್ಪರ್ಧೆ ಸುಲಭವಿರಲಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ಸಂದರ್ಶನ (HT Interview) ದಲ್ಲಿ ಹೇಳಿದ್ದಾರೆ. (ಸಂದರ್ಶನ- ಸಂಜೀವ್ ಕರಣ್ ಸಮ್ಯಾಲ್)
ಕೋಲ್ಕತ: ಲೋಕಸಭಾ ಚುನಾವಣೆಯ ಪಶ್ಚಿಮ ಬಂಗಾಳದ ಫಲಿತಾಂಶ ಗಮನಿಸಿದರೆ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬಹರಾಂಪುರದಲ್ಲಿ ಸ್ಪರ್ಧಿಸಿ ಗೆದ್ದವರು ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್. ಅಲ್ಲಿ ಅವರ ಎದುರಾಳಿಯಾಗಿದ್ದವರು ಕಾಂಗ್ರೆಸ್ ಪಕ್ಷದ ಹಿರಿಯ ಪ್ರಭಾವಿ ನಾಯಕ, ಆರು ಬಾರಿ ಸಂಸದ ಅಧೀರ್ ರಂಜನ್ ಚೌಧರಿ.
ಲೋಕಸಭಾ ಚುನಾವಣೆ ಫಲಿತಾಂಶ ಬಂದಾಗ, ಯೂಸುಫ್ ಪಠಾಣ್ ಅವರು 85,022 ಮತಗಳ ಅಂತರದ ಗೆಲುವು ದಾಖಲಿಸಿದ್ದರು. ಪಠಾಣ್ ಅವರು 5,24,516 ಮತಗಳಿಸಿದರೆ, ಅಧೀರ್ ರಂಜನ್ ಚೌಧರಿ 4,39,494 ಮತಗಳಿಸಿದ್ದರು. ಈ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳಿದ್ದರು.
ಚುನಾವಣೆ ಫಲಿತಾಂಶ ಬಂದ ಬಳಿಕ ಹಿಂದೂಸ್ತಾನ್ ಟೈಮ್ಸ್‌ಗೆ ವಿಶೇಷ ಸಂದರ್ಶನ ನೀಡಿದ ಯೂಸುಫ್ ಪಠಾಣ್, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ವಿರುದ್ಧದ ಸ್ಪರ್ಧೆ ಸುಲಭದ್ದಾಗಿರಲಿಲ್ಲ ಎಂದು ಮನದ ಮಾತು ಬಿಚ್ಚಿಟ್ಟಿದ್ದಾರೆ. ಯೂಸುಫ್ ಪಠಾಣ್ ಅವರು ವಿಸ್ತೃತ ಸಂದರ್ಶನ ನೀಡಿದ್ದು, ಅದರ ಆಯ್ದ ಭಾಗ ಇಲ್ಲಿದೆ.
ಅಧೀರ್ ರಂಜನ್ ವಿರುದ್ಧ ಸ್ಪರ್ಧೆ ಸುಲಭವಿರಲಿಲ್ಲ- ಯೂಸುಫ್ ಪಠಾಣ್ ಮನದ ಮಾತು
1) ಸಂಸದರಾಗುವುದು ಎಂಬುದು ಮಹತ್ವದ ಹೊಣೆಗಾರಿಕೆ, ಅಂತಹ ತೀರ್ಮಾನವನ್ನು ಹೇಗೆ ತೆಗೆದುಕೊಳ್ಳಲಾಯಿತು.
ನಾನು ರಾಜಕೀಯ ಪ್ರವೇಶಿಸುವ ಬಗ್ಗೆ ಯೋಚಿಸಿರಲಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಪ್ರತಿನಿಧಿಯೊಬ್ಬರು ನನ್ನೊಂದಿಗೆ ಮಾತನಾಡಲು ಬಂದರು… ಈಗ ಗೆದ್ದ ನಂತರ, ನಾನು ತುಂಬಾ ಸಂತೋಷವಾಗಿದ್ದೇನೆ.
2) ಲೋಕಸಭಾ ಚುನಾವಣಾ ಕಣದಲ್ಲಿ ಬಹುಮುಖ್ಯವೆನಿಸಿದ ಸವಾಲು ಏನಿತ್ತು?
ಪ್ರಭಾವಿ ನಾಯಕ ಅಧೀರ್ ಚೌಧರಿ ವಿರುದ್ಧ ಸ್ಪರ್ಧಿಸುವುದೇ ದೊಡ್ಡ ಸವಾಲಾಗಿತ್ತು. ಅವರೊಬ್ಬ ಹಿರಿಯ ನಾಯಕ. ನಾನು ಅವರನ್ನು ಗೌರವಿಸುತ್ತೇನೆ. ಆದರೆ, ಸ್ಥಳೀಯರು ನನ್ನನ್ನು ಚೆನ್ನಾಗಿ ಬೆಂಬಲಿಸಿದರು. ಯಾರಾದರೂ ಬಂದು ತಮ್ಮ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಲಿ ಎಂಬ ಭಾವನೆಯಲ್ಲಿದ್ದ ಇಲ್ಲಿನ ಜನ ಬದಲಾವಣೆ ಬಯಸಿದ್ದರು.
3) ಕೋಲ್ಕತದ ಜೊತೆಗೆ ನಿಮ್ಮ ನಂಟು
ಕೋಲ್ಕತದ ಜನರು ಕ್ರೀಡೆಗಳನ್ನು ಇಷ್ಟಪಡುತ್ತಾರೆ. ನಾನು ಇಲ್ಲಿ ಆಡಲು ಬಂದಾಗಲೆಲ್ಲಾ ನನಗೆ ಉತ್ತಮ ಸ್ವಾಗತವೂ ಸಿಗುತ್ತದೆ. ಅವರು ನನ್ನನ್ನು ಕುಟುಂಬದ ಸದಸ್ಯರಂತೆ ನಡೆಸಿಕೊಂಡಿದ್ದಾರೆ. ಬಹರಾಂಪುರ ನನ್ನ ಕುಟುಂಬವಾಗಿ ಬಿಟ್ಟಿದೆ.
4) ನಿಮ್ಮ ತಂದೆಯವರಿಂದ ಏನಾದರೂ ಸಲಹೆ ಇದೆಯಾ
ಜನರಿಗೋಸ್ಕರ ಕೆಲಸ ಮಾಡು. ಅದನ್ನು ಸದಾ ಮುಂದುವರಿಸಬೇಕು ಎಂದು ತಂದೆ ಹೇಳಿದ್ದಾರೆ.
ಯೂಸುಫ್ ಪಠಾಣ್ ಯಾರು
ಬರೋಡಾದ ಆಲ್‌ರೌಂಡರ್ ಆಗಿರುವ ಯೂಸುಫ್ ಪಠಾಣ್ ಇನ್ನು ಲೋಕಸಭೆಯಲ್ಲಿ ಬಹರಾಂಪುರವನ್ನು ಪ್ರತಿನಿಧಿಸಲಿದ್ದಾರೆ. 41 ವರ್ಷದ ಪಠಾಣ್ ಅವರು 2007 ರಲ್ಲಿ ಚೊಚ್ಚಲ ICC ವಿಶ್ವ T20 ಟ್ರೋಫಿಯನ್ನು ಎತ್ತಿ ಹಿಡಿದ ಭಾರತೀಯ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. ಒಂದು ವರ್ಷದ ನಂತರ ಅವರು ಮಾರ್ಕ್ಯೂ ಪಂದ್ಯಾವಳಿಯ ಮೊದಲ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್‌ಗೆ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ತಲುಪಿಸಲು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದರು.
ಆದರೆ ಪಠಾಣ್ ಅವರು 2012 ಮತ್ತು 2014 ರಲ್ಲಿ ಎರಡು ಬಾರಿ ಐಪಿಎಲ್ ಗೆದ್ದ ವಿಜಯಶಾಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸದಸ್ಯರಾಗಿದ್ದರು. ಇಬ್ಬರು ಸಹೋದರರಲ್ಲಿ ಹಿರಿಯರಾಗಿದ್ದರೂ, ಇರ್ಫಾನ್ ಮೂರು ವರ್ಷಗಳ ನಂತರ ಯೂಸುಫ್ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದರು.
ಅವರ ಪವರ್-ಹಿಟ್ಟಿಂಗ್ ಮತ್ತು ನಿರ್ಣಾಯಕ ವಿಕೆಟ್‌ಗಳೊಂದಿಗೆ ಪಂದ್ಯಗಳನ್ನು ತಿರುಗಿಸುವ ಅವರ ಸಾಮರ್ಥ್ಯವು ಅವರನ್ನು ಏಕದಿನ ಮತ್ತು ಟಿ20 ಮುಂತಾದ ಕಿರು ಆಟಗಳಿಗೆ ಭಾರತಕ್ಕೆ ಪ್ರಮುಖ ಆಟಗಾರನನ್ನಾಗಿ ಮಾಡಿತು. ಅವರು 2011 ರ ODI ವಿಶ್ವಕಪ್ ಅನ್ನು ಎತ್ತಿ ಹಿಡಿದ ಎಂಎಸ್ ಧೋನಿ ನೇತೃತ್ವದ ತಂಡದ ಸದಸ್ಯರಾಗಿದ್ದರು.
(ಸಂದರ್ಶನ - ಸಂಜೀವ್ ಕರಣ್ ಸಮ್ಯಾಲ್)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ವಿಭಾಗ